ಬ್ಯಾಂಕ್, ಪೋಸ್ಟ್ ಆಫೀಸ್‌ಗಳಲ್ಲಿ (Bank, Post Office) ಹಲವಾರು ಹೂಡಿಕೆ ಯೋಜನೆಗಳಿವೆ. ಇನ್ನು ಪ್ರತೀ ವರ್ಷ ಕೂಡಾ ಹೊಸ ಹೊಸ ಯೋಜನೆಗಳನ್ನು, ವಿಶೇಷ ಬಡ್ಡಿದರದೊಂದಿಗೆ ತನ್ನ ಗ್ರಾಹಕರಿಗಾಗಿ ಪರಿಚಯಿಸುತ್ತಿರುತ್ತದೆ. ಇನ್ನು ಅಂಚೆ ಕಚೇರಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿರುತ್ತದೆ. ಇದೀಗ ವರ್ಷಾಂತ್ಯ ಬರುತ್ತಿದ್ದಂತೆ ಪೋಸ್ಟ್ ಆಫೀಸ್ ಯೋಜನೆಗಳ ಬಡ್ಡಿದರದ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವಾಲಯವು 2025ರ ಡಿಸೆಂಬರ್ 31 ರ ಒಳಗೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಶೀಲಿಸಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC), ಸುಕನ್ಯಾ ಸಮೃದ್ಧಿ ಯೋಜನೆ, ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಸೇರಿದಂತೆ ಪ್ರಮುಖ ಯೋಜನೆಗಳ ಬಡ್ಡಿದರಗಳು ಪರಿಷ್ಕರಣೆಯಾಗಲಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪರಿಶೀಲಿಸಲು ಮುಂದಾಗುತ್ತದೆ. ಅದೇ ಡಿ. 31 ರ ಪರಿಶೀಲನೆಯ ಬಳಿಕ ಜ. 1 ರಿಂದ ಮಾ. 31, 2026 ರವರೆಗಿನ ಅವಧಿಗೆ ಹೊಸ ದರಗಳು ಜಾರಿಗೆ ಬರುತ್ತದೆ. ಮಾರುಕಟ್ಟೆ ಬೆಳವಣಿಗೆ ಮತ್ತು ಹಣದುಬ್ಬರ ಗಮನಿಸಿ ಈ ಬಾರಿ ದರ ಕಡಿತದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಆದ್ದರಿಂದ ಡಿಸೆಂಬರ್ ಕೊನೆಯ ವಾರದಲ್ಲಿಯೇ ಈ ಕುರಿತು ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕಳೆದ ತ್ರೈಮಾಸಿಕದಲ್ಲಿ (2025ರ ಅಕ್ಟೋಬರ್-ಡಿಸೆಂಬರ್), ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿರಲಿಲ್ಲ. PPF, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ, NSC ಮತ್ತು ಕಿಸಾನ್ ವಿಕಾಸ್ ಪತ್ರದಂತಹ ಪ್ರಮುಖ ಯೋಜನೆಗಳ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿದ್ದವು. ಅಂದರೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದಗಳನ್ನು ಕೊನೆಯದಾಗಿ 2024ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗಿತ್ತು.
2025ರ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಪ್ರಸ್ತುತ ತ್ರೈಮಾಸಿಕಕ್ಕೆ ಬಡ್ಡಿದರಗಳು ಹೀಗಿವೆ:
- ಸಾಮಾನ್ಯ ಉಳಿತಾಯ ಖಾತೆ 4%.
- ಒಂದು ವರ್ಷದ ಟೈಮ್ ಡಿಪಾಸಿಟ್ 6.9%.
- ಎರಡು ವರ್ಷ - 7%, ಮೂರು ವರ್ಷ - 7.1%.
- ಐದು ವರ್ಷದ ಟೈಮ್ ಡಿಪಾಸಿಟ್‌ಗೆ 7.5%
- ಐದು ವರ್ಷಗಳ RD ಯೋಜನೆಗೆ 6.7% ಬಡ್ಡಿ ನೀಡಲಾಗುತ್ತದೆ.
- ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) 8.2%.
- ಮಾಸಿಕ ಆದಾಯ ಯೋಜನೆ (MIS) 7.4%
- ರಾಷ್ಟ್ರೀಯ ಉಳಿತಾಯ ಪತ್ರ (NSC) 7.7%
- ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) 7.1%.
- ಕಿಸಾನ್ ವಿಕಾಸ ಪತ್ರಕ್ಕೆ 7.5% ಇದೆ.
- ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಖಾತೆಯು 8.2% ಬಡ್ಡಿ ನೀಡಲಾಗುತ್ತದೆ.
ಸಾಮಾನ್ಯವಾಗಿ ಯಾವುದೇ ಬಡ್ಡಿದರ ಬದಲಾವಣೆಯಾದರು, ಅದರ ನೇರ ಪರಿಣಾಮ ಬೀಳುವುದು ಗ್ರಾಹಕರಿಗೆ ಮಾತ್ರ. ಹಿರಿಯ ನಾಗರಿಕರು, ಪಿಂಚಣಿದಾರರು ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಭವಿಷ್ಯದ ಆದಾಯಕ್ಕಾಗಿ ಪೋಸ್ಟ್ ಆಫೀಸ್ ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಒಂದು ವೇಳೆ ಬಡ್ಡಿದರ ಕಡಿಮೆಯಾದರೆ, ಗ್ರಾಹಕರಿಗೂ ಆದಾಯದಲ್ಲಿ ಕುಸಿತ ಕಾಣಬಹುದು.


Click it and Unblock the Notifications