ಎಷ್ಟೋ ಯುವಕರು ಸಕ್ಸಸ್‌ಗಾಗಿ (Success Story) ಏನೇನೋ ಸಾಹಸ ಮಾಡ್ತಾರೆ. ಅದೇ ರೀತಿ ಓದಿನ ಮೂಲಕ, ತನ್ನ ವಿಶೇಷ ಕೌಶಲ್ಯಗಳ ಮೂಲಕ ಸಾಧನೆಯ ಹಾದಿ ಹಿಡಿಯುತ್ತಾರೆ. ಆದ್ರೆ ಇಲ್ಲೊಬ್ಬರಿದ್ದಾರೆ, ಬರೀ 24 ವಯಸ್ಸಿನಲ್ಲೇ ಕೃಷಿ ಸ್ಟಾರ್ಟಪ್ (Agriculture Startup_ ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ.

24 ವರ್ಷದ ಪ್ರಿನ್ಸ್ ಶುಕ್ಲಾ ಅವರ ಸಾಧನೆಯ ಹಾದಿ ಸವಾಲಿನದ್ದಾದರು, ಅವರ ಛಲ ಇಂದು ಯಶಸ್ವಿಯಾಗಲು ಕಾರಣವಾಗಿದೆ. ಪ್ರಿನ್ಸ್ ಬೆಂಗಳೂರಿನಲ್ಲಿ ಉತ್ತಮ ಸಂಬಳದ ಕೆಲಸವನ್ನು ತ್ಯಜಿಸಿ, ತಮ್ಮ ಹುಟ್ಟೂರಾದ ಬಿಹಾರದ ಪೂರ್ಣಿಯಾಕ್ಕೆ ಮರಳಿದರು. ಅನೇಕರು ಹೀಯಾಳಿಸಿದರು, ಕೇವಲ ₹1 ಲಕ್ಷ ಬಂಡವಾಳದೊಂದಿಗೆ 'ಆಗ್ರೇಟ್' ಎಂಬ ಕೃಷಿ-ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. ಆದರೆ ಇಂದು, ಅವರು ತಮ್ಮ ಗ್ರಾಮದಿಂದಲೇ ವಾರ್ಷಿಕವಾಗಿ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದ್ದಾರೆ.
ಉದ್ಯೋಗ ಬಿಟ್ಟು ಕೃಷಿ ಕ್ಷೇತ್ರಕ್ಕೆ ಎಂಟ್ರಿ!
ಬೆಂಗಳೂರಿನಲ್ಲಿ ಒಳ್ಳೆಯ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದರೂ, ಕೃಷಿಯ ಮೇಲಿನ ಶುಕ್ಲಾ ಅವರ ಆಸಕ್ತಿ ಕಡಿಮೆಯೇ ಆಗಿರಲಿಲ್ಲ. ಅದೇ ಕಾರಣಕ್ಕೆ ಉದ್ಯೋಗ ಬಿಟ್ಟು ಹುಟ್ಟೂರಿಗೆ ಮರಳಿದ ಪ್ರಿನ್ಸ್ ಶುಕ್ಲಾ ಕೃಷಿ ಉದ್ಯಮವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಹಲವಾರು ಟೀಕೆಗಳನ್ನು ಎದುರಿಸಿದ ಶುಕ್ಲಾ, ಈಗ ಅವರ ಕೃಷಿ ಸ್ಟಾರ್ಟಪ್ ಲಕ್ಷಾಂತರ ರೈತರ ಜೀವನವನ್ನು ಬದಲಾಯಿಸಿದೆ. ಈ ಮೂಲಕ ವಾರ್ಷಿಕವಾಗಿ ಶುಕ್ಲಾ ಅವರು ₹2.5 ಕೋಟಿ ವಹಿವಾಟು ನಡೆಸಿದೆ. ಅಷ್ಟೇ ಅಲ್ಲದೇ, ವಿದೇಶಕ್ಕೆ ಹೋಗುವ ಕನಸನ್ನು ಕೈಬಿಟ್ಟು, ಶುಕ್ಲಾ ಕೃಷಿಯನ್ನು ಆಯ್ಕೆ ಮಾಡಿಕೊಂಡರು ಮತ್ತು ಈಗ ITC, Parle ನಂತಹ ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿದ್ದಾರೆ.
ಪ್ರಿನ್ಸ್ ಶುಕ್ಲಾ ಯಾರು?
ಬಿಹಾರದ ಪೂರ್ಣಿಯಾ ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದ ಪ್ರಿನ್ಸ್, ಬಾಲ್ಯದಿಂದಲೂ ಕೃಷಿ ಬಗ್ಗೆ ಭಾರೀ ಆಸಕ್ತಿ ಹೊಂದಿದ್ದರು. ಆದರೆ, ಅವರ ತಂದೆ ವೈದ್ಯರಾಗಿದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಬಿಎಸ್‌ಸಿ ಅಗ್ರಿಕಲ್ಚರ್ ಮುಗಿಸಿದ ಪ್ರಿನ್ಸ್ ಬೆಂಗಳೂರಿಗೆ ತೆರಳಿ, ಅಲ್ಲಿ ಉತ್ತಮ ಸಂಬಳದ ಕೆಲಸವನ್ನು ಗಿಟ್ಟಿಸಿಕೊಂಡರು. ಆದರೂ ಅವರು ಹುಟ್ಟೂರಿನಲ್ಲಿ ಏನಾದರೊಂದು ಮಾಡಬೇಕೆಂಬ ಹಠ ಬಿಡಲೇ ಇಲ್ಲ..
ಮಾಧ್ಯಮ ವರದಿಗಳ ಪ್ರಕಾರ, ಪ್ರಿನ್ಸ್ ತಮ್ಮ ಬಾಲ್ಯದಿಂದಲೇ ಕೃಷಿಯ ವಾತಾವರಣದಲ್ಲಿ ಬೆಳೆದಿದ್ದರಿಂದ ರೈತರು ಉತ್ತಮ ಬೀಜಗಳು, ಗೊಬ್ಬರಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿದರೂ ಅಥವಾ ಅದರ ಕೊರತೆಯಿಂದಲೂ ನಷ್ಟ ಅನುಭವಿಸುವುದನ್ನು ಗಮನಿಸಿದ್ದರು. ನಗರದಲ್ಲಿ ಕೆಲಸ ಮಾಡುವಾಗ, ಇದಕ್ಕೆ ಏನಾದರೂ ಮಾಡಬೇಕು ಎಂದು ಅವರೂ ಅಂದುಕೊಂಡಿದ್ದರಂತೆ. ಅಲ್ಲದೇ ವಿದೇಶಕ್ಕೆ ಹೋಗಬೇಕೆಂಬ ಕನಸು, ಉದ್ಯೋಗ ಎಲ್ಲವೂ ಕೋವಿಡ್‌ನಿಂದಾಗಿ ಕನಸಾಗಿಯೇ ಉಳಿಯಿತು.
ಆ ಸಂದರ್ಭದಲ್ಲಿ ಕೆಲಸ ಬಿಟ್ಟು ಬಿಹಾರಕ್ಕೆ ಮರಳಿದ ಪ್ರಿನ್ಸ್ ಅಲ್ಲಿನ ರೈತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಕಂಡುಕೊಂಡರು. ದುಬಾರಿ ಬೀಜಗಳು, ನಕಲಿ ಗೊಬ್ಬರಗಳು, ಮತ್ತು ಹಳೆಯ ಉಪಕರಣಗಳನ್ನು ನೋಡಿ ಬೇಸತ್ತ ಪ್ರಿನ್ಸ್ ಕೃಷಿಯನ್ನು ಹೊಸ ರೂಪಕ್ಕೆ ತರಲು ನಿರ್ಧರಿಸಿದರು. ಆದರೆ ಇದರ ಆರಂಭ ಕ್ಲಿಷ್ಟಕರವಾಗಿತ್ತು. ಆದರೆ ಪ್ರಿನ್ಸ್ ಇನ್‌ಸ್ಟಾಗ್ರಾಮ್ ರೀಲ್ ಒಂದರಲ್ಲಿ ಹೇಳಿಕೊಂಡಂತೆ, ಅವರು ಕೇವಲ ₹1 ಲಕ್ಷದಿಂದಲೇ 'ಆಗ್ರೇಟ್' ಕೃಷಿ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. ಅಗ್ರೇಟ್ ಎಂದರೆ ಅಗ್ರಿಕಲ್ಚರ್ ಗ್ರೇಟ್‌ನ ಸಂಕ್ಷಿಪ್ತ ರೂಪ.
ಒಂದು ಸಣ್ಣ ರೂಮ್‌ನಿಂದ ತಮ್ಮ ಉದ್ಯಮವನ್ನು ಪ್ರಾರಂಭಿಸಿದ ಪ್ರಿನ್ಸ್, ಆರಂಭದಲ್ಲಿ ಗುಣಮಟ್ಟದ ಬೀಜಗಳು, ಸಾವಯವ ಗೊಬ್ಬರಗಳು ಮತ್ತು ಆಧುನಿಕ ಉಪಕರಣಗಳನ್ನು ಪೂರೈಸುವುದೇ ಗುರಿಯಾಗಿತ್ತು. ಆದರೆ, ಕೇವಲ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ತಿಳಿದಿದ್ದ ಪ್ರಿನ್ಸ್, ಸಣ್ಣ ರೈತರಿಗೆ ಬೀಜಗಳನ್ನು ಬಿತ್ತುವುದು ಹೇಗೆ, ನೀರನ್ನು ಉಳಿಸುವುದು ಹೇಗೆ, ಸಾವಯವ ಕೃಷಿ ಮಾಡುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಲು ಪ್ರಾರಂಭಿಸಿದರು.
ಪ್ರಿನ್ಸ್ ಹಳ್ಳಿ ಹಳ್ಳಿಗೆ ತೆರಳಿ 10,000 ಕ್ಕೂ ಹೆಚ್ಚು ರೈತರನ್ನು ಸಂಪರ್ಕಿಸಿ, ವೀಡಿಯೊ ಕರೆಗಳು, ಕಾರ್ಯಾಗಾರಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ತಂತ್ರಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸಿದರು. ಪ್ರಿನ್ಸ್ ನೀಡಿದ ತರಬೇತಿಯಿಂದಾಗಿ ತಮ್ಮ ಇಳುವರಿ ದ್ವಿಗುಣಗೊಂಡಿದೆ ಮತ್ತು ನಷ್ಟವಾಗಿಲ್ಲ ಎಂದು ರೈತರು ಕೂಡಾ ಸ್ವತಃ ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಪ್ರಿನ್ಸ್ ಅವರ ಸ್ಟಾರ್ಟಪ್ ನೋಡಿ ಹೀಯಾಳಿಸುತ್ತಿದ್ದ ಜನ, ಇಂದು ಅವರನ್ನೇ ಹಾಡಿ ಹೊಗಳುತ್ತಿದ್ದಾರೆ. ಅವರಿಂದಲೇ ಎಷ್ಟೋ ಕೃಷಿಕರು ಇಂದು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಪ್ರಿನ್ಸ್ ಅವರ ಸತತ ಪರಿಶ್ರಮದಿಂದಾಗಿ ಅಗ್ರೇಟ್ ವಾರ್ಷಿಕವಾಗಿ ₹2.5 ಕೋಟಿ ವಹಿವಾಟು ನಡೆಸುತ್ತಿದೆ. ಪೂರ್ಣಿಯಾದಲ್ಲಿ ಪ್ರಾರಂಭವಾದ ಈ ಉದ್ಯಮ, ಬಿಹಾರದ ಹಲವಾರು ಜಿಲ್ಲೆಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಪ್ರಿನ್ಸ್ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಾಗ, ದೊಡ್ಡ ದೊಡ್ಡ ITC, Parle, Nestle ನಂತಹ ದಿಗ್ಗಜ ಕಂಪನಿಗಳು ಅವರೊಂದಿಗೆ ಪಾಲುದಾರಿಕೆಗೆ ಬಂದಿವೆ. ಅಗ್ರೇಟ್ ಈಗ ಆ ಕಂಪನಿಗಳಿಗೂ ಸಾವಯವ ಉತ್ಪನ್ನಗಳನ್ನು ಪೂರೈಸುತ್ತಿದೆ.
ಈ ಮೂಲಕ ಕೇವಲ 24 ವರ್ಷದವರಾದ ಪ್ರಿನ್ಸ್ ಶುಕ್ಲಾ, ಕೋಟಿಗಟ್ಟಲೆ ವ್ಯವಹಾರವನ್ನು ನಡೆಸುವುದಲ್ಲದೆ, ಸಾವಿರಾರು ಕುಟುಂಬಗಳಿಗೆ ಹೊಸ ಜೀವನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹಲವು ಯುವಕರಿಗೆ ಪ್ರಿನ್ಸ್ ಪ್ರೇರಣೆಯಾಗಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications