ನವದೆಹಲಿ, ಆಗಸ್ಟ್ 8: ಉದ್ಯಮ ಜಗತ್ತು ಅಂದ್ರೆ ಅಲ್ಲಿ ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯದ ಕ್ಷೇತ್ರ ಅಂದ್ರೆ ತಪ್ಪಾಗಲಾರದು. ಆದರೆ ಒಂದಷ್ಟು ಮಹಿಳಾಮಣಿಗಳು ಉದ್ಯಮಿಗಳಾಗಿ ಅವರು ಸಾಧನೆಯ ಶಿಖರವೇರಿದಾಗ ಈ ಕ್ಷೇತ್ರಕ್ಕೆ ಸ್ತ್ರೀಯರ ಪಾಲು ಇದೆ ಎನ್ನುವುದು ಸ್ಪಷ್ಟವಾಗುತ್ತಾದೆ. ಫಲ್ಗುಣಿ ನಾಯರ್, ಕಿರಣ್ ಮಜುಂದಾರ್ ಇಂತಹ ಅನೇಕ ಮಹಿಳೆಯರು ವ್ಯವಹಾರದ ಮಾಲೀಕಿಯರಾಗಿ ಯಶಸ್ವಿಯಾಗಿದ್ದು ಈ ಮೂಲಕ ಮತ್ತಷ್ಟು ಯುವತಿಯರಿಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಇಂತಹ ಸಾಲಿನಲ್ಲಿ ನಿಲ್ಲುವವರು ರಾಧಿಕಾ ಘಾಯ್ ಅಗರ್ವಾಲ್. ಯುವ ವಾಣಿಜ್ಯೋಧ್ಯಮಿಯಾಗಿರುವ ರಾಧಿಕಾ "ಯುನಿಕಾರ್ನ್ ಕ್ಲಬ್" ಅನ್ನು ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. "ಶಾಪ್‌ಕ್ಯೂಲ್ಸ್"ನೊಂದಿಗೆ, ಅವರು ಇ-ಕಾಮರ್ಸ್ ಉದ್ಯಮದಲ್ಲಿ ಕ್ರಾಂತಿಯನ್ನು ಮಾಡಿದ್ದು ಮಾತ್ರವಲ್ಲದೆ ಅಸಂಖ್ಯಾತ ಮಹಿಳೆಯರಿಗೆ ತಮ್ಮ ಉದ್ಯಮಶೀಲತೆಯ ಕನಸುಗಳನ್ನು ಬೆನ್ನತ್ತಲು ಪ್ರೇರಕರಾಗಿದ್ದಾರೆ.

ಇಂದು ರಾಧಿಕಾ ಘಾಯ್ ಭಾರತದ ಉದ್ಯಮ ಕ್ಷೇತ್ರದಲ್ಲಿ ಅಳಿಸಲಾಗದ ಗುರುತು ಸೃಷ್ಟಿಸಿದ್ದಾರೆ. ಇಲ್ಲಿಗೆ ನಿಲ್ಲದ ರಾಧಿಕಾ "ಕೈಂಡ್‌ಲೈಫ್" ನೂತನ ಸಹಸೋದ್ಯಮವಾದ ಮೂಲಕ ವ್ಯಾಪಾರ ಜಗತ್ತಿನಲ್ಲಿ ಮತ್ತೊಂದು ನವೀನತೆ ಮತ್ತು ಧನಾತ್ಮಕ ಬದಲಾವಣೆಯನ್ನು ಸೃಷ್ಟಿಸುವುದನ್ನು ಮುಂದುವರೆಸಿದ್ದಾರೆ.
ಉದ್ಯಮಿ ರಾಧಿಕಾ ಘಾಯ್, ಯುನಿಕಾರ್ನ್ ಕ್ಲಬ್‌ಗೆ ಸೇರಿದ ಭಾರತದ ಮೊದಲ ಮಹಿಳೆ. ಅವರ ಉದ್ಯಮ ಆನ್‌ಲೈನ್ ಮಾರುಕಟ್ಟೆಯ ಮೌಲ್ಯಮಾಪನವು $1.1 ಶತಕೋಟಿಗೆ ಏರಿದ ನಂತರ ಅವರು ಮೊದಲ ಭಾರತೀಯ ಮಹಿಳೆಯಾಗಿ ಎಲೈಟ್ ಯುನಿಕಾರ್ನ್ ಕ್ಲಬ್‌ಗೆ ಸೇರಿದ್ದಾರೆ. ಈ ಸಾಧನೆಯು ಅವರ ಉದ್ಯಮಶೀಲತೆಯ ಪರಾಕ್ರಮವನ್ನು ಎತ್ತಿ ತೋರಿಸುತ್ತದೆ ಮಾತ್ರವಲ್ಲದೆ ಭಾರತೀಯ ವ್ಯಾಪಾರ ಪರಿಸರ ವ್ಯವಸ್ಥೆಯಲ್ಲಿ ಮಹತ್ವಾಕಾಂಕ್ಷೆಯ ಮಹಿಳೆಯರಿಗೆ ಸ್ಫೂರ್ತಿಯಾಗಿದೆ..
