ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ: 2 ವರ್ಷಗಳಲ್ಲಿ ₹2.32 ಲಕ್ಷ ಆದಾಯ..ಈ ಯೋಜನೆ ಬಗ್ಗೆ ತಿಳಿಯಿರಿ..!

ಅಂಚೆಕಚೇರಿಯಲ್ಲಿ ಮಹಿಳೆಯರಿಗೆಂದೇ ಸಾಕಷ್ಟು ಯೋಜನೆಗಳಿವೆ..ಅದರಲ್ಲಿ ಪ್ರಮುಖವಾಗಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು. ಈ ಯೋಜನೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂದರೆ, ಭಾರತದ ಮಹಿಳೆಯರಿಗೆ ಆರ್ಥಿಕ ಸ್ಥಿರತೆ ನೀಡಲು ಮತ್ತು ಅವರ ಉಳಿತಾಯವನ್ನು ಪ್ರೋತ್ಸಾಹಿಸಲು ಸರ್ಕಾರದ ಒಂದು ಮಹತ್ವಾಕಾಂಕ್ಷಿ ಕ್ರಮ ಇದಾಗಿದೆ. ಹಾಗಾದರೆ ಇದರಲ್ಲಿ ಹೂಡಿಕೆ ಹೇಗೆ, ಎಷ್ಟು ಮೊತ್ತ ಹಿಂತಿರುಗುತ್ತದೆ, ಇದರ ಬಡ್ಡಿದರ ಎಷ್ಟು ಇದರಿಂದ ಮಹಿಳೆಯರಿಗೆ ಏನೆಲ್ಲಾ ಲಾಭವಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಬಗ್ಗೆ ತಿಳಿಯಿರಿ..!

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು, 2023ರಲ್ಲಿ ಕೇಂದ್ರ ಬಜೆಟ್‌ನ ಭಾಗವಾಗಿ ಪರಿಚಯಿಸಲಾಯಿತು. ಇದು 2 ವರ್ಷಗಳ ಅವಧಿಯ ಉಳಿತಾಯ ಯೋಜನೆಯಾಗಿದ್ದು, ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗಾಗಿಯೇ ವಿಶೇಷವಾಒಗಿ ರೂಪಿಸಲಾದ ಯೋಜನೆಯಾಗಿದೆ. ಈ ಯೋಜನೆಯನ್ನು ಮಹಿಳೆಯರಿಗಾಗಿ ಅಂಚೆ ಕಚೇರಿಗಳು ಮತ್ತು ಆಯ್ದ ಬ್ಯಾಂಕುಗಳ ಮೂಲಕ ಹೂಡಿಕೆದಾರರಿಗೆ ಒದಗಿಸಲಾಗುತ್ತಿದೆ. ಸದ್ಯ ಈ ಯೋಜನೆ ವರ್ಷಕ್ಕೆ 7.5% ಬಡ್ಡಿದರವನ್ನು ನೀಡುತ್ತಿದೆ. ಹಾಗೂ ತ್ರೈಮಾಸಿಕವಾಗಿ ಸಂಯೋಜಿತ ಬಡ್ಡಿ ನೀಡುವ ಮೂಲಕ ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಖಚಿತಗೊಳಿಸುತ್ತದೆ.

ಈ ಯೋಜನೆಯಿಂದ ಏನು ಲಾಭ..?

ಇನ್ನು ಈ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಹೂಡಿಕೆದಾರರು ಖಾತೆ ತೆರೆಯಲು ಪ್ರತ್ಯಕ್ಷವಾಗಿ ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕುಗಳಿಗೆ ಭೇಟಿ ನೀಡಬೇಕು. ನೀವು ಕನಿಷ್ಠ ₹1,000 ರಿಂದ ಗರಿಷ್ಠ ₹2,00,000 ವರೆಗೆ ಹೂಡಿಕೆ ಮಾಡಬಹುದಾಗಿದೆ. ಗರಿಷ್ಠ ಎಂದರೆ ಒಂದು ಬಾರಿ ₹2 ಲಕ್ಷ ಹೂಡಿಕೆ ಮಾಡಿದರೆ, 2 ವರ್ಷಗಳ ಕೊನೆಯಲ್ಲಿ ಸುಮಾರು ₹2.32 ಲಕ್ಷ ಲಭ್ಯವಾಗುತ್ತದೆ. ಅಂದರೆ ಎರಡೇ ವರ್ಷದಲ್ಲಿ ನಿಮಗೆ 32 ಸಾವಿರ ರೂಪಾಯಿ ಬಡ್ಡಿರೂಪದಲ್ಲಿ ಸಿಗುವ ಲಾಭವಾಗುತ್ತದೆ. ಸುಲಭ ವಹಿವಾಟಿಗಾಗಿ ಚೆಕ್ ಅಥವಾ ನಗದು ರೂಪದಲ್ಲಿ ಹಣ ಠೇವಣಿ ಮಾಡಬಹುದಾಗಿದೆ. ಖಾತೆ ತೆರೆದ ನಂತರ, ಹೂಡಿಕೆದಾರರು ತಮ್ಮ ಠೇವಣಿ ಪ್ರಮಾಣಪತ್ರವನ್ನು ಪಡೆಯುತ್ತಾರೆ, ಇದನ್ನು ಮೆಚ್ಯೂರಿಟಿಯವರೆಗೆ ಸಂಗ್ರಹಿಸಿಡಲು ಸಲಹೆ ನೀಡಲಾಗುತ್ತದೆ.

ಈ ಯೋಜನೆಯ ವೈಶಿಷ್ಟ್ಯವೇನು..?

ಇನ್ನು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯ ಒಂದು ವೈಶಷ್ಟ್ಯವೆಂದರೆ, ಇದು ಆರ್ಥಿಕ ತುರ್ತು ಪರಿಸ್ಥಿತಿಗಳಿಗೆ ಅನುಕೂಲಕರವಾಗಿದೆ. ಅಂದರೆ ಹೂಡಿಕೆದಾರರು ಒಂದು ವರ್ಷದ ಬಳಿಕ 40% ವರೆಗೆ ಭಾಗಶಃ ಹಿಂಪಡೆಯುವ ಅವಕಾಶವನ್ನು ಪಡೆಯುತ್ತಾರೆ. ಆದರೆ, ಒಟ್ಟು ಅವಧಿ 2 ವರ್ಷವಾಗಿರುವುದರಿಂದ ಹೂಡಿಕೆದಾರರು ಇದನ್ನು ಮಧ್ಯಮಾವಧಿ ಉಳಿತಾಯ ಸಾಧನವಾಗಿ ಪರಿಗಣಿಸಬಹುದು.

ಇನ್ನು ಈ ಯೋಜನೆಯು ಸಂಪೂರ್ಣವಾಗಿ ಸರ್ಕಾರಿ ಬೆಂಬಲಿತವಾಗಿರುವ ಯೋಜನೆಯಾಗಿದೆ. ಇಲ್ಲಿ ಯಾವುದೇ ನಕಲಿ ಚಟುವಟಿಕೆಗಳು ನಡೆಯುವುದಿಲ್ಲ. ಏಕೆಂದರೆ ಇದು ಸರ್ಕಾರದಡಿ ಕಾರ್ಯನಿರ್ವಹಿಸುವ ಪೋಸ್ಟ್ ಆಫಿಸ್‌ನ ಯೋಜನೆಯಾಗಿದೆ. ಹೂಡಿಕೆದಾರರು ಯಾವುದೇ ಅಪಾಯವಿಲ್ಲದೆ ತಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬಹುದು. ಇದು ಬ್ಯಾಂಕುಗಳ ಸ್ಥಿರ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ನೀಡುವ ವಿಶೇಷತೆ ಹೊಂದಿದೆ. ಆದರೆ, ಈ ಯೋಜನೆಯ ಪ್ರಮುಖ ನಿರ್ಬಂಧವೆಂದರೆ, ಇದರಲ್ಲಿ ಹೂಡಿಕೆ ಮಾಡಿದ ಮೊತ್ತವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗುವುದಿಲ್ಲ ಎನ್ನುವುದಾಗಿದೆ. ಇನ್ನು ಒಂದು ಗಮನಿಸಬೇಕಾದ ವಿಷಯವೇನೆಂದರೆ, ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವು, .

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

ಈ ಯೋಜನೆಯು ಪ್ರತ್ಯೇಕವಾಗಿ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ರಕ್ಷಕರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಯಾವುದೇ ವಯೋಮಿತಿ ಇಲ್ಲ. ಇದು ಯುವ ವೃತ್ತಿಪರರು ಮತ್ತು ಹಿರಿಯ ನಾಗರಿಕರಿಗೆ ಸಮಾನವಾಗಿ ಪ್ರವೇಶಿಸಬಹುದಾದ ಯೋಜನೆಯಾಗಿದೆ.

MSSC ಖಾತೆಯನ್ನು ಹೇಗೆ ತೆರೆಯುವುದು ಹೇಗೆ..?

ಮಹಿಳೆಯರು ತಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್‌ಗೆ ಭೇಟಿ ನೀಡಬೇಕು. ಬಳಿಕ ಅಲ್ಲಿ MSSC ಅರ್ಜಿ ನಮೂನೆಯನ್ನು ಕೇಳಿ ಪಡೆಯಬೇಕು. ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ನಾಮಿನಿ ವಿವರಗಳನ್ನು ಭರ್ತಿ ಮಾಡಬೇಕು. ಕೆವೈಸಿ ದಾಖಲೆಗಳಾದ ಆಧಾರ್, ಪ್ಯಾನ್, ವಿಳಾಸ ಪುರಾವೆಯನ್ನು ಸಲ್ಲಿಸಬೇಕು. ಹಾಗೆಯೇ ನೀವು ಹೂಡಿಕೆ ಮಾಡುವ ಮೊತ್ತವನ್ನು ಕನಿಷ್ಠ ₹1,000 ಮತ್ತು 100 ರ ಗುಣಕಗಳಲ್ಲಿ ಠೇವಣಿ ಮಾಡಬೇಕು. ನಿಮ್ಮ ಠೇವಣಿ ಪ್ರಮಾಣಪತ್ರವನ್ನು ಸ್ವೀಕರಿಸಿದರೆ ಖಾತೆ ತೆರೆಯುತ್ತದೆ.

ಈ ಮೂಲಕ ಮಹಿಳೆಯರು ಅಂಚೆ ಕಚೇರಿಯಲ್ಲಿ ತಮ್ಮ, ದಾಖಲಾತಿಗಳನ್ನು ನೀಡಿ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಖಾತೆ ತೆರೆಯಬಹುದು. ಹಾಗೂ ಇದರ ಪ್ರಯೋಜನಗಳನ್ನು ಪಡೆಯಬಹುದು. ಭವಿಷ್ಯಕ್ಕಾಗಿ ಇದೊಂದು ಉತ್ತಮ ನಿಧಿಯಾಗಿದೆ ಎಂದರೂ ತಪ್ಪಾಗದು. ಮಕ್ಕಳ ವಿದ್ಯಾಭ್ಯಾಸ ಹಾಗೂ ಇತರೆ ಪ್ರಮುಖವಾದ ಖರ್ಚುಗಳಿಗೆ ಈ ಯೋಜನೆಯು ಪೂರಕವಾಗಿದೆ.

FAQs
ಈ ಯೋಜನೆಯ ಪ್ರಮುಖ ನಿರ್ಬಂಧಗಳು ಯಾವುದು?

ಈ ಯೋಜನೆಯ ಪ್ರಮುಖ ನಿರ್ಬಂಧವೆಂದರೆ, ಹೂಡಿಕೆ ಮಾಡಿದ ಮೊತ್ತವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗುವುದಿಲ್ಲ.

MSSC ಖಾತೆ ಹೇಗೆ ತೆರೆಯಬಹುದು?

ಮಹಿಳೆಯರು ತಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್‌ಗೆ ಭೇಟಿ ನೀಡಿ MSSC ಅರ್ಜಿ ನಮೂನೆಯನ್ನು ಪಡೆದು, ತಮ್ಮ ವೈಯಕ್ತಿಕ ಮತ್ತು ನಾಮಿನಿ ವಿವರಗಳನ್ನು ಭರ್ತಿ ಮಾಡಿ ಖಾತೆ ತೆರೆಯಬಹುದು.

ಈ ಯೋಜನೆಯಿಂದ ಯಾವ ಲಾಭಗಳನ್ನು ಮಹಿಳೆಯರು ಪಡೆಯುತ್ತಾರೆ?

ಈ ಯೋಜನೆಯಿಂದ ಮಹಿಳೆಯರು 7.5% ವಾರ್ಷಿಕ ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು 2 ವರ್ಷಗಳ ಕೊನೆಯಲ್ಲಿ ಉತ್ತಮ ಒಟ್ಟು ಮೊತ್ತವನ್ನು ಪಡೆಯುತ್ತಾರೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಏನು?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ, ಭಾರತೀಯ ಮಹಿಳೆಯರಿಗೆ ಆರ್ಥಿಕ ಸ್ಥಿರತೆ ನೀಡಲು ಮತ್ತು ಅವರ ಉಳಿತಾಯವನ್ನು ಪ್ರೋತ್ಸಾಹಿಸಲು ರೂಪಿಸಲಾದ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

GoodReturns Finance

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+