ಮಹಿಳೆಯರೇ..ಹೊಸ ಉದ್ಯಮ ಆರಂಭಿಸಲು ಯಾವುದೇ ಆಧಾರವಿಲ್ಲದೇ ಸಿಗ್ತಿದೆ ₹10 ಲಕ್ಷ ಸಾಲ..! ಈ ಬಗ್ಗೆ ಪೂರ್ತಿ ಓದಿ

ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆಗೈದಿದ್ದಾರೆ. ಮಹಿಳೆ ನಾಲ್ಕು ಗೋಡೆಯ ಮಧ್ಯೆ ಮಾತ್ರ ಬದುಕಬೇಕು ಎಂಬ ಪರಂಪರೆ ಎಂದಿಗೋ ಕೊನೆಗೊಂಡಿದೆ. ಈಗ ಎಲ್ಲಾ ಮಹಿಳೆಯರು ತಮ್ಮದೇ ಆದ ಉದ್ಯಮ ಹೊಂದಿದ್ದಾರೆ. ಆರ್ಥಿಕವಾಗಿ ಪ್ರಬಲಗೊಂಡಿದ್ದಾರೆ. ನಾಲ್ಕು ಜನಕ್ಕೆ ಕೆಲಸ ಕೊಡುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಹೀಗೆ ಜಾಗತಿಕವಾಗಿ, ಆರ್ಥಿಕವಾಗಿ ಪ್ರಗತಿ ಕಾಣಬೇಕೆಂದಿರುವ ಮಹಿಳೆಯರೂ ಇದ್ದಾರೆ. ಅಂಥವರಿಗೊಂದು ಗುಡ್‌ನ್ಯೂಸ್ ಇಲ್ಲಿದೆ.

ಮಹಿಳೆಯರಿಗೆ ಮೇಲಾಧಾರ ರಹಿತ ₹10 ಲಕ್ಷ ಸಾಲ..!

ಅಂದ್ರೆ, MSME ಕೇಂದ್ರಿತ ಫಿನ್‌ಟೆಕ್ ಸಂಸ್ಥೆ ಪ್ರೊಗ್‌ಕ್ಯಾಪ್, ಈಗ ಒಂದು ಹೆಜ್ಜೆ ಮುಂದೆ ಬಂದು ಮಹಿಳೆಯರಿಗಾಗಿ ಒಂದು ಹೊಸ ಯೋಜನೆ ಘೋಷಿಸಿದೆ. ಅದೇನೆಂದರೆ ಮಹಿಳೆಯರ ಉದ್ಯಮಶೀಲತೆಗೆ ಬೆಂಬಲ ನೀಡುವ ಉದ್ದೇಶದಿಂದ, ಮಹಿಳಾ ನೇತೃತ್ವದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 10 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲವನ್ನು ನೀಡಲು ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಅರೆನಗರ ಮತ್ತು ಗ್ರಾಮೀಣ ಭಾರತದಲ್ಲಿ 10,000 ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದೆ. ಹೀಗಂತ ಪ್ರೊಗ್‌ಕ್ಯಾಪ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೊಸ ಯೋಜನೆಯು Peak XV Partners, Google, Tiger Global ಮುಂತಾದ ಪ್ರಮುಖ ಹೂಡಿಕೆದಾರರಿಂದ ಬೆಂಬಲಿತವಾಗಿದೆ. ಈ ಮೂಲಕ ಮಹಿಳಾ ಉದ್ಯಮಿಗಳನ್ನು ನೈಜ ವಹಿವಾಟು ನಿರ್ವಾಹಕರಾಗಿ ಬೆಳೆಸಲು ಸಹಾಯ ಮಾಡಲು ಮುಂದಾಗಿದೆ. ಅಲ್ಲದೇ ಅವರ ಸಾಲ ಪಾವತಿಸಬಹುದಾದ ಸಾಮರ್ಥ್ಯವನ್ನು ಉನ್ನತ ಮಟ್ಟಕ್ಕೆ ಏರಿಸಲು, ಹಾಗೆಯೇ ತಮ್ಮ ಉದ್ಯಮಗಳನ್ನು ಸ್ತಿರವಾಗಿ ವೃದ್ಧಿಸಲು ನೆರವಾಗಲು ಈ ನೂತನ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಇನ್ನು ಈ ಯೋಜನೆಯ ಪ್ರಕಾರ ಪ್ರೊಗ್‌ಶಕ್ತಿ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಉಪಕ್ರಮದಡಿ, ಮಹಿಳಾ ಉದ್ಯಮಿಗಳು 10 ಲಕ್ಷ ರೂ.ವರೆಗೆ ಸಾಲ ಪಡೆಯಲು ಅರ್ಹರಾಗುತ್ತಾರೆ. ಜೊತೆಗೆ ಈ ಮೂಲಕ ಅವರ ಸಾಮರ್ಥ್ಯ ವೃದ್ಧಿ ಮತ್ತು ವ್ಯವಹಾರ ನಿರ್ವಹಣಾ ತರಬೇತಿ ಕಾರ್ಯಕ್ರಮಗಳ ಮೂಲಕ ಅವರ ಮಾರಾಟ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸರ್ಕಾರದ ವಿಕಸಿತ್ ಭಾರತ್ 2047ನ ದೃಷ್ಟಿಕೋನದಲ್ಲಿಟ್ಟುಕೊಂಡು, ಮಹಿಳಾ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯನ್ನು 70% ಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿಯೇ ಪ್ರೊಗ್‌ಕ್ಯಾಪ್ ಈ ಯೋಜನೆಯನ್ನು ಪ್ರಾರಂಭಿಸಿದೆ.

ಈ ಯೋಜನೆಯ ಇನ್ನೊಂದು ಪ್ರಮುಖ ವಿಶೇಷತೆ ಏನೆಂದರೆ, ಪುರುಷ ಸಹ-ಅರ್ಜಿದಾರರ ಅಗತ್ಯವನ್ನು ದೂರ ಮಾಡಿರುವುದಾಗಿದೆ. ಅಂದರೆ ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಹಿಳಾ ಸ್ವಾಮ್ಯ ಹೊಂದಿರುವವರು ಸಾಲ ಪಡೆಯಲು ಪುರುಷ ಗ್ಯಾರಂಟರ್ ಅಥವಾ ಸಹ-ಅರ್ಜಿದಾರರನ್ನು ಹೊಂದಿರಬೇಕಾಗುತ್ತದೆ. ಆದರೆ ಪ್ರೊಗ್‌ಕ್ಯಾಪ್ ಈ ನಿರ್ಬಂಧವನ್ನು ತೆಗೆದುಹಾಕಿ, ಮಹಿಳೆಯರಿಗೆ ಸ್ವತಂತ್ರವಾಗಿ ಸಾಲ ಪಡೆಯಲು ಅವಕಾಶ ಕಲ್ಪಿಸಿದೆ. ಪ್ರೊಗ್‌ಕ್ಯಾಪ್‌ ಸಂಸ್ಥೆಯ ಸ್ಥಾಪಕರದ ಮಾನ್ಯ ಪಲ್ಲವಿ ಶ್ರೀವಾಸ್ತವ ಮತ್ತು ಹಿಮಾಂಶು ಚಂದ್ರ MSME ಗಳಿಗೆ ಹಣಕಾಸು, ತಂತ್ರಜ್ಞಾನ ಮತ್ತು ವಾಣಿಜ್ಯ ಪರಿಹಾರಗಳನ್ನು ಒದಗಿಸಲು ಈ ವೇದಿಕೆಯನ್ನು ರೂಪಿಸಿದ್ದಾರೆ. ಈಗಾಗಲೇ ಈ ಸಂಸ್ಥೆಯು 1 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ 4 ಬಿಲಿಯನ್‌ ಡಾಲರ್‍‌ಗೂ ಮೀರಿದ ಹಣಕಾಸು ನೆರವನ್ನು ಒದಗಿಸಿದೆ.

ಸದ್ಯ ಮಹಿಳೆಯರು ನಡೆಸುವ ವ್ಯವಹಾರಗಳ ಪಾಲು 20% ಗಿಂತ ಕಡಿಮೆ ಇದ್ದರೂ, ಪ್ರೊಗ್‌ಕ್ಯಾಪ್‌ನ ಪೋರ್ಟ್‌ಫೋಲಿಯೋದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಶೇಕಡಾ 30 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅಲ್ಲದೇ 100ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ದೇಶದಾದ್ಯಂತ ಆಯೋಜಿಸುವ ಮೂಲಕ, ಮಹಿಳಾ ಉದ್ಯಮಿಗಳಿಗೆ ಹಣಕಾಸು ಯೋಜನೆ, ಬಂಡವಾಳ ನಿರ್ವಹಣೆ ಮತ್ತು ಮಾರ್ಕೆಟಿಂಗ್ ಕುರಿತಂತೆ ತರಬೇತಿ ನೀಡಲು ಪ್ರೋತ್ಸಾಹಿಸಲಾಗುತ್ತಿದೆ. ಈ ಹೊಸ ಕಾರ್ಯಕ್ರಮವು ಭಾರತದ ಉದ್ಯಮಶೀಲತೆಗೆ ಹೊಸ ದಿಕ್ಕು ನೀಡುವ ಮೂಲಕ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಹತ್ತರ ಪಾತ್ರ ವಹಿಸುವ ನಿರೀಕ್ಷೆಯಲ್ಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+