ರಾಧಿಕಾ ಆರ್ಮಿ ಕುಟುಂಬದಲ್ಲಿ ಬೆಳೆದವರು, ತಮ್ಮ ತಂದೆ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದನ್ನು ನೋಡಿದ ಅವರಿಗೆ ಇದೇ ಮುಂದೆ ಪ್ರೇರಕ ಶಕ್ತಿಯಾಯಿತು. 1997 ರಲ್ಲಿ ಚಂಡೀಗಢದಲ್ಲಿ ತಮ್ಮದೇ ಆದ ಜಾಹೀರಾತು ಏಜೆನ್ಸಿಯನ್ನು ಸ್ಥಾಪಿಸಿದ ಅವರು, ತಮ್ಮದೇ ಆದ ಮಾರ್ಗದಲ್ಲಿ ಮಿಂಚುವ ಪಯಣ ಆರಂಭಿಸಿದರು. ಇಷ್ಟಕ್ಕೆ ನಿಲ್ಲದ ರಾಧಿಕಾ ಮತ್ತಷ್ಟು ಬೆಳಯಬೇಕು ಎಂಬ ಗುರಿಯೊಂದಿಗೆ ಸೇಂಟ್ ಲೂಯಿಸ್‌ನ ವಾಷಿಂಗ್‌ಟನ್ ವಿಶ್ವವಿದ್ಯಾಲಯದಿಂದ MBA ಪದವಿ ಪಡೆದುಕೊಂಡರು. ಇದಾದ ಬಳಿಕ ಸಿಯಾಟಲ್‌ನಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ನಾರ್ಡ್‌ಸ್ಟ್ರಾಮ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದರು. ಇ-ಕಾಮರ್ಸ್, ಫ್ಯಾಷನ್, ರಿಟೇಲ್ ವ್ಯವಹಾರ ಮತ್ತು ಲೈಫ್ ಸೈಲ್ ನಲ್ಲಿ ಅವರ ವೈವಿಧ್ಯಮಯ ಅನುಭವವು ಅವರ ಉದ್ಯಮಶೀಲತೆಯ ಆಕಾಂಕ್ಷೆಗಳ ತಳಹದಿಯನ್ನು ರೂಪಿಸುವಲ್ಲಿ ಯಶಸ್ವಿಯಾಯಿತು.
2011 ರಲ್ಲಿ ಸಂದೀಪ್ ಅಗರವಾಲ್, ಸಂಜಯ್ ಸೇಥಿ ಮತ್ತು ರಾಧಿಕಾ ಘಾಯ್ ಈ ಮೂವರು ಶಾಪ್ ಕ್ಲೂಸ್ ಅನ್ನು ಸ್ಥಾಪಿಸಿ ಅಲ್ಲಿ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ಅಲಂಕರಿಸಿದರು. ಭಾರತೀಯ ಮಾರುಕಟ್ಟೆಗಳನ್ನು ಆನ್‌ಲೈನ್‌ಗೆ ತರುವ ಮತ್ತು ನಗರಗಳಲ್ಲಿ ಗ್ರಾಹಕರಿಗೆ ಸೇವೆ ನೀಡುವ ಗುರಿಯೊಂದಿಗೆ ShopClues ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು. 2016 ರಲ್ಲಿ ಯುನಿಕಾರ್ನ್ ಸ್ಥಾನಮಾನವನ್ನು ಸಾಧಿಸುವ ಮೂಲಕ, ಇವರ ಉದ್ಯಮ ಭಾರತದಲ್ಲಿ ನಾಲ್ಕನೇ ಯುನಿಕಾರ್ನ್ ಆಗಿ ಮಾರ್ಪಟ್ಟಿತು ಮತ್ತು ಇ-ಕಾಮರ್ಸ್ ವಲಯದಲ್ಲಿ ನಾವಿನ್ಯತೆಯ ಮೂಲಕ ಘಾಯ್ ಅವರ ಸ್ಥಾನಮಾನವನ್ನು ಭದ್ರಪಡಿಸಿತು.
ಬ್ಯೂಟಿ ಆಂಡ್ ವೆಲ್ ನೆಸ್ ಉದ್ಯಮದಲ್ಲಿ ಇರುವ ದೊಡ್ಡ ಅವಕಾಶವನ್ನು ಅರಿತುಕೊಂಡು ತಮ್ಮ ಮುಂದಿನ ವ್ಯಾಪಾರ ಪ್ರಯತ್ನವಾದ ಕೈಂಡ್‌ಲೈಫ್ ಅನ್ನು ಪ್ರಾರಂಭಿಸಿದ್ರು. ರಾಧಿಕಾ ಘಾಯ್ ಅಗರ್ವಾಲ್ ಅವರು 2024 ರ ವೇಳೆಗೆ117.95 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದು, ತಮ್ಮ ಉದ್ಯಮವನ್ನು ಯುನಿಕಾರ್ನ್ ಕ್ಲಬ್ ಗೆ ಕೊಂಡೊಯ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಮಾತ್ರವಲ್ಲದೇ ಈ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಪ್ರತಿಷ್ಠಿತ "ಪ್ರಥಮ ಮಹಿಳೆ" ಪ್ರಶಸ್ತಿಯನ್ನು ಗಳಿಸಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications