ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರ ಸಿನಿ ಕ್ರೇಜ್ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. ಇದೀಗ ರಜನಿಕಾಂತ್ ಅವರಿಗೆ ಇಂದು ಜನುಮದಿನದ ಸಂಭ್ರಮ. 75ನೇ ವಸಂತಕ್ಕೆ ಕಾಲಿಟ್ಟಿರುವ ತಲೈವಾಗೆ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಲಕ್ಷಗಟ್ಟಲೆ ಅಭಿಮಾನಿಗಳು, ಹಲವಾರು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ವಿಶ್ ಮಾಡುತ್ತಿದ್ದು, ವಿಶೇಷವಾಗಿ ಮಾಜಿ ಅಳಿಯ ನಡ ಧನುಷ್ (Dhanush) ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಕೂಡಾ ವಿಶ್ ಮಾಡಿದ್ದಾರೆ.

ಹ್ಯಾಪಿ ಬರ್ತ್‌ಡೇ ಎಂದ ಮಾಜಿ ಅಳಿಯ!
ರಜನಿಕಾಂತ್ 75ನೇ ಜನ್ಮದಿನಕ್ಕೆ ಶುಭ ಕೋರಿದ ಮೊದಲ ಗಣ್ಯರಲ್ಲಿ ನಟ ಧನುಷ್ ಕೂಡಾ ಒಬ್ಬರು ಎಂಬುದು ಗಮನಿಸಬೇಕಾದ ಸಂಗತಿ. "ಹ್ಯಾಪಿ ಬರ್ತ್‌ಡೇ ತಲೈವಾ @rajinikanth" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ರಜನಿಕಾಂತ್ ಕಟ್ಟಾ ಅಭಿಮಾನಿ ಎಂದೇ ಗುರುತಿಸಿಕೊಂಡಿರುವ ಧನುಷ್, 2004 ರಲ್ಲಿ ರಜನೀಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದರು. ಆದರೆ ಹಲವು ಕಾರಣಗಳಿಂದ ಸಂಬಂಧ ಮುಂದುವರೆಸಲಾಗದೆ ಐಶ್ವರ್ಯಾ ಮತ್ತು ಧನುಷ್ ಪರಸ್ಪರ ವಿಚ್ಛೇಧನ ಪಡೆದುಕೊಂಡರು.
ತಮಿಳುನಾಡು ಸಿಎಂ ವಿಶ್:
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ರಜನಿಕಾಂತ್ ಅವರಿಗೆ ಜನ್ಮದಿನ ಶುಭಾಶಯ ಹೇಳಿದ್ದಾರೆ. ತಮ್ಮ ಜೊತೆಗಿನ ಫೋಟೋ ಹಂಚಿಕೊಂಡು "ರಜನಿಕಾಂತ್ ಅವರದ್ದು, ವಯಸ್ಸನ್ನು ಮೀರಿದ ಮೋಡಿ! ವೇದಿಕೆಯ ಮೇಲೆ ಬಂದಾಗ ಎಲ್ಲರನ್ನೂ ಆಕರ್ಷಿಸುವ ವಾಕ್ಚಾತುರ್ಯ!ಹೊರಗೆ ಏನೂ ಹೇಳದೆ, ಮತ್ತೊಬ್ಬರಿಗೆ ಕೇಡು ಬಯಸದ, ಮೋಸ ಮಾಡದ ಹೃದಯ ಅವರದ್ದು!" ಎಂದು ಬರೆದುಕೊಂಡಿದ್ದಾರೆ.
"ಆರರಿಂದ ಅರವತ್ತು ವರ್ಷಗಳವರೆಗೆ ಅರ್ಧ ಶತಮಾನದಿಂದಲೂ ಮೋಡಿ ಮಾಡುತ್ತಿರುವ ನನ್ನ ಗೆಳೆಯ #SuperStar @rajinikanth ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು! ಅವರು ಮತ್ತಷ್ಟು ಯಶಸ್ವಿ ಸಿನಿಮಾಗಳನ್ನು ನೀಡುತ್ತಿರಲಿ, ಜನರ ಪ್ರೀತಿ ಹಾಗೂ ಬೆಂಬಲದೊಂದಿಗೆ ಅವರ ವಿಜಯದ ಧ್ವಜವು ಸದಾ ಹಾರಾಡಲಿ! #HBDSuperStarRajinikanth" ಎಂದು ಸ್ಟಾಲಿನ್ ಶುಭಾಶಯ ಕೋರಿದ್ದಾರೆ.
ರಜನಿಕಾಂತ್ ಎಷ್ಟು ಶ್ರೀಮಂತ ಗೊತ್ತಾ?
ರಜನಿಕಾಂತ್ ಅವರು ತಮ್ಮ ಸಿನಿ ಜರ್ನಿಯಲ್ಲಿ ಸಣ್ಣ ಬಜೆಟ್‌ನಿಂದ ಹಿಡಿದು ಡೊಡ್ಡ ಬಜೆಟ್‌ವರೆಗೂ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಹಲವಾರು ಸೂಪರ್ ಹಿಟ್ ಸಿನಿಮಾಗಳ ಮೂಲಕ ಮಿಂಚಿರುವ ರಜನಿಕಾಂತ್, 1975ರಲ್ಲಿ "ಅಪೂರ್ವ ರಾಗಂಗಳ್" ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಸಿನಿ ಜರ್ನಿಗೆ ಪಾದಾರ್ಪಣೆ ಮಾಡಿದರು. ಅದರ ನಂತರ ತಮಿಳಿನಿಂದ ಬಾಲಿವುಡ್ ಚಿತ್ರೋದ್ಯಮದವರೆಗೂ ಜನಪ್ರಿಯರಾಗಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ, ಈಗ ಸೂಪರ್ ಸ್ಟಾರ್!
ಇನ್ನು ಸಿನಿ ಪಯಣ ಆರಂಭಿಸುವ ಮುನ್ನ ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಅಂದು ಕಂಡಕ್ಟರ್ ಆಗಿದ್ದವರು, ಇಂದು ಕೋಟ್ಯಾಂತರ ರೂಪಾಯಿಗಳ ಮಾಲೀಕರಾಗಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಆಗುವ ಮೊದಲು ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಅವರ ಸಂಬಳ ತಿಂಗಳಿೆ 750 ರೂ. ಆಗಿತ್ತು. ಕಂಡಕ್ಟರ್ ಆಗಿ ಅವರು ಪಡೆಯುತ್ತಿದ್ದ ಆದಾಯ ಇದು. ಈಗಾಗಲೇ 50 ವರ್ಷ ಸಿನಿ ಜರ್ನಿಯನ್ನು ಪೂರೈಸಿರುವ ರಜನಿಕಾಂತ್, ತಮ್ಮ ವೃತ್ತಿಜೀವನದಲ್ಲಿ 430 ಕೋಟಿಗೂ ಅಧಿಕ ಸಂಪತ್ತು ಗಳಿಸಿದ್ದಾರೆ. ಅಲ್ಲದೇ ಅವರ ಬಳಿ ಬಿಎಂಡಬ್ಲ್ಯೂ ಎಕ್ಸ್ 7 ಸೇರಿ ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಇನ್ನು ರಜನಿಕಾಂತ್ ಒಂದು ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಮುಂಬರುವ ಜೈಲರ್ 2 ಸಿನಿಮಾದಲ್ಲೂ ನಟಿಸುತ್ತಿದ್ದಾರೆ.


Click it and Unblock the Notifications