ರಾಕೇಶ್ ಜುಂಜುನ್ ವಾಲಾರ 14 ಅಂತಸ್ತಿನ ಐಷಾರಾಮಿ ಬಂಗಲೆ ಹೇಗಿರಲಿದೆ?

ಭಾರತದ ಷೇರುಪೇಟೆ ದಿಗ್ಗಜ, ದೇಶದ ವಾರೆನ್ ಬಫೆಟ್ ಖ್ಯಾತಿಯ ರಾಕೇಶ್‌ ಜುಂಜುನ್‌ವಾಲಾ ಹಾಗೂ ಅವರ ಕುಟುಂಬವು ಶೀಘ್ರದಲ್ಲೇ ಹೊಸ, ಐಷಾರಾಮಿ ಬಂಗಲೆಗೆ ಶಿಫ್ಟ್‌ ಆಗಲಿದ್ದಾರೆ. ಷೇರುಪೇಟೆ ದಿಗ್ಗಜ ಇನ್ನು ಮುಂದೆ ಸುಮಾರು 14 ಅಂತಸ್ತಿನ ಐಷಾರಾಮಿ ಬಂಗಲೆಯಲ್ಲಿ ನೆಲೆಸಲಿದ್ದಾರೆ. ಇದು ದಕ್ಷಿಣ ಮುಂಬೈನ ಅತೀ ದುಬಾರಿಯಾದ ಬಂಗಲೆ ಆಗಿದೆ.

ಪ್ರಸ್ತುತ ರಾಕೇಶ್‌ ಜುಂಜುನ್‌ವಾಲಾ ಅಪಾರ್ಟ್‌ಮೆಂಟ್‌ ಬ್ಲಾಕ್‌ನ ಎರಡು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಶೀಘ್ರದಲ್ಲೇ ಈ 14 ಅಂತಸ್ತಿನ ಐಷಾರಾಮಿ ಬಂಗಲೆಗೆ ವರ್ಗಾವಣೆ ಆಗಲಿದ್ದಾರೆ. ಬಿಜಿ ಖೇರ್‌ ಮಾರ್ಗದಲ್ಲಿ ಈ ಬಹುಮಹಡಿ ಬಂಗಲೆ ನಿರ್ಮಾಣ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಹಿಂದೆ ಅದೇ ಸ್ಥಳದಲ್ಲಿ ಸುಮಾರು 14 ಫ್ಲ್ಯಾಟ್‌ಗಳು ಇದ್ದವು. ಈ ಫ್ಲ್ಯಾಟ್‌ಗಳನ್ನು ರಾಕೇಶ್‌ ಜುಂಜುನ್‌ವಾಲಾ ಹಾಗೂ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಸುಮಾರು 371 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ.

ಈಗ 371 ಕೋಟಿ ನೀಡಿ ಖರೀದಿ ಮಾಡಿದ 14 ಫ್ಲ್ಯಾಟ್‌ಗಳನ್ನು ಕೆಡವಿ ಆ ಸ್ಥಳದಲ್ಲೇ ಸುಮಾರು 14 ಅಂತಸ್ತಿನ ಐಷಾರಾಮಿ ಬಂಗಲೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. 2,700 ಸ್ಕ್ವೇರ್‌ ಫೀಟ್‌ ಪ್ರದೇಶದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು ಕಟ್ಟಡವು ಸುಮಾರು 57 ಮೀಟರ್‌ ಎತ್ತರವಿರಲಿದೆ.

 ಖಾಸಗೀ ವಲಯದ ಬ್ಯಾಂಕ್‌ಗಳಿಂದ ಖರೀದಿ

ಖಾಸಗೀ ವಲಯದ ಬ್ಯಾಂಕ್‌ಗಳಿಂದ ಖರೀದಿ

ಈ ಹಿಂದೆ ಈ ಪ್ರದೇಶದಲ್ಲಿ ರಿಡ್ಗೇವೆ ಅಪಾರ್ಟ್‌ಮೆಂಟ್‌ಗಳು ಇದ್ದವು. ಇಲ್ಲಿದ್ದ 14 ಫ್ಲ್ಯಾಟ್‌ಗಳಿಗೆ ಪಾರ್ಕಿಗ್‌ ಏರಿಯಾ ಕೂಡಾ ಇತ್ತು. ಈ ಅಪಾರ್ಟ್‌ಮೆಂಟ್‌ ಈ ಹಿಂದೆ ಖಾಸಗೀ ವಲಯದ ಬ್ಯಾಂಕ್‌ ಒಂದರ ಸೊತ್ತಾಗಿತ್ತು. ರಾಕೇಶ್‌ ಜುಂಜುನ್‌ವಾಲಾ ಹಾಗೂ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಮೊದಲು ಸುಮಾರು 176 ಕೋಟಿ ನೀಡಿ 2013ರಲ್ಲಿ ಸ್ಟಾಡರ್ಡ್ ಚಾರ್ಟೆಡ್‌ ಬ್ಯಾಂಕ್‌ನಿಂದ ಈ ಜಾಗ, ಕಟ್ಟಡವನ್ನು ಖರೀದಿ ಮಾಡಿದೆ. ಆ ಬಳಿಕ 2017ರಲ್ಲಿ ಎಚ್‌ಎಸ್‌ಬಿಸಿ ಬ್ಯಾಂಕಿನಿಂದ ಸುಮಾರು 195 ಕೋಟಿಗಳನ್ನು ನೀಡಿ ಉಳಿದ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದ್ದಾರೆ.

 ಜುಂಜುನ್‌ವಾಲಾ ಯಾವ ಅಂತಸ್ತಿನಲ್ಲಿ ನೆಲೆಸಲಿದ್ದಾರೆ?

ಜುಂಜುನ್‌ವಾಲಾ ಯಾವ ಅಂತಸ್ತಿನಲ್ಲಿ ನೆಲೆಸಲಿದ್ದಾರೆ?

ಮುನ್ಸಿಪಾಲ್‌ ಕಾರ್ಪೋರೇಷನ್‌ಗೆ ಸಲ್ಲಿಕೆ ಮಾಡಿದ ಕಟ್ಟಡ ಕಾಮಗಾರಿಯ ಒಂದು ರೂಪುರೇಷೆಯ ಪ್ರಕಾರ ಬಂಗಲೆಯ 12ನೇ ಅಂತಸ್ತಿನ ಮಾಸ್ಟರ್‌ ಫ್ಲೋರ್‌ ಆಗಲಿದೆ. ರಾಕೇಶ್‌ ಜುಂಜುನ್‌ವಾಲಾ ಹಾಗೂ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಈ 12ನೇ ಅಂತಸ್ತಿನಲ್ಲಿ ವಾಸವಾಗಲಿದ್ದಾರೆ. ಈ ಅಂತಸ್ತಿನಲ್ಲಿ ದೊಡ್ಡದಾದ ಬೆಡ್‌ ರೂಮ್‌ ಇರಲಿದೆ. ಪ್ರತ್ಯೇಕವಾದ ಸ್ನಾನದ ಗೃಹ ಇರಲಿದೆ. ಹಾಗೆಯೇ ಬೇರೆಯೇ ಡ್ರೆಸ್ಸಿಂಗ್‌ ರೂಮ್‌ ಇರಲಿದೆ. ಹಾಗೆಯೇ ಲಿವಿಂಗ್‌ ರೂಮ್‌ ಕೂಡಾ ಇರಲಿದೆ.

 ಮಕ್ಕಳಿಗಾಗಿ 11ನೇ ಅಂತಸ್ತು

ಮಕ್ಕಳಿಗಾಗಿ 11ನೇ ಅಂತಸ್ತು

ಇನ್ನು 11ನೇ ಅಂತಸ್ತಿನಲ್ಲಿ ಮಕ್ಕಳು ವಾಸವಿರಲಿದ್ದಾರೆ. ಈ ಅಂತಸ್ತಿನಲ್ಲಿ ಮಕ್ಕಳಿಗಾಗಿ ಎರಡು ಬೆಡ್‌ರೂಮ್‌ಗಳು ಇರಲಿದೆ. ಇನ್ನು ದೊಡ್ಡದಾದ ಟೆರೇಸ್‌ ಕೂಡಾ ಇದರಲ್ಲಿ ಇರಲಿದೆ. ಇನ್ನು ಬಾಲ್ಕನಿ ಸಮೇತ ಎರಡು ಬೆಡ್‌ರೂಮ್‌ಗಳು ಇರಲಿದೆ. ನಾಲ್ಕನೇ ಅಂತಸ್ತು ಅತಿಥಿಗಳಿಗೆ ಮೀಸಲಿರಿಸಲಾಗಿದೆ. ಅಲ್ಲಿ ಎಲ್‌ ಆಕಾರದಲ್ಲಿ ಅಡುಗೆ ಕೋಣೆ ಇರಲಿದೆ. ಮೊದಲ, ಎರಡನೇ ಹಾಗೂ ಮೂರನೇ ಅಂತಸ್ತಿನಲ್ಲಿ ಕೆಲವು ಮಧ್ಯಮ ಗಾತ್ರದ ಕೋಣೆಗಳು, ಬಾತ್‌ರೂಮ್‌ಗಳು, ಸ್ಟೋರೆಜ್‌ ಏರಿಯಾಗಳು ಇರಲಿದೆ. ಇನ್ನು ಈ ಮೂರು ಅಂತಸ್ತಿನಲ್ಲಿಯೂ ಅಧಿಕವಾಗಿ ಮೂರು ಅಂತಸ್ತಿನ ಲಾಬಿ ಇರಲಿದೆ.

 ಐಷಾರಾಮಿ ಬಂಗಲೆಯಲ್ಲಿ ಬೇರೆ ಏನಿದೆ?

ಐಷಾರಾಮಿ ಬಂಗಲೆಯಲ್ಲಿ ಬೇರೆ ಏನಿದೆ?

ಇನ್ನು ಈ ಐಷಾರಾಮಿ ಬಂಗಲೆಯಲ್ಲಿ ಫುಟ್‌ ಬಾಲ್‌ ಕೋರ್ಟ್ ಇರಲಿದೆ. ಇದು ಗ್ರೌಂಡ್‌ ಫ್ಲೋರ್‌ನಲ್ಲಿ ಇರಲಿದೆ. ಇನ್ನು ಬೇಸ್‌ಮೆಂಟ್‌ ಪಾರ್ಕಿಂಗ್‌ ಮಾತ್ರ ಮೀಸಲಿಡಲಾಗಿದೆ. ಐದು ಜನರು ಇರುವ ಈ ಕುಟುಂಬಕ್ಕಾಗಿ ಸುಮಾರು ಏಳು ಪಾರ್ಕಿಂಗ್‌ ಏರಿಯಾಗಳು ಇದೆ. ಇನ್ನು ಈ ಕಟ್ಟದಲ್ಲಿ ಸ್ವಿಮಿಂಗ್‌ ಪೂಲ್‌, ಜಿಮ್‌, ಹೋಮ್‌ ಥಿಯೇಟರ್‌ ಕೂಡಾ ಇರಲಿದೆ. ಇವೆಲ್ಲ ಮೊದಲ ಅಂತಸ್ತಿನಲ್ಲಿ ಇರಲಿದೆ. ಇನ್ನು ಈ ಕಟ್ಟಡದ ಕೊನೆಯ ಫ್ಲೋರ್‌ 70.24 ಚದರಡಿ ಇರಲಿದೆ. ಇಲ್ಲಿ ಅಡುಗೆ ಕೋಣೆ, ಫಿಜ್ಜಾ ಕೌಂಟರ್‌, ತರಕಾರಿ ಗಾರ್ಡನ್‌, ಬಾತ್‌ರೂಮ್‌, ಓಪನ್‌ ಟೆರೇಸ್‌ ಇರಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+