ಬೆಂಗಳೂರು: ಈ ವರ್ಷದ ಆರಂಭದಿಂದಲೇ ಬೆಂಗಳೂರು ವಿದ್ಯುತ್ ವ್ಯತ್ಯಯದ (Bengaluru Power Cut) ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಅದರಲ್ಲೂ ಈ ವಾರದಲ್ಲಿ ಬೆಂಗಳೂರಿನ ಬಹುತೇಕ ನಗರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಿಸಿತ್ತು. ಅದೇ ರೀತಿ ಇದೀಗ ಬೆಂಗಳೂರು ನಿವಾಸಿಗಳಿಗೆ ವೀಕೆಂಡ್‌ನಲ್ಲೂ ಪವರ್ ಕಟ್ ಬಿಸಿ ತಟ್ಟಲಿದೆ. ಈ ವಾರದ ಅಂತ್ಯದಲ್ಲೂ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮೊದಲೇ ಸಿದ್ಧರಾಗಿರುವಂತೆ ಸಲಹೆ ನೀಡಲಾಗಿದೆ.

ಅದೇ ರೀತಿ ಬೆಸ್ಕಾಂ ಪ್ರಕಟಣೆ ಪ್ರಕಾರ, ಬೆಂಗಳೂರಿನ ಉತ್ತರ, ಪಶ್ಚಿಮ ಮತ್ತು ಮಧ್ಯ ಪ್ರದೇಶಗಳು ಸೇರಿದಂತೆ ಹಲವು ಭಾಗಗಳಲ್ಲಿ ಇಂದು ಅಂದರೆ ಫೆಬ್ರವರಿ 7 ಮತ್ತು 8 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (KPTCL) ನೀಡಿರುವ ನಿರ್ದೇಶನದಂತೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವಾರಾಂತ್ಯ ಪವರ್ ಕಟ್ ಘೋಷಿಸಿದೆ. ಈ ಹಿನ್ನೆಲೆ ಬೆಂಗಳೂರಿನ ಜಾಲಹಳ್ಳಿ ಮತ್ತು ರಾಜಾಜಿನಗರ ವಿಭಾಗದ ಸುತ್ತಮುತ್ತ ಪವರ್ ಕಟ್ ಇರಲಿದೆ. ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ, ಎರಡೂ ದಿನವೂ ಕರೆಂಟ್ ಇರುವುದಿಲ್ಲ. ತುರ್ತು ಸಂದರ್ಭಗಳಲ್ಲಿ, ನಾಗರಿಕರು ಬೆಸ್ಕಾಂ ಸಹಾಯವಾಣಿ 1912 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಶನಿವಾರ, ಭಾನುವಾರ ಎಲ್ಲೆಲ್ಲಿ ಇರಲ್ಲ ಕರೆಂಟ್?
ಫೆಬ್ರವರಿ 7, ಶನಿವಾರದಂದು ಬಸವೇಶ್ವರ ನಗರ, ವಿಜಯ ನಗರ, ಗೋವಿಂದರಾಜ್ ನಗರ, ಕಾಮಾಕ್ಷಿಪಾಳ್ಯ ಸರ್ವೀಸ್ ನಗರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇನ್ನು ರಾಮಯ್ಯ ಆಸ್ಪತ್ರೆ, ಪೈಪ್‌ಲೈನ್ ರಸ್ತೆ, ಎಂಎಸ್‌ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್‌ಐ ಕ್ವಾರ್ಟರ್ಸ್, ಎ.ಕೆ. ಕಾಲೋನಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಇರಲಿದೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅವುಗಳೆಂದರೆ ಆರ್‌ಎಂಝಡ್ ಇಕೋ ವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬಿಸನಹಳ್ಳಿ, ದೊಡ್ಡಕನ್ನಹಳ್ಳಿ ರಸ್ತೆ, ಗೇರ್ ಸ್ಕೂಲ್ ರಸ್ತೆ, ಸ್ಟರ್ಲಿಂಗ್ ಅಸೆನ್ಷಿಯಾ, ಜೆ.ವಿ. ಹೋಟೆಲ್ ಹಾಗೂ ಸುತ್ತಮುತ್ತ ವಿದ್ಯುತ್ ಕಡಿತವಾಗಲಿದೆ ಎಂದು ವರದಿಯಾಗಿದೆ.
ಇಲ್ಲೂ ಎರಡು ದಿನ ಇರಲ್ಲ ಕರೆಂಟ್!
ಜಾಲಹಳ್ಳಿ ವಿಭಾಗದ 66/11 ಕೆ.ವಿ ಸೋಲದೇವನಹಳ್ಳಿ ಮತ್ತು 66/11 ಕೆವಿ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ಶನಿವಾರ, ಭಾನುವಾರ ಎರಡು ದಿನ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನಲಾಗಿದೆ. ಆ ಪ್ರಕಾರ, ಸೋಲದೇವನಹಳ್ಳಿ, ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ ಮತ್ತು ಕೃಷ್ಣಾ ಕಾಲೇಜು ರಸ್ತೆ ಮತ್ತು ಸುತ್ತ ಮುತ್ತ ಕರೆಂಟ್ ಇರುವುದಿಲ್ಲ.
ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಕೆವಿಹೆಚ್ ಶಿವನಹಳ್ಳಿ, ಬಿಡಬ್ಲ್ಯೂಎಸ್‌ಎಸ್‌ಬಿ ಘಟಕಗಳು, ರಾಮಗೊಂಡನಹಳ್ಳಿ, ಬಿಎಐಎಸ್ ಹಾಸ್ಟೆಲ್, ನ್ಯೂಟೌನ್ 5ನೇ ಹಂತ, ಸಿಆರ್‌ಪಿಎಫ್, ಇಸ್ರೋ ಲೇಔಟ್, ನಾಗೇನಹಳ್ಳಿ, ಮಾರಸಂದ್ರ, ಶ್ರೀನಿಧಿ ಲೇಔಟ್, ಪುಟ್ಟೇನಹಳ್ಳಿ, ಶಾರ್ಕ್ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.


Click it and Unblock the Notifications