ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆಸ್ತಿ ಕಾರ್ಡ್ ಗಳ ಫಿಸಿಕಲ್ ವಿತರಣೆ 'Svamitva' (ಮಾಲೀಕತ್ವ)ಕ್ಕೆ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದನ್ನು "ಐತಿಹಾಸಿಕ ನಡೆ" ಎಂದು ಕರೆದಿದ್ದು, ಗ್ರಾಮೀಣ ಭಾರತದಲ್ಲಿ ಬದಲಾವಣೆ ತರಲಿದ್ದು ಎಂದಿದ್ದಾರೆ.
ಇದರಿಂದ ಗ್ರಾಮೀಣರಿಗೆ ಆ ಆಸ್ತಿಯು ಹಣಕಾಸು ಆಸ್ತಿಯಾಗಿ ಬಳಕೆ ಆಗುತ್ತದೆ. ಸಾಲ ಮತ್ತು ಹಣದ ಅನುಕೂಲವನ್ನು ಪಡೆಯಬಹುದು. ಗ್ರಾಮೀಣರ ಮಧ್ಯೆ ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಾಜ್ಯ ಇಲ್ಲದಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ಆಸ್ತಿಯ ಮಾಲೀಕತ್ವದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ವಿಶ್ವದಾದ್ಯಂತದ ತಜ್ಞರು ಅಭಿಪ್ರಾಯ ಪಡುತ್ತಾರೆ ಎಂದು ಮೋದಿ ಹೇಳಿದ್ದು, ಜಾಗತಿಕ ಮಟ್ಟದಲ್ಲಿ ಮೂರನೇ ಒಂದು ಭಾಗದಷ್ಟು ಜನ ಮಾತ್ರ ತಮ್ಮ ಆಸ್ತಿ ಕಾನೂನು ದಾಖಲೆಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಹಳ್ಳಿಗಳಲ್ಲಿ ವಾಸವಿರುವ ಯುವ ಜನ ಈಗ ತಮ್ಮ ಆಸ್ತಿಯನ್ನು ಅಡಮಾನ ಮಾಡಿ ಸಾಲ ಪಡೆಯಬಹುದು. ಭಾರತದಂಥ ದೇಶದ ಅಭಿವೃದ್ಧಿಗೆ ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ಸ್ಪಷ್ಟ ದಾಖಲೆ ಇರುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಈ ಆಸ್ತಿ ಮಾಲೀಕತ್ವದ ಹಕ್ಕು ಯುವಜನರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಸ್ವಾವಲಂಬನೆ ಸಾಧ್ಯ ಆಗುತ್ತದೆ ಎಂದಿದ್ದಾರೆ.
ಆರು ರಾಜ್ಯಗಳ 763 ಹಳ್ಳಿಗಳ ಫಲಾನುಭವಿಗಳು ಭಾಗವಹಿಸಿದ್ದರು. ಅದರಲ್ಲಿ ಉತ್ತರ ಪ್ರದೇಶದಿಂದ 346, ಹರ್ಯಾಣದಿಂದ 221, ಮಹಾರಾಷ್ಟ್ರದಿಂದ 100, ಮಧ್ಯಪ್ರದೇಶದಿಂದ 44, ಉತ್ತರಾಖಂಡದಿಂದ 50 ಹಾಗೂ ಕರ್ನಾಟಕದಿಂದ ಇಬ್ಬರು ಭಾಗವಹಿಸಿದ್ದರು.
ಮುಂದಿನ ಮೂರರಿಂದ ನಾಲ್ಕು ವರ್ಷದಲ್ಲಿ ಎಲ್ಲ ಕುಟುಂಬಗಳಿಗೂ ಈ ರೀತಿಯ ಆಸ್ತಿ ಕಾರ್ಡ್ ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.


Click it and Unblock the Notifications