ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ, ಡೆಬಿಟ್ ಕಾರ್ಡ್‌ನಿಂದ ಗಳಿಸಿರುವುದು ಎಷ್ಟು ಗೊತ್ತಾ?

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2019-20ರ ಆರ್ಥಿಕ ವರ್ಷದಲ್ಲಿ ಎಟಿಎಂ ವಹಿವಾಟು ಶುಲ್ಕ ಮತ್ತು ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕವಾಗಿ ಸುಮಾರು 268 ಕೋಟಿ ರು ಗಳಿಸಿದೆ.

ಮಧ್ಯಪ್ರದೇಶ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಮಾಹಿತಿ ಹಕ್ಕುಗೆ ಬ್ಯಾಂಕ್ ಉತ್ತರಿಸಿದೆ.

ಡೆಬಿಟ್ ಕಾರ್ಡ್‌ಗಳಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸುವ ಮೂಲಕ ಗ್ರಾಹಕರಿಂದ 152.88 ಕೋಟಿ ರು ಎಟಿಎಂ ವಹಿವಾಟಿಗೆ ಶುಲ್ಕ ವಿಧಿಸುವ ಮೂಲಕ 115.21 ಕೋಟಿ ರು ಗಳಿಸಿರುವು ತಿಳಿದು ಬಂದಿದೆ.

ವರ್ಷಕ್ಕೆ 150 ರೂ ಜೊತೆಗೆ ತೆರಿಗೆಗಳು ಕ್ಲಾಸಿಕ್, ಪ್ಲಾಟಿನಂ ಮತ್ತು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳಿಗೆ ವಿಧಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ, ಮುದ್ರಾ , ಪಿಎಂಜೆಡಿವೈ ಮತ್ತು ಇತರ ಸರ್ಕಾರಿ ಯೋಜನೆಗಳ ಅಡಿಯಲ್ಲಿ ನೀಡಲಾದ ಕಾರ್ಡ್‌ಗಳಿಗೆ ಯಾವುದೇ ಚಾರ್ಜ್ ಮಾಡುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಕನಿಷ್ಠ ಮೊತ್ತ ಕಾಪಾಡಿಕೊಳ್ಳದವರಿಗೆ ದಂಡ ವಿಧಿಸುವ ಅವಕಾಶ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂಗಳಿಂದ ಗಳಿಸಿದ್ದೆಷ್ಟು?

ಇದೇ ವೇಳೆ 2020 ರ ಏಪ್ರಿಲ್ ಅಂತ್ಯದ ವೇಳೆಗೆ ಖಾಲಿ ಇರುವ ಹುದ್ದೆಗಳು ಮತ್ತು ಎಷ್ಟು ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲು ಬ್ಯಾಂಕ್ ನಿರಾಕರಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+