ಭಾರತದ ಐಷಾರಾಮಿ ವಸತಿ ಮಾರ್ಕೆಟ್ ನಲ್ಲಿ ಬೇಡಿಕೆ ಏರಿಕೆ ಹಾದಿಯಲ್ಲಿ ಸಾಗುತ್ತಿದ್ದು ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಷಾರಾಮಿ ಮನೆಗಳ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗಿದೆ ಎಂಬ ಸುದ್ದಿ ನೀವು ಓದಿರಬಹುದು. ಸದ್ಯ ವಿಚಾರ ಏನಪ್ಪಾ ಅಂದ್ರೆ ಬೆಂಗಳೂರಿನ ರಿಯಲ್ ಎಸ್ಟೇಟ್ ಹಾಟ್ ಟಾಪಿಕ್ ಆಗಿರೋರು ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಪುರವಂಕರ ಲಿಮಿಟೆಡ್ ಸಂಸ್ಥೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡ ವಿಚಾರ.!
ಹೌದು ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇದೊಂದು ದೊಡ್ಡ ಒಪ್ಪಂದವಾಗಿದ್ದು, ಬೆಂಗಳೂರಿನ ಕನಕಪುರ ರಸ್ತೆಯಲ್ಲಿ 3.63 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಒಟ್ಟು ಅಭಿವೃದ್ಧಿ ಮೌಲ್ಯ ₹ 700 ಕೋಟಿ ಎಂದು ಕಂಪನಿ ಜನವರಿ 9 ರಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪುರವಂಕರ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿರುವ ಜಮೀನು ಕನಕಪುರ ರಸ್ತೆಯ ವಾಜರಹಳ್ಳಿಯಲ್ಲಿದ್ದುಇದು 5.42 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

ಕಳೆದ ಹತ್ತು ವರ್ಷಗಳಿಗೆ ಹೋಲಿಸಿದ್ರೆ ವ್ಯಾಪಕವಾಗಿ ಕನಕಪುರ ಅಭಿವೃದ್ದಿ ಕಾಣುತ್ತಿರುವ ಕನಕಪುರ, ಬೆಂಗಳೂರಿಗೂ ಅಣತಿ ದೂರದಲ್ಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ಒಲವುಳ್ಳ ಪ್ರದೇಶ ಇದಾಗಿರುವುದರ ಜೊತೆಗೆ ಬೆಂಗಳೂರಿನ ಎರಡನೇ ಏರ್ಪೋರ್ಟ್ ನಿರೀಕ್ಷೆ, ಮೆಟ್ರೋ ವಿಸ್ತರಣೆ ನಿರೀಕ್ಷೆ, ಪೆರಿಫೆರಲ್ ರಿಂಗ್ ರೋಡ್, ಕೃಷ್ಣ ಲೀಲಾ ಥೀಮ್ ಪಾರ್ಕ್, ಪ್ರವಾಸೋಧ್ಯಮ ಕೇಂದ್ರಗಳ ಅಭಿವೃದ್ದಿ ಇತ್ಯಾದಿ ಕನಕಪುರ ವ್ಯಾಪ್ತಿಯಲ್ಲಿ ಭೂಮಿಗೆ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು ಇಲ್ಲಿನ ಭೂಮಿಗೆ ಬೇಡಿಕೆಯೂ ಜೋರಾಗಿದೆ.
ಪುರವಂಕರ ಸ್ವಾಧೀನಪಡಿಸಿಕೊಂಡ ಕನಕಪುರ ರಸ್ತೆಯಲ್ಲಿ ಪ್ರಮುಖ ಸ್ಥಳದಲ್ಲಿರುವ ಈ ಭೂಮಿ ಪ್ರಮುಖ ಸ್ಥಳದಲ್ಲಿದ್ದು, ಉತ್ತಮ ರಸ್ತೆ ಸಂಪರ್ಕ ಮತ್ತು ಇದು ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ತಲಘಟ್ಟಪುರ ಮೆಟ್ರೋ ನಿಲ್ದಾಣದಿಂದ 1 ಕಿಮೀ ದೂರದಲ್ಲಿದೆ. ಸುಸಜ್ಜಿತ ವಸತಿ ಮತ್ತು ವಾಣಿಜ್ಯ ಕೇಂದ್ರವಾಗಿರುವ ಜೆ.ಪಿ.ನಗರದಿಂದ ಸುಮಾರು 7 ಕಿ.ಮೀ ದೂರದಲ್ಲಿದೆ.
"ಪ್ರಮುಖ ಪ್ರದೇಶದಲ್ಲಿರುವ ಸ್ವಾಧೀನಪಡಿಸಿಕೊಂಡ ಭೂಮಿ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಇದ್ದು ಮತ್ತು ಅಭಿವೃದ್ಧಿಗೆ ಕಡಿಮೆ ಭೂಮಿ ಲಭ್ಯತೆಯಿರುವ ಒಂದು ಪ್ರಮುಖ ಮಾರುಕಟ್ಟೆಯಲ್ಲಿ ತಂತ್ರಾತ್ಮಕವಾಗಿ ನೆಲೆಗೊಂಡಿದೆ. ಉತ್ತಮ ಸಂಪರ್ಕ ಮತ್ತು ಸುಸಜ್ಜಿತ ಮೂಲಸೌಕರ್ಯಗಳಿಂದಾಗಿ, ಇದು ಪ್ರೀಮಿಯಂ ವಸತಿ ಅಭಿವೃದ್ಧಿಗೆ ಉತ್ತಮ ಅವಕಾಶವನ್ನು ಹೊಂದಿದೆ. ಅನುಕೂಲಕರ ಬೇಡಿಕೆ-ಪೂರೈಕೆ ಪರಿಸ್ಥಿತಿಗಳೊಂದಿಗೆ ಸೀಮಿತ ಸ್ಥಳಗಳಲ್ಲಿ ನಮ್ಮ ಭೂಮಿ ಬ್ಯಾಂಕ್ ಅನ್ನು ಪುನರ್ಭರ್ತಿ ಮಾಡಲು ನಮ್ಮ ವ್ಯವಹಾರ ಅಭಿವೃದ್ಧಿಯ ಮೇಲೆ ನಾವು ನಿರಂತರವಾಗಿ ಗಮನ ಹರಿಸುತ್ತೇವೆ" ಎಂದು ಪುರವಂಕರ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಶಿಶ್ ಪುರವಂಕರ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ 2026 ರ ವೇಳೆಗೆ ಒಟ್ಟು 45 ಮಿಲಿಯನ್ ಚದರ ಅಡಿಗಳನ್ನು ಸಾಧಿಸಲು ಪುರವಂಕರ ಲಿಮಿಟೆಡ್ ತನ್ನ ಲ್ಯಾಂಡ್ ಬ್ಯಾಂಕ್ ಅನ್ನು ಬಲಪಡಿಸಲು ನೋಡುತ್ತಿದೆ ಎಂದು ಗುಂಪಿನ ಮುಖ್ಯ ಕಾರ್ಯನಿರ್ವಾಹಕ ಅಭಿಷೇಕ್ ಕಪೂರ್ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.
ಮುಂದೆ, ಕಂಪನಿಯು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವತ್ತ ಗಮನಹರಿಸಲಿದೆ. ಮುಂಬೈನಲ್ಲಿ, ಕಪೂರ್ ಅವರು ಪುರವಂಕರ ಗಮನವು ಪುನರಾಭಿವೃದ್ಧಿ ಯೋಜನೆಗಳ ಮೇಲೆ ಮುಂದುವರಿಯುತ್ತದೆ ಎಂದು ಹೇಳಿದ್ದರು.
ಕನಕಪುರ ರಸ್ತೆಯುದ್ದಕ್ಕೂ ತಲೆ ಎತ್ತುತ್ತಿದೆ ರಿಯಲ್ ಎಸ್ಟೇಟ್ ಯೋಜನೆಗಳು
ದಕ್ಷಿಣ ಬೆಂಗಳೂರಿನ ಐಟಿ ಕಾರಿಡಾರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಯಿಂದ ಸುಮಾರು 30 ನಿಮಿಷಗಳ ದೂರದಲ್ಲಿರುವ ಕನಕಪುರ ರಸ್ತೆ ಪ್ರಮುಖ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ನಗರದ ಹೊರವಲಯಕ್ಕೆ ವಿಸ್ತರಿಸುತ್ತದೆ. ಕನಕಪುರ ರಸ್ತೆಯಲ್ಲಿ ಕಚೇರಿಗಳನ್ನು ಹೊಂದಿರುವ ಕಂಪನಿಗಳಲ್ಲಿ ಇನ್ಫೋಸಿಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಸೇರಿವೆ.
ಕನಕಪುರ ರಸ್ತೆಯು ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದು ಇದು ಬೆಂಗಳೂರಿಗೆ ಹೋಲೀಸಿದರೆ ಇಲ್ಲಿ ತುಲನಾತ್ಮಕವಾಗಿ ಕಡಿಮೆ ವೆಚ್ಚದಾಯಕವಾಗಿದೆ. ಜೊತೆಗೆ ಇಲ್ಲಿ ಅಭಿವೃದ್ದಿಯಾಗುತ್ತಿರುವ ಹಲವಾರು ಮೂಲಸೌಕರ್ಯ ಯೋಜನೆಗಳಿಂದ ಡೆವಲಪರ್‌ಗಳು ಮತ್ತು ಮನೆ ಖರೀದಿದಾರರಿಗೆ ನೆಚ್ಚಿನ ಆಯ್ಕೆಯಾಗಿ ಪರಿಣಮಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications