ಒಂದು ಕೋಟಿ ಯುವಕರಿಗೆ ಅನುಕೂಲವಾಗುವ ಪ್ರಧಾನಿ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಶಿಕ್ಷಣ ಬಜೆಟ್ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1 ಕೋಟಿ ಯುವಕರಿಗಾಗಿ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಈ ಯೋಜನೆ ಪ್ರಯೋಜನಕಾರಿಯಾಗಿದೆ.
ಈ ಯೋಜನೆಯಡಿ ಆಯ್ಕೆಯಾಗುವ ಎಲ್ಲಾ ಅರ್ಜಿದಾರರಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ಮತ್ತು ಮಾಸಿಕ ಸ್ಟೈಫಂಡ್ ಸಿಗಲಿದೆ. ಆಯ್ಕೆಯಾದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

2024ರ ಅಕ್ಟೋಬರ್ 3ರಿಂದ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯಡಿ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ. 21 ರಿಂದ 24 ವರ್ಷದವರೆಗಿನ ಯುವಕ-ಯುವತಿಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಭಾರತದ ಅಗ್ರ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶ ಪಡೆಯುತ್ತಾರೆ. ಪ್ರಧಾನ ಮಂತ್ರಿಗಳ ಉದ್ಯೋಗ ಮತ್ತು ಕೌಶಲ್ಯ ಪ್ಯಾಕೇಜ್‌ನ ಭಾಗವಾಗಿ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.
ಮಾಸಿಕ 5000 ರೂಪಾಯಿ ಸ್ಟೈಫಂಡ್
ಅಭ್ಯರ್ಥಿಗಳು ಇಂಟರ್ನ್‌ಶಿಪ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಪೂರ್ಣ ಸಮಯದ ಉದ್ಯೋಗದಲ್ಲಿ ಇರಬಾರದು ಮತ್ತು ಸರ್ಕಾರಿ ನೌಕರರಿಲ್ಲದ ಕುಟುಂಬಗಳಿಂದ ಬಂದಿರಬೇಕು ಎಂದು ನಿಯಮಗಳು ತಿಳಿಸಿವೆ.
ಐಐಟಿ ಅಥವಾ ಐಐಎಂಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದವರು, ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಲ್ಲ. ಐಟಿಐ ಮತ್ತು ಕೌಶಲ್ಯ ಕೇಂದ್ರಗಳ ಯುವಕರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅರ್ಜಿದಾರರು ಇಂಟರ್ನ್‌ಶಿಪ್ ಅವಧಿಯಲ್ಲಿ ಸರ್ಕಾರದಿಂದ 4,500 ರೂಪಾಯಿ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಮೂಲಕ ಕಂಪನಿಗಳಿಂದ 500 ರೂಪಾಯಿ ಪಡೆಯಲಿದ್ದಾರೆ, ಮಾಸಿಕ ಸ್ಟೈಫಂಡ್ ಮಾತ್ರವಲ್ಲದ ಒಂದು ಬಾರಿ 6000 ರೂಪಾಯಿ ಆರ್ಥಿಕ ಸಹಾಯ ಧನ ಪಡೆಯಲಿದ್ದಾರೆ. ಎರಡು ಹಂತಗಳಲ್ಲಿ ಯೋಜನೆಯನ್ನು ಜಾರಿ ಮಾಡಲಿದ್ದು 1 ಕೋಟಿ ಯುವಕರು ಯೋಜನೆಯ ಲಾಭ ಪಡೆಯಲಿದ್ದಾರರೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರು 21 ರಿಂದ 24 ವರ್ಷ ವಯಸ್ಸಿನವರಾಗಿರಬೇಕು.
ಅರ್ಜಿದಾರರು ಪೂರ್ಣ ಸಮಯದ ಉದ್ಯೋಗದಲ್ಲಿ ತೊಡಗಿರಬಾರದು.
ಅಭ್ಯರ್ಥಿಗಳು ತಮ್ಮ ಮಾಧ್ಯಮಿಕ ಶಾಲಾ ಪ್ರಮಾಣಪತ್ರ (SSC) ಅಥವಾ ಅದರ ಸಮಾನ, ಹೈಯರ್ ಸೆಕೆಂಡರಿ ಪ್ರಮಾಣಪತ್ರ (HSC) ಅಥವಾ ಅದರ ಸಮಾನ ಶಿಕ್ಷಣವನ್ನು ಪಡೆದಿರಬೇಕು. ಕೈಗಾರಿಕಾ ತರಬೇತಿ ಸಂಸ್ಥೆ (ITI), ಪಾಲಿಟೆಕ್ನಿಕ್ ಡಿಪ್ಲೊಮಾ ಅಥವಾ ಬಿಎ, ಬಿ.ಎಸ್‌ಸಿ, ಬಿ.ಕಾಂ. ಬಿಸಿಎ, ಬಿಬಿಎ, ಬಿ. ಫಾರ್ಮಾ ಪದವಿ ಪಡೆದವರು ಕೂಡ ಅರ್ಜಿ ಸಲ್ಲಿಸಬಹುದು.
ಇವರು ಅರ್ಜಿ ಸಲ್ಲಿಸಲು ಅರ್ಹರಲ್ಲ
ಐಐಟಿ, ಐಐಎಂ, ಕಾನೂನು ವಿಶ್ವವಿದ್ಯಾನಿಯಲ, ಐಐಎಸ್‌ಇಆರ್, ಎನ್‌ಐಡಿ ಅಥವಾ ಐಐಐಟಿ ಗಳಿಂದ ಪದವಿ ಪಡೆದವರು.
ಪೂರ್ಣ ಸಮಯದ ಉದ್ಯೋಗ, ಶಿಕ್ಷಣದಲ್ಲಿ ತೊಡಗಿಸಿಕೊಂಡವರು.
ಸಿಎ, ಸಿಎಂಎ, ಸಿಎಸ್, ಎಂಬಿಬಿಎಸ್, ಬಿಡಿಎಸ್, ಎಂಬಿಎ, ಪಿಎಚ್‌ಡಿ ಅಥವಾ ಯಾವುದೇ ಸ್ನಾತಕೋತ್ತರ ಪದವಿಯಂತಹ ಪದವಿಗಳನ್ನು ಹೊಂದಿರುವವರು ಅನರ್ಹರು.
ಯಾವುದೇ ಸರ್ಕಾರಿ ಕೌಶಲ್ಯ, ಅಪ್ರೆಂಟಿಸ್‌ಶಿಪ್ ಅಥವಾ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ದಾಖಲಾದವರನ್ನು ಅನರ್ಹರೆಂದು ಪರಿಗಣಿಸಲಾಗಿದೆ.
ಎನ್‌ಎಟಿಎಸ್ ಅಥವಾ ಎನ್‌ಎಪಿಎಸ್ ಅಡಿಯಲ್ಲಿ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸುವಂತಿಲ್ಲ.
ಕುಟುಂಬದ ಆದಾಯ 8 ಲಕ್ಷ ರೂಪಾಯಿಗಿಂತ ಹೆಚ್ಚಿದ್ದವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅಕ್ಟೋಬರ್ 3, 2024 ರಂದು ಯೋಜನೆ ಅಧಿಕೃತವಾಗಿ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 12, 2024 ರಿಂದ ಇಂಟರ್ನ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಬಹುದು. ಇಂಟರ್ನಿಶಿಪ್ ಅವಧಿ ಒಂದು ವರ್ಷಗಳದ್ದಾಗಿದೆ.
ಅಗತ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್
ಇಮೇಲ್ ಐಡಿ
ಮೊಬೈಲ್ ಸಂಖ್ಯೆ
ವಿಳಾಸ ಪುರಾವೆ
ಪಾನ್ ಕಾರ್ಡ್
ಪಡಿತರ ಚೀಟಿ
https://pminternship.mca.gov.in/login/ ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪೋರ್ಟಲ್ ಮೂಲಕ ಪ್ರತಿ ಇಂಟರ್ನ್‌ಶಿಪ್‌ಗೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ಅಭ್ಯರ್ಥಿಗಳ ಆದ್ಯತೆಗಳು ಮತ್ತು ಕಂಪನಿಗಳು ನಿಗದಿಪಡಿಸಿದ ಅವಶ್ಯಕತೆಗಳನ್ನು ಪರಿಗಣಿಸಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ಕಂಪನಿಗಳು ತಮ್ಮದೇ ಆದ ಆಯ್ಕೆ ಮಾನದಂಡಗಳು ಮತ್ತು ಪ್ರಕ್ರಿಯೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಮಾಡುತ್ತವೆ.


Click it and Unblock the Notifications