ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು ರಾಷ್ಟ್ರದಾದ್ಯಂತ ನವೀಕರಿಬಹುದಾದ ಇಂಧನ ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನ ಇದು ಹೊಂದಿದೆ. ಇನ್ನು ಈ ಯೋಜನೆಯನ್ನ ಕಳೆದ ವರ್ಷ 2024ರಲ್ಲಿ ಆರಂಭ ಮಾಡಲಾಯಿತು. ಇನ್ನು ಈ ಯೋಜೆನೆಯ ವೈಶಿಷ್ಟ್ಯ, ಅರ್ಹತೆ ಹಾಗೆ ಸಾಧನೆ ಬಗ್ಗೆ ಇಲ್ಲಿ ತಿಳಿಯಿರಿ.
PM ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು ಒಂದು ಕೋಟಿ ಮನೆಗಳಿಗೆ ಸೌರ ಸ್ಥಾವರಗಳನ್ನ ಸ್ಥಾಪಿಸುವ ಗುರಿಯನ್ನ ಹೊಂದಿದೆ. ಜೊತೆಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಸಕ್ರೀಯಗೊಳಿಸುವ ಗುರಿ ಹೊಂದಿದೆ. ಈ ಯೋಜನೆಯು ಹೊಸ ವೈಶಿಷ್ಟ್ಯಗಳನ್ನ ಒಳಗೊಂಡಿದ್ದು, ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಇಕ್ವಿಟಿಗೆ ಸರ್ಕಾರ ಬದ್ಧವಾಗಿರುತ್ತದೆ.

ಈ ಯೋಜನೆಯ ಸಾಧನೆಗಳನ್ನ ಗಮನಿಸಿ
ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇದುವರೆಗೆ 1.45 ಕೋಟಿ ನೋಂದಣಿಗಳು ಮತ್ತು 26.26 ಅರ್ಜಿಗಳನ್ನ ಸರ್ಕಾರ ಸ್ವೀಕರಿಸಿದೆ. ಇನ್ನು ಡಿಸೆಂಬರ್ 1, 2024 ರ ಮಾಹಿತಿ ಪ್ರಕಾರ ಈಗಾಗಲೇ 6.5 ಲಕ್ಷ ಕುಟುಂಬಗಳು ಯಶಸ್ವಿಯಾಗಿ ಸೌರ ಸ್ಥಾವರಗಳ ಸ್ಥಾಪನೆಯಿಂದ ಪ್ರಯೋಜನಗಳನ್ನ ಪಡೆದುಕೊಂಡಿವೆ.
ಈ ಉಪಕ್ರಮವು ದೃಢವಾದ ಐಟಿ ವ್ಯವಸ್ಥೆಗಳನ್ನ ಹೊಂದಿದ್ದು, ಸಮರ್ಥ ಅನುಷ್ಟಾನಗಳನ್ನ ಖಚಿತಪಡಿಸಿಕೊಳ್ಳಲು 90ಕ್ಕೂ ಹೆಚ್ಚು ಡಿಸ್ಕಾಂಗಳು, ಬ್ಯಾಂಕುಗಳು ಮತ್ತು ಮಧ್ಯಸ್ಥಗಾರರನ್ನ ಒಳಗೊಂಡಿದೆ.
ಈಗಾಗಲೇ ಇದು 9,000 ಮಾರಾಟಗಾರರನ್ನ ಸಕ್ರೀಯಗೊಳಿಸಿದೆ. ಮೇಲ್ಚಾವಣಿಯ ಸೌರ ಸ್ಥಾಪನೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿದಿನ ಅತೀ ಹೆಚ್ಚು ಜನರು ಈ ಯೋಜನೆಗಾಗಿ ಅರ್ಜಿಯನ್ನ ಸಲ್ಲಿಸುತ್ತಿದ್ದಾರೆ.
ಈ ಯೋಜನೆಯ ಮೂಲಕ ಉತ್ತಮ ಗುಣಮಟ್ಟದ ಸ್ಥಾಪನೆ ಸೇವೆಗಳನ್ನ ನೀಡಲು ಇದರಡಿ ಈಗಾಗಲೇ 40,000 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಈ ಯೋಜನೆಯನ್ನ ಮತ್ತಷ್ಟು ಸಕ್ರೀಯಗೊಳಿಸಲು ಮುಂದಿನ ಎಂಟು ತಿಂಗಳಲ್ಲಿ 2 ಲಕ್ಷ ತಂತ್ರಜ್ಞರಿಗೆ ತರಬೇತಿ ನೀಡುವ ನಿರೀಕ್ಷೆಯಿದೆ.
ಈ ಯೋಜನೆಗಾಗಿಯೇ 50,000 ಕ್ಕೂ ಹೆಚ್ಚು DISCOM ಇಂಜಿನಿಯರ್‌ಗಳು ಮೇಲ್ಛಾವಣಿಯ ಸೌರ ಸ್ಥಾವರಗಳನ್ನು ಪರಿಶೀಲಿಸನೆ ಮಾಡಲು, ಕಾರ್ಯಗತಗೊಳಿಸಲು ವಿಶೇಷ ತರಬೇತಿಗಳನ್ನ ನೀಡಲಾಗ್ತಿದೆ. ಇದರಿಂದಾಗಿ ದಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಹೆಚ್ಚಳವಾಗಿದೆ.
ಈ ಯೋಜನೆಯ ಪ್ರಮುಖ ಲಕ್ಷಣಗಳು
ಉಚಿತ ವಿದ್ಯುತ್ ಪ್ರಯೋಜನವನ್ನ ಈ ಯೋಜನೆ ನೀಡ್ತಿದೆ. ಈ ಯೋಜನೆ ಮೂಲಕ ಯಾವುದೇ ವೆಚ್ಚವಿಲ್ಲದೆ ಮನೆಗಳು ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಇದೆಲ್ಲಾ ಸಾಧ್ಯವಾಗಿದ್ದು, ಛಾವಣಿಯ ಸೌರ ಸ್ಥಾಪನೆಗಳಿಂದಾಗಿ.
ನವೀಕರಿಸಬಹುದಾದ ಶಕ್ತಿಯ ಅಳವಡಿಕೆಯನ್ನ ಈ ಯೋಜನೆ ಉತ್ತೇಜಿಸುತ್ತದೆ, ಪಳೆಯುಳಿಕೆ ಇಂಧನಗಳ ಮೇಲೇ ಅವಲಂಬಿತರಾಗುವುದನ್ನು ಇದು ಕಡಿಮೆ ಮಾಡುತ್ತದೆ. ಜೊತೆಗೆ ಹಸಿರುಮನೆ ಅನಿಲದ ಪ್ರಮಾಣವನ್ನ ಕಡಿತಗೊಳಿಸುತ್ತದೆ.
ಈ ಯೋಜನೆಯು ಸಾಕಷ್ಟು ನೇರ ಪ್ಯೋಜನಗಳನ್ನ ಹೊಂದಿದೆ. ಕಡಿಮೆ ವಿದ್ಯುತ್ ಬಿಲ್‌ಗಳನ್ನ ನೀಡುತ್ತದೆ. ಜೊತೆಗೆ ದೀರ್ಘಾವಧಿಯ ವರೆಗೆ ಗಮನಾರ್ಹ ವೆಚ್ಚವನ್ನ ಉಳಿತಾಯ ಮಾಡುತ್ತದೆ.
ತಂತ್ರಜ್ಞರಿಗೆ, ಮಾರಾಟಗಾರರಿಗೆ ಮತ್ತು ಎಂಜಿನಿಯರ್‌ಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಉದ್ಯೋಗಾವಕಾಶಗಳನ್ನ ಒದಗಿಸುತ್ತದೆ. ಹಾಗೆ ಮಧ್ಯಸ್ಥಗಾರರನ್ನು ಸಂಯೋಜಿಸಲು ಮತ್ತು ನಿಖರ ಕಾರ್ಯಾಚರಣೆಗಳನ್ನು ಹೊಂದಲು ಅತ್ಯಾಧುನಿಕ ಐಟಿ ವ್ಯವಸ್ಥೆಗಳನ್ನ ಕೂಡ ಇದು ಬಳಕೆ ಮಾಡುತ್ತಿದೆ.
