ಅಂಚೆ ಕಚೇರಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಅವುಗಳಲ್ಲಿ ಹೂಡಿಕೆ ಮಾಡಿದರೆ ಒಂದಷ್ಟು ವರ್ಷದ ಹೊತ್ತಿಗೆ ಉತ್ತಮ ಆದಾಯ ಕೈಸೇರುತ್ತದೆ. ಭವಿಷ್ಯದ ಆದಾಯ ಸಂಗ್ರಹಕ್ಕೆ ಪೋಸ್ಟ್ ಆಫೀಸ್‌ಗಳಲ್ಲಿ ಇರುವುದಕ್ಕಿಂತ ಉತ್ತಮ ಯೋಜನೆಗಳಿಲ್ಲ. ಹಾಗಾದರೆ ಓರ್ವ ಹೂಡಿಕೆದಾರ ತಿಂಗಳಿಗೆ ಎಷ್ಟು ಹಣ ಹೂಡಿಕೆ ಮಾಡಿದರೆ, ಎಷ್ಟು ಹಣವನ್ನು ಆದಾಯದ ರೂಪದಲ್ಲಿ ಪಡೆಯಬಹುದು ಎಂದು ತಿಳಿಯೋಣ. ಈಗ ನಾವು ಮಾಸಿಕ ಹೂಡಿಕೆಯು 15 ವರ್ಷಗಳ ಅವಧಿ ಹೊತ್ತಿಗೆ ಎಷ್ಟಾಗಿರುತ್ತದೆ ಎಂದು ನೋಡೋಣ.
ಭಾರತೀಯ ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿ..ಅಂದರೆ ಪಿಪಿಎಫ್. ಈ ಯೋಜನೆ ಹೆಚ್ಚು ಜನಪ್ರಿಯವಾಗಿದ್ದು, ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದು ಆರ್ಥಿಕ ಭದ್ರತೆ, ಉತ್ತಮ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೇ ಇದು ಹೂಡಿಕೆದಾರರಿಗೆ ದೀರ್ಘಕಾಲಿಕ ಲಾಭ ಕೂಡ ನೀಡುತ್ತದೆ. ಇದು ಭದ್ರಿತ ಹೂಡಿಕೆಯಾಗಿದ್ದು, ಸರ್ಕಾರದಿಂದ ಭರವಸೆ ನೀಡಲಾದ ಯೋಜನೆಯಾಗಿದೆ. ಇದು ಉತ್ತಮ ಬಡ್ಡಿದರ ನೀಡುತ್ತದೆ. ಪ್ರಸ್ತುತ ಇದು ವಾರ್ಷಿಕ ಸಂಕೀರ್ಣದಲ್ಲಿ 7.1% ಬಡ್ಡಿ ನೀಡುತ್ತಿದೆ. ಅಲ್ಲದೇ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದು ಮ್ಯಾಚ್ಯುರಿಟಿ ಮೊತ್ತ ತೆರಿಗೆ ಮುಕ್ತವಾಗಿರುತ್ತದೆ. ಇದಿಷ್ಟು ಇದರಿಂದ ಹೂಡಿಕೆದಾರರಿಗೆ ಸಿಗುವ ಲಾಭವಾಗಿದೆ.

15 ವರ್ಷಗಳ PPF ಹೂಡಿಕೆ ಲಾಭದ ಲೆಕ್ಕಾಚಾರ:
ಪ್ರಸ್ತುತ ಇರುವ ಬಡ್ಡಿ ದರದಲ್ಲಿ (7.1% ಬಡ್ಡಿ) ಲೆಕ್ಕ ಹಾಕಿದರೆ, ಒಬ್ಬ ವ್ಯಕ್ತಿ ತಿಂಗಳಿಗೆ ₹1,000 ಹೂಡಿಕೆ ಮಾಡುತ್ತಾನೆ ಎಂದಾದರೆ, 15 ವರ್ಷಕ್ಕೆ ಈ ಮೊತ್ತ ₹12,000 ಆಗಿರುತ್ತದೆ. ವರ್ಷಕ್ಕೆ ₹1,80,000 ಆಗಿದ್ದು, ಬಡ್ಡಿ ಸಹಿತ ಮ್ಯಾಚುರಿಟಿ ಮೊತ್ತವಾಗಿ ₹3,25,000 ಸಿಗುತ್ತದೆ. ಅಂದರೆ ತಾವು ಹೂಡಿಕೆ ಮಾಡಿದ್ದಕ್ಕಿಂತ 1,45,000 ಹೆಚ್ಚಾಗಿ ಹಣ ಕೈಸೇರುತ್ತದೆ.
ಒಂದು ವೇಳೆ ಒಬ್ಬ ವ್ಯಕ್ತಿ ತಿಂಗಳಿಗೆ ₹5,000 ಹೂಡಿಕೆ ಮಾಡುತ್ತಾನೆ ಎಂದಾದರೆ, ವರ್ಷಕ್ಕೆ ಈ ಮೊತ್ತ ₹60,000 ಆಗಿರುತ್ತದೆ. ಹದಿನೈದು ವರ್ಷಕ್ಕೆ ಇದು ₹9,00,000 ಆಗಿರುತ್ತದೆ. ಬಡ್ಡಿ ಸಹಿತ ಮ್ಯಾಚುರಿಟಿ ಮೊತ್ತವಾಗಿ ₹16,27,284 ಸಿಗುತ್ತದೆ. ಅಂದರೆ ಬಡ್ಡಿ ಸೇರಿ ಹೂಡಿಕೆ ಮಾಡಿದ ಮೊತ್ತಕ್ಕಿಂತ 7,27,284 ರೂ. ಕೈಸೇರುತ್ತದೆ.
ಹಾಗೆಯೇ ಒಬ್ಬ ವ್ಯಕ್ತಿ ತಿಂಗಳಿಗೆ ಹತ್ತು ಸಾವಿರ ಹೂಡಿಕೆ ಮಾಡುತ್ತಾನೆ ಎಂದಾದರೆ, ವರ್ಷಕ್ಕೆ ಆತ ₹1,20,000 ಹೂಡಿಕೆ ಮಾಡಿದಂತಾಗುತ್ತದೆ. ಹದಿನೈದು ವರ್ಷಕ್ಕೆ ಈ ಮೊತ್ತ ₹18,00,000 ಆಗುತ್ತದೆ. ಆದರೆ ಮ್ಯಾಚುರಿಟಿ ಮೊತ್ತವಾಗಿ ಇದು ಕೈಸೇರುವ ಹೊತ್ತಿಗೆ, ₹32,54,574 ಆಗಿರುತ್ತದೆ. ಅಂದರೆ ಬಡ್ಡಿಯೂ ಸೇರಿ ಒಟ್ಟು ಮೊತ್ತ ಕೈಸೇರುವ ಹೊತ್ತಿಗೆ ₹14,54,574 ಆಗಿರುತ್ತದೆ.
ಇದು ಪ್ರಸ್ತುತ ಬಡ್ಡಿದರದ ಪ್ರಕಾರ ಮಾಡಲಾಗಿರುವ ಲೆಕ್ಕಾಚಾರವಾಗಿದೆ. ಇಲ್ಲಿ ಬಡ್ಡಿದರ ಬದಲಾದರೆ ಲಾಭ ಕೂಡ ಬದಲಾಗುತ್ತದೆ. ಹೀಗಾಗಿ ಹೂಡಿಕೆ ಪ್ರಾರಂಭಿಸುವುದಕ್ಕೂ ಮೊದಲು ಪ್ರಸ್ತುತ ಬಡ್ಡಿದರವನ್ನು ಪರಿಶೀಲಿಸಬೇಕು. ಸರ್ಕಾರ ಪ್ರತಿ ತ್ರೈಮಾಸಿಕದಲ್ಲಿ ಈ ಪಿಪಿಎಫ್ ದರವನ್ನು ಪರಿಶೀಲಿಸುತ್ತದೆ. ಇದರಿಂದ ಬಡ್ಡಿ ಬದಲಾವಣೆ ಕೂಡ ಆಗಬಹುದು. ಅಂದತೆ ಜನವರಿ - ಮಾರ್ಚ್ 2025 ಅವಧಿಗೆ ಪ್ರಸ್ತುತ PPF ಬಡ್ಡಿ ದರ 7.1% ಆಗಿದೆ. ಅದರ ಪ್ರಕಾರ ಈ ಮೇಲಿನ ಮೊತ್ತ ಲೆಕ್ಕಾಚಾರವಾಗಿದೆ.
ಹೀಗೆ ಅಂಚೆ ಕಚೇರಿಯಲ್ಲಿ ಸಾಕಷ್ಟು ಲಾಭಗಳಿವೆ. ಸಣ್ಣ ಮೊತ್ತದಿಂದ ಹೂಡಿಕೆ ಮಾಡಿದರೂ ಬಹಳಷ್ಟು ಉಳಿತಾಯ ಮಾಡಬಹುದಾಗಿದೆ. ಇಂತಹ ಯೋಜನೆಗಳು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಸಹಾಯಕ್ಕೆ ಬಂದಿವೆ.


Click it and Unblock the Notifications