ಬೆಂಗಳೂರು, ಜುಲೈ 7: ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಮೇಲೆ ಶೀಘ್ರದಲ್ಲೇ ಕ್ಯೂಆರ್ ಕೋಡ್ ನಮೂದಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಈ ಕ್ರಮದಿಂದಾಗಿ ಅಡುಗೆ ಅನಿಲ ಪೂರೈಕೆ, ಸಿಲಿಂಡರ್ ಗಳ ಟ್ರ್ಯಾಕಿಂಗ್, ಕಳ್ಳತನ ಮತ್ತು ಎಜೆನ್ಸಿಗಳ ದಾಸ್ತಾನು ನಿರ್ವಹಣೆಯಲ್ಲಿ ಅಕ್ರಮಗಳನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ತಿಳಿಸಿದೆ.
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಆಯೋಜಿಸಿದ್ದ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ವಿಚಾರವನ್ನು ಹೇಳಿದ್ದಾರೆ.

ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯ (PESO) ಕಾರ್ಯನಿರ್ವಹಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪೆಟ್ರೋಲಿಯಂ, ಎಕ್ಸ್ ಪ್ಲೋಸಿವ್, ಪಟಾಕಿತಯಾರಕರ ಸಂಘದ ನಾಯಕ ಒಳನೋಟಗಳು ಮತ್ತು ಪ್ರತಿಕ್ರಿಯೆ ಕುರಿತಂತೆ ಮಧ್ಯಸ್ಥಗಾರರ ಸಮಾಲೋಚನೆಗಾಗಿ ಈ ಸಭೆಯನ್ನು ಆಯೋಜಿಸಲಾಗಿತ್ತು.
ಸಿಲಿಂಡರ್‌ಗಳ ಕ್ಯೂಆರ್ ಕೋಡ್ ಬಗ್ಗೆ ಕರಡು ಗ್ಯಾಸ್ ಸಿಲಿಂಡರ್ ನಿಯಮಗಳಲ್ಲಿ (ಜಿಸಿಆರ್) ಸೇರ್ಪಡೆಗೊಳಿಸಲಾಗಿದ್ದು, ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರತರಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ ಸಚಿವರು ತಿಳಿಸಿದ್ದಾರೆ.
ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (PESO), DPIIT ಅಡಿಯಲ್ಲಿ ಅಧೀನ ಕಚೇರಿಯಾಗಿದ್ದು, ಸ್ಫೋಟಕಗಳ ಕಾಯಿದೆ, 1884 ಮತ್ತು ಪೆಟ್ರೋಲಿಯಂ ಕಾಯಿದೆ , 1934 ರ ಅಡಿಯಲ್ಲಿ ಸ್ಥಾಪಿಸಲಾದ ನಿಯಂತ್ರಕ ಚೌಕಟ್ಟುಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದೇ ವೇಳೆ ಸಚಿವರು ಮಹಿಳಾ ಉದ್ಯಮಿಗಳಿಗೆ 80 ರಷ್ಟು ಮತ್ತು MSMEಗಳಿಗೆ 50ರಷ್ಟು ಪರವಾನಗಿ ಶುಲ್ಕದಲ್ಲಿ ರಿಯಾಯಿತಿಯನ್ನು ಘೋಷಿಸಿದರು.
ಕ್ಯೂಆರ್ ಕೋಡ್‌ನಿಂದ ಹೇಗೆ ಪ್ರಯೋಜನವಾಗಲಿದೆ?
ಗ್ಯಾಸ್ ಸಿಲಿಂಡರ್‌ನಲ್ಲಿ ಕ್ಯೂಆರ್ ಕೋಡ್ ಅಳವಡಿಸಿದಾಗ ಅದರ ಇದರ ಟ್ರ್ಯಾಕಿಂಗ ಸರಳವಾಗಲಿದೆ. ಒಂದು ವೇಳೆ ಸಿಲಿಂಡರ್‌ನಲ್ಲಿ ಗ್ಯಾಸ್ ಕಡಿಮೆಯಾಗಿದೆ ಎಂಬ ದೂರು ಬಂದರೆ, ಅದು ಯಾವ ಡೀಲರ್‌ನಿಂದ ಬಂದಿದೆ ಎಂದು ಸಾಬೀತುಪಡಿಸುವುದು ಕಷ್ಟವಾಗಿತ್ತು. ಒಂದು ವೇಳೆ ಯಾವ ಡೀಲರ್ ಪತ್ತೆಯಾದರೂ, ಆ ಸಿಲಿಂಡರ್ ಅನ್ನು ಯಾವ ಡೆಲಿವರಿ ಮ್ಯಾನ್ ವಿತರಿಸಿದರು ಎಂಬುದನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಸಿಲಿಂಡರ್ ಮೇಲೆ ಕ್ಯೂಆರ್ ಕೋಡ್ ಹಾಕಿದರೆ ಕ್ಷಣಾರ್ಧದಲ್ಲಿ ಎಲ್ಲವೂ ಟ್ರ್ಯಾಕ್ ಆಗುತ್ತದೆ. ಇದಲ್ಲದೇ ಯಾವ ಸಿಲಿಂಡರ್ ನಲ್ಲಿ ಎಷ್ಟು ಬಾರಿ ರೀಫಿಲಿಂಗ್ ಮಾಡಲಾಗಿದೆ ಎಂಬುದೂ ತಿಳಿಯಲಿದೆ. ಇದರೊಂದಿಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆಯೇ ಎಂಬುವುದನ್ನು ಇನ್ಮುಂದೆ ಪತ್ತೆ ಮಾಡಬಹುದಾಗಿದೆ.


Click it and Unblock the Notifications