ಕೆಪಿಟಿಸಿಎಲ್ ವತಿಯಿಂದ ಇದೀಗ ವಿದ್ಯುತ್ ಲೈನ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ 66/11 ಕೆವಿ ಪ್ಲಾಟಿನಮ್ ಸಿಟಿ (Platinum City) ಉಪಕೇಂದ್ರ ವ್ಯಾಪ್ತಿಯ ಹಲವೆಡೆ ನ. 30, ಭಾನುವಾರದಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ (BESCOM) ಸೂಚನೆ ಹೊರಡಿಸಿದೆ. ಭಾನುವಾರ ಅಂದರೆ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ತನಕ ಪವರ್ ಕಟ್ (Bengaluru Power Cut) ಆಗಲಿದೆ ಎಂದು ಹೇಳಲಾಗಿದೆ.

ಇಲ್ಲೆಲ್ಲಾ ನಾಳೆ ನೋ ಕರೆಂಟ್!
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತನ್ನ 66/11 ಕೆವಿ ಪ್ಲಾಟಿನಂ ಸಿಟಿ ಉಪಕೇಂದ್ರ ಪ್ರದೇಶದಲ್ಲಿ ಈ ವಾರಾಂತ್ಯದಲ್ಲಿ ನಿರ್ವಹಣಾ ಕಾರ್ಯವನ್ನು ನಡೆಸಲಿದೆ. ಈ ಕಾಮಗಾರಿ ನವೆಂಬರ್ 30 ರಂದು ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ನಡೆಯಲಿದ್ದು, ಆದ್ದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸುಮಾರು 7 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೂಚನೆ ಹೊರಡಿಸಲಾಗಿದೆ.
ಸೂಚನೆಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್, ಕರ್ಲೋನ್, ಸಿ.ಕೆ.ಎ., ಅಲಿಸ್ಡಾ, ಜೈ ಭಾರತ್ ಇಂಡಸ್ಟ್ರೀಸ್ ಏರಿಯಾ, ಟಾಟಾ ಅಕ್ವಾಲ್, ಕರ್ಲೆ, ಪ್ರೊಫೆಷನಲ್-ಕ್ಲೋಥಿಂಗ್, ರಾಘವೇಂದ್ರ ಲೇಔಟ್, ಆರ್.ಎನ್.ಎಸ್. ಮೋಟಾರ್, ಮುನೇಶ್ವರ ನಗರ, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್, ಎಲ್.ಟಿ. ಕಾರ್ಲೆ, ಮುನೇಶ್ವರ ನಗರ 1ನೇ ಬ್ಲಾಕ್, ಆರ್.ಟಿ.ಓ. ಟ್ರ್ಯಾಕ್ ರೋಡ್, ಪ್ಲಾಟಿನಂ ಸಿಟಿ ಅಪಾರ್ಟ್‌ಮೆಂಟ್, ಬಿ.ಎಫ್.ಡಬ್ಲ್ಯೂ., ಎನ್.ಟಿ.ಆರ್.ಓ., ಜಲಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ಒಂದು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಲಾಗಿದೆ.
ವಿದ್ಯುತ್ ವ್ಯತ್ಯಯದ ಕುರಿತು ಬೆಸ್ಕಾಂ ತನ್ನ X ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದು, "ಯಾವುದೇ ವಿದ್ಯುತ್ ವ್ಯತ್ಯಯ ಉಂಟಾದರೆ, ತಕ್ಷಣವೇ ಬೆಸ್ಕಾಂನ 24x7 ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಿ" ಎಂದು ಅದು ಹೇಳಿದೆ. ಅಲ್ಲದೆ, "ವಿದ್ಯುತ್ ಬಗ್ಗೆ ಎಚ್ಚರಿಕೆಯಿಂದಿರಿ ಮತ್ತು ಯಾವಾಗಲೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ" ಎಂದು ಬೆಸ್ಕಾಂ ಸಾರ್ವಜನಿಕರಿಗೆ ಮನವಿ ಮಾಡಿದೆ.
ಪವರ್ ಕಟ್ ಸಂದರ್ಭದಲ್ಲಿ ಅನುಸರಿಸಬೇಕಾದ ಮತ್ತು ಅನುಸರಿಸಬಾರದ ಕೆಲವು ಸಲಹೆಗಳು:
ಮನೆಯ ವೈರಿಂಗ್ ಬಗ್ಗೆ ಎಚ್ಚರ ವಹಿಸುವುದು ಮುಖ್ಯ. ಅದಕ್ಕಾಗಿ ಉತ್ತಮ ಗುಣಮಟ್ಟದ ವೈರ್ ಬಳಸಿ. ಬಳಕೆಯಲ್ಲಿಲ್ಲದಿದ್ದಾಗ ವಿದ್ಯುತ್ ಉಪಕರಣಗಳನ್ನು ಸಾಧ್ಯವಾದಷ್ಟು ಅನ್‌ಪ್ಲಗ್ ಮಾಡಿ. ವಿದ್ಯುತ್ ಅಪಘಾತಗಳು ಮತ್ತು ಶಾರ್ಟ್ ಸರ್ಕ್ಯೂಟ್‌ಗಳನ್ನು ತಡೆಯಲು ಮುಖ್ಯ ಸರ್ಕ್ಯೂಟ್ ಬ್ರೇಕರ್ (MSB) ಅಳವಡಿಸಿದರೆ ಉತ್ತಮ.
ವಿದ್ಯುತ್ ವ್ಯತ್ಯಯದ ಕುರಿತು ಮಾಹಿತಿ ಮತ್ತು ನಿರಂತರ ಅಪ್ಡೇಟ್‌ಗಾಗಿ, ಬೆಸ್ಕಾಂ ತನ್ನ ಅಧಿಕೃತ ವೆಬ್‌ಸೈಟ್ http://bescom.karnataka.gov.in ಮೂಲಕ ಮಾಹಿತಿ ನೀಡಲಿದೆ. ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ) ವಿದ್ಯುತ್ ವಿತರಣೆಗೆ ಬೆಸ್ಕಾಂ ಕಾರ್ಯನಿರ್ವಹಿಸುತ್ತಿದೆ.
ನಾಳೆ ವಿದ್ಯುತ್ ವ್ಯತ್ಯಯವಾಗುವ ಹಿನ್ನೆಲೆ ಸಾರ್ವಜನಿಕರು ತಮ್ಮ ಅಗತ್ಯ ಕೆಲಸಗಳನ್ನು ಮೊದಲೇ ಮುಗಿಸುವಂತೆ ಬೆಸ್ಕಾಂ ಮನವಿ ಮಾಡಿದೆ.


Click it and Unblock the Notifications