ರಿಯಾಲ್ಟಿ ಸಂಸ್ಥೆಯಾಗಿರುವ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಲಿಮಿಟೆಡ್ ಮುಂಬರುವ ವರ್ಷದಲ್ಲಿ ಹೊಸ ಯೋಜನೆಯನ್ನ ಆರಂಭಿಸಲು ಮುಂದಾಗ್ತಿದೆ. ಮುಂದಿನ ಮಾರ್ಚ್ 2025ರ ವೇಳೆಗೆ 52,000 ಕೋಟಿ ರೂಪಾಯಿ ಮೌಲ್ಯದ ವಸತಿ ಪ್ರಾಜೆಕ್ಟ್‌ಗಳನ್ನು ಆರಂಭಿಸಲು ಪ್ರೆಸ್ಟೀಜ್ ಸಂಸ್ಥೆ ಸಿದ್ಧವಾಗ್ತಿದೆ, ವಸತಿಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈ ಯೋಜನೆಯನ್ನ ಪ್ರಾರಂಭಿಸಲಿದೆ.
ಇನ್ನು ಈ ಯೋಜನೆ ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಗೋವಾ ಮತ್ತು ದೆಹಲಿ-ಎನ್‌ಸಿಆರ್‌ನಾದ್ಯಂತ 53 ಮಿಲಿಯನ್ ಚದರ ಅಡಿಗಳಿಗಿಂತ ಹೆಚ್ಚು ಪ್ರದೇಶವನ್ನು ಈ ಯೋಜನೆ ಒಳಗೊಂಡಿದೆ. ಇನ್ನು 2023-24ರ ಆರ್ಥಿಕ ವರ್ಷದಲ್ಲಿ ಪ್ರೆಸ್ಟೀಜ್ ಎಸ್ಟೇಟ್ಸ್ 21,040 ಕೋಟಿ ರೂಪಾಯಿಗಳ ದಾಖಲೆ ಮಾರಾಟದ ಬುಕಿಂಗ್ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ವಿಶ್ಲೇಷಕರೊಂದಿಗಿನ ಕಾನ್ಫರೆನ್ಸ್ ಕಾಲ್‌ನ ಪ್ರತಿಲೇಖನದ ಪ್ರಕಾರ, ಪ್ರೆಸ್ಟೀಜ್ ಎಸ್ಟೇಟ್ಸ್ ಸಿಎಂಡಿ ಇರ್ಫಾನ್ ರಜಾಕ್ ಹೇಳಿರುವ ಪ್ರಕಾರ ಈ ಆರ್ಥಿಕ ವರ್ಷಕ್ಕೆ ತಮ್ಮ ಸಂಸ್ಥೆಯ ಮಾರಾಟ ಬುಕಿಂಗ್ ಮಾರ್ಗದರ್ಶನ 24,000 ಕೋಟಿ ರೂಪಾಯಿಗಳ ವರೆಗೆ ನಾವು ಪೂರೈಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
13 ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿರುವ ಪ್ರೆಸ್ಟೀಜ್ ಗ್ರೂಪ್, ವಿವಿಧ ವಿಭಾಗಗಳಲ್ಲಿ ವ್ಯಾಪಾರ ಮಾದರಿಯನ್ನು ಮತ್ತಷ್ಟು ವೈವಿಧ್ಯಗೊಳಿಸಿದೆ. ಜೊತೆಗೆ ಸೆಪ್ಟೆಂಬರ್, 2024ರಲ್ಲಿ ಈ ಸಂಸ್ಥೆಯು 302 ಯೋಜನೆಗಳನ್ನು ಪೂರ್ಣಗೊಳಿಸಿದೆ. ಹಾಗೆ 2023-24ರ ಆರ್ಥಿಕ ವರ್ಷದಲ್ಲಿ, ಪ್ರೆಸ್ಟೀಜ್ ಎಸ್ಟೇಟ್ಸ್ 21,040 ಕೋಟಿ ರೂ.ಗಳ ದಾಖಲೆಯ ಮಾರಾಟದ ಬುಕಿಂಗ್ ಮಾಡಿದೆ.
ಪ್ರೆಸ್ಟೀಜ್ ಎಸ್ಟೇಟ್ಸ್ ಸಂಸ್ಥೆಯು ಸೆಪ್ಟೆಂಬರ್ ತಿಂಗಳಿನಲ್ಲಿ 4,022.6 ಕೋಟಿ ರೂ.ಗಳ ಮಾರಾಟವನ್ನು ದಾಖಲಿಸಿದೆ. ಜೊತೆಗೆ ಹಿಂದಿನ ವರ್ಷದಲ್ಲೂ ಕೂಡ 7,092.6 ಕೋಟಿ ರೂ.ಗಳ ಮಾರಾಟವನ್ನ ದಾಖಲಿಸಿದೆ.
ಹಾಗೆ ಈ ವರ್ಷ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ, ಕಂಪನಿಯ ಮಾರಾಟ ಬುಕಿಂಗ್ 7,052.2 ಕೋಟಿಗೆ ಕುಸಿದಿದೆ. ಇನ್ನು ಕಳೆದ ವರ್ಷ ನೋಡೋದಾದ್ರೆ ಇದೇ ಅವಧಿಯಲ್ಲಿ 11,007.3 ಕೋಟಿ ರೂ. ವರೆಗೆ ಕುಸಿದಿತ್ತು.
ಅದೇನೇ ಇದ್ದರೂ, ಅಂದುಕೊಂಡಂತೆ ಎಲ್ಲಾ ಗುರಿಯನ್ನು ಸಾಧಿಸುವುದು ಮಾತ್ರವಲ್ಲದೆ, ಅದನ್ನು ಮೀರಿಸುವಂತಹ ಬಲವಾದ ವಿಶ್ವಾಸವನ್ನ ರಜಾಕ್ ಹೊಂದಿದ್ದಾರೆ.
ಹೀಗಾಗಿ ಮಾರುಕಟ್ಟೆಯು ಕೂಡ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ರಜಾಕ್ ಅವರೇ ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾತನಾಡಿದ ಅವರು, ನಮ್ಮ ಬಳಿ ನಾವು ಸ್ಥಳ ಮತ್ತು ಉತ್ಪನ್ನಗಳನ್ನ ಹೊಂದಿರುವವರೆಗೂ ಬೇಡಿಕೆಯು ಕೂಡ ಇದ್ದೇ ಇರುತ್ತದೆ, ಅದು ನಮಗೆ ಮಧ್ಯಮ ಆದಾಯವಾಗಿದೆ. ಮತ್ತು ಸಾಕಷ್ಟು ಬೇಡಿಕೆ ನಮಗೆ ಬರುತ್ತಲೇ ಇರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ನಾವು, ಕಂಪನಿಯಲ್ಲಿ, ಹಾಗೆ ಈ ತ್ರೈಮಾಸಿಕ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಸಾಕಷ್ಟು ಉಡಾವಣೆಗಳನ್ನು ಹೊಂದಿದೆ ಎಂದು ರಜಾಕ್ ಅಭಿಪ್ರಾಯ ಪಟ್ಟಿದ್ದಾರೆ.
ಕಂಪನಿ ಈ ತ್ರೈಮಾಸಿಕದಲ್ಲಿ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಆರಂಭಿಸಲು ಇಚ್ಛಿಸುವ ಹೆಚ್ಚಿನ ಯೋಜನೆಗಳಿಗೆ ಅನುಮೋದನೆಗಳು ಜೊತೆಗೆ 'ರೇರಾ'ಸಂಖ್ಯೆಯನ್ನು ಪಡೆಯುವುದನ್ನು ನೋಡಲು ಕಂಪನಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ, ಝಯದ್ ನೋಮನ್ ಈ ಕುರಿತು ಮಾತನಾಡಿದ್ದು, ಈ ಯೋಜನೆಗಳ ಒಟ್ಟು ಅಭಿವೃದ್ಧಿ ಮೌಲ್ಯ 10,000 ಕೋಟಿ ರೂಪಾಯಿಗಳನ್ನ ನಾವು ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲೇ ಬಿಡುಗಡೆ ಮಾಡಿದ್ದೇವೆ. ಹಾಗೆ ಎರಡನೇ ಬಾರಿಗೆ 8,600ಕೋಟಿ ರೂಗಳನ್ನ ಬಿಡುಗಡೆ ಮಾಡುತ್ತೇವೆ ಎಂದರು.
ಪ್ರೆಸ್ಟೀಜ್ ಎಸ್ಟೇಟ್ಸ್ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಅಮಿತ್ ಮೋರ್ ಕೂಡ ಮಾತನಾಡಿದ್ದು, ಕಂಪನಿಯು ಈ ತ್ರೈಮಾಸಿಕದ ವೇಳೆಗೆ 25,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಪ್ರಾರಂಭಿಸಲಿದೆ. ಹಾಗೆ ಇನ್ನುಳಿದವುಗಳನ್ನು FY25ಯ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭಿಸಲಿದೆ ಎಂದು ಹೇಳಿದರು.
ಪ್ರೆಸ್ಟೀಜ್ ಗ್ರೂಪ್ ದೇಶದ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದೆ. ವಸತಿ, ಕಚೇರಿ, ಚಿಲ್ಲರೆ ವ್ಯಾಪಾರ, ಆತಿಥ್ಯ, ಆಸ್ತಿ ನಿರ್ವಹಣೆ ಮತ್ತು ಗೋದಾಮುಗಳು ಹೀಗೆ 13ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಕಾರ್ಯಾಚರಣೆಗಳನ್ನ ನಡೆಸುವ ಮೂಲಕ ವಿವಿಧ ವಿಭಾಗಗಳಲ್ಲಿ ವ್ಯಾಪಾರದ ಮಾದರಿಯನ್ನು ಇನ್ನಷ್ಟು ವೈವಿಧ್ಯಗೊಳಿಸಿದೆ.
ಸೆಪ್ಟೆಂಬರ್ 2024ರಲ್ಲಿ 193 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಬಹುದಾದ 302 ಯೋಜನೆಗಳನ್ನು ಕಂಪನಿ ಪೂರ್ಣಗೊಳಿಸಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications