ಕರುನಾಡ ರಾಜರತ್ನ..ಕನ್ನಡದ ಕಂದ..ಗಂಧದ ಗುಡಿಯ ಮನೆಮಗ ಎಲ್ಲರ ಪ್ರೀತಿಯ ಅಪ್ಪು. ಪುನೀತ್ ರಾಜಕುಮಾರ್ ಎಂದ ಕೂಡಲೇ ನೆನಪಾಗುವುದು ಅವರ ನಗು..ಎಲ್ಲರನ್ನೂ ನಗಿಸಿ, ನಲಿಸಿ ನಗುವನ್ನೇ ಮರೆಯಾಗಿಸಿದ ಪರಮಾತ್ಮ ಇಂದಿಗೂ ಜೀವಂತವಾಗಿದ್ದಾರೆ. ತಾವು ನಟಿಸಿದ ಸಿನಿಮಾದಲ್ಲಿನ ಉತ್ತಮ ವ್ಯಕ್ತಿತ್ವವನ್ನೇ ಮೈಗೂಡಿಸಿಕೊಂಡವರು. ಅವರಂತೆ ನಾವು ಬದುಕಬೇಕು ಎಂಬ ಆಸೆ ತೋರಿಸಿದವರು. ಸ್ಪೂರ್ತಿ ತುಂಬಿದವರು..ಅಪ್ಪು ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಆತ ಅಜಾತಶತ್ರು..ಆತನ ನಗುವನ್ನು ಮೀರಿಸಿದ ನಗು ಇನ್ನೊಂದಿಲ್ಲ. ಮಗು ಮುಖದ ನಗು ಹೊಂದಿರುವ ಪರಮಾತ್ಮ ಅಂದ್ರೇನೆ ಪವರ್..ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಇಂದು ಜೀವಂತವಾಗಿಲ್ಲದಿದ್ದರೂ ಅವರ ನೆನಪು ಮಾತ್ರ ಎಂದಿಗೂ ಜೀವಂತ.

ಹೆಸರಲ್ಲೇ ಪವರ್ ಹೊಂದಿರುವ ಪುನೀತ ಭೂಮಿಗೆ ಕಾಲಿಟ್ಟು ಇಂದಿಗೆ 50 ವರ್ಷ.. ಅವರು ಇದ್ದಿದ್ದರೆ ಈ ದಿನ ಅದ್ದೂರಿಯಾದ ಹುಟ್ಟುಹಬ್ಬ ಆಚರಣೆ ಮಾಡಬಹುದಿತ್ತು. ಆದರೆ ಅವರ ಅಭಿಮಾನಿಗಳು ಅವರ ನೆನಪಲ್ಲೇ ಅವರನ್ನು ಕಾಣುತ್ತಿದ್ದಾರೆ. ಡಾ. ಪುನೀತ್ ರಾಜ್‌ಕುಮಾರ್ ಅವರು ಮಾಡಿದ ಸ್ಪೂರ್ತಿದಾಯಕ ಕೆಲಸಗಳನ್ನು ಮುನ್ನಡೆಸಿಕೊಂಡು, ಅವರ ಅಭಿಮಾನಿಗಳು ಇಂದಿಗೂ ಅವರನ್ನು ಜೀವಂತವಾಗಿರಿಸಿದ್ದಾರೆ. ಅವರ ನೆನಪು ಎಂದೆಂದಿಗೂ ಅಜರಾಮರ.
ಗಂಧದ ಗುಡಿಯ ಮನೆಮಗ ಪುನೀತ್ ರಾಜ್‌ಕುಮಾರ್ ಅವರಿಗೆ, 2021ರ ಅಕ್ಟೋಬರ್ 29ರಂದು ಹೃದಯಾಘಾತ ಸಂಭವಿಸಿತು. ಆಗ ಇನ್ನೆಂದೂ ಊಹಿಸದ ಘಟನೆಯೂ ನಡೆಯಿತು. ಆ ದಿನ ಯಾರೂ ಅಂದುಕೊಂಡಿರಲಿಲ್ಲ ಎಲ್ಲರ ಪ್ರೀತಿಯ ಅಪ್ಪು, ಅಪ್ಪುಗೆಯ ವಿದಾಯ ಹೇಳುತ್ತಾರೆಂದು. ಅವರ ಅತಿದೊಡ್ಡ ಆಕಸ್ಮಿಕ ಮರಣವು ರಾಜ್ಯದ ಮಾತ್ರವಲ್ಲ, ದೇಶದಾದ್ಯಂತ ಭಾರಿ ಆಘಾತವನ್ನುಂಟುಮಾಡಿತು. ಅಭಿಮಾನಿಗಳು, ಚಿತ್ರರಂಗ ಮತ್ತು ಅವರು ಸೇವೆ ಸಲ್ಲಿಸಿದ ಅನೇಕ ಜನಪರ ಯೋಜನೆಗಳಿಗೆ ಇದು ದೊಡ್ಡ ನಷ್ಟವಾಗಿತ್ತು. ಇದು ಅಂದು, ಇಂದು, ಇನ್ನೆಂದೂ ಮರೆಯಲಾಗದ ಕಹಿ ಘಟನೆ ಅಂದರೂ ತಪ್ಪಾಗಲ್ಲ.
ಅಪ್ಪು ಪವರ್ ಸ್ಟಾರ್ ಆಗಿದ್ದು ಹೇಗೆ..?
ಪುನೀತ್ ರಾಜ್‌ಕುಮಾರ್ ಅವರಿಗೆ ಪವರ್ ಸ್ಟಾರ್ ಎಂಬ ಬಿರುದು ಸುಮ್ಮನೆ ಬಂದಿಲ್ಲ. ಅಷ್ಟೇ ಪವರ್ ಅವರ ಎಲ್ಲಾ ಕೆಲಸದಲ್ಲೂ ಇರುತ್ತಿತ್ತು. ಎಂಥದ್ದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸುಲಭ ಅವರಿಗೆ. ಶಕ್ತಿಯುತ ಅಭಿನಯ, ಮಿಂಚಿನಂತೆ ಡ್ಯಾನ್ಸ್ ಮಾಡುತ್ತಿದ್ರು, ಭಾವನಾತ್ಮಕ ಪಾತ್ರಗಳು, ಹಾಗೂ ಅವರ ಸರಳ ಮತ್ತು ದಾನಶೀಲ ಸ್ವಭಾವವು ಎಲ್ಲದರಲ್ಲೂ ಒಂದು ಪವರ್ ಇರುತ್ತಿತ್ತು. ಹೀಗಾಗಿ ಅವರನ್ನು ಪವರ್ ಸ್ಟಾರ್ ಎಂಬ ಬಿರುದು ನೀಡುವಂತೆ ಮಾಡಿತು. ಅಷ್ಟೇ ಅಲ್ಲ ಅವರು ಮಾಡುತ್ತಿದ್ದ ಪ್ರತಿಯೊಂದು ಸಿನಿಮಾ ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುವಂತದ್ದಾಗಿತ್ತು. ಅವರು ಮಾಡಿದ ಎಲ್ಲ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುತ್ತಿದ್ದವು. ಹೀಗಾಗಿ ಪವರ್ ಸ್ಟಾರ್ ಎಂಬುದು ಅವರಿಗೆ ಹೇಳಿ ಮಾಡಿಸಿದ ಬಿರುದಾಗಿತ್ತು.
ಅಂದರೆ ಪುನೀತ್ ರಾಜ್‌ಕುಮಾರ್ ಅವರು ಭಾರತೀಯ ಚಿತ್ರರಂಗಕ್ಕೆ ಅತ್ಯುತ್ತಮ ಸಿನಿಮಾಗಳನ್ನೇ ಕೊಡುಗೆ ನೀಡಿದರು. ಅವರ ನಟನಾ ಬದುಕಿನಲ್ಲಿ ಅತ್ಯಂತ ಉತ್ತಮ ಸಿನಿಮಾಗಳನ್ನೇ ನೀಡಿ ಪ್ರೇಕ್ಷಕರಿಗೆ ರಂಜಿಸಿದರು. ಹೀಗಾಗಿ ಅಭಿಮಾನಿಗಳು ಅವರ ಸಿನಿಮಾಗಳನ್ನು ಹುಚ್ಚೆದ್ದು ನೋಡುತ್ತಿದ್ದರು. ಸದಾ ರಾಜಕುಮಾರನಂತೆ ಬದುಕಿದರು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್.
ಇನ್ನು ಒಬ್ಬ ದೊಡ್ಡ ಸೆಲೆಬ್ರಿಟಿಯಾಗಿದ್ರೂ ಯಾವುದೇ ಅಹಂ ಇರಲಿಲ್ಲ. ಅಭಿಮಾನಿಗಳ ಮುಂದೆ ಪ್ರೀತಿಯ ಅಪ್ಪು ಆಗಿರುತ್ತಿದ್ರು.. ಅಭಿಮಾನಿಗಳು ಮನೆ ಬಾಗಿಲಿಗೆ ಬಂದರೆ ಊಟ ಮಾಡಿಸದೆ ಕಳಿಸುತ್ತಿರಲಿಲ್ಲ ಅಪ್ಪು. ಹೀಗಾಗಿ ಅಭಿಮಾನಿಗಳಲ್ಲಿ ಇದು ಅವರಲ್ಲಿ ವಿಶೇಷ ಭಾವನೆ ಮೂಡಿಸುತ್ತಿತ್ತು ಮತ್ತು ಅವರನ್ನು ಮೆಚ್ಚಿಸುತ್ತಿತ್ತು.
ಕನ್ನಡದ ಮೇರುನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಮೂರನೇ ಮಗನಾದ ಇವರು, ಚಿತ್ರರಂಗಕ್ಕೆ ಬಾಲನಟನಾಗಿಯೇ ಕಾಲಿಟ್ಟರು. ಅವರ ಯಶಸ್ಸು ಬಾಕ್ಸ್ ಆಫೀಸ್ ಉಡೀಸ್ ಮಾಡುವಂತಿತ್ತಯ. ಅವರು ನಟಿಸಿದ್ದು 49 ಚಿತ್ರಗಳಲ್ಲಿ, 100 ದಿನಗಳಿಗಿಂತ ಹೆಚ್ಚು ಪ್ರದರ್ಶನ ಕಂಡಿದ್ದು 40 ಚಿತ್ರಗಳು . ಈ ಪೈಕಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ 29 ಚಿತ್ರಗಳಲ್ಲಿ 6 ಚಿತ್ರಗಳು 100 ದಿನಗಳನ್ನು ಪೂರೈಸಲಿಲ್ಲ. ಉಳಿದ 23 ಚಿತ್ರಗಳು 100 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡವು, ಇದು ಅಭಿಮಾನಿಗಳಲ್ಲಿ ಅವರ ಅಪಾರ ಜನಪ್ರಿಯತೆಯನ್ನು ಸಾಬೀತುಪಡಿಸಿತು.
ಇನ್ನು ಕನ್ನಡದ ಕಂದ ಪುನೀತ್ ರಾಜ್‌ಕುಮಾರ್ ಅವರ ಅಗಲಿಗೆ ಇಂದಿಗೂ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಕೋಟ್ಯಂತರ ಅಭಿಮಾನಿಗಳು ಇಂದಿಗೂ ಅವರ ನೆನಪಿನಲ್ಲೇ ಕಣ್ಣೀರಿಡುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇವರ ಅಭಿಮಾನಿಗಳ ಬಳಗವಿದೆ. ವೃದ್ಧರಿಗೆ ಅಪ್ಪು ಎಂದರೆ ಅಚ್ಚು ಮೆಚ್ಚು. ಇಂದಿಗೂ ಅವರನ್ನು ನೆನೆದು ತಮ್ಮ ಮನೆ ಮಗ ಅಗಲಿದನೆಂಬ ವೇದನೆ ಪಡುವಷ್ಟು ಹತ್ತಿರ ಅವರ ನೆನಪು.
ಇನ್ನು ಅವರ ಅಕಾಲಿಕ ನಿಧನದ ನಂತರ ಸಾಕಷ್ಟು ಉತ್ತಮ ಕೆಲಸಗಳು ಬೆಳಕಿಗೆ ಬಂದವು. ಅವರ ಸಾವು ಸಾರ್ಥಕತೆಯಾಗಿತ್ತು. ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳ ಮನಸ್ಸಿನಲ್ಲಿ ಆಳವಾದ ಶೋಕವನ್ನುಂಟುಮಾಡಿತು. ಅವರ ನಿಧನದ ನಂತರ, ಸಮಾಜದಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳಾಗಿವೆ. ಪುನೀತ್ ಅವರ ನಿಧನದ ನಂತರ, ನೇತ್ರದಾನದ ಮಹತ್ವದ ಬಗ್ಗೆ ಜಾಗೃತಿ ಹೆಚ್ಚಿತು. . 30 ವರ್ಷಗಳಲ್ಲಿ 75,000 ನೇತ್ರದಾನ ಪ್ರತಿಜ್ಞೆಗಳನ್ನು ಹೊಂದಿದ್ದ ಕಣ್ಣಿನ ಬ್ಯಾಂಕ್, ಕೇವಲ ನಾಲ್ಕು ವರ್ಷಗಳಲ್ಲಿ ಸುಮಾರು 1.3 ಲಕ್ಷ ಪ್ರಮಾಣ ಪಡೆದುಕೊಂಡಿದೆ. ಅದರಲ್ಲದೆ, ಪುನೀತ್ ಅವರ ಮರಣದ ನಂತರ ಕಣ್ಣಿನ ಬ್ಯಾಂಕ್ 3,989 ಕಣ್ಣುಗಳನ್ನು ಸಂಗ್ರಹಿಸಿದೆ.
ಅಷ್ಟೇ ಅಲ್ಲ ಅವರ ಅಭಿಮಾನಿಗಳು ಮತ್ತು ಸಂಘಟನೆಗಳು ಪುನೀತ್ ಅವರ ನೆನಪಿನಲ್ಲಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಆಯೋಜಿಸುತ್ತಿದ್ದಾರೆ. ಕರ್ನಾಟಕದ ವಿವಿಧೆಡೆ ರಕ್ತದಾನ, ಅನ್ನದಾನ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳನ್ನು ಅಭಿಮಾನಿಗಳು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಪುನೀತ್ ಅವರ ನಡೆಯನ್ನೇ ಅನುಸರಿಸಿದ ಎಷ್ಟೋ ಜನರು ಇಂದಿಗೆ ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ. ಹೀಗೆ ಪುನೀತ್ ರಾಜ್‌ಕುಮಾರ್ ಎಲ್ಲದರಲ್ಲೂ ತಮ್ಮ ಪವರ್ ತೋರಿಸಿದವರು..ಅದಕ್ಕಾಗಿಯೇ ಅವರು ಎಂದಿಗೂ ಪವರ್ ಸ್ಟಾರ್.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications