ಪವನ್ ಕಲ್ಯಾಣ್ ಈಗ ಕೇವಲ ಬೆಳ್ಳಿತೆರೆಯ ನಾಯಕನಲ್ಲ. ಜನನಾಯಕ ಕೂಡ ಹೌದು. ಚಿತ್ರರಂಗದ ಜೊತೆ ರಾಜಕೀಯದ ಚದುರಂಗವನ್ನು ಕೂಡ ಪವನ್ ಕಲ್ಯಾಣ್ ಆಡ್ತಿದ್ದಾರೆ. ಹೀಗಾಗಿ ಪವನ್ ಕಲ್ಯಾಣ್‌ಗೆ ಮೊದಲಿನಂತೆ ಫುಲ್ ಟೈಮ್ ಚಿತ್ರರಂಗದತ್ತ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ವಿಧಾನಸಭೆ ಅಧಿವೇಶನ.. ಜನರ ಕಲ್ಯಾಣ.. ಮತ್ತು ಭಾಷಣ.. ಇದರಲ್ಲಿಯೇ ಪವನ್ ಕಲ್ಯಾಣ್ ಸಮಯ ಹೋಗುತ್ತಿದೆ.

ಹಾಗಂಥ.. ಪವನ್ ಕಲ್ಯಾಣ್‌ಗೆ ಸಿನಿಮಾ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ. ತಮ್ಮ ರಾಜಕೀಯದ ಜೀವನದಲ್ಲಿ ಚೂರು ಬಿಡುವು ಸಿಕ್ಕರೂ ಸಾಕು ಮೇಕಪ್ ಹಾಕಿಕೊಂಡು ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕ್ಯಾಮರಾ ಎದುರು ಹಾಜರಾಗುತ್ತಾರೆ. ಹಾಗೊಂದು ವೇಳೆ ಹಾಜರಾಗದಿದ್ದರೆ ಇವರ ಗತಕಾಲದ ಹರಿ ಹರ ವೀರ ಮಲ್ಲು ಮತ್ತು ಓಜಿ ಚಿತ್ರಗಳೆರಡು ಇನ್ನೂ ಡಬ್ಬಾದಲ್ಲಿಯೇ ಕೊಳೆಯಬೇಕಿತ್ತು.
ಇರಲಿ ವಿಷಯ ಅದಲ್ಲ. ಸದ್ಯದ ವಿಷಯ ಏನೆಂದರೆ ಪವನ್ ಕಲ್ಯಾಣ್ ತಮ್ಮ ಹಿಂದಿನ ಚಿತ್ರ ಓಜಿಯ ನಿರ್ದೇಶಕ ಸುಜೀತ್‌ಗೆ ಕನಸು ಮನಸಿನಲ್ಲಿಯೂ ಎಣಿಸದ ಉಡುಗೊರೆಯನ್ನು ನೀಡಿದ್ದಾರೆ. ಮನೆಗೆ ಕರೆದು ಲ್ಯಾಂಡ್ ರೋವರ್ ಕಾರನ್ನು ಹಸ್ತಾಂತರಿಸಿದ್ದಾರೆ.
ಆಗಲೇ ಹೇಳಿದಂತೆ ಇಂತಹದ್ದೊಂದು ಗಿಫ್ಟ್‌ನ್ನು ಸುಜೀತ್ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿಯೇ ಪವನ್ ಕಲ್ಯಾಣ್‌ಗೆ ತಮ್ಮ ಮೇಲಿರುವ ಪ್ರೀತಿಯನ್ನು ಕಂಡು ಪುಳಕಿತಗೊಂಡಿರುವ ಸುಜೀತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. ನಿಮ್ಮ ಈ ಪ್ರೀತಿ ಮತ್ತು ಪ್ರೋತ್ಸಾಹವನ್ನು ನಾನು ಮರೆಯಲು ಸಾಧ್ಯ ಇಲ್ಲ ಎಂದು ಹೇಳಿರುವ ಸುಜೀತ್ ಬಾಲ್ಯದ ಅಭಿಮಾನಿಯಾದವನನ್ನು ಬದುಕು ಈ ವಿಶೇಷ ಕ್ಷಣದವರೆಗೆ ಕರೆದು ತಂದು ನಿಲ್ಲಿಸಿದೆ, ಸದಾ ಋಣಿಯಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೇ ಸುಜೀತ್‌ಗೆ ಪವನ್ ಕಲ್ಯಾಣ್ ನೀಡಿರುವ ಈ ಕಾರಿನ ಬೆಲೆ 98 ಲಕ್ಷದಿಂದ ಶುರುವಾಗುತ್ತೆ. ₹2.60 ಲಕ್ಷದವರೆಗೆ ಕೂಡ ಈ ಕಾರಿನಲ್ಲಿ ಬೇರೆ ಬೇರೆ ಮಾಡೆಲ್‌ಗಳಿವೆ. ಇನ್ನೂ ಕಾರನ್ನು ರಸ್ತೆಯವರೆಗೆ ತೆಗೆದುಕೊಂಡು ಬರುವಷ್ಟರಲ್ಲಿ ''autocarindia''ದಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ₹1.13 ಕೋಟಿಯಿಂದ ₹3.01 ಕೋಟಿಯವರೆಗೆ ಹಣ ಖರ್ಚಾಗುತ್ತೆ. ಎಲ್ಲವೂ ಆಯ್ಕೆ ಮಾಡುವ 90, 110 ಮತ್ತು 130 ಬಾಡಿ ಸ್ಟೈಲ್ ಮೇಲೆ ಅವಲಂಬಿತ.
ಅಂದ್ಹಾಗೇ ಪವನ್ ಕಲ್ಯಾಣ್ ಮತ್ತು ಸುಜೀತ್ ಕಾಂಬಿನೇಷನ್‌ನ ''ಓಜಿ'' ಕಳೆದ ಸೆಪ್ಟೆಂಬರ್ 25-2025ರಂದು ತೆರೆಗೆ ಬಂದಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಮೂಲಕ ''ಸ್ಯಾಕ್ನಿಲ್'' ಪ್ರಕಾರ ಹತ್ ಹತ್ರ ನಾಲ್ಕು ವಾರಗಳವರೆಗೆ ಪ್ರದರ್ಶನ ಕಂಡಿದ್ದ ಚಿತ್ರ ಭಾರತದಲ್ಲಿಯೇ ₹ 228.4 ಕೋಟಿ ಗಳಿಸಿತ್ತು. ಇನ್ನು ಇದೇ ''ಸ್ಯಾಕ್ನಿಲ್'' ಪ್ರಕಾರ ಹೊರದೇಶದಲ್ಲಿನ ಚಿತ್ರದ ಗಳಿಕೆಯನ್ನು ಕೂಡಿಸಿದರೆ ಒಟ್ಟಾರೆ ₹ 293.65 ಕೋಟಿಯನ್ನು ''ಓಜಿ'' ಗಳಿಸಿತ್ತು.
ಇನ್ನೂ ಇದಕ್ಕೂ ಮುನ್ನ ಬಂದಿದ್ದ ''ಹರಿಹರ ವೀರ ಮಲ್ಲು'' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ''ಓಜಿ'' ಕಥೆ ಕೂಡ ಅಷ್ಟೇ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದ್ದ ಈ ಚಿತ್ರ ನಾಯಕನಾಗಿ ಪವನ್ ಕಲ್ಯಾಣ್‌ಗೆ ಬೇಕಿದ್ದ ಗೆಲುವನ್ನು ತಂದು ಕೊಟ್ಟಿತ್ತು.
ಹೀಗಾಗಿಯೇ ಖುಷಿಯಾಗಿರುವ ಪವನ್ ಕಲ್ಯಾಣ್ ಸದ್ಯ ತಮ್ಮನ್ನು ಗೆಲುವಿನ ದಡ ತಲುಪಿಸಿದ ನಿರ್ದೇಶಕ ಸುಜೀತ್‌ಗೆ ಕರೆದು ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಈ ಮೂಲಕ ಆಂಧ್ರದ ಹಲವರನ್ನು ಅಚ್ಚರಿಗೆ ದೂಡಿದ್ದಾರೆ. ಯಾಕೆಂದರೆ, ಪವನ್ ಕಲ್ಯಾಣ್ ಈ ರೀತಿ ತಮ್ಮ ಚಿತ್ರದ ನಿರ್ದೇಶಕನಿಗೆ ಉಡುಗೊರೆ ನೀಡಿದ ಉದಾಹರಣೆಗಳು ತುಂಬಾನೇ ಕಡಿಮೆ. ಹೀಗಾಗಿ ಸುಜೀತ್ ನಿಜಕ್ಕೂ ಅದೃಷ್ಟವಂತ ಎಂದು ತೆಲುಗು ಉದ್ಯಮ ಸದ್ಯ ಮಾತನಾಡಿಕೊಳ್ಳುತ್ತಿದೆ. ಪವನ್ ಕಲ್ಯಾಣ್ ಅವರ ಈ ನಡೆಯನ್ನು ಮೆಚ್ಚಿಕೊಳ್ಳುತ್ತಿದೆ.
ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾSECURITIES ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications