ಸಿನಿ ಪ್ರಿಯರ ನೆಚ್ಚಿನ ಹೀರೋ, ಅಭಿಮಾನಿಗಳಿಗೆ ಪವರ್ ಸ್ಟಾರ್, ಅಪ್ಪು (Power Star, Appu) ಆಗಿ ಮಿಂಚಿರುವ ಪುನೀತ್ ರಾಜ್‌ಕುಮಾರ್ (Puneeth Rajkumar) ಹೆಸರು ಕೇಳುವಾಗಲೇ ಕರುಳು ಹಿಂಡಿದಂತಾಗುತ್ತೆ. ನಗುಮೊಗದ ಒಡೆಯ ಇಹಲೋಕ ತ್ಯಜಿಸಿ ಈಗಾಗಲೇ 4 ವರ್ಷ ಕಳೆದಾಯ್ತು. ಇದೀಗ ಇಂದು ಕನ್ನಡ ಸಿನಿ ಜಗತ್ತಿನ 'ಅಪ್ಪು' ಅಭಿಮಾನಿಗಳ ಪಾಲಿನ 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. 1975ರ ಮಾರ್ಚ್ 17ರಂದು ಜನಿಸಿ ಪುನೀತ್ ರಾಜ್‌ಕುಮಾರ್, ಹುಟ್ಟಿದ ಕೆಲವೇ ತಿಂಗಳಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಪ್ಪು ಸಾವನ್ನಪ್ಪಿ 4 ವರ್ಷ ಕಳೆದರೂ, ಅಭಿಮಾನಿಗಳು, ಕುಟುಂಬಸ್ಥರು, ಕನ್ನಡ ಚಿತ್ರರಂಗದ ಸ್ಟಾರ್ ಮಾತ್ರ ಅವರ ಹುಟ್ಟಿದ ದಿನದಂದು ಭಾವುಕರಾಗಿ, ಹುಟ್ಟುಹಬ್ಬವನ್ನು ಆಚರಿಸುತ್ತಾರೆ.

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪುನೀತ್, ಆ ನಂತರ ಪವರ್ ಸ್ಟಾರ್ ಎಂಬ ಬಿರುದಿಗೂ ಪಾತ್ರರಾದರು. ಸಿನಿಮಾ ಮಾತ್ರವಲ್ಲದೇ ಪುನೀತ್, ಸರಳತೆ, ಪ್ರಾಣಿಪ್ರೀತಿ, ದಾನ ಮತ್ತು ಸಾಮಾಜಿಕ ಕಾರ್ಯಗಳಿಂದಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಚಿರಂಜೀವಿಯಾಗಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜ್ ಕುಮಾರ್ ಅವರ ಒಟ್ಟು ಆಸ್ತಿ ಎಷ್ಟಿಷ್ಟು ಗೊತ್ತಾ?
ಪುನೀತ್ ರಾಜ್‌ಕುಮಾರ್ ಅವರ ಆಸ್ತಿ ಎಷ್ಟು?
ಪುನೀತ್ ರಾಜ್‌ಕುಮಾರ್ ಅವರ ನಿಧನ ಸಮಯದಲ್ಲಿ ಅಂದರೆ 2021 ರಲ್ಲಿ ಒಟ್ಟು ಆಸ್ತಿ ಸುಮಾರು 187 ಕೋಟಿ ರೂಪಾಯಿ ಇತ್ತು ಎಂದು ಹಲವಾರು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಪುನೀತ್ ರಾಜ್‌ಕುಮಾರ್ ಅವರು ಒಂದು ಚಿತ್ರಕ್ಕೆ 10 ರಿಂದ 15 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಇನ್ನು ಬ್ರಾಂಡ್ ಅಂಬಾಸಿಡರ್, ಟಿವಿ ಕಾರ್ಯಕ್ರಮಗಳು, ರಿಯಲ್ ಎಸ್ಟೇಟ್ ಹೂಡಿಕೆಗಳು, ಪ್ರೊಡಕ್ಷನ್ ಹೌಸ್, ಹೀಗೆ ಹಲವು ಮೂಲಗಳಿಂದ ಆದಾಯ ಗಳಿಸುತ್ತಿದ್ದರು ಎನ್ನಲಾಗಿದೆ.
ಕರ್ನಾಟಕದ ಮನೆ ಮಗ, ಬಾಲ್ಯದಲ್ಲೇ ಅನೇಕ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ, ನಟ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಅಗಲಿದರೂ, ಕೋಟ್ಯಾಂತರ ಅಭಿಮಾನಿಗಳ ಮನೆ, ಮನದಲ್ಲಿ ಇಂದಿಗೂ ಫೇವರೀಟ್ ಸ್ಟಾರ್ ಆಗಿ ಉಳಿದಿದ್ದಾರೆ. ಇನ್ನು ವರದಿಗಳ ಪ್ರಕಾರ, ಪುನೀತ್ ರಾಜ್‌ಕುಮಾರ್ ಅವರು, ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆ ಬಳಸುತ್ತಿದ್ದರು ಎನ್ನಲಾಗಿದೆ. ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗ, ಗೋಶಾಲೆಗಳಿಗೆ ಅಪಾರ ದಾನ ಮಾಡಿದ ಪುಣ್ಯಾತ್ಮ ಅವರಾಗಿದ್ದರು. ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದ ಪುನೀತ್ ರಾಜ್‌ಕುಮಾರ್, ತನ್ನ ಸೇವೆಯನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಆದ್ರೆ ಅವರ ನಿಧನದ ಬಳಿಕ ಪುನೀತ್ ರಾಜ್‌ಕುಮಾರ್ ಅವರೆಷ್ಟು ದಾನಿ ಎಂಬುದು ಎಲ್ಲರಿಗೂ ಗೊತ್ತಾಗಿದೆ.
ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರೂ, ಅವರ ನೆನಪು ಮಾತ್ರ ಶಾಶ್ವತ. ಸದಾ ನಗುಮೊಗದಲ್ಲೇ ಇರುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರು, ಅಕ್ಟೋಬರ್ 29, 2021 ರಂದು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಪುನೀತ್ ನಿಧನ, ಇಡೀ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು.


Click it and Unblock the Notifications