ಹಣದ ಅವಶ್ಯಕತೆ ಯಾರಿಗೆ, ಯಾವಾಗ ಬರುತ್ತದೆ ಎಂದು ಗೊತ್ತಿರುವುದಿಲ್ಲ. ಮೊದಲೆಲ್ಲ ಎಲ್ಲರ ಬಳಿ ನಗದು ವಹಿವಾಟು ನಡೆಯುತ್ತಿದ್ದು. ಆದರೆ ಇದು ಡಿಜಿಟಲ್ ಯುಗ ಆಗಿರುವುದರಿಂದ, ಬಹುತೇಕ ವಹಿವಾಟುಗಳು ಆನ್‌ಲೈನ್ ಮೂಲಕವೇ ಆಗುತ್ತವೆ. ಯಾರು, ಯಾವಾಗ ಬೇಕಾದರೂ ಹಣ ಕಳುಹಿಸಬಹುದು ಮತ್ತು ಪಡೆಯಬಹುದು. ಮೊದಲಿನಂತೆ ಪ್ರತಿಯೊಂದಕ್ಕೂ ಬ್ಯಾಂಕ್‌ಗೆ ಹೋಗಿ ಹಣ ಠೇವಣಿ ಮಾಡುವ ಅಗತ್ಯವೂ ಇಲ್ಲ. ಇನ್ನು ಯಾರಿಂದಲೂ ಹಣದ ಸಹಾಯ ಸಿಗದೇ ಇದ್ದಾಗ, ನೆರವಿಗೆ ಬರುವುದು ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು. ಈ ನಾನ್ ಬ್ಯಾಂಕಿಂಗ್‌ನಡಿ ಕಾರ್ಯ ನಿರ್ವಹಿಸುತ್ತಿರುವ ಪೂನಾವಾಲ ಫಿನ್‌ಕಾರ್ಪ್ ಜನರಿಗೆ ಹಣದ ನೆರವು ಸಿಗಲೆಂದು ಈಗ ಮತ್ತಷ್ಟು ಸುಲಭವಾಗಿದೆ.

ಹೌದು, ಭಾರತದಲ್ಲಿ ಸಾಕಷ್ಟು ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ವಿವಿಧ ರೀತಿಯ ಬಂಡವಾಳ ಹಾಗೂ ಸಾಲ ಸೇವೆಗಳನ್ನು ಒದಗಿಸುತ್ತವೆ. ಪರ್ಸನಲ್ ಲೋನ್, ಬ್ಯುಸಿನೆಸ್ ಲೋನ್, ಮೆಡಿಕಲ್ ಲೋನ್ ಹೀಗೆ ನಾನಾ ರೀತಿಯ ಸಾಲದ ಸೇವೆಗಳನ್ನು ಒದಗಿಸುತ್ತವೆ. ಇದು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯಾಗಿದ್ದು ತ್ವರಿತ ಅಪ್ಲಿಕೇಶನ್, ಕಡಿಮೆ ದಾಖಲೆಗಳ ಜೊತೆ ಅತೀ ವೇಗವಾಗಿ ಲೋನ್‌ಗಳನ್ನು ಅನುಮೋದಿಸುತ್ತವೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯ ಇವೆ. ಅವುಗಳ ಪೈಕಿ ಪೂನಾವಾಲ ಫಿನ್‌ಕಾರ್ಪ್ ಕೂಡ ಒಂದು, ಅತ್ಯುತ್ತಮ ಬ್ರಾಂಡ್‌ನ ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆ (NBFC). ಇದನ್ನು ಮೊದಲು ಮಹಿಂದ್ರಾ ಫಿನ್‌ಕಾರ್ಪ್ ಹೆಸರಿನಲ್ಲಿ ಗುರುತಿಸಲಾಗುತ್ತಿತ್ತು. ಆದರೆ ಪೂನಾವಾಲ ಸಂಸ್ಥೆ ಖರೀದಿಸಿದ ನಂತರ ಇದು ಪೂನಾವಾಲ ಫಿನ್‌ಕಾರ್ಪ್ ಹೆಸರಿನಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದೆ. ಈಗ ಇದರ ವಿಶೇಷತೆ ಏನೆಂದರೆ ಇದು 24/7 ಡಿಜಿಟಲ್ ಪರ್ಸನಲ್ ಲೋನ್ ಸೇವೆಯನ್ನು ಲಾಂಚ್ ಮಾಡಿದೆ.
ಅಂದರೆ ಸಂಬಳ ಪಡೆಯುವ ನೌಕರರಿಗಾಗಿ ಪರ್ಸನಲ್ ಲೋನ್ ನೀಡಲಾಗುತ್ತಿದೆ. ಈಗ 24/7 ಸೇವೆ ಒದಗಿಸಲು ಬಂದಿದ್ದು, ಸಾಲವಾದ PL ಪ್ರೈಮ್ ಡಿಜಿಟಲ್ 24x7ನ ಪರಿಚಯಿಸಿದೆ. ಇದು ಕಾಗದ ರಹಿತ ರೂಪದ ಡಿಜಿಟಲ್ ಸಾಲದ ವ್ಯವಸ್ಥೆಯಾಗಿದೆ. ಇಲ್ಲಿ ಯಾವುದೇ ಮೇಲಾಧಾರದ ಅಗತ್ಯವೂ ಇಲ್ಲ. ಹಾಗೂ ಇಲ್ಲಿ ₹15 ಲಕ್ಷದವರೆಗಿನ ಮೊತ್ತಕ್ಕೆ ತ್ವರಿತ ಅನುಮೋದನೆಗಳನ್ನು ನೀಡುತ್ತದೆ ಎನ್ನುವ ಬಗ್ಗೆ ಕಂಪನಿಯೇ ಮಾಹಿತಿ ನೀಡಿದೆ.
ಇದು 24x7 ಸಾಲದ ಸೇವೆ ಒದಗಿಸುವುದರಿಂದ, ಮಧ್ಯರಾತ್ರಿಯೇ ಹಣದ ಅವಶ್ಯಕತೆ ಬಂದರೂ ಇಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಅದು ಅಲ್ಲದೇ ಕೇವಲ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ಹಣದ ನೆರವು ಪಡೆಯಬಹುದು. ಇದು EMI ಅವಧಿಗಳನ್ನು ಅನುಮತಿಸುತ್ತದೆ ಮತ್ತು ಯೋಜಿತ ಮತ್ತು ಯೋಜಿತವಲ್ಲದ ವೆಚ್ಚಗಳಿಗೆ ತ್ವರಿತ ಹಣಕಾಸಿನ ನೆರವು ನೀಡುತ್ತದೆ. ಪೂನಾವಾಲ ಫಿನ್‌ಕಾರ್ಪ್ ಎಂಡಿ ಮತ್ತು ಸಿಇಒ ಅರವಿಂದ್ ಕಪಿಲ್ ಹೇಳಿರುವ ಪ್ರಕಾರ, ಈ ಉಪಕ್ರಮವು ತಡೆರಹಿತ ಮತ್ತು ಪರಿಣಾಮಕಾರಿ ಕ್ರೆಡಿಟ್ ಪ್ರವೇಶಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುತ್ತದೆ ಎಂದಿದ್ದಾರೆ.
ಅಂದಹಾಗೆ ಭಾರತದಲ್ಲಿ ಈ ವೈಯಕ್ತಿಕ ಸಾಲ ವಿಭಾಗ ವರ್ಷಕ್ಕೆ 27% ರಷ್ಟು ಬೆಳೆದಿದೆ ಎಂಬ ಮಾಹಿತಿ ಇದೆ. ಇದು ತಂತ್ರಜ್ಞಾನ-ಚಾಲಿತ ಸಾಲ ಪರಿಹಾರಗಳನ್ನು ಬಳಸಿಕೊಳ್ಳುವುದನ್ನು ಮುಂದುವರೆಸಿದೆ. ಸೈರಸ್ ಪೂನಾವಾಲ ಗ್ರೂಪ್ NBFC ಆಗಿರುವ ಪೂನಾವಾಲ ಫಿನ್‌ಕಾರ್ಪ್, ಡಿಸೆಂಬರ್ 31, 2024ರ ಹೊತ್ತಿಗೆ ₹30 ಸಾವಿರದ 984 ಕೋಟಿಗಳ ಆಸ್ತಿಯನ್ನು ಹೊಂದಿದೆ. ಇದು 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಫೈನಾನ್ಸ್ ಕಂಪನಿಯಾಗಿದೆ. ಮತ್ತು ಇಲ್ಲಿ ವ್ಯಾಪಾರ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಆಸ್ತಿಯ ಮೇಲಿನ ಸಾಲ ಸೇರಿದಂತೆ ವಿವಿಧ ಹಣಕಾಸು ಉತ್ಪನ್ನಗಳನ್ನು ನೀಡುವ ಮೂಲಕ, ಗ್ರಾಹಕರಿಗೆ ಹಣಕಾಸಿನ ನೆರವನ್ನು ನೀಡುತ್ತಿದೆ.


Click it and Unblock the Notifications