ಬೆಂಗಳೂರಿನಲ್ಲಿ (Bengaluru) ಈ ತಿಂಗಳು ಹಲವಾರು ಬಾರಿ ವಿದ್ಯುತ್ ವ್ಯತ್ಯಯವಾಗಿದೆ. ಆದರೆ ಈ ವಾರ ಬೆಂಗಳೂರಿನಲ್ಲಿ ಪವರ್ ಕಟ್ ಆಗಿದ್ದು ಕಡಿಮೆ. ಆದ್ರೆ ಇದೀಗ ಬೆಸ್ಕಾಂ ಇಲಾಖೆಯಿಂದ ಮತ್ತೊಮ್ಮೆ ಪವರ್ ಕಟ್ ಘೋಷಿಸಲಾಗಿದೆ. ಇದು ಬೆಂಗಳೂರಲ್ಲ, ಬದಲಿಗೆ ತುಮಕೂರು, ಕೋಲಾರ (Tumakuru, Kolar) ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ.

ಹೌದು, ತುಮಕೂರು, ಕೋಲಾರದ ಹಲವು ಪ್ರದೇಶಗಳಲ್ಲಿ ಫೆಬ್ರವರಿ 25, 2026 ರಂದು ಯೋಜಿತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಇಲಾಖೆ (BESCOM) ಸೂಚನೆ ನೀಡಿದೆ. ವಿದ್ಯುತ್ ಪೂರೈಕೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಈ ಕಾರ್ಯ ಕೈಗೊಳ್ಳಲಾಗಿದೆ.
ಉತ್ತಮ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ, ತಾಂತ್ರಿಕ ದೋಷಗಳನ್ನು ತಡೆಗಟ್ಟಲು ಮತ್ತು ವಿಸ್ತರಿಸುತ್ತಿರುವ ನಗರದ ವಿದ್ಯುತ್ ಲೈನ್ ಅನ್ನು ಬಲಪಡಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಕೆಲಸಗಳನ್ನು ಕೈಗೊಂಡಿದೆ.
ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ನಿರ್ವಹಣಾ ಕಾರ್ಯದ ಪ್ರಗತಿಗೆ ಅನುಗುಣವಾಗಿ, ಆಗಾಗ ವಿದ್ಯುತ್ ಪುನಃಸ್ಥಾಪನೆಯಾಗುವ ಸಾಧ್ಯತೆಯೂ ಇರುತ್ತದೆ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು.
ಇಲ್ಲೆಲ್ಲಾ ಇರಲ್ಲ ಕರೆಂಟ್!
ತುಮಕೂರಿನ ಹೆಬ್ಬೂರು, ಸಿರಿವರ, ಬೊಮ್ಮನಹಳ್ಳಿ, ಗೋವಿಂದರಾಜಪುರ, ಪಟ್ಟೆಗೌಡನಹಳ್ಳಿ, ಪುರದಕಟ್ಟೆ, ಪುರದಕಟ್ಟೆ ಕಾವಲು, ರಾಗಿಮುದ್ದನಹಳ್ಳಿ, ರಾಯಪುರ, ಬಲ್ಲಗೆರೆ, ಬಲ್ಲಗೆರೆ ಕಾವಲು, ಚೋಳಾಪುರ, ಕಲ್ಯಾಣಪುರ, ಕಂಬಲಪುರ, ದರಣಕುಪ್ಪೆ ಮತ್ತು ವಡೇರಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ.
ಯಲದಹಳ್ಳಿ, ನಿದುವಳ್ಳು, ಬಿದನಗರೆ, ದೊಡ್ಡಗುಡಿ, ಹೊನ್ನೆನಹಳ್ಳಿ, ಹುಳಿಯಪುರ, ಕರೇನಹಳ್ಳಿ, ಮಡಿವಾಳರಪಾಳ್ಯ, ಮರಿಯಪ್ಪನಪಾಳ್ಯ, ನಾರಾಯಣಕೆರೆ, ತಾವರೆಕೆರೆ, ತಿಮ್ಮನಾಯಕನಪಾಳ್ಯ, ತೊಂಡಗೆರೆ, ತೊಂಡಗೆರೆ ಕಾವಲು, ಕನಕುಪ್ಪೆ, ಜುಂಜಯನಪಾಳ್ಯ, ದೊಡ್ಲಹಳ್ಳಿ, ರಾಮಕೃಷ್ಣಾಪುರ, ರಾಯವಾರ ಮತ್ತು ತಿಮ್ಮಸಂದ್ರ ಈ ಪಟ್ಟಿಯಲ್ಲಿವೆ.
ಇದಲ್ಲದೆ, ಗರಗದಕುಪ್ಪೆ, ಗರಗದಕುಪ್ಪೆ ಪಾಳ್ಯ, ಜಲ್ಲೆಪಾಳ್ಯ, ಕುಡುಗುಗುಂಟೆ, ಬಿಸಲಹಳ್ಳಿ, ಬೋವಿಪಾಳ್ಯ, ಬೈಚೇನಹಳ್ಳಿ, ಕಚೇನಹಳ್ಳಿ, ಸೀಗೆಪಾಳ್ಯ, ಚಿಕ್ಕಹೊಳೇಹಳ್ಳಿ ಮತ್ತು ಲಿಂಗಾಪುರಗಳಲ್ಲಿಯೂ ಪವರ್ ಕಟ್ ಉಂಟಾಗಲಿದೆ ಎಂದು ಸೂಚನೆ ನೀಡಿದೆ.
ಪವರ್ ಕಟ್‌ಗೆ ಕಾರಣವೇನು?
ಉಪಕೇಂದ್ರಗಳು, ಪ್ರಸರಣ ಮಾರ್ಗಗಳ ನಿರ್ವಹಣೆ, ವಿದ್ಯುತ್ ವ್ಯವಸ್ಥೆಗಳ ಅಪ್‌ಡೇಟ್, ವಿದ್ಯುತ್ ಪೂರೈಕೆಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮತ್ತು ವೋಲ್ಟೇಜ್ ಸಮಸ್ಯೆಗಳ ಹಿನ್ನೆಲೆ ಈ ಕೆಲಸಗಳನ್ನು ಕೈಗೊಳ್ಳಲಾಗಿದೆ.
ಇನ್ನು ವಿದ್ಯುತ್ ಪೂರೈಕೆಯನ್ನು ತಪ್ಪಿಸಲು, ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಅಗತ್ಯ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿ ಇಟ್ಟುಕೊಂಡರೆ ಉತ್ತಮ. ಪವರ್ ಬ್ಯಾಂಕ್‌ಗಳು ಅಥವಾ ಅಗತ್ಯ ಲೈಟ್‌ಗಳನ್ನು ಬ್ಯಾಕಪ್ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಳ್ಳಿ.
ಕೋಲಾರದಲ್ಲೂ ಇಲ್ಲ ಕರೆಂಟ್!
220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಕೋಲಾರದಿಂದ ಹೊರ ಹೋಗುವ ಎಫ್-23 ಮತ್ತು ಎಫ್-24 ಕೋಲಾರ ನಗರ ಫೀಡರ್ನ್ ಮಾರ್ಗದಲ್ಲಿ ಫೀಡರ್ ಸ್ಥಳಾಂತರಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಎಫ್ 23 ಮತ್ತು ಎಫ್ 24 ಕೋಲಾರ ನಗರ ಫೀಡರ್‌ನ ಮಾರ್ಗಗಳಿಂದ ಸರಬರಾಜಾಗುವ ವಿದ್ಯುತ್‌ನಲ್ಲಿ ಕಡಿತ ಉಂಟಾಗಲಿದೆ. ಈ ಪರಿಣಾಮ ಆಟೋ ನಗರ, ಎಪಿಎಂಸಿ ಮಾರುಕಟ್ಟೆ, ವಿಜಯನಗರ, ಅಮ್ಮೇರಹಳ್ಳಿ, ಕೊಂಡರಾಜನ ಹಳ್ಳಿ, ಬೆತ್ತನಿ ಮತ್ತು ಮುಡೇರಹಳ್ಳಿಯಲ್ಲಿ ಫೆ.24 ರಂದು ಪವರ್ ಕಟ್ ಆಗಿತ್ತು.


Click it and Unblock the Notifications