ಬೆಂಗಳೂರಿನಲ್ಲಿ (Bengaluru) ಕಳೆದೆರಡು ದಿನಗಳಿಂದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯಗಳಾಗುತ್ತಿದೆ (Power Cut). ಈ ಹಿನ್ನೆಲೆ ಜನರಿಗೆ ತನ್ನ ಅಗತ್ಯ ಕೆಲಸಗಳನ್ನು ಮೊದಲೇ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಈ ವಾರದ ಅಂತ್ಯದವರೆಗೂ ಬೆಂಗಳೂರಿನ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ.

ನವೆಂಬರ್ 23 ರಂದು ವಿದ್ಯುತ್ ವ್ಯತ್ಯಯ:
ಮಾಲೂರು ಕೆಪಿಟಿಸಿಎಲ್ ವತಿಯಿಂದ 220 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ನವೆಂಬರ್ 23 ರ ಭಾನುವಾರ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ಹೊರಡಿಸಿದೆ.
ಟೇಕಲ್ ರಸ್ತೆ ಮತ್ತು ಅದರಡಿಯಲ್ಲಿ ಬರುವ ವಿದ್ಯುತ್ ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಮಾಲೂರು ತಾಲೂಕಿನಾದ್ಯಂತ 66/11 ಕೆ.ವಿ ವಿದ್ಯುತ್ ಉಪಕೇಂದ್ರಗಳ 11 ಕೆ.ವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜು ಆಗುತ್ತಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ಆದ್ದರಿಂದ ಸಾರ್ವಜನಿಕರು ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.
ಎಲ್ಲೆಲ್ಲಾ ಇರಲ್ಲ ಕರೆಂಟ್?
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ 66/11 ಕೆ.ವಿ ವಿದ್ಯುತ್ ಸ್ವೀಕರಣಾ ಉಪ ಕೇಂದ್ರಗಳಾದ ಮಾಲೂರು ಪಟ್ಟಣ, ಮಾಲೂರು ಕೈಗಾರಿಕಾ ಪ್ರದೇಶ, ಮಾಸ್ತಿ, ಟೇಕಲ್, ಲಕ್ಕೂರು, ತೊರಲಕ್ಕಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ಹೊರಡಿಸಿದೆ.
ನವೆಂಬರ್ 19 ರಂದೂ ಪವರ್ ಕಟ್
ಕೆಪಿಟಿಸಿಎಲ್ 66/11 ಕೆ.ವಿ ಹೆಚ್.ಬಿ.ಆರ್ ವಿದ್ಯುತ್ ವಿತರಣಾ ಕೇಂದ್ರಗಳ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವ ಹಿನ್ನೆಲೆ ಇಂದೂ (ನ.19, ಬುಧವಾರ) ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಿತ್ತು. ಬೆಸ್ಕಾಂ ಸೂಚನೆಯ ಪ್ರಕಾರ, ರಾಜಾಜಿನಗರ, ಮಲ್ಲೇಶ್ವರಂ, ಜಯನಗರ, ಎಂಜಿ ರೋಡ್ ಹೀಗೆ 50ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಆಗಲಿದೆ ಎನ್ನಲಾಗಿದೆ.
ಹೆಚ್.ಬಿ.ಆರ್ 1ನೇ ಬ್ಲಾಕ್, ಎರಡನೇ ಬ್ಲಾಕ್, ಯಾಸಿನ್ ನಗರ, ಸುಭಾಶ್ ಲೇಔಟ್, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀರ್ಸ್ ಕಾಲೊನಿ, ಹೆಚ್.ಬಿ.ಆರ್ 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರೋಡ್, ಸರ್ವೀಸ್ ರೋಡ್, ಕೆಕೆ ಹಳ್ಳಿ, ಸಿ.ಎಂ.ಆರ್. ರೋಡ್, ಕಮ್ಮನಹಳ್ಳಿ ಲೇಔಟ್, ಗೋವಿಂದಪುರ ಗ್ರಾಮ, ಕೆಜಿ ಹಳ್ಳಿ, ಕಾವೇರಿ ಗಾರ್ಡನ್ ಸುತ್ತಮುತ್ತಲಿನ ನಗರಗಳಲ್ಲಿ ನವೆಂಬರ್ 19 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಲಾಗಿತ್ತು.
ಅಲ್ಲದೇ ಮಂಜುನಾಥನಗರ, ಗಾಯತ್ರಿನಗರ, ಶಿವನಗರ, ಲಕ್ಷ್ಮೀನಾರಾಯಣಪುರ, ಪ್ರಕಾಶನಗರ, ಸುಬ್ರಹ್ಮಣ್ಯನಗರ, ರಾಜಾಜಿನಗರ 2 ಬ್ಲಾಕ್, 6ನೇ ಬ್ಲಾಕ್, ವಿಜಯನಗರ, ಅಗ್ರಹಾರ ದಾಸರಹಳ್ಳಿ, ಶಂಕರಮಠ, ಇಂದಿರಾ ನಗರ, ಮಾಗಡಿ ರಸ್ತೆ, ಹರೀಶ್ಚಂದ್ರ ಘಾಟ್ ಹೀಗೆ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ಹೊರಡಿಸಿದೆ.


Click it and Unblock the Notifications