ಭಾರತದ ಕೆಲವು ಕಡೆಗಳಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತಿದೆ. ಅಂದರೆ ಒಂದು ಬಾರಿ ಯುವತಿಗೆ ಮದುವೆ ಮಾಡಿ ಕೊಟ್ಟ ಬಳಿಕ ಆಕೆ ತಂದೆ-ತಾಯಿಯ ಜೊತೆ ಹಿಂದಿನ ಅವಿನಾಭಾವ ನಂಟನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಇದರ ಅರ್ಥವಾಗಿದೆ. ಇನ್ನು ಉತ್ತರ ಭಾರತದಲ್ಲಿ ಈ ಮಾತನ್ನು ʻಪರಾಯಾ ಧನʼ ಎಂದು ಕರೆಯಲಾಗುತ್ತದೆ. ಅಂದರೆ ಹೆಣ್ಣುಮಕ್ಕಳು ತಮ್ಮ ಮನೆಗಳನ್ನು ತೊರೆದು ತಮ್ಮ ಮದುವೆಯ ನಂತರ ಗಂಡನ ಮನೆಗೆ ಹೋಗುವುದನ್ನು ಇದು ಸೂಚಿಸುತ್ತದೆ. ಹಾಗಾಗಿ ತಂದೆಯ ಆಸ್ತಿ, ಭೂಮಿ ಅಥವಾ ಸ್ವತ್ತುಗಳು ಅಂತಿಮವಾಗಿ ಪರರಿಗೆ ಅಥವಾ ಆಕೆಯ ಪತಿಗೆ ಸೇರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಇದೇ ಕಾರಣಕ್ಕಾಗಿ ದೇಶದ ಕೆಲವು ಕಡೆಗಳಲ್ಲಿ ಈಗಲೂ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ನೀಡಲಾಗುತ್ತಿಲ್ಲ. ಹೆಣ್ಣು ಮಕ್ಕಳನ್ನು ಈ ಆಸ್ತಿಗಳ ಹಕ್ಕಿನ ವಿಚಾರದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಹೆಣ್ಣು ಮಕ್ಕಳು ನಿಜವಾಗಿಯೂ ಕಾನೂನು ಪ್ರಕಾರ ತಂದೆಯ ಆಸ್ತಿಯಲ್ಲಿ ಹಕ್ಕು ಹೊಂದಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜವೇ ಆಗಿದೆ. ಆಕೆ ಮದುವೆಯಾದ ಬಳಿಕ ಯಾವ ರೀತಿಯ ಬದಲಾವಣೆಗಳು ಆಗುತ್ತದೆ? ಭಾರತ ಸರ್ಕಾರವು 1965 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಅಂಗೀಕರಿಸಿದ್ದು, ಈ ಕಾನೂನು ಏನನ್ನು ಹೇಳುತ್ತದೆ?
ಏನಿದು ಹಿಂದೂ ಉತ್ತರಾಧಿಕಾರ ಕಾಯ್ದೆ?
ಈ ಕಾಯಿದೆಯು ಭಾರತದಲ್ಲಿನ ಆಸ್ತಿಯ ವಿಭಜನೆಗೆ ಸಂಬಂಧಿಸಿದೆ. ಈ ಕಾನೂನಿನ ಅಡಿಯಲ್ಲಿ ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಲ್ಲಿ ಆಸ್ತಿ ವಿಭಜನೆ, ಉತ್ತರಾಧಿಕಾರ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನುಗಳನ್ನು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಅಂದರೆ 1956 ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ, ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ಹಕ್ಕು ಇರಲಿಲ್ಲ. ಹಾಗಾಗಿ ಈ ಸಮಯದಲ್ಲಿ ಹೆಣ್ಣು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕು ಹೊಂದಿರಲಿಲ್ಲ. ಆದರೆ ಈ ಕಾನೂನಿಗೆ 1965ರಲ್ಲಿ ತಿದ್ದುಪಡಿ ಮಾಡಿದ ಬಳಿಕ ಇದೀಗ ಎಲ್ಲವೂ ಬದಲಾಗಿದೆ.

ಮಗಳ ಆಸ್ತಿ ಹಕ್ಕುಗಳು
ಆದರೆ ಕೇಂದ್ರ ಸರ್ಕಾರವು 2005 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಎಂದು ಕರೆಯಲ್ಪಡುವ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ಮಾಡಿತ್ತು. ಇದರ ಪ್ರಕಾರ, ಪುತ್ರರಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಹೊಂದುವ ಹಕ್ಕಿಗೆ ಸಮಾನವಾಗಿ ಹೆಣ್ಣುಮಕ್ಕಳು ಕೂಡ ಅದೇ ರೀತಿಯ ಸಮಾನ ಹಕ್ಕುಗಳನ್ನು ಪಡೆಯುತ್ತಾರೆ. ಆದರೆ ವಿವಾಹಿತ ಹೆಣ್ಣು ಮಕ್ಕಳ ವಿಷಯದಲ್ಲಿ ಕಾಯ್ದೆ ಏನು ಹೇಳುತ್ತದೆ? ಮದುವೆಯಾದ ಹೆಣ್ಣುಮಕ್ಕಳಿಗೂ ತಮ್ಮ ತಂದೆಯ ಆಸ್ತಿಯಲ್ಲಿ ಹಕ್ಕು ಇದೆಯೇ? ಇದಕ್ಕೆ ಉತ್ತರ ಸರಳವಾಗಿದೆ. 2005 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆಯ ತಿದ್ದುಪಡಿಯ ನಂತರ ಇದೀಗ ಮದುವೆಯಾದ ಬಳಿಕವೂ ಮಹಿಳೆಯ ತನ್ನ ಸಹೋದರನಿಗೆ ಸಮಾನವಾಗಿ ಆಸ್ತಿಗೆ ಸಮಾನ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ.
ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆಯ ಪ್ರಕಾರ, 2005 ರ ಪ್ರಾರಂಭದ ಬಳಿಕ ಮತ್ತು ಮಿತಾಕ್ಷರ ಕಾನೂನಿನಿಂದ ನಿಯಂತ್ರಿಸಲ್ಪಡುವ ಒಂದು ಅವಿಭಕ್ತ ಹಿಂದೂ ಕುಟುಂಬದಲ್ಲಿ ಮಗಳು ಹುಟ್ಟಿನಿಂದಲೇ ಮಗನಂತೆಯೇ ಆಸ್ತಿಯಲ್ಲಿ ಪಾಲು ಹೊಂದಿರುತ್ತಾಳೆ. ಅದೇ ರೀತಿ 2025 ರ ಹಿಂದೂ ಉತ್ತರಾಧಿಕಾರ ಕಾಯಿದೆಯು ಹೇಳಲಾದ ಕಾಪರ್ಸೆನರಿ ಆಸ್ತಿಗೆ ಸಂಬಂಧಿಸಿದಂತೆ ಅದೇ ಹೊಣೆಗಾರಿಕೆಗಳಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.
ಏತನ್ಮಧ್ಯೆ, 1956 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಜಾರಿಗೊಳ್ಳುವ ಮುನ್ನ ಒಂದು ವೇಳೆ ತಂದೆ ಮೃತಪಟ್ಟರೆ ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಹಕ್ಕುಗಳಿಲ್ಲ ಎಂದು ಬಾಂಬೆ ಹೈಕೋರ್ಟ್ ಕಳೆದ ತಿಂಗಳು ತೀರ್ಪು ನೀಡಿತ್ತು. ಬಾಂಬೆ ನ್ಯಾಯಾಲಯದ ಪ್ರಕಾರ, 1956 ರ ಕಾಯಿದೆ ಜಾರಿಗೆ ಬರುವ ಮೊದಲು ವ್ಯಕ್ತಿ ನಿಧನರಾದರೆ ಅವನ ಮರಣದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಕಾನೂನುಗಳ ಪ್ರಕಾರ ಅವನ ಆಸ್ತಿಯನ್ನು ನೀಡಲಾಗುತ್ತದೆ. ಅಂದರೆ ಈ ಕಾನೂನಿನ ಪ್ರಕಾರ ಅದು ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಹಕ್ಕನ್ನು ಹೊಂದಿಲ್ಲ ಎಂದು ತಿಳಿಸಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications