ಬೆಂಗಳೂರು, ಸೆಪ್ಟೆಂಬರ್ 23: ಹಬ್ಬಗಳ ಸೀಸನ್ ಶುರುವಾಗಿದೆ.ಇದಕ್ಕಾಗಿ ರೈಲ್ವೇ ಸಚಿವಾಲಯವೂ ಸಿದ್ದವಾಗಿದೆ. ಹೆಚ್ಚು ರೈಲುಗಳನ್ನು ಪ್ರಯಾಣಿಕರ ಒಡಾಟಕ್ಕೆ ಒದಗಿಸಿಕೊಡುವುದರ ಜೊತೆಗೆ ಹಬ್ಬಗಳ ಸೀಸನ್ ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರನ್ನು ತಡೆಯಲು ವಿಶೇಷ ಟಿಕೆಟ್-ತಪಾಸಣೆ ಅಭಿಯಾನವನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ವಿಶೇಷ ಟಿಕೆಟ್ ಚೆಕ್ ಡ್ರೈವ್ ನಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗಮನವಿಟ್ಟು ತಡೆಯಲಾಗುತ್ತದೆ.
ಸಚಿವಾಲಯವು ಸೆಪ್ಟೆಂಬರ್ 20 ರಂದು 17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಪತ್ರ ಬರೆದಿದ್ದು, "ಅಕ್ಟೋಬರ್ 1 ರಿಂದ 15 ಮತ್ತು ಅಕ್ಟೋಬರ್ 25 ರಿಂದ ನವೆಂಬರ್ 10 ರ ಅವಧಿಗೆ" ಟಿಕೆಟ್ ರಹಿತ ಮತ್ತು ಅನಧಿಕೃತ ಪ್ರಯಾಣಿಕರ ವಿರುದ್ಧ ವಿಶೇಷ ಡ್ರೈವ್ ಪ್ರಾರಂಭಿಸಲು ಮತ್ತು1989 ರ ರೈಲ್ವೆ ಕಾಯಿದೆಯ ನಿಬಂಧನೆಗಳು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆ ತಿಳಿಸಿದೆ.

ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ, ರೈಲು ಪ್ರಯಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಸಾಮಾನ್ಯವಾಗಿರುತ್ತದೆ. ಈ ಸೀಸನ್ ನಲ್ಲಿ ರೈಲುಗಳಲ್ಲಿ ಸಾಮಾನ್ಯವಾಗಿ ಕಿಕ್ಕಿರಿದ ಪ್ರಯಾಣಿಕರಿದ್ದು, ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತದೆ ಅದರಲ್ಲೂ ವಿಶೇಷವಾಗಿ ಸಾಮಾನ್ಯ ಜನರು ಮಾತ್ರವಲ್ಲದೇ ಅತಿ ಹೆಚ್ಚು ಪೊಲೀಸ್ ಸಿಬ್ಬಂದಿಗಳಿರುತ್ತಾರೆ. ಪೋಲೀಸ್ ಸಿಬ್ಬಂದಿಗಳು ರೈಲ್ವೇ ಪ್ರಯಾಣದ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸುವವರೆಂದು ಗುರುತಿಸಲ್ಪಟ್ಟಿದ್ದಾರೆ. ಸಮವಸ್ತ್ರದಲ್ಲಿರುವವರು ಸೇರಿದಂತೆ ಎಲ್ಲಾ ಪ್ರಯಾಣಿಕರು ಟಿಕೆಟಿಂಗ್ ನಿಯಮಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯ ಈ ಡ್ರೈವ್ ಕೈಗೊಂಡಿದೆ.
"ಘಜಿಯಾಬಾದ್ ಮತ್ತು ಕಾನ್ಪುರ ನಡುವಿನ ನಮ್ಮ ಇತ್ತೀಚಿನ ದಿಢೀರ್ ತಪಾಸಣೆಯಲ್ಲಿ, ಯಾವುದೇ ಟಿಕೆಟ್ ಇಲ್ಲದೆ ವಿವಿಧ ಎಕ್ಸ್‌ಪ್ರೆಸ್ ಮತ್ತು ಮೇಲ್ ರೈಲುಗಳ ಎಸಿ ಕೋಚ್‌ಗಳಲ್ಲಿ ನೂರಾರು ಪೊಲೀಸರು ಪ್ರಯಾಣಿಸುತ್ತಿದ್ದದ್ದು ಕಂಡುಬಂತು. ನಾವು ಅವರಿಗೆ ದಂಡವನ್ನು ವಿಧಿಸಿದಾಗ, ಆರಂಭದಲ್ಲಿ ಅವರು ಪಾವತಿಸಲು ನಿರಾಕರಿಸಿ ಮುಂದೆ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ನಮಗೆ ಬೆದರಿಕೆ ಹಾಕಿದರು. ಆದರೆ ನಾವು ಜಗ್ಗದೆ ದಂಡ ವಸೂಲಿ ಮಾಡಿದೆ. ಈ ಘಟನೆ ನೋಡಿ ಪ್ರಯಾಣಿಕರ ಪ್ರತಿಕ್ರಿಯೆ ವಿಭಿನ್ನವಾಗಿತ್ತು. ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ನೋಡಿ ಸಂತೋಷ ಮತ್ತು ಆಶ್ಚರ್ಯ ವ್ಯಕ್ತಪಡಿಸಿದರು." ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾರ್ತ್ ಸೆಂಟ್ರಲ್ ರೈಲ್ವೇ ವಲಯದ ಟಿಕೆಟ್ ಚೆಕ್ ಮಾಡುವ ಅಧಿಕಾರಿಗಳು, ತಮ್ಮ ಗಮನ ವಿಶೇಷವಾಗಿ ಟಿಕೆಟ್ ರಹಿತವಾಗಿ ಪ್ರಯಾಣಿಸುವ ಪೊಲೀಸರು ಮತ್ತು ಇತರ ಅನಧಿಕೃತ ಪ್ರಯಾಣಿಕರ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ . ಇಂತಹ ಪ್ರಯಾಣಿಕರು ಹೆಚ್ಚಾಗಿ ಟಿಕೆಟ್ ಪಡೆದು ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಾರೆ ಎನ್ನುತ್ತಾರೆ.
ಇತ್ತೀಚಿನ ದಿನಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪೊಲೀಸರ ಸಂಖ್ಯೆಯ ಬಗ್ಗೆ ರೈಲು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಪ್ರಯಾಗರಾಜ್ ವಿಭಾಗದ ರೈಲ್ವೆ ವಕ್ತಾರರು, "ನಾವು ಪೊಲೀಸರಿಗೆ ಪ್ರತ್ಯೇಕ ಡೇಟಾವನ್ನು ನಿರ್ವಹಿಸುವುದಿಲ್ಲ. ಆದರೆ ಕಳೆದ ಮೂರು ತಿಂಗಳುಗಳಲ್ಲಿ, ಅಂದರೆ ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ, 1,17,633 ಪ್ರಯಾಣಿಕರು ಕೇವಲ ಎನ್‌ಸಿಆರ್ ವಲಯದ ಅಡಿಯಲ್ಲಿ ಪ್ರಯಾಗ್‌ರಾಜ್ ವಿಭಾಗದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ 9,14,58,171 ರೂ. ತೆತ್ತಿದ್ದಾರೆ.
ರೈಲು ಟಿಕೆಟ್ ಚೆಕ್ ಮಾಡುವ ಅಧಿಕಾರಿಗಳು ಕೂಡ 'ಪೊಲೀಸರೇ ದೊಡ್ಡ ತೊಂದರೆ' ಎಂದು ಭಾವಿಸುತ್ತಾರೆ. ಪೊಲೀಸರು ಟಿಕೆಟ್ ಇಲ್ಲದೆ ಪ್ರಯಾಣಿಸುವ ಮೂಲಕ ಕಾನೂನನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ಪ್ರಯಾಣಿಕರನ್ನು ಬಲವಂತವಾಗಿ ತಮ್ಮ ಬರ್ತ್‌ಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಕ್ರಮಕ್ಕೆ ಮುಂದಾದಾಗ ರೈಲ್ವೇ ನೌಕರರನ್ನು ಅವಮಾನಿಸುವಂತೆ ಮೂಲಕ ಕಿರುಕುಳ ನೀಡುತ್ತಾರೆ.
ಡಬ್ಲ್ಯುಟಿ ಪೊಲೀಸರೊಂದಿಗೆ ವ್ಯವಹರಿಸುವುದು ನಿಜವಾದ ದುಃಸ್ವಪ್ನವಾಗಿದೆ ಏಕೆಂದರೆ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಮಾತ್ರವಲ್ಲದೆ ನಮಗೆ ಕಿರುಕುಳ ನೀಡಲು ನಕಲಿ ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ" ಎಂದು ಭಾರತೀಯ ರೈಲ್ವೆ ಟಿಕೆಟ್ ತಪಾಸಣೆ ಸಿಬ್ಬಂದಿ ಸಂಘಟನೆ (IRTCSO) ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.
"ಇತ್ತೀಚೆಗೆ, ಟಿಕೆಟ್‌ಗಳನ್ನು ನೀಡಲು ಮುಂದಾದಾಗ ರೈಲ್ವೆ ಸಿಬ್ಬಂದಿ, ಟಿಟಿಇ ಮತ್ತು ಸಾಮಾನ್ಯ ಪ್ರಯಾಣಿಕರೊಂದಿಗೆ ಪೊಲೀಸರು ಜಗಳವಾಡಿದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ಇಂತಹ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಆಯಾ ಪೊಲೀಸ್ ಇಲಾಖೆಗಳನ್ನು ವಿನಂತಿಸುತ್ತೇನೆ. ಇಂತಹ ಘಟನೆಗಳಿಂದ ನಾಗರಿಕರಿಗೆ ಪೊಲೀಸರ ಬಗ್ಗೆ ಇರುವ ಗೌರವ ಕಡಿಮೆಯಾಗಿತ್ತದೆ. ಇವರ ವರ್ತನೆಯೂ ಅಧಿಕೃತ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ" ಎನ್ನುತ್ತಾರೆ ಸಿಂಗ್.
ರೈಲ್ವೇಯಲ್ಲಿ ಟಿಕೆಟ್ ರಹಿತ ಪ್ರಯಾಣವು ಅತ್ಯಂತ ಸಾಮಾನ್ಯ ಅಪರಾಧಗಳಲ್ಲಿ ಒಂದಾಗಿದೆ. ಆರ್‌ಟಿಐ ಅರ್ಜಿದಾರ ಚಂದ್ರಶೇಖರ್ ಗೌರ್ ಅವರಿಗೆ ಭಾರತೀಯ ರೈಲ್ವೇ ಆರ್‌ಟಿಐ ಕಾಯ್ದೆಯಡಿ ನೀಡಿದ ಪ್ರತಿಕ್ರಿಯೆಯ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ, ರೈಲ್ವೆ ಅಧಿಕಾರಿಗಳು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 361.045 ಲಕ್ಷ ಪ್ರಯಾಣಿಕರನ್ನುಪತ್ತೆ ಹಚ್ಚಿ 2231.74 ಕೋಟಿ ರೂ.ಗಳನ್ನು ದಂಡವನ್ನು ಸಂಗ್ರಹಿಸಿದ್ದಾರೆ.


Click it and Unblock the Notifications