ರೈತರ ಮುಖದಲ್ಲಿ ಕೇಂದ್ರ ಸರ್ಕಾರ ಮಂದಹಾಸ ಮೂಡಿಸುವ ಕೆಲವನ್ನು ಮಾಡಿದೆ. ದೇಶದ ಕೋಟಿಗಟ್ಟಲೆ ರೈತರ ಬ್ಯಾಂಕ್ ಖಾತೆಗೆ, ಸರ್ಕಾರ ಹಣವನ್ನು ಇಂದು ವರ್ಗಯಿಸಲಿದೆ. ಶನಿವಾರ (ಅ.5) ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತು ಬಿಡುಗಡೆಯಾಗಲಿದೆ. ಮಹಾರಾಷ್ಟ್ರದಲ್ಲಿ ಪಿಎಂ ಪ್ರಧಾನಿ ಮೋದಿ ಪಿಎಂ ಕಿಸಾನ್‌ನ ಕಂತು ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಟ್ಟು 9.4 ಕೋಟಿಗೂ ಹೆಚ್ಚು ಫಲಾನುಭವಿ ರೈತರು ಇದರ ಲಾಭ ಪಡೆಯಲಿದ್ದಾರೆ. ಫಲಾನುಭವಿ ರೈತರಿಗೆ ಸರ್ಕಾರ ಒಟ್ಟು 20 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ವರ್ಗಾಯಿಸಲಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಏನಿದು ಪಿಎಂ ಕಿಸಾನ್ ಯೋಜನೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮನಾ ನಿಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆ. ಈ ಯೋಜನೆಯಡಿ ಫಲಾನುಭಿ ರೈತ ಕುಟುಂಬಗಳ ಖಾತೆಗೆ ತಲಾ 2000 ರೂ. ಹಣವನ್ನು ವರ್ಗಾಯಿಸಲಾಗುತ್ತದೆ. ಪ್ರತಿ ವರ್ಷ ರೈತರು 6000 ರೂ. ಪಡೆಯಬಹುದಾಗಿದೆ. ಈಗಾಗಲೇ ರೈತರು ಈ ಯೋಜನೆಯ 17 ಕಂತುಗಳ ಲಾಭ ಪಡೆದಿದ್ದಾರೆ. ಈ ಯೋಜನೆ ಆರಂಭವಾದಾಗಿನಿಂದಲೂ ರೈತ ಕುಟುಂಬಗಳು 34 ಸಾವಿರ ರೂ. ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ.
ಮಹಾರಾಷ್ಟ್ರ ರೈತರಿಗೆ ಹೆಚ್ಚಿನ ಲಾಭ
ಇನ್ನು ಮಹಾರಾಷ್ಟ್ರದ ರೈತ ಕುಟುಂಬಗಳು ಇದರಿಂದ ಹೆಚ್ಚಿನ ಲಾಭ ಪಡೆಯುತ್ತಿವೆ. ನಮೋ ಶೆಟ್ಕರಿ ಮಹಾಸಮ್ಮಾನ್ ನಿಧಿ ಯೋಜನೆಯ ಐದನೇ ಕಂತಿನ ಅಡಿಯಲ್ಲಿ ಮಹಾರಾಷ್ಟ್ರ ರೈತರಿಗೆ 2,000 ಕೋಟಿ ರೂಪಾಯಿಗಳ ಹೆಚ್ಚುವರಿ ಪ್ರಯೋಜನ ಸಿಗಲಿದೆ. ಇದಲ್ಲದೆ ಇನ್ನು ಹತ್ತು ಹಲವು ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ ನೀಡಲಿದ್ದಾರೆ. ಇದರಿಂದ ರೈತರಿಗೆ ತುಂಬ ಅನುಕೂಲವಾಗಲಿದೆ. ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಅಡಿಯಲ್ಲಿ 1,920 ಕೋಟಿ ರೂ.ಗೂ ಹೆಚ್ಚು ಮೌಲ್ಯದ 7,500 ಯೋಜನೆಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮನಾ ನಿಧಿ ಯೋಜನೆಯ ನೊಂದಾಯಿತ ರೈತರು, ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಕೆವೈಸಿ ಮಾಡದೇ ಇದ್ದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು ನೀವು ಪಡೆಯಲು ಸಾಧ್ಯವಿಲ್ಲ. PMKISAN ಪೋರ್ಟಲ್‌ನಲ್ಲಿ OTP ಆಧಾರಿತ eKYC ಲಭ್ಯವಿದೆ. ಇನ್ನು ಬಯೋಮೆಟ್ರಿಕ್ ಆಧಾರಿತ ಇಕೆವೈಸಿಗಾಗಿ ಹತ್ತಿರದ ಸಿಎಸ್‌ಸಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ನೋಡುವುದು ಹೇಗೆ?
ಅಧಿಕೃತ PM ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ (https://pmkisan.gov.in/)
ಫಲಾನುಭವಿ ಪಟ್ಟಿ ಪುಟವನ್ನು ಪ್ರವೇಶಿಸಿ.
ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಮಾಡಿ.
ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ ಮತ್ತು ಫಲಾನುಭವಿಗಳ ಪಟ್ಟಿಯಿಂದ ನಿಮ್ಮ ಹೆಸರನ್ನು ಪರಿಶೀಲಿಸಿ.


Click it and Unblock the Notifications