ಬೆಂಗಳೂರು: ಸಾಮಾನ್ಯವಾಗಿ ಯಾವುದಾದರೂ ಕಾಮಗಾರಿಗಳು ನಡೆಯುವಾಗ, ಮಳೆ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆ ವಿದ್ಯುತ್ ಕಟ್ (Power Cut) ಮಾಡುತ್ತದೆ. ಅಲ್ಲದೇ ಈ ಬಗ್ಗೆ ಮೊದಲೇ ಸಾರ್ವಜನಿಕರಿಗೆ ಮಾಹಿತಿಯನ್ನೂ ನೀಡುತ್ತದೆ. ಇದೀಗ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ (Bengaluru) ನವೆಂಬರ್ 18 ರಂದು ಪವರ್ ಕಟ್ ಇರಲಿದೆ ಎಂದು ಸೂಚನೆ ನೀಡಲಾಗಿದೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನವೆಂಬರ್ 18 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ. ವಿದ್ಯುತ್ ಇಲಾಖೆಯ ಕಾಮಗಾರಿ ಇರುವ ಕಾರಣ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ನವೆಂಬರ್ 18 ರಂದು ವಿದ್ಯುತ್ ಕಡಿತ ಆಗಲಿದೆ ಎಂದು ಸೂಚನೆ ನೀಡಲಾಗಿದೆ. ಇದು 66/11 ಕೆವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ನಡೆಯುವ ತುರ್ತು ದುರಸ್ತಿ ಕಾರ್ಯದಿಂದ ಕ್ರಮ ಕೈಗೊಳ್ಳಲಾಗಿದೆ.
BESCOM ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಈ ಪವರ್ ಕಟ್ ಶೋಭಾ ಸಿಟಿ ಮತ್ತು ಆರ್.ಕೆ. ಹೆಗ್ಗಡೆ ನಗರ ಸೇರಿದಂತೆ ಹಲವಾರು ನಗರಗಳ ನಿವಾಸಿಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಈ ಪ್ರದೇಶದ ನಿವಾಸಿಗಳು ತಮ್ಮ ದೈನಂದಿನ ಕೆಲಸಗಳನ್ನು ಆರು ಗಂಟೆಗಳ ಈ ವಿದ್ಯುತ್ ಕಡಿತಕ್ಕೆ ಅನುಗುಣವಾಗಿ ಪ್ಲಾನ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಎಲ್ಲೆಲ್ಲಿ ಪವರ್ ಕಟ್?
ನವೆಂಬರ್ 18 ರಂದು ವಿದ್ಯುತ್ ವ್ಯತ್ಯಯಕ್ಕೆ ಒಳಗಾಗುವ ಪ್ರದೇಶಗಳು: ಶೋಭಾ ಸಿಟಿ, ಚೊಕ್ಕನಹಳ್ಳಿ, ಡೊಮಿನೋಸ್ ಪಿಜ್ಜಾ, ಪ್ಯಾರಡೈಸ್ ನೂರ್ ನಗರ, ಎಕ್ಸ್‌ಸರ್ವೀಸ್‌ಮೆನ್ ಲೇಔಟ್, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಆರ್.ಕೆ. ಹೆಗ್ಗಡೆ ನಗರ, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್ ಸ್ಲಮ್, ಬರ್ಡ್ ಬೆಂಚ್ ಮತ್ತು ರಾಯಲ್ ವುಡ್.
ಅದೇ ರೀತಿ, ಈ ಕೆಳಗಿನ ಸುತ್ತಮುತ್ತಲಿನ ಪ್ರದೇಶಗಳಿಗೂ ವಿದ್ಯುತ್ ಕಡಿತದ ಪರಿಣಾಮ ಬೀರಲಿದ್ದು, ಅರ್ಕಾವತಿ ಲೇಔಟ್, ತನಿಸಂದ್ರ, ಆರ್.ಕೆ. ಹೆಗ್ಗಡೆ ನಗರದ ವಿಸ್ತೃತ ಪ್ರದೇಶಗಳು, ಬೆಳ್ಳಹಳ್ಳಿ ಗ್ರಾಮ, ತಿರುಮನಹಳ್ಳಿ ಗ್ರಾಮ, ಮಿಟ್ಟಗಾನಹಳ್ಳಿ ಮತ್ತು ಕೊಗಿಲು ಗ್ರಾಮಗಳಲ್ಲೂ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಗರದಲ್ಲಿ ಸ್ಥಿರ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು BESCOM ಕೈಗೊಳ್ಳುವ ಮೂಲಸೌಕರ್ಯ ನಿರ್ವಹಣೆಯ ಭಾಗವಾಗಿ ಈ ಪವರ್ ಕಟ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ವಿದ್ಯುತ್ ನಿರ್ವಹಣೆಯಲ್ಲಾಗುತ್ತಿರುವ ಸಮಸ್ಯೆಗಳನ್ನು, ಉತ್ತಮ ಸೇವೆ ನೀಡುವ ಉದ್ದೇಶದಿಂದ ಶೋಭಾ ಸಿಟಿ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯಗಳು ಅತ್ಯಗತ್ಯವಾಗಿವೆ.
ಇನ್ನು ಎಲ್ಲೆಲ್ಲಾ ವಿದ್ಯುತ್ ವ್ಯತ್ಯಯವಾಗುತ್ತದೆಯೋ, ಆ ಪ್ರದೇಶದ ಜನರು ಮೊದಲೇ ಕೆಲಸದ ಬಗ್ಗೆ ಪ್ಲಾನ್ ಮಾಡಿಕೊಳ್ಳುವಂತೆ BESCOM ಮನವಿ ಮಾಡಿದೆ. ಅಗತ್ಯ ಸಾಧನಗಳನ್ನು ಚಾರ್ಜ್ ಮಾಡಲು, ಪಂಪ್ ಸೇವೆಯಿಂದ ನೀರು ಬಳಸುತ್ತಿದ್ದರೆ, ಮೊದಲೇ ತುಂಬಿಸಿಟ್ಟುಕೊಳ್ಳುವಂತೆ ಮತ್ತು ಮನೆ ಕೆಲಸಗಳನ್ನು ಮೊದಲೇ ಮಾಡುವಂತೆ ಬೆಸ್ಕಾಂ ಸಲಹೆ ನೀಡಿದೆ. ಇನ್ನು ಈ ದುರಸ್ತಿ ಕಾರ್ಯ ಸಂಪೂರ್ಣವಾದ ನಂತರ ವಿದ್ಯುತ್ ಸೇವೆಯಲ್ಲಿ ಯಾವುದೇ ಸಮಸ್ಯೆಗಳು ಆಗಲ್ಲ ಎಂದು ಬೆಸ್ಕಾಂ ಭರವಸೆ ನೀಡಿದೆ.
ನವೆಂಬರ್ 18 ರ ವಿದ್ಯುತ್ ಕಡಿತದಿಂದ ವಿದ್ಯುತ್ ಸೌಲಭ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ನಿವಾಸಿಗಳು ಉತ್ತಮ ಸೇವಾ ಅನುಭವವನ್ನು ಪಡೆಯಬಹುದು.


Click it and Unblock the Notifications