ಅರ್ಹತೆ ಮಾನದಂಡಗಳು
ಈ ಯೋಜನೆಯು ಪ್ರಾಥಮಿಕವಾಗಿ ಕಡಿಮೆ ಆದಾಯದ ಗುಂಪುಗಳು ಮತ್ತು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ ಕುಟುಂಬಗಳಿಗೆ ಉದ್ದೇಶಿಸಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಮತ್ತು ಗ್ರಾಮೀಣ ಪ್ರದೇಶದವರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿದಾರರು ಸೌರ ಫಲಕಗಳನ್ನು ಅಳವಡಿಸಬಹುದಾದ ಮನೆ ಅಥವಾ ಜಮೀನು ಆಗಿರಲಿ, ವಸತಿ ಆಸ್ತಿಯನ್ನು ಹೊಂದಿರಬೇಕು. ಮನೆಯು ಸಕ್ರಿಯ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು, ಏಕೆಂದರೆ ಸೌರ ವಿದ್ಯುತ್ ವ್ಯವಸ್ಥೆಯನ್ನು ವಿದ್ಯುತ್ ಪೂರೈಕೆಗಾಗಿ ಅಸ್ತಿತ್ವದಲ್ಲಿರುವ ಗ್ರಿಡ್‌ನೊಂದಿಗೆ ಸಂಯೋಜಿಸಲಾಗುತ್ತದೆ.
ಈಗಾಗಲೇ ತಮ್ಮ ನಿವಾಸದಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಳ್ಳದವರಿಗೆ ಈ ಯೋಜನೆ ಉದ್ದೇಶಿಸಲಾಗಿದೆ. ಸೌರಶಕ್ತಿಯ ಹೊಸ ಬಳಕೆದಾರರಿಗೆ ಪ್ರಯೋಜನವನ್ನು ತಲುಪುತ್ತದೆ ಎಂದು ಇದು ಖಚಿತಪಡಿಸುತ್ತದೆ.
ಕೆಲವು ಪ್ರದೇಶಗಳಲ್ಲಿ, ಸ್ಕೀಮ್‌ಗೆ ಅರ್ಹತೆ ಪಡೆಯಲು ಅರ್ಜಿದಾರರಿಗೆ ನಿರ್ದಿಷ್ಟ ವಯಸ್ಸು ಅಥವಾ ಕುಟುಂಬದ ಗಾತ್ರದ ಅವಶ್ಯಕತೆಗಳು ಇರಬಹುದು. ಸ್ಥಳೀಯ ಸರ್ಕಾರದ ನೀತಿಗಳ ಆಧಾರದ ಮೇಲೆ ನಿಖರವಾದ ವಯಸ್ಸಿನ ಮಿತಿಗಳು ಅಥವಾ ಕುಟುಂಬದ ಗಾತ್ರವು ಬದಲಾಗಬಹುದು.
ಫಲಾನುಭವಿಯು ಯೋಜನೆಯ ಪ್ರಯೋಜನಗಳನ್ನು ಪಡೆಯುವ ಮೊದಲು ಸ್ಥಳೀಯ ವಿದ್ಯುತ್ ವಿತರಣೆ ಅಥವಾ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಿಂದ ಅನುಮೋದನೆ ಪಡೆಯಬೇಕು. ಅಧಿಕಾರಿಗಳು ಸೋಲಾರ್ ಅಳವಡಿಕೆಗೆ ಸ್ಥಳದ ಸೂಕ್ತತೆಯನ್ನು ನಿರ್ಣಯಿಸಬಹುದು.
ನಂತರ ಅರ್ಜಿದಾರರು ಪರಿಶೀಲನೆಗಾಗಿ ಗುರುತಿನ ಪುರಾವೆ, ವಿಳಾಸ, ಬಿಪಿಎಲ್ ಪ್ರಮಾಣಪತ್ರ ಮತ್ತು ವಿದ್ಯುತ್ ಬಿಲ್‌ನಂತಹ ಅಗತ್ಯ ದಾಖಲೆಗಳನ್ನು ಒದಗಿಸಬೇಕು.


Click it and Unblock the Notifications