ಸಂಸತ್ ಸದನದಲ್ಲಿ ಬಿ.ಆರ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಏಕಕಾಲದಲ್ಲಿ ಪ್ರತಿಭಟನೆ ನಡೆಸುವುದರೊಂದಿಗೆ ಸಂಸತ್ತಿನ ಆವರಣವು ಗುರುವಾರ ಹೈವೋಲ್ಟೇಜ್ ರಾಜಕೀಯ ನಾಟಕಕ್ಕೆ ಸಾಕ್ಷಿಯಾಗಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗ್ ಮೆಟ್ಟಿಲ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ. ಆದರೆ ಸಂಸದರು ಮೆಟ್ಟಿಲಿನಿಂದ ಕೆಳಕ್ಕೆ ಬೀಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರಣ ಎಂದು ಆರೋಪ ಕೇಳಿಬಂದಿದೆ. ಒಟ್ಟಾರೆ ಸದ್ಯ ಸುದ್ದಿಯಲ್ಲಿರುವ ಪ್ರತಾಪ್ ಸಾರಂಗಿ ಅವರು ಒಡಿಶಾದ ಪ್ರಮುಖ ಬಿಜೆಪಿ ನಾಯಕ ಮತ್ತು ಬಾಲಸೋರ್ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾಗಿದ್ದಾರೆ.
ಪ್ರತಾಪ್ ಸಾರಂಗಿ ಯಾರು? ಅವರ ಹಿನ್ನಲೆ ಏನು?
ಬಾಲಸೋರ್ ಜಿಲ್ಲೆಯ ಗೋಪಿನಾಥಪುರ ಗ್ರಾಮದಲ್ಲಿ 1955 ಜನವರಿ 4ರಂದು ಬಾಲಸೋರ್ ಜಿಲ್ಲೆಯ ಗೋಪಿನಾಥಪುರ ಗ್ರಾಮದಲ್ಲಿ ಜನಿಸಿದ ಸಾರಂಗಿ ಅವರು 1975 ರಲ್ಲಿ ಉತ್ಕಲ್ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ಫಕೀರ್ ಮೋಹನ್ ಕಾಲೇಜಿನಿಂದ ಕಲಾ ಪದವಿಯನ್ನು ಪಡೆದುಕೊಂಡವರಾಗಿದ್ದಾರೆ. ಬಡತನ್ದಲ್ಲಿ ಜನಿಸಿದ ಇವರಿಗೆ ಸನ್ಯಾಸತ್ವ ಕಡೆ ಒಲವು ಹೊಂದಿದ್ದ ಕಾರಣ ರಾಮಕೃಷ್ಣ ಮಠಕ್ಕೆ ತೆರಳಿದ್ದರು. ಆದರೆ ಅಲ್ಲಿ ಸನ್ಯಾಸಿಯಾಗುವ ಬದಲು ವಿಧವೆಯಾಗಿರುವ ಒಬ್ಬಂಟಿ ತಾಯಿಯನ್ನು ಸಾಕಿ ಸಲಹುವಂತೆ ಮನವರಿಕೆ ಮಾಡಿ ಅವರನ್ನು ಹಿಂದಕ್ಕೆ ಕಳುಹಿಸಿದ್ದರು.

ಇವರ ರಾಜಕೀಯ ಪಯಣವು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ವಯಂಸೇವಕರಾಗಿ ಪ್ರಾರಂಭವಾಗಿದ್ದು ಬಳಿಕ ಇವರು ಅವರು ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದಲ್ಲಿಯೂ ಗುರುತಿಸಿಕೊಂಡರು.
ಇದಾದ ಬಳಿಕ ಒಡಿಶಾ ವಿಧಾನಸಭೆಯ ನೀಲಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು 2004 ರಿಂದ 2009 ರವರೆಗೆ ಮತ್ತು 2009 ರಿಂದ 2014 ರವರೆಗೆ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಆ ಬಳಿಕ 2014 ರಲ್ಲಿ ಸಾರಂಗಿ ಬಾಲಸೋರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ನಂತರ 2019 ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿ ವಿಜಯಶಾಲಿಯಾದರು. ಹಾಲಿ ಸಂಸದ ಬಿಜು ಜನತಾ ದಳದ ರವೀಂದ್ರ ಕುಮಾರ್ ಜೆನಾ ಅವರನ್ನು 12,956 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಾರಂಗಿ ಅವರ ನಿವ್ವಳ ಮೌಲ್ಯ:
ಅವಿವಾಹಿತರಾಗಿರುವ ಸಂಸದ ಪ್ರತಾಪ್ ಸಾರಂಗಿ ಅವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದ್ದು, ಇಂದಿಗೂ ಒಡಿಶಾದ ಗೋಪಿನಾಥಪುರದ ಪುಟ್ಟ ಮನೆಯಲ್ಲಿ ವಾಸವಾಗಿದ್ದು, ಓಡಾಟಕ್ಕೆ ಸೈಕಲ್ ಸವಾರಿಯನ್ನೇ ಇಷ್ಟಪಡುತ್ತಾರೆ. ಅವರು ಈ ಬಾರಿಯ ಅಂದರೆ 2024ರ ಲೋಕಸಭೆಯ ಅಫಿಡವಿಟ್ ನಲ್ಲಿ ಸಲ್ಲಿಸಿದ ಮಾಹಿತಿಯ ಪ್ರಕಾರ ಅವರ ಆಸ್ತಿಯ ವಿವರಗಳನ್ನು ನೋಡೋಣ..
ಸಾರಂಗಿ ಅವರ ಬಳಿ ಇರುವ ಐದು ಬ್ಯಾಂಕ್ ಖಾತೆಗಳಲ್ಲಿ 25 ಸಾವಿರ ರೂ. ಇದ್ದು ಒಟ್ಟಾರೆ 1 ಲಕ್ಷ 34ಸಾವಿರಕ್ಕೂ ಹೆಚ್ಚು ಹಣ ಜಮೆಯಾಗಿದೆ. ಇದಲ್ಲದೇ ಎಸ್ ಬಿಐ ಮ್ಯೂಚುವಲ್ ಫಂಡ್ ನಲ್ಲಿ 27ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಿದ್ದು, 7 ಲಕ್ಷ ಮೌಲ್ಯದ ಎಸ್ ಬಿಐ ಬಾಂಡ್ ಗಳನ್ನು ಹೊಂದಿದ್ದಾರೆ.
ವಿಮೆ ಪಾಲಿಸಿಗಳ ಬಗ್ಗೆ ನೋಡುವುದಾದರೆ ಅವರ ಹೆಸರಿನಲ್ಲಿ 9 ಲಕ್ಷ ರೂ. ಮೌಲ್ಯದ ಎಸ್ ಬಿಐ ಲೈಫ್ ಕವರೇಜ್ ಇದೆ. 250 ರೂ. ಬೆಲೆಯ 1995 ಮಾಡೆಲ್ ನ ಅಟ್ಲಾಸ್ ಸೈಕಲ್ ಅವರ ಹೆಸರಿನಲ್ಲಿದೆ. ಒಟ್ತಾರೆ ನೋಡುವುದಾದರೆ ಒಟ್ಟು 45,54,000 ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಸಂಸದ ಸಾರಂಗಿ ಅವರ ಕೌಟುಂಬಿಕ ಆಸ್ತಿ ನೋಡುವುದಾದರೆ ತಾಯಿಯ ಕಡೆಯಲ್ಲಿ 4 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ ಹಾಗೂ ಮಣ್ಣಿನ ಮನೆ ಹೊಂದಿದ್ದಾರೆ. ಮನೆಯ ಮೌಲ್ಯ ಕೇವಲ 3000 ರೂ. ಆಗಿದೆ. ಇವರು ಯಾವುದೇ ರೀತಿಯ ಸಾಲವನ್ನು ಹೊಂದಿಲ್ಲ ಎನ್ನುವುದು ಮತ್ತೊಂದು ವಿಶೇಷ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications