ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಆಗಾಗ ವಿದ್ಯುತ್ ವ್ಯತ್ಯಯವಾಗೋದು (Power Cut) ಸರ್ವೇ ಸಾಮಾನ್ಯ. ಹಿಂದೆಲ್ಲಾ ಕೇವಲ ಒಂದು ಕ್ಯಾಂಡಲ್‌ನಿಂದಲೋ, ಲೈಟ್‌ನಿಂದಲೋ ದಿನ ಕಳೆಯುತ್ತಿದ್ದರು. ಆದ್ರೆ ಈಗ ಹಾಗಲ್ಲ, ರೂಮಿಗೊಂದು ಲೈಟಿನಂತೆ ಮನೆಪೂರ ಲೈಟ್‌ಗಳೇ ತುಂಬಿರುತ್ತದೆ. ಆದ್ರೆ ವಿದ್ಯುತ್ ಇಲಾಖೆ ತನ್ನ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತದೆ. ಇದೀಗ ವಿದ್ಯುತ್ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಬೆಸ್ಕಾಂ ಇಲಾಖೆ (BESCOM), ಬೆಂಗಳೂರಿನಲ್ಲಿ ನಿರ್ವಹಣಾ ಕಾರ್ಯವನ್ನು ಆರಂಭಿಸಿದೆ.

ಹೌದು, ಬೆಂಗಳೂರಿನಲ್ಲಿ ಮಂಗಳವಾರ ಮತ್ತು ಬುಧವಾರ (ನ.18,19) ರಂದು ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಿದೆ. ಆ ಪ್ರಕಾರ ಇಂದೂ ಕೂಡ ನಗರದ ಹಲವೆಡೆ ವಿದ್ಯುತ್ ಹರಿವಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ಹೊರಡಿಸಿದೆ.
ವಿದ್ಯುತ್ ವ್ಯತ್ಯಯವಾಗಲು ಕಾರಣವೇನು?
ಕೆಪಿಟಿಸಿಎಲ್ 66/11 ಕೆ.ವಿ ಹೆಚ್.ಬಿ.ಆರ್ ವಿದ್ಯುತ್ ವಿತರಣಾ ಕೇಂದ್ರಗಳ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವ ಹಿನ್ನೆಲೆ ಇಂದು (ನ.19, ಬುಧವಾರ) ಬೆಳಗ್ಗೆ 10.30 ಗಂಟೆಯಿಂದ 4.30 ರವರೆಗೆ ಪವರ್ ಕಟ್ ಆಗಲಿದೆ ಎಂದು ಸೂಚನೆ ಹೊರಡಿಸಿದೆ.
ಅಂದರೆ ಇಂದು ರಾಜಾಜಿನಗರ, ಮಲ್ಲೇಶ್ವರಂ, ಜಯನಗರ, ಎಂಜಿ ರಸ್ತೆ ಹೀಗೆ 50 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇಲ್ಲೆಲ್ಲಾ ಇರಲ್ಲ ಇಂದು ಕರೆಂಟ್!
ಹೆಚ್.ಬಿ.ಆರ್ 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್ ನಗರ, ಸುಭಾಶ್ ಲೇಔಟ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀರ್ಸ್ ಕಾಲೊನಿ, ಹೆಚ್.ಬಿ.ಆರ್ ಮೂರನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರೋಡ್, ಸರ್ವೀಸ್ ರೋಡ್, ಕೆಕೆ ಹಳ್ಳಿ ಗ್ರಾಮ, ಸಿ.ಎಂ.ಆರ್. ರೋಡ್, ಕಮ್ಮನಹಳ್ಳಿ ಲೇಔಟ್, ಗೋವಿಂದಪುರ ಗ್ರಾಮ, ಕೆಜಿ ಹಳ್ಳಿ, ಕಾವೇರಿ ಗಾರ್ಡನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಒಂದು ದಿನ ಕರೆಂಟ್ ಇರುವುದಿಲ್ಲ.
ಬೆಂಗಳೂರಿನಲ್ಲಿ ನವೆಂಬರ್ 19, 2025ರ ಬುಧವಾರದಂದು, 220/66/11 ಕೆವಿ ಎನ್‌ಆರ್‌ಎಸ್ ಸ್ವೀಕರಿಸುವ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿರುವ ಕಾರಣ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಟ್ ಆಗಲಿದೆ ಎಂದು ಸೂಚನೆ ಹೊರಡಿಸಲಾಗಿದೆ.
ವಿದ್ಯುತ್ ಕಡಿತದ ಪರಿಣಾಮ ಬೆಂಗಳೂರಿನ, ಮಂಜುನಾಥನಗರ, ಶಿವನಗರ, ಗಾಯತ್ರಿ ನಗರ, ಪ್ರಕಾಶನಗರ, ಲಕ್ಷ್ಮೀನಾರಾಯಣಪುರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ II ಬ್ಲಾಕ್, 6ನೇ ಬ್ಲಾಕ್, ಅಗ್ರಹಾರ ದಾಸರಹಳ್ಳಿ, ಇಂದಿರಾ ನಗರ, ಶಂಕರಮಠ, ಮಾಗಡಿ ರಸ್ತೆ (1 ರಿಂದ 10ನೇ ಕ್ರಾಸ್), ಸಾಯಿ ಮಂದಿರ, ಹರೀಶ್ಚಂದ್ರ ಘಾಟ್, ರಾಜ್‌ಕುಮಾರ್ ರೋಡ್, ಮಲ್ಲೇಶ್ವರಂ ಸ್ವಿಮ್ಮಿಂಗ್ ಪೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸೂಚನೆ ನೀಡಲಾಗಿದೆ.
ಜಯನಗರ ವ್ಯಾಪ್ತಿಯಲ್ಲೂ ನೋ ಕರೆಂಟ್!
ಸಾರಕ್ಕಿ ಉಪಕೇಂದ್ರ ನಿರ್ವಹಣಾ ಕಾಮಗಾರಿ ಹಿನ್ನೆಲೆ ಜಯನಗರ ವ್ಯಾಪ್ತಿಯಲ್ಲೂ ಬೆಳಗ್ಗೆ 10 ರಿಂದ ಸಂಜೆ 5ರ ತನಕ ಪವರ್ ಕಟ್ ಇರಲಿದೆ ಎಂದು ಸೂಚನೆ ನೀಡಿದೆ.
ಈ ಪರಿಣಾಮ ಜೆಪಿ ನಗರ ಮೊದಲನೇ ಹಂತ, ಶಾಕಂಬರಿ ನಗರ, ಪೈಪ್‌ಲೈನ್ ರೀಡ್, ರಾಘವೇಂದ್ರ ಸ್ವಾಮಿ ಮಠ, ಜಯನಗರ 5, 7, 8ನೇ ಬ್ಲಾಕ್, ಐಟಿಐ ಲೇಔಟ್, ಜೆಪಿ ನಗರ 5, 6ನೇ ಹಂತ, ಬನ್ನೇರುಘಟ್ಟ ರೋಡ್, ಡಾಲರ್ಸ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿ


Click it and Unblock the Notifications