ತನ್ನ ಅಧಿಕಾರಿಗಳಿಗೆ ದುಬಾರಿ ಬೆಲೆಯ ಕಾರ್‌ಗಳನ್ನು ಒದಗಿಸಿದ ಪಿಎನ್‌ಬಿ

ನವದೆಹಲಿ, ಜೂನ್ 10: ಲಾಕ್‌ಡೌನ್ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಉನ್ನತ ಅಧಿಕಾರಿಗಳಿಗೆ ದುಬಾರಿ ಬೆಲೆಯ ಮೂರು ಆಡಿ ಕಾರುಗಳನ್ನು ನೀಡಿ ಗಮನ ಸೆಳೆದಿದೆ.

ಬ್ಯಾಂಕ್‌ನ ಎಂಡಿ ಮತ್ತು ಇಬ್ಬರು ಹಿರಿಯ ನಿರ್ದೇಶಕರಿಗೆ ಈ ಕಾರುಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಖರೀದಿಸಿರುವ ಈ ಮೂರೂ ಆಡಿ ಕಾರುಗಳ ಅಂದಾಜು ಮೌಲ್ಯ ಸುಮಾರು 1.34 ಕೋಟಿ ರುಪಾಯಿ ಇದೆ ಎನ್ನಲಾಗಿದೆ.

ನೀರವ್ ಮೋದಿ ವಂಚನೆ ಪ್ರಕರಣದ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ದೇಶದ ಸಂಕಷ್ಟದ ಸಮಯದಲ್ಲಿ ತನ್ನ ಅಧಿಕಾರಿಗಳಿಗೆ ದುಬಾರಿ ಕಾರು ನೀಡಿ ಸುದ್ದಿಯಾಗಿದೆ.

ತನ್ನ ಅಧಿಕಾರಿಗಳಿಗೆ ದುಬಾರಿ ಬೆಲೆಯ ಕಾರ್‌ಗಳನ್ನು ಒದಗಿಸಿದ ಪಿಎನ್‌ಬಿ

ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತ ಮಂಡಳಿ ಬಳಕೆಯಾಗದ ನಿಧಿಯನ್ನು ದುಬಾರಿ ಕಾರು ಖರೀದಿಗೆ ಬಳಸಿ ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ, ಈ ದುಬಾರಿ ಕಾರುಗಳ ಖರೀದಿಗೆ ಬ್ಯಾಂಕ್ ನ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು, ಬ್ಯಾಂಕ್ ನ ಅನುಪಯೋಗ ಬಜೆಟ್ ನಲ್ಲಿ ಮಿಕ್ಕ ಹಣದಿಂದ ಈ ಕಾರುಗಳನ್ನು ಖರೀದಿ ಮಾಡಲಾಗಿದೆ ಎನ್ನಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+