ಭಾರತದಲ್ಲಿ ಚಿನ್ನದ ಬೆಲೆ ಹೊಸ ವರ್ಷದಿಂದ ಏರಿಳಿತಗಳು ಆಗುತ್ತಲೇ ಇದ. ಅತ್ತ ಇಂದು ಕಡಿಮೆಯಾಗಬಹುದು, ನಾಳೆ ಕಡಿಮೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ದಿನೇ ದಿನೇ ನಿರಾಸಾಭಾವ ವ್ಯಕ್ತವಾಗುತ್ತಿದೆ. ಇದೀಗ ಇಂದೂ ಕೂಡಾ ಚಿನ್ನದ ಬೆಲೆ (Gold Rate Today) ಭಾರೀ ಏರಿಕೆ ಕಂಡಿದೆ. ನಿನ್ನೆಯಷ್ಟೇ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ವಾರದ ಆರಂಭದಲ್ಲೇ ಚಿನ್ನದ ಬೆಲೆ ಏರಿಕೆಯಾಗಿದ್ದು, ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಅಂದರೆ ಇಂದು ಪ್ರತೀ ಒಂದು ಗ್ರಾಂ ಚಿನ್ನದ ಬೆಲೆ 13,740 ರೂ. ಆಗಿದ್ದು, ನಿನ್ನೆ 13,582 ರೂ. ಇತ್ತು. ಅಂದರೆ ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು 158 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,09,920 ರೂ. ಆಗಿದ್ದು, ನಿನ್ನೆ 1,08,656 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,264 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,37,400 ರೂ. ಆಗಿದ್ದು, ನಿನ್ನೆ 1,35,820 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು 1,580 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,4,000 ರೂ. ಆಗಿದ್ದು, ನಿನ್ನೆ 13,58,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 15,800 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 12,595 ರೂ. ಆಗಿದ್ದು, ನಿನ್ನೆ 12,450 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆಯಲ್ಲಿ ₹145 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,00,760 ರೂ. ಆಗಿದ್ದು, ನಿನ್ನೆ 99,600 ರೂ. ಇತ್ತು. ನಿನ್ನೆಗಿಂತ ಇಂದು 1,16 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,25,950 ರೂ. ಆಗಿದ್ದು, ನಿನ್ನೆ 1,24,500 ರೂ. ಇತ್ತು. ನಿನ್ನೆಗಿಂತ ಇಂದು ಹತ್ತು ಗ್ರಾಮ ಚಿನ್ನದಲ್ಲಿ 1,450 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 12,59,500 ರೂ. ಆಗಿದ್ದು, ನಿನ್ನೆ 12,45,000 ರೂ. ಇತ್ತು.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 10,305 ರೂ. ಆಗಿದ್ದು, ನಿನ್ನೆ 10,187 ರೂ. ಇತ್ತು. ನಿನ್ನೆಯ ಬೆಲೆಗೆ ಹೋಲಿಸಿದ್ರೆ ಇಂದು ₹118 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹82,440 ರೂ. ಆಗಿದ್ದು, ನಿನ್ನೆ 81,496 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹944 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,,03,050 ರೂ. ಆಗಿದ್ದು, ನಿನ್ನೆ 1,01,870 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,180 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 10,30,500 ರೂ. ಆಗಿದ್ದು, ನಿನ್ನೆ 10,18,700 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದ 11,800 ರೂ. ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ಚೆನ್ನೈ: 24K ರೂ. 13,833, 22K ರೂ. 12,680, 18K ರೂ. 10,575
ಮುಂಬೈ: 24K ರೂ. 13,755, 22K ರೂ. 12,610, 18K ರೂ. 10,305
ದೆಹಲಿ: 24K ರೂ. 13,755, 22K ರೂ. 12,610, 18K ರೂ. 10,320
ಕೋಲ್ಕತ್ತಾ: 24K ರೂ. 13,740, 22K ರೂ. 12,595, 18K ರೂ. 10,305
ಬೆಂಗಳೂರು: 24K ರೂ. 13,740, 22K ರೂ. 12,595, 18K ರೂ. 10,305
ಹೈದರಾಬಾದ್: 24K ರೂ. 13,740, 22K ರೂ. 12,595, 18K ರೂ. 10,305
ಕೇರಳ: 24K ರೂ. 13,740, 22K ರೂ. 12,595, 18K ರೂ. 10,305
ಪುಣೆ: 24K ರೂ. 13,740, 22K ರೂ. 12,595, 18K ರೂ. 10,305
ವಡೋದರಾ: 24K ರೂ. 13,745, 22K ರೂ. 12,600, 18K ರೂ. 10,310
ಅಹಮದಾಬಾದ್: 24K ರೂ. 13,745, 22K ರೂ. 12,600, 18K ರೂ. 10,310
ಬೆಳ್ಳಿ ಬೆಲೆ:
ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿ ಬೆಲೆ ಕೂಡಾ ಏರಿಕೆ ಕಂಡಿದೆ. ಅತ್ತ ಬೆಳ್ಳಿ ಬೆಲೆ ಇಂದು ಪ್ರತೀ ಗ್ರಾಂಗೆ ₹247 ರೂ. ಆಗಿದ್ದು, ನಿನ್ನೆ ₹241 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹6 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,976 ರೂ. ಆಗಿದ್ದು, ನಿನ್ನೆ ₹1,928 ರೂ. ಇತ್ತು. ನಿನ್ನೆಗಿಂತ ಇಂದು ₹48 ರೂ. ಹೆಚ್ಚಳವಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹2,470 ರೂ., 100 ಗ್ರಾಂ ಬೆಳ್ಳಿ ಬೆಲೆ ₹24,700, 1000 ಗ್ರಾಂ ಬೆಳ್ಳಿ ದರ ₹2,47,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 5ರ ರಾಯಿಟರ್ಸ್ ವರದಿ ಪ್ರಕಾರ, ವಾರಾಂತ್ಯದಲ್ಲಿ ಅಮೆರಿಕವು ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ವಶಕ್ಕೆ ಪಡೆದ ನಂತರ, ಚಿನ್ನದ ಬೆಲೆ ಸೋಮವಾರ ಏರಿಕೆ ಕಂಡಿದೆ.
ಜಿಎಂಟಿ 0312 ರ ಸಮಯದಲ್ಲಿ, ಸ್ಪಾಟ್ ಚಿನ್ನದ ದರ ಪ್ರತೀ ಔನ್ಸ್‌ಗೆ 1.9% ಏರಿಕೆ ಕಂಡು, $4,411.14 ಕ್ಕೆ ತಲುಪಿದೆ.


Click it and Unblock the Notifications