ವಿಮೆ ತಿರಸ್ಕೃತವಾಗಂತೆ ಡಿಸ್ಚಾರ್ಜ್ ಆದ 30 ದಿನಗಳೊಳಗೆ ಕ್ಲೈಮ್ ಸಲ್ಲಿಸಿ. ಈ ಹಂತಗಳನ್ನು ಅನುಸರಿಸಿಯೂ, ಎಲ್ಲಾ ನಿಯಮಗಳನ್ನು ಪಾಲಿಸಿಯೂ ಕ್ಲೈಮ್ ತಿರಸ್ಕೃತವಾದರೆ, ಮೊದಲು ನಿಮ್ಮ ವಿಮಾದಾರರಿಗೆ ದೂರು ನೀಡಿ. 15 ದಿನಗಳಲ್ಲಿ ಪರಿಹರಿಸದಿದ್ದರೆ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ವೆಬ್‌ಸೈಟ್ ಮೂಲಕ ಅಥವಾ ವಿಮಾ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಜಗತ್ತನ್ನೇ ಬದಲಾಯಿಸಿತು. ಆರೋಗ್ಯದ ಮಹತ್ವವನ್ನು ನಾವು ಎಂದಿಗಿಂತಲೂ ಹೆಚ್ಚಾಗಿ ಅರಿತುಕೊಂಡೆವು. ಆರೋಗ್ಯದ ಮಹತ್ವವನ್ನು ಅರಿತುಕೊಂಡ ನಾವು, ಭವಿಷ್ಯದ ಅನಿಶ್ಚಿತತೆಗಳಿಂದ ರಕ್ಷಿಸಿಕೊಳ್ಳಲು ಆರೋಗ್ಯ ವಿಮೆಯತ್ತ ಹೆಚ್ಚು ಒಲವು. ಆದರೆ, ಹಣದುಬ್ಬರದ ಯುಗದಲ್ಲಿ ಆರೋಗ್ಯ ವಿಮೆ ಕೇವಲ ಒಂದು ಹೂಡಿಕೆ ಅಲ್ಲ, ಇದು ನಮ್ಮ ಆರೋಗ್ಯ ಸುರಕ್ಷತೆಯ ಒಂದು ಅಗತ್ಯ ಭಾಗವಾಗಿದೆ. ಭವಿಷ್ಯದಲ್ಲಿ ಯಾವಾಗ ಬೇಕಾದರೂ ನಮಗೆ ಆರೋಗ್ಯ ವಿಮೆ ಅಗತ್ಯತೆ ಬರಬಹುದು. ಆರೋಗ್ಯ ವಿಮೆಯು ಚಿಕಿತ್ಸೆಯ ವೆಚ್ಚಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಆರೋಗ್ಯ ವಿಮೆಗಾಗಿ ಕ್ಲೈಮ್ ಮಾಡಿದಾಗಲೆಲ್ಲಾ ಕೆಲವೊಮ್ಮೆ ಅದು ತಿರಸ್ಕೃತವಾಗುತ್ತದೆ. ಇದರ ಹಿಂದಿನ ಕಾರಣಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ.
ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಏಕೆ ತಿರಸ್ಕರಿಸಲಾಗುತ್ತದೆ?
ಆಪತ್ಕಾಲದ ಅಗತ್ಯಕ್ಕಾಗಿ ನಾವು ಆರೋಗ್ಯ ವಿಮೆ ಮಾಡಿಸಿರುತ್ತೇವೆ. ಆದರೆ ನಮಗೆ ತುರ್ತು ಅಗತ್ಯವಿದ್ದಾಗ ಈ ವಿಮೆ ತಿರಸ್ಕೃತವಾದರೆ ಅದರಿಂದಾಗುವ ನಷ್ಟ ಒಂದೆಡೆಯಾದರೆ ಮತ್ತು ಮನಸಿಕ ನೋವು ಇನ್ನೊಂದೆಡೆ. ಇದಕ್ಕೆ ಮೊದಲನೆಯ ಕಾರಣ, ನಾವು ಅನೇಕ ಬಾರಿ ಪಾಲಿಸಿ ಕಂಪನಿಗೆ ತಪ್ಪು ತಪ್ಪಾದ ಮಾಹಿತಿಯನ್ನು ನೀಡುತ್ತೇವೆ. ತಪ್ಪಾದ ವಯಸ್ಸು, ಆದಾಯ ಅಥವಾ ವೃತ್ತಿಯನ್ನು ನೀಡಿದರೆ ತಪ್ಪು ಮಾಹಿತಿಗಳ ಕಾರಣದಿಂದಾಗಿ ಕಂಪನಿಯು ಆರೋಗ್ಯ ವಿಮೆ ಕ್ಲೈಮ್ ಅನ್ನು ತಿರಸ್ಕರಿಸುತ್ತದೆ.

ಎರಡನೆಯದಾಗಿ, ನಿಗದಿತ ಸಮಯದೊಳಗೆ ವಿಮಾ ಕ್ಲೈಮ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ನಿಗದಿತ ಡೇಟ್ ಮುಗಿದುಹೋಗಿದ್ದರೆ ಅಥವಾ ನೀವು ರಿನಿವಲ್ ಮಾಡದೆ ಸುಮ್ಮನಾಗಿದ್ದರೆ ನಿಮ್ಮ ವಿಮಾ ಕ್ಲೈಮ್ ಅನ್ನು ಕಂಪನಿಗಳು ತಿರಸ್ಕರಿಸುತ್ತವೆ.
ಮೂರನೆಯದಾಗಿ, ನಿಮ್ಮ ಎಲ್ಲಾ ದೀರ್ಘಕಾಲದ ಕಾಯಿಲೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ. ಅನೇಕ ಬಾರಿ ಜನರು ತಮ್ಮ ಅನಾರೋಗ್ಯವನ್ನು ಪಾಲಿಸಿ ಕಂಪನಿಯಿಂದ ಮರೆಮಾಡುತ್ತಾರೆ, ಇದರಿಂದ ಅವರ ಪ್ರೀಮಿಯಂ ಹೆಚ್ಚಾಗುತ್ತದೆ. ಆದರೆ ಈ ಮಾಹಿತಿಯನ್ನು ಮರೆಮಾಚುವುದು ನಂತರ ದುಬಾರಿಯಾಗಿ ಪರಿಣಮಿಸಬಹುದು.
ನಾಲ್ಕನೆಯದಾಗಿ, ಒಬ್ಬ ವ್ಯಕ್ತಿಯು ಆರೋಗ್ಯ ವಿಮೆಯ ಅಡಿಯಲ್ಲಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮೊತ್ತವನ್ನು ಕ್ಲೈಮ್ ಮಾಡಿದರೆ, ಅಂತಹ ಪರಿಸ್ಥಿತಿಯಲ್ಲಿಯೂ ಕಂಪನಿಯು ನಿಮ್ಮ ಪಾಲಿಸಿ ಹಕ್ಕನ್ನು ತಿರಸ್ಕರಿಸಬಹುದು.
ವೈದ್ಯಕೀಯ ದಾಖಲೆಗಳ ಕೊರತೆ, ಕ್ಲೈಮ್ ಮಾಡುವ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಕೊರತೆ ಉಂಟಾದಾಗಲೂ ಪಾಲಿಸಿಯನ್ನುಕ್ಲೈಮ್ ಮಾಡದಂತೆ ಕಂಪನಿಗಳು ತಡೆಯಬಹುದು.
ನೀವು ಪಾಲಿಸಿಗೆ ಅರ್ಜಿ ಸಲ್ಲಿಸಿದಾಗ, ನೀವು ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಓದಬೇಕು. ನಿಮ್ಮ ಪಾಲಿಸಿಯಲ್ಲಿ ಏನನ್ನು ಸೇರಿಸಲಾಗಿದೆ ಮತ್ತು ಯಾವುದನ್ನು ಸೇರಿಸಲಾಗಿಲ್ಲ ಎಂಬುದನ್ನು ಪರೀಕ್ಷಿಸಲು ಮರೆಯದಿರಿ. ಇದರಿಂದ ನೀವು ಸರಿಯಾಗಿ ಕ್ಲೈಮ್ ಮಾಡಬಹುದು.
ತಿರಸ್ಕೃತವಾಗದಂತೆ ಎಚ್ಚರಿಕೆಗೆ ಇವುಗಳನ್ನು ಪಾಲಿಸಿ:
ಕೈಗೆಟುಕುವ ಬೆಲೆಯಲ್ಲಿ ಆರೋಗ್ಯ ವಿಮೆ ಪಡೆಯಿರಿ:
ಕೆಲವೊಮ್ಮೆ ಉತ್ತಮ ಕ್ಲೈಮ್ ಪಡೆಯಲು ದೊಡ್ಡ ಮೊತ್ತ ವಿಮೆ ಪಡೆದುಕೊಳ್ಳುತ್ತೇವೆ. ಇದಕ್ಕಾಗಿ ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ ಎಂಬುವುದನ್ನು ನೆನಪಿನಲ್ಲಿಡಿ. ಈ ಕಾರಣಕ್ಕಾಗಿ ಕೈಗೆಟುಕುವ ಬೆಲೆಯ ಹೆಚ್ಚು ಸೂಕ್ತವಾದ ವಿಮಾ ಯೋಜನೆಯನ್ನು ಕೊಂಡುಕೊಳ್ಳಿ. ಅದಕ್ಕೂ ಮುನ್ನ ಉತ್ತಮ ವಿಮಾ ಹಾಗೂಕೈಗೆಟಕುವ ವಿಮೆಯನ್ನು ಕಂಡುಹಿಡಿಯಲು ವಿವಿಧ ವಿಮಾದಾರರು ಮತ್ತು ಪ್ರೀಮಿಯಂಗಳು ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಹೋಲಿಸಿ ನೋಡಿ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications