ಬೆಂಗಳೂರಿನಲ್ಲಿ ಏನಾದರೂ ವಿದ್ಯುತ್ ಸಂಬಂಧಿತ ಕೆಲಸಗಳಿದ್ದಾಗ ಸಾಮಾನ್ಯವಾಗಿ ವಿದ್ಯುತ್ ವ್ಯತ್ಯಯದ ಬಗ್ಗೆ ಘೋಷಣೆಗಳನ್ನು ಮಾಡಲಾಗುತ್ತದೆ. ಇದೀಗ ಬೆಸ್ಕಾಂ ಇಲಾಖೆ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ (ನ.18, 19) ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಸೂಚನೆ ನೀಡಿದೆ. ಹಾಗಿದ್ರೆ ಬೆಂಗಳೂರಿನಲ್ಲಿ ನಾಳೆ ಎಲ್ಲೆಲ್ಲಾ ಕರೆಂಟ್ ಇರಲ್ಲ ಎಂಬುದರ ಮಾಹಿತಿ ಇಲ್ಲಿದೆ ಓದಿ.

ಬೆಸ್ಕಾಂ ಇಲಾಖೆಯಿಂದ ಸೂಚನೆ
ಬೆಂಗಳೂರಿನಲ್ಲಿ ನವೆಂಬರ್ 19, 2025ರ ಬುಧವಾರದಂದು ನಿಗದಿತ ಸಮಯದವರೆಗೆ ವಿದ್ಯುತ್ ಕಡಿತವನ್ನು ಬೆಸ್ಕಾಂ ಸೂಚನೆ ನೀಡಿದೆ. 220/66/11 ಕೆವಿ ಎನ್‌ಆರ್‌ಎಸ್ ಸ್ವೀಕರಿಸುವ ಕೇಂದ್ರದಲ್ಲಿ ತಿಂಗಳ ನಿರ್ವಹಣಾ ಕಾರ್ಯ ನಡೆಯಲಿರುವ ಕಾರಣ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಾ ಪವರ್ ಕಟ್?
ವಿದ್ಯುತ್ ಕಡಿತದ ಪರಿಣಾಮ ಬೆಂಗಳೂರಿನ, ಮಂಜುನಾಥನಗರ, ಶಿವನಗರ, ಗಾಯತ್ರಿ ನಗರ, ಪ್ರಕಾಶನಗರ, ಲಕ್ಷ್ಮೀನಾರಾಯಣಪುರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ II ಬ್ಲಾಕ್, 6ನೇ ಬ್ಲಾಕ್, ಅಗ್ರಹಾರ ದಾಸರಹಳ್ಳಿ, ಇಂದಿರಾ ನಗರ, ಶಂಕರಮಠ, ಮಾಗಡಿ ರಸ್ತೆ (1 ರಿಂದ 10ನೇ ಕ್ರಾಸ್) ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸೂಚನೆ ನೀಡಲಾಗಿದೆ.
ನವೆಂಬರ್ 18 ರಂದು ಎಲ್ಲೆಲ್ಲಿ ಪವರ್ ಕಟ್?
ಬೆಸ್ಕಾಂ ಇಲಾಖೆ ಸೂಚನೆ ನೀಡಿರುವಂತೆ ಇಂದು ಶೋಭಾ ಸಿಟಿ ಮತ್ತು ಆರ್.ಕೆ, ಹೆಗ್ಗಡೆ ನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಹೇಳಲಾಗಿದೆ. ನಿರ್ವಹಣಾ ಕಾಮಗಾರಿ ಇರುವ ಹಿನ್ನೆಲೆ ಇಂದು ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಿದೆ.
ಶೋಭಾ ಸಿಟಿಯಲ್ಲಿ ಎಲ್ಲೆಲ್ಲಾ ವಿದ್ಯುತ್ ವ್ಯತ್ಯಯ ಇರಲಿದೆ?
ಶೋಭಾ ಸಿಟಿ, ಚೊಕ್ಕನಹಳ್ಳಿ, ಡಾಮಿನೋಸ್ ಪಿಜ್ಜಾ, ಪ್ಯಾರಡೈಸ್ ನೂರ್ ನಗರ, ಶಬರಿ ನಗರ, ಹೊಸ ಶಾಂತಿನಗರ, ಕೆಂಪೇಗೌಡ ಲೇಔಟ್, ಪೊಲೀಸ್ ಕ್ವಾಟ್ರರ್ಸ್, ಆರ್‌ಕೆ ಹೆಗ್ಗಡೆ ನಗರ, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್ ಸ್ಲಮ್, ಬರ್ಡ್ ಬೆಂಚ್ ಮತ್ತು ರಾಯಲ್ ವುಡ್, ಥಣಿಸಂದ್ರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿಟ್ಟಗನಗಳ್ಳಿ, ಕೋಗಿಲು ಗ್ರಾಮದಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಹೇಳಲಾಗಿದೆ.
ಅದೇ ರೀತಿ ಆಡುಗೋಡಿ ವ್ಯಾಪ್ತಿಯಲ್ಲಿ, ಇಂದು ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆಎಂಎಫ್ ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರೋಡ್, ಚಿಕ್ಕಲಕ್ಷ್ಮೀ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಬೆಂಗಳೂರು ಡೈರು, ಫೋರಮ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯ ಪಾಳ್ಯ, ಚಂದ್ರಪ್ಪ ನಗರ, ನಿಮ್ಹಾನ್ಸ್ ಅಡ್ಮಿನ್ಸ್ಟ್ರೇಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದ ಕಲ್ಲು, ಬೃಂದಾವನ ಸ್ಲಮ್, ಲಾಲ್ಜಿ ನಗರ ಹೀಗೆ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications