ಉದ್ಯಮಿ ರಾಧಾಕಿಶನ್ ದಮಾನಿ ನೇತೃತ್ವದ ಡಿಮಾರ್ಟ್ ಹಣಕಾಸು ವರ್ಷ 2024 ರ ಸೆಪ್ಟೆಂಬರ್ ತ್ರೈಮಾಸಿಕದ ವರದಿಯನ್ನು ಪ್ರಕಟಿಸಿದೆ. ಡಿಮಾರ್ಟ್ 623.35 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 9.09 ರಷ್ಟು ಕುಸಿತವನ್ನು ಕಂಡಿದೆ. ತೆರಿಗೆ ಬಳಿಕದ ಲಾಭವು ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ಏರಿಕೆಯಾಗಿದೆ.
ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದಲ್ಲಿ ಲಾಭವು ಶೇಕಡ 6.4 ರಷ್ಟಿದ್ದರೆ, ಇದು ಹಣಕಾಸು ವರ್ಷದ 2024 ರ ಎರಡನೇ ತ್ರೈಮಾಸಿಕದಲ್ಲಿ ಶೇಕಡ 4.9 ಕ್ಕೆ ಕುಸಿತವಾಗಿದೆ. ತೆರಿಗೆ ಬಳಿಕದ ಲಾಭವು ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ 686 ಕೋಟಿ ರೂಪಾಯಿ ಆಗಿದೆ.

ಇಬಿಐಟಿಡಿಎ ಈ ಹಿಂದಿನ ತ್ರೈಮಾಸಿಕದಲ್ಲಿ 892 ರೂಪಾಯಿ ಆಗಿತ್ತು. ಆದರೆ ಈ ತ್ರೈಮಾಸಿಕದಲ್ಲಿ 1,005 ಕೋಟಿ ರೂಪಾಯಿ ಆಗಿದೆ. ಇನ್ನು ಇಬಿಐಟಿಡಿಎ ಮಾರ್ಜಿನ್ ಹಣಕಾಸು ವರ್ಷ 2024 ರಲ್ಲಿ ಶೇಕಡ 8.0 ಆಗಿದೆ. ಈ ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಶೇಕಡ 8.4 ಆಗಿದೆ.
ಈ ನಡುವೆ ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ಕ್ರೋಢೀಕೃತ ಆದಾಯವು 12,624.37 ಕೋಟಿ ರೂಪಾಯಿಗಳಷ್ಟಾಗಿದೆ. ಇದು ಒಂದು ವರ್ಷದ ಹಿಂದೆ 10.638.33 ಕೋಟಿ ರೂಪಾಯಿ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 18.66 ರಷ್ಟು ಏರಿಕೆಯಾಗಿದೆ. ಇಪಿಎಸ್ Q2FY24 ರಲ್ಲಿ 9.58 ರೂಪಾಯಿ ಆಗಿದ್ದು, Q2FY23 ರಲ್ಲಿ 10.58 ರೂಪಾಯಿ ಆಗಿತ್ತು.
"ಕಳೆದ ವರ್ಷದ ಅನುಗುಣವಾದ ತ್ರೈಮಾಸಿಕಕ್ಕೆ ಹೋಲಿಸಿದರೆ Q2FY2024 ಶೇಕಡ 18.5 ರಷ್ಟು ಆದಾಯದ ಬೆಳವಣಿಗೆ ಉಂಟಾಗಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ನಮ್ಮ ಈ ವರ್ಷದ ಮಾರ್ಜಿನ್ ಕಡಿಮೆಯಾಗುತ್ತಲೇ ಇದೆ. ತ್ರೈಮಾಸಿಕದಲ್ಲಿ ನಾವು 9 ಹೊಸ ಮಳಿಗೆಗಳನ್ನು ತೆರೆದಿದ್ದೇವೆ. ನಮ್ಮ ಒಟ್ಟು ಮಳಿಗೆಗಳ ಸಂಖ್ಯೆಯು 336 ಕ್ಕೆ ಏರಿಕೆಯಾಗಿದೆ," ಎಂದು ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ನೆವಿಲ್ಲೆ ನೊರೊನ್ಹಾ ಹೇಳಿದರು.
ಡಿಮಾರ್ಟ್ Q1FY24 ರಲ್ಲಿ Rs 659 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 730 ಕೋಟಿ ರೂಪಾಯಿಯ ನಿವ್ವಳ ಲಾಭಕ್ಕಿಂತ ಇದು ಕಡಿಮೆಯಾಗಿದೆ. Q2FY23 ರಲ್ಲಿ ಶೇಕಡ 7.0 ಕ್ಕೆ ಹೋಲಿಕೆ ಮಾಡಿದರೆ Q2FY24 ರಲ್ಲಿ ತೆರಿಗೆ ಬಳಿಕ ಲಾಭ ಮಾರ್ಜಿನ್ ಶೇಕಡ 5.3 ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10,385 ಕೋಟಿ ರೂಪಾಯಿಗೆಗೆ ಹೋಲಿಸಿದರೆ ಮೊದಲ ತತ್ರೈಮಾಸಿಕದಲ್ಲಿ ಆದಾಯವು 12,308 ಕೋಟಿ ರೂಪಾಯಿ ಆಗಿದೆ.
ಡಿಮಾರ್ಟ್ ಸಂಸ್ಥೆಯ ಬಗ್ಗೆ ಮಾಹಿತಿ
ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್ ಮುಂಬೈ ಮೂಲದ ಕಂಪನಿಯಾಗಿದ್ದು, ಡಿ-ಮಾರ್ಟ್ ಮಳಿಗೆಗಳನ್ನು ಹೊಂದಿದೆ, ಮತ್ತು ನಿರ್ವಹಿಸುತ್ತದೆ. ಡಿ-ಮಾರ್ಟ್ ರಾಷ್ಟ್ರೀಯ ಸೂಪರ್‌ಮಾರ್ಕೆಟ್ ಆಗಿದ್ದು, ಕಂಪನಿಯು ಆಹಾರಗಳು, ಆಹಾರೇತರ ಮತ್ತು ಸಾಮಾನ್ಯ ಸರಕು ಮತ್ತು ಉಡುಪು ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ಕಂಪನಿಯು 2002 ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆಯಿತು. ಸೆಪ್ಟೆಂಬರ್ 30, 2023 ರ ಹೊತ್ತಿಗೆ, ಕಂಪನಿಯು ಮಹಾರಾಷ್ಟ್ರ, ಗುಜರಾತ್, ದಮನ್, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಎನ್‌ಆರ್‌ಸಿ, ಛತ್ತೀಸ್‌ಗಢ, ಪಂಜಾಬ್, ತೆಲಂಗಾಣದಲ್ಲಿ 13.9 ಮಿಲಿಯನ್ ಚದರ ಅಡಿ ರಿಟೇಲ್ ವ್ಯಾಪಾರ ಪ್ರದೇಶದೊಂದಿಗೆ 336 ಆಪರೇಟಿಂಗ್ ಸ್ಟೋರ್‌ಗಳನ್ನು ಹೊಂದಿದೆ.


Click it and Unblock the Notifications