ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಟ್ವಿಟ್ಟರ್ ಬಳಕೆದಾರರ ಸಂಖ್ಯೆಯು ಏರಿಕೆಯಾಗಿದ್ದು, ಟ್ವಿಟ್ಟರ್‌ನಲ್ಲಿ ಅಧಿಕ ಫಾಲೋವರ್‌ಗಳ ಟಾಪ್ 10 ಪಟ್ಟಿಯಲ್ಲಿ ಪ್ರಧಾನಿ ಮೋದಿ ಎಂಟನೇ ಸ್ಥಾನದಲ್ಲಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ಗೂ ಅಧಿಕ ಫಾಲೋವರ್ಸ್ ಅನ್ನು ಮೋದಿ ಹೊಂದಿದ್ದಾರೆ. ಪ್ರಧಾನಿ ಮೋದಿಯ ಟ್ವಿಟ್ಟರ್ ಫಾಲೋವರ್‌ಗಳ ಸಂಖ್ಯೆಯು ಈಗ 90 ಮಿಲಿಯನ್‌ಗೂ ಅಧಿಕವಾಗಿದೆ. ಈ ಮೂಲಕ ಟ್ವಿಟ್ಟರ್‌ನಲ್ಲಿ ಅತೀ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಪ್ರಭಾವಿ ವ್ಯಕ್ತಿಗಳಲ್ಲಿ ನರೇಂದ್ರ ಮೋದಿ ಒಬ್ಬರಾಗಿದ್ದಾರೆ.
90.2 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಭಾರತೀಯ ಎನಿಸಿಕೊಂಡಿದ್ದಾರೆ. ಮೋದಿಯ ಫಾಲೋವರ್‌ಗಳ ಪಟ್ಟಿಯಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಕೂಡಾ ಒಬ್ಬರಾಗಿದ್ದಾರೆ. ಎಲಾನ್ ಮಸ್ಕ್ ಫಾಲೋವರ್‌ಗಳು ಅಧಿಕವಾಗಿದ್ದರೂ ಕೂಡಾ ಮಸ್ಕ್ 195 ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಾರೆ. ಇನ್ನೊಂದೆಡೆ ಮೋದಿ 2,589 ಖಾತೆಯನ್ನು ಫಾಲೋ ಮಾಡುತ್ತಾರೆ.

ದೇಶದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಳವಾಗುತ್ತಿದ್ದಂತೆ 2009 ರಲ್ಲಿ ಮೋದಿ ಟ್ವಿಟ್ಟರ್‌ಗೆ ಸೇರ್ಪಡೆಯಾಗಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಟ್ವಿಟ್ಟರ್ ಖಾತೆಯ ಬಳಕೆ ಆರಂಭಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲೇ ಮೋದಿ ಪಾಲೋವರ್‌ಗಳ ಸಂಖ್ಯೆಯು ಲಕ್ಷ ದಾಟಿದೆ. 2020ರ ಜುಲೈನಲ್ಲಿ ಪ್ರಧಾನಿ ಮೋದಿ ಟ್ವಿಟ್ಟರ್ ಫಾಲೋವರ್‌ಗಳ ಸಂಖ್ಯೆಯು 60 ಮಿಲಿಯನ್ ಆಗಿದ್ದಾರೆ.
ಜುಲೈ 9 ರಂದು ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ವಿಶ್ವದ ಟ್ವಿಟ್ಟರ್‌ನಲ್ಲಿ ಹೆಚ್ಚಾಗಿ ಫಾಲೋವರ್ ಮಾಡುತ್ತಿರುವ ಟಾಪ್ 10 ವ್ಯಕ್ತಿಗಳಲ್ಲಿ ಪಿಎಂ ಮೋದಿ ಏಕೈಕ ಭಾರತೀಯರಾಗಿದ್ದಾರೆ. ಪ್ರಧಾನಿ ಮೋದಿ ಎಂಟನೇ ಸ್ಥಾನದಲ್ಲಿದ್ದು, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. 86.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅಮೆರಿಕನ್ ಗಾಯಕಿ, ನಟಿ ಲೇಡಿ ಗಗಾ ಹತ್ತನೇ ಸ್ಥಾನದಲ್ಲಿದ್ದು, 84.1 ಫಾಲೋವರ್‌ಗಳು ಇದ್ದಾರೆ.
ಟಾಪ್ 10 ಪಟ್ಟಿ ಇಲ್ಲಿದೆ
1. ಉದ್ಯಮಿ ಎಲಾನ್ ಮಸ್ಕ್, 146.6 ಮಿಲಿಯನ್ ಫಾಲೋವರ್‌ಗಳು
2. ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, 132.0 ಮಿಲಿಯನ್ ಫಾಲೋವರ್‌ಗಳು
3. ಮ್ಯುಸಿಷಿಯನ್ ಜಸ್ಟಿನ್ ಬೀಬರ್, 111.9 ಮಿಲಿಯನ್ ಫಾಲೋವರ್‌ಗಳು
4. ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, 108.9 ಮಿಲಿಯನ್ ಫಾಲೋವರ್‌ಗಳು
5. ಮ್ಯುಸಿಷಿಯನ್ ರಿಹಾನ್ನಾ, 108.2 ಮಿಲಿಯನ್ ಫಾಲೋವರ್‌ಗಳು
6. ಮ್ಯುಸಿಷಿಯನ್ ಕೇಟಿ ಪೆರ್ರಿ, 107.2 ಮಿಲಿಯನ್ ಫಾಲೋವರ್‌ಗಳು
7. ಮ್ಯುಸಿಷಿಯನ್ ಟೇಲರ್ ಸ್ವಿಫ್ಟ್, 93.6 ಮಿಲಿಯನ್ ಫಾಲೋವರ್‌ಗಳು
8. ಭಾರತದ ಪ್ರಧಾನಿ ನರೇಂದ್ರ ಮೋದಿ, 90.2 ಮಿಲಿಯನ್ ಫಾಲೋವರ್‌ಗಳು
9. ಯುನೈಟೆಡ್ ಸ್ಟೇಟ್ಸ್‌ನ 45 ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 86.6 ಮಿಲಿಯನ್ ಫಾಲೋವರ್‌ಗಳು
10. ಮ್ಯುಸಿಷಿಯನ್, ನಟಿ ಲೇಡಿ ಗಾಗಾ, 84.0 ಮಿಲಿಯನ್ ಫಾಲೋವರ್‌ಗಳು
ಟಾಪ್ 50ಯಲ್ಲಿರುವ ಭಾರತೀಯರು
8. ಭಾರತದ ಪ್ರಧಾನಿ ನರೇಂದ್ರ ಮೋದಿ, 90.2 ಮಿಲಿಯನ್ ಫಾಲೋವರ್‌ಗಳು
22. ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ, 56.7 ಮಿಲಿಯನ್ ಫಾಲೋವರ್‌ಗಳು
27. ಪ್ರಧಾನಿ ಸಚಿವಾಲಯದ ಅಧಿಕೃತ ಖಾತೆ ಪಿಎಂಒ ಇಂಡಿಯಾ, 53.1 ಮಿಲಿಯನ್ ಫಾಲೋವರ್‌ಗಳು
31. ನಟ ಅಮಿತಾಬ್ ಬಚ್ಚನ್, 48.4 ಮಿಲಿಯನ್ ಫಾಲೋವರ್‌ಗಳು
38. ನಟ ಅಕ್ಷಯ್ ಕುಮಾರ್, 45.8 ಮಿಲಿಯನ್ ಫಾಲೋವರ್‌ಗಳು
40. ನಟ ಸಲ್ಮಾನ್ ಖಾನ್, 45.1 ಮಿಲಿಯನ್ ಫಾಲೋವರ್‌ಗಳು
41. ನಟ ಶಾರುಖ್ ಖಾನ್, 43.4 ಮಿಲಿಯನ್ ಫಾಲೋವರ್‌ಗಳು


Click it and Unblock the Notifications