ಸಾಧಿಸಿದರೆ ಸಬಲ ನುಂಗಬಹುದು ಎಂಬ ಗಾದೆ ಮಾತು ಎಷ್ಟು ನಿಖರವಾಗಿದೆ ಎಂಬುದಕ್ಕೆ ಇಂದು ನಾವು ಹೇಳಹೊರಟಿರುವ ನೈಜ ನಿದರ್ಶನವೇ ಸಾಕ್ಷಿ. ಆರಂಭದಲ್ಲಿ ಕೇವಲ ೨೦ ಸಾವಿರ ರೂ.ಗಳ ಹೂಡಿಕೆಯಲ್ಲಿ ಆರಂಭಿಸಿದ್ದ ಉದ್ಯಮವನ್ನು ಸದ್ಯ 6 ಸಾವಿರ ಕೋಟಿ ರೂ.ಗೆ ಏರಿಸಿದ್ದು, ಹರಸಾಹಸವೇ ಸರಿ. ಅಷ್ಟಕ್ಕೂ ಇಂದು ನಾವು ಹೇಳ ಹೊರಟಿರುವ ವಿಚಾರವೇ ರಜನಿ ಬೆಕ್ಟರ್ ಅವರ ಬಗ್ಗೆ. ಅಲ್ಪ ಹೂಡಿಕೆಯೊಂದಿಗೆ ಆರಂಭಿಸಿದ ಉದ್ಯಮವನ್ನು ೬ ಸಾವಿರ ಕೋಟಿ ರೂ.ಗೆ ಏರಿಸಿದ ಹಾದಿ ಸಾಹಸಮಯದಿಂದ ಕೂಡಿದೆ. ತನ್ನ ಪರಿಶ್ರಮ ಮತ್ತು ಕಠಿಣ ಪರಿಶ್ರಮದಿಂದ ತನ್ನ ಸಣ್ಣ ಉದ್ಯಮವನ್ನು ಬಹುಕೋಟಿ ಕಂಪನಿಯಾಗಿ ವಿಸ್ತರಿಸಲು ಸಾಧ್ಯವಾಯಿತು ಎಂಬುದು ರಜನಿ ಬೆಕ್ಟರ್ ಅವರ ಮಾತು. ಅಷ್ಟಕ್ಕೂ ರಜ್ನಿ ಅವರ ಉದ್ಯಮದ ಹಾದಿ ಸುಲಭದಿಂದ ಕೂಡಿರದೇ ಬಹುತೇಕ ಉದ್ಯಮಗಳಿಗೆ ಲಭಿಸುವ ಕಠಿಣ ಹಾದಿಯಿಂದಲೇ ಕೂಡಿತ್ತು.
ಪಾಕಿಸ್ತಾನದಲ್ಲಿ ಜನಿಸಿದ್ದ ರಜನಿ ಬೆಕ್ಟರ್
ಭಾರತ ವಿಭಜನೆಯ ಸಂದರ್ಭ ಗಡಿನಾಡಿನ ಜನರು ಯಾವೆಲ್ಲಾ ಸಂಕಷ್ಟಗಳನ್ನು ಅನುಭವಿಸಿದ್ದರು ಎಂಬ ನಮಗೆಲ್ಲಾ ತಿಳಿದೇ ಇದೆ. ಅಂಥವರಲ್ಲಿ ರಜನಿ ಬೆಕ್ಟರ್ ಕೂಡ ಒಬ್ಬರಾಗಿದ್ದರು. ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ್ದ ರಜನಿ ಅವರು ದೇಶ ವಿಭಜನೆಯ ಸಮಯದಲ್ಲಿ ಭಾರತಕ್ಕೆ ಆಗಮಿಸಿದ್ದರು.

17ರ ಹರೆಯದಲ್ಲೇ ವಿವಾಹ ಬಂಧನ
17ರ ಹರೆಯದಲ್ಲೇ ಪಂಜಾಬ್‌ನ ಲೂಧಿಯಾನದ ಉದ್ಯಮಿಯೊಬ್ಬರನ್ನು ರಜನಿ ವಿವಾಹವಾಗಿದ್ದರು. ಆರಂಭದಲ್ಲಿ ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಣ್ಣದಾದ ಬೇಕರಿಯೊಂದನ್ನು ಆರಂಭಿಸಿದ್ದರು. ಉತ್ತಮ ಗುಣಮಟ್ಟದ ಬ್ರೆಡ್ ಹಾಗೂ ಐಸ್ ಕ್ರೀಂ ಗಳನ್ನು ತಯಾರಿಸಿ ಮಾಡುವ ಮೂಲಕ ರಜನಿ ಅವರು ಇಡೀ ಪ್ರದೇಶದಲ್ಲೇ ಹೆಚ್ಚಿನ ಪ್ರಸಿದ್ದಿಯನ್ನು ಪಡೆದುಕೊಂಡರು.
300 ರೂ.ಗಳ ಆರಂಭಿಕ ಹೂಡಿಕೆ!
ತನ್ನ ಉದ್ಯಮದಲ್ಲಿ ಹೆಚ್ಚಿನ ಪ್ರಸಿದ್ದತೆ ಪಡೆಯುವ ಮೂಲಕ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ರಜನಿ ಯೋಜಿಸಿದರು. ಪರಿಣಾಮ ಆಗಿನ ಸಮಯದಲ್ಲಿ ೩೦೦ ರೂ.ಗಳ ಹೂಡಿಕೆಯೊಂದಿಗೆ ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದರು. ಹೀಗೆ ನಡೆಯುತ್ತಿದ್ದ ಉದ್ಯಮಕ್ಕೆ ಆಘಾತ ಎದುರಾಗಿತ್ತು. ಆದರೆ 1978ರಲ್ಲಿ ರಜ್ನಿ ಅವರ ಪತಿ ಧರಂವೀರ್ ಮಧ್ಯಪ್ರವೇಶಿಸಿ ಐಸ್ ಕ್ರೀಮ್ ತಯಾರಿಕಾ ಘಟಕವನ್ನು ಆರಂಭಿಸಲು 20,000 ರೂ.ಗಳ ನೆರವು ನೀಡಿದರು.
ಮಹತ್ತರ ತಿರುವು ನೀಡಿದ ಮೆಕ್ ಡೊನಾಲ್ಡ್ ಒಪ್ಪಂದ
ಇನ್ನು ರಜನಿ ಅವರ ಉದ್ಯಮಕ್ಕೆ ಜೀವನಕ್ಕೆ ಮಹತ್ವದ ತಿರುವು ಲಭಿಸಿದ್ದು, ಮೆಕ್ ಡೊನಾಲ್ಡ್ ಸಂಸ್ಥೆ ತೆಗೆದುಕೊಂಡ ನಿರ್ಧಾರದಿಂದ ಎಂದರೆ ತಪ್ಪಾಗಲಾರದು. ರಜನಿ ಅವರ ಫುಡ್ ಸ್ಪೆಷಾಲಿಟೀಸ್ ಲಿಮಿಟೆಡ್ ಅನ್ನು ಮೆಕ್ ಡೊನಾಲ್ಡ್ ತನಗೆ ಬನ್ ಪೂರೈಕೆದಾರರಾಗಿ ಆಯ್ಕೆ ಮಾಡಿಕೊಂಡಿದ್ದು, ರಜನಿ ಅವರ ಉದ್ಯಮ ಜೀವನಕ್ಕೆ ಬಹುದೊಡ್ಡ ತಿರುವು ನೀಡಿತು. ಅಲ್ಲಿಂದ ರಜನಿ ಅವರು ಹಿಂದಿರುಗಿ ನೋಡಿಲ್ಲ. ತನಗೆ ಲಭಿಸಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಜನಿ ಅವರು ವ್ಯಾಪಾರದಲ್ಲಿ ಏರಿಕೆ ದಾಖಲಿಸುತ್ತಲೇ ಸಾಗಿದರು. ಮೆಕ್ ಡೊನಾಲ್ಡ್ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ ರಜನಿ ಅವರ ಉತ್ಪನ್ನಗಳಿಗೆ ಬೇಡಿಕೆ ಏರುತ್ತಲೇ ಹೋಯಿತು. ಪರಿಣಾಮ ರಜನಿ ಅವರು ತಮಗೆ ಬರುತ್ತಿರುವ ಆರ್ಡರ್‌ಗಳನ್ನು ಪೂರೈಸುವ ಸಲುವಾಗಿ ಗ್ರೇಟರ್ ನೋಯ್ಡಾದಲ್ಲಿ ಉತ್ಪಾದನಾ ಘಟಕವನ್ನು ತೆರೆದರು. ಅದೂ ಅಲ್ಲದೆ ದೇಶಾದ್ಯಂತ ಇರುವ ತಮ್ಮ ಇತರೆ ಮಳಿಗೆಗಳನ್ನು ಕೂಡ ಉನ್ನತಿಕರಿಸಿದರು. ಹೀಗೆ ದಿನದಿಂದ ದಿನಕ್ಕೆ ಅಭಿವೃದ್ದಿಯ ಪಥವನ್ನು ದಾಟುತ್ತಾ ಹೋದ ರಜನಿ ಅವರ ಬೆಕ್ಟರ್ಸ್ ಫುಡ್ ಸ್ಪೆಷಾಲಿಟೀಸ್ ಲಿಮಿಟೆಡ್ 2023ರ ವೇಳೆಗೆ FMCG (ಫಾಸ್ಟ್ ಮೂವಿಂಗ್ ಕನ್‌ಝ್ಯೂಮರ ಗೂಡ್ಸ್) ಉದ್ಯಮದ ಅತ್ಯಂತ ಸಮೃದ್ಧ ವ್ಯವಹಾರಗಳಲ್ಲಿ ಒಂದಾಗಿದೆ. ಇಂದು ಬ್ರೆಡ್, ಬಿಸ್ಕಿಟ್, ಐಸ್ ಕ್ರೀಂ ಸೇರಿದಂತೆ FMCG ಉತ್ಪನ್ನಗಳಲ್ಲಿ ಪ್ರಸಿದ್ದತೆ ಪಡೆದಿರುವ ಬೆಕ್ಟರ್ ಅವರ ಸಂಸ್ಥೆ ದೇಶಾದ್ಯಂತ ಖ್ಯಾತಿ ಪಡೆದುಕೊಂಡಿದೆ. ಸದ್ಯ ಬೆಕ್ಟರ್ ಸಂಸ್ಥೆಯ ಮಾರುಕಟ್ಟೆ ಮೌಲ್ಯವೇ ಸುಮಾರು 6000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಉದ್ಯಮ ಕ್ಷೇತ್ರದಲ್ಲಿ ಎಲ್ಲರಿಗೂ ಮಾದರಿ
ರಜನಿ ಬೆಕ್ಟರ್ ಅವರು ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ವಿಯಾಗಲು ಬಯಸುವ ಲಕ್ಷಾಂತರ ಉದ್ಯಮಿಗಳಿಗೆ ಸ್ಫೂರ್ತಿದಾಯಕವಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ನಿರಂತರ, ಶ್ರದ್ಧೆ, ಸೃಜನಶೀಲತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ರಜನಿ ಅವರು ತೋರಿಸಿಕೊಟ್ಟಿದ್ದಾರೆ. ಕಠಿಣ ಪರಿಶ್ರಮ ಹಾಕಿ ಉದ್ಯಮದಲ್ಲಿ ತೊಡಗಿದರೆ ಏನಾಗುತ್ತದೆ ಎಂಬುದಕ್ಕೆ ರಜನಿ ಅವರ ಯಶಸ್ಸು ಒಂದು ಭವ್ಯವಾದ ಉದಾಹರಣೆಯಾಗಿದೆ.
More From GoodReturns

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ



Click it and Unblock the Notifications