ಹಿರಿಯ ನಾಗರಿಕರಿಗಾಗಿ ಭಾರತ ಸರ್ಕಾರ ಅಂಚೆ ಕಛೇರಿ ಯೋಜನೆಗಳನ್ನ ತರ್ತಿದೆ. ಈ ಮೂಲಕ ಭಾರತದ ಹಿರಿಯ ನಾಗರಿಕರು ತಮ್ಮ ಸಂಪೂರ್ಣ ಜೀವನವದಿಯ ವರೆಗೆ ತಿಂಗಳಿಗೆ 2,500ರೂಗಳನ್ನ ಗಳಿಸಬಹುದು. ಆದಾಯವಿಲ್ಲದೇ ಮನೆಯಲ್ಲೇ ಇರುವ ನಿವೃತ್ತ ಹಿರಿಯ ನಾಗರಿಕರು ಇದರ ಪ್ರಯೋಜನಗಳನ್ನ ಪಡೆಯಬಹುದು. ಇದರಿಂದಾಗಿ ಯಾರ ಆರ್ಥಿಕ ಬೆಂಬಲವಿಲ್ಲದೆ ಜೀವನ ನಡೆಸಬಹುದು.
ಪೋಸ್ಟ್ ಆಫೀಸ್ ಸ್ಕೀಮ್
ನೀವೇನಾದ್ರು ಪ್ರತಿ ತಿಂಗಳು ಆದಾಯವನ್ನು ಪಡೆಯುವಂತಹ ಯೋಜನೆಗಳನ್ನ ನೋಡುತ್ತಿದ್ದರೆ ಅವರಿಗೆ ಪೋಸ್ಟ್ ಆಫಿಸ್ ಯೋಜನೆ ಸಹಾಯಕವಾಗಲಿದೆ. ಇದರಿಂದ ನೀವು ಪ್ರತಿ ತಿಂಗಳು ಆದಾಯವನ್ನು ಗಳಿಸಬಹುದು. ನಿವೃತ್ತಿಯ ನಂತರ ಪ್ರತಿ ತಿಂಗಳು ಬರುವ ಆದಾಯದ ಕುರಿತು ಚಿಂತಿಸುತ್ತಿರುವವರಿಗಾಗಿ ಪೋಸ್ಟ್ ಆಫೀಸ್‌ನ ಹಿರಿಯ ನಾಗರಿಕ ಉಳಿತಾಯ ಯೋಜನೆ ಅಂದರೆ SCSS ಉತ್ತಮ ಆಯ್ಕೆಯಾಗಿದೆ.

ಈ ಯೋಜನೆಯ ಮೂಲಕ ಹಿರಿಯ ನಾಗರಿಕರು ಸುಕ್ಷಿತ ಮತ್ತು ಸ್ಥಿವಾದ ಮಾಸಿಕ ಆದಾಯವನ್ನ ಹೊಂದಬಹುದು. ಅಲ್ಲದೆ ನೀವೇನಾದ್ರು ನಿವೃತ್ತಿಯನ್ನ ಹೊಂದಿದ್ದರೆ ಮತ್ತು ನಿಮ್ಮ ನಿವೃತ್ತಿಯ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ, ಈ ಯೋಜನೆಯು ನಿಮಗೆ ಪ್ರಯೋಜನಕಾರಿಯಾಗಿದೆ.
ಪ್ರತಿ ತಿಂಗಳು 20,500 ರೂ.ಗಳ ಆದಾಯ
ಪೋಸ್ಟ್ ಆಫೀಸ್‌ನ ಹಿರಿಯ ನಾಗರಿಕ ಉಳಿತಾಯ ಯೋಜನೆ ಅಂದರೆ SCSS ನಲ್ಲಿ ಪ್ರಸ್ತುತ ಬಡ್ಡಿ ದರ ಶೇಕಡಾ 8.2 ರಷ್ಟಿದೆ, ಇದು ಸರ್ಕಾರಿ ಯೋಜನೆಗಳಲ್ಲೇ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಗರಿಷ್ಠ 30 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ವರ್ಷ ಸುಮಾರು 2,46,000 ರೂಗಳಷ್ಟು ಬಡ್ಡಿ ಸಿಗುತ್ತದೆ. ನೀವು ಈ ಮೊತ್ತವನ್ನು ಪ್ರತಿ ತಿಂಗಳು ಸುಮಾರು 20,500ರೂಗಳ ರೂಪದಲ್ಲಿ ಪಡೆಯಬಹುದು. ಅಲ್ಲದೆ ಈ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ.
ಹೂಡಿಕೆಯ ಮಿತಿ ಮತ್ತು ಅವಧಿ
ಮೊದಲಿಗೆ ಈ ಯೋಜನೆಯ ಗರಿಷ್ಠ ಹೂಡಿಕೆ ಮಿತಿ 15 ಲಕ್ಷ ರೂಗಳಷ್ಟಿತ್ತು, ಆದ್ರೀಗ 30 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಈ ಯೋಜನೆಯು 5 ವರ್ಷಗಳು ಮುಕ್ತಾಯ ಅವಧಿಯನ್ನ ಹೊಂದಿದೆ . ಮೆಚ್ಯೂರಿಟಿಯ ನಂತರ ಅದನ್ನು ಬೇಕಾದ್ರೆ ನೀವು 3 ವರ್ಷಗಳವರೆಗೆ ವಿಸ್ತರಣೆ ಮಾಡಿಕೊಳ್ಳಬಹುದು.
ಯಾರೆಲ್ಲಾ ಹೂಡಿಕೆಗೆ ಅರ್ಹರು?
60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಭಾರತೀಯ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಬಹುದು. ಜೊತೆಗೆ 55 ರಿಂದ 60 ವರ್ಷ ವಯಸ್ಸಿನಲ್ಲಿ ಸ್ವಯಂ ನಿವೃತ್ತಿ ಪಡೆದವರು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಯೋಜನೆಯಡಿ ಖಾತೆಯನ್ನು ತೆರೆಯಲು ಇಚ್ಛಿಸುವವರು, ಈ ಯೋಜನೆಗಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ತೆರಿಗೆ ಮತ್ತು ಇದರ ಪ್ರಯೋಜನಗಳು
ಈ ಯೋಜನೆಯಿಂದ ನೀವು ಪಡೆಯುವ ಆದಾಯಕ್ಕೆ ತೆರಿಗೆ ಪಾವತಿ ಮಡಬೇಕಾಗುತ್ತದೆ. ಇನ್ನೂ, ಕೆಲವು ತೆರಿಗೆ ಉಳಿತಾಯ ಸೌಲಭ್ಯವು SCSS ಅಡಿಯಲ್ಲಿ ಲಭ್ಯವಿರುತ್ತವೆ. ಇದರಿಂದ ನಿಮ್ಮ ತೆರಿಗೆಯ ಭಾರವನ್ನು ನೀವು ಕಡಿಮೆ ಮಾಡಬಹುದು.
ಈ ಯೋಜನೆಯ ಉಪಯೋಗಗಳು
ಸುರಕ್ಷಿತ ಹೂಡಿಕೆ: ಸರ್ಕಾರ ಆರಂಭಿಸಿರುವ ಈ ಯೋಜನೆ ಸಂಪೂರ್ಣ ಸುರಕ್ಷಿತವಾಗಿದೆ. ಇದರಲ್ಲಿ ನೀವು ಹೂಡಿಕೆ ಮಾಡಬಹುದು.
ಸ್ಥಿರ ಮಾಸಿಕ ಆದಾಯ: ನಿವೃತ್ತಿಯ ನಂತರ, ನಿಮ್ಮ ದಿನಿತ್ಯದ ವೆಚ್ಚಗಳಿಗಾಗಿ ನೀವು ಪ್ರತಿ ತಿಂಗಳು ಆದಾಯವನ್ನು ಗಳಿಸುತ್ತೀರಿ.
ಬಡ್ಡಿ ದರ: ಈ ಯೋಜನೆಯ ಮೂಲಕ ನೀವು ಶೇಕಡಾ 8.2ರಷ್ಟು ಬಡ್ಡಿಯನ್ನು ಪಡೆಯಬಹುದು.
ಖಾತೆಯ ವಿಸ್ತರಣೆ: ಅಲ್ಲದೆ ಈ ಯೋಜನೆ ಮೂಲಕ ನೀವು ಐದು ವರ್ಷಗಳ ನಂತರ ನಿಮ್ಮ ಹೂಡಿಕೆಯ ಅವಧಿಯನ್ನು ವಿಸ್ತರಿಸುವ ಅವಕಾಶವಿರುತ್ತದೆ.
ನೀವು ಅಂಚೆ ಕಛೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ನಿಗದಿತ ನಮೂನೆಯನ್ನು ಸಲ್ಲಿಸುವ ಮೂಲಕ ಮುಕ್ತಾಯ ದಿನಾಂಕದಿಂದ 3 ವರ್ಷಗಳವರೆಗೆ ಖಾತೆಯ ಅವಧಿಯನ್ನು ವಿಸ್ತರಿಸಬಹುದು. ನಿಮ್ಮ ಖಾತೆಯ ಅವಧಿಯ ಅಂತ್ಯದ 1 ವರ್ಷದೊಳಗೆ ನೀವು ನಿಮ್ಮ ಖಾತೆಯನ್ನು ವಿಸ್ತರಣೆ ಮಾಡಬಹುದು.
ಖಾತೆ ಮುಚ್ಚುವಿಕೆ:
ನೀವು ನಿಮ್ಮ ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ನಂತರ ನೀವು ಬಯಸಿದರೆ ನಿಮ್ಮ ಖಾತರಯನ್ನು ನೀವು ಮುಚ್ಚಬಹುದು. ಅಥವಾ ಖಾತೆದಾರರ ಮರಣ ಹೊಂದಿದ ಸಮಯದಲ್ಲಿ, ಮರಣದ ದಿನಾಂಕದಿಂದ, ಖಾತೆಯು ಪೋಸ್ಟ್ ಆಫಿಸ್ ಉಳಿತಾಯ ಖಾತೆಯ ದರದಲ್ಲಿ ಬಡ್ಡಿಯನ್ನು ಗಳಿಸುತ್ತದೆ. ಸಂಗಾತಿಯು ಜಂಟಿ ಖಾತೆ ಹೊಂದಿದ್ದರೆ, ಅಥವಾ ಒಬ್ಬರೇ ನಾಮಿನಿ ಆಗಿದ್ದರೆ, ಅವರೇನಾದ್ರು SCSS ಖಾತೆಯನ್ನು ಹೊಂದಿಲ್ಲದಿದ್ದರೆ ಖಾತೆಯ ಅಂತ್ಯದ ವರೆಗೆ ಮುಂದುವರಿಸುವ ಅವಕಾಶವಿರುತ್ತದೆ.
ನಿಯಮಗಳು ಮತ್ತು ಷರತ್ತುಗಳು
ಇನ್ನು ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೊದಲು ಇದರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ಈ ಯೋಜನೆಯು ನಿಮ್ಮ ನಿವೃತ್ತಿಯ ನಂತರ ನಿಮ್ಮನ್ನು ಆರ್ಥಿಕವಾಗಿ ಬಲಪಡಿಸುವುದಂತು ಖಂಡಿತ. ನೀವು ನಿಮ್ಮ ನಿವೃತ್ತಿಯ ನಂತರ ನೀವು ಸುರಕ್ಷಿತ ಮತ್ತು ಆರಾಮದಾಯಕ ಜೀವನವನ್ನು ಇಚ್ಛಿಸಿದರೆ, ಈ ಯೋಜನೆ ನಿಮಗೆ ಸೂಕ್ತ ಮತ್ತು ಉತ್ತಮ ಯೋಜನೆಯಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications