ಮುಸ್ಲಿಮರ (Muslim) ಪವಿತ್ರ ರಂಝಾನ್ ಹಬ್ಬ (Ramadan Festival) ಸಮೀಪಿಸುತ್ತಿದೆ. ಈ ಹಬ್ಬ ಸಮೀಪಿಸುತ್ತಿದ್ದಂತೆ ಯುಎಇನಲ್ಲಿ ಭರಪೂರ ಸಿದ್ಧತೆಗಳು ನಡೆಯುತ್ತಿದೆ. ಇದೀಗ ಯುಎಇನಲ್ಲಿ ಪವಿತ್ರ ರಂಝಾನ್ ತಿಂಗಳು ಆರಂಭವಾಗುತ್ತಿದ್ದಂತೆ, ಅಲ್ಲಿನ ಶಿಕ್ಷಣ ಸಚಿವಾಲಯ (MoE) ಮತ್ತು ನಾಲೆಡ್ಜ್ ಆಂಡ್ ಹ್ಯೂಮನ್ ಡೆವಲಪ್‌ಮೆಂಟ್ ಅಥಾರಿಟಿ (KHDA) ಶಾಲಾ ಕ್ಯಾಲೆಂಡರ್ ಪ್ರಕಟಿಸಿದೆ. ವಿದ್ಯಾರ್ಥಿಗಳು ಮತ್ತು ಕುಟುಂಬಗಳಿಗೆ ಆಧ್ಯಾತ್ಮಿಕ ಆಚರಣೆ ಮತ್ತು ಶಿಕ್ಷಣದ ನಡುವೆ ಸಮತೋಲನ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ.

ಈ ವರ್ಷ ರಂಜಾನ್ ತಿಂಗಳು ಫೆಬ್ರವರಿ 19, 2026 ರಂದು ಆರಂಭವಾಗುವ ನಿರೀಕ್ಷೆಯಿದ್ದು, ಈ ಅವಧಿಯಲ್ಲಿ ಶಾಲೆಗಳು ಕಡಿಮೆ ಸಮಯದಲ್ಲಿ ಕ್ಲಾಸ್‌ಗಳನ್ನು ನಡೆಸಲಿದೆ. ಅಲ್ಲದೇ ಮಾರ್ಚ್ 16 ರಿಂದ ಮಾರ್ಚ್ 27 ರವರೆಗೆ 12 ದಿನಗಳ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ.
ರಂಜಾನ್ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕುಟುಂಬಗಳು ಉಪವಾಸ, ಪ್ರಾರ್ಥನೆ ಮತ್ತು ಇಫ್ತಾರ್ ಆಚರಣೆಗಳನ್ನು ಸರಿಯಾಗಿಮಾಡಲು ಅನುಕೂಲವಾಗಲಿದೆ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ.
ಯುಎಇ ಸಚಿವಾಲಯದಿಂದ ಮಹತ್ವದ ನಿರ್ಧಾರ!
2026ರ ಫೆಬ್ರವರಿ 19 ರಂದು ಆರಂಭವಾಗುವ ನಿರೀಕ್ಷೆಯ ರಂಜಾನ್ ತಿಂಗಳಿಗಾಗಿ, ಯುಎಇ ಶಿಕ್ಷಣ ಸಚಿವಾಲಯ (MoE) ಹಾಗೂ ಜ್ಞಾನ ಮತ್ತು ಮಾನವ ಅಭಿವೃದ್ಧಿ ಪ್ರಾಧಿಕಾರ (KHDA) ಶಾಲಾ ನಿಯಮಗಳಲ್ಲಿ ಈ ಮಹತ್ವದ ಬದಲಾವಣೆ ಮಾಡಿದೆ.
8 ದಿನ ಮಾತ್ರ ಶಾಲೆ!
ಈ ವರ್ಷ, ರಂಜಾನ್ ತಿಂಗಳಿನಲ್ಲಿ ಯುಎಇ ಶಾಲಾ ವಿದ್ಯಾರ್ಥಿಗಳು ಕೇವಲ ಎಂಟು ದಿನ ಮಾತ್ರ ಪೂರ್ಣ ಪ್ರಮಾಣದ ನೇರ ತರಗತಿಗಳಿಗೆ ಹಾಜರಾಗಲಿದ್ದಾರೆ. ಉಳಿದ ಅವಧಿಯನ್ನು ಕಡಿತಗೊಳಿಸಿದ್ದು, ಇದು ಕುಟುಂಬಗಳಿಗೆ ಶೈಕ್ಷಣಿಕ ಒತ್ತಡವಿಲ್ಲದೆ, ಪವಿತ್ರ ತಿಂಗಳ ಸಂಪ್ರದಾಯಗಳನ್ನು ಒಟ್ಟಾಗಿ ಆಚರಿಸಲು ಅವಕಾಶ ಕಲ್ಪಿಸಲಿದೆ.
ರಂಜಾನ್ ಅವಧಿಯಲ್ಲಿ ಶಾಲಾ ಅವಧಿ:
- ದಿನಕ್ಕೆ ಗರಿಷ್ಠ 5 ಗಂಟೆಗಳು ಮಾತ್ರ ತರಗತಿ ಇರಲಿದೆ. ಇದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದಲ್ಲಿ ಮನೆಗೆ ಮರಳಬಹುದು ಮತ್ತು ಕುಟುಂಬದೊಂದಿಗೆ ಕಾಲ ಕಳೆಯಬಹುದಾಗಿದೆ.
- ಪೂರ್ಣ ಶಿಕ್ಷಣ ದಿನಗಳು: ರಂಜಾನ್ ತಿಂಗಲ್ಲಿ ಗರಿಷ್ಠ 8 ದಿನಗಳು ಮಾತ್ರ ಪೂರ್ಣ ತರಗತಿ ಇರಲಿದೆ. ಉಳಿದ ದಿನಗಳಲ್ಲಿ ಅಂತಿಮ ಪರೀಕ್ಷೆಗಳು, ಪೋಷಕರು-ಟೀಚರ್ ಮೀಟಿಂಗ್ ಅಥವಾ ರಿಮೋಟ್ ಲರ್ನಿಂಗ್‌ಗೆ ಮೀಸಲು.
- ಶುಕ್ರವಾರದ ದಿನ: ರಂಜಾನ್ ಸಮಯದ ಶುಕ್ರವಾರಗಳು (ಮಾರ್ಚ್ 3, 10, 17, 24) ಕಡಿಮೆ ಸಮಯ (90 ರಿಂದ 150 ನಿಮಿಷಗಳು). ಇದು ಪ್ರಾರ್ಥನೆ ಮತ್ತು ನಮಾಜ್‌ಗೆ ಅನುಕೂಲವಾಗಲಿದೆ.
ಯುಎಇ ಶಾಲಾ ವೇಳಾಪಟ್ಟಿ:
ರಂಜಾನ್ ಆರಂಭವಾದ ನಂತರದ ಮೊದಲ ಎರಡು ವಾರಗಳಲ್ಲಿ (ಫೆಬ್ರವರಿ 19-27) ತರಗತಿ ಅವಧಿ ಕಡಿತಗೊಳಿಸಲಾಗಿದೆ. (ಗರಿಷ್ಠ 5 ಗಂಟೆಗಳು). ಇನ್ನು ಮಾರ್ಚ್ 2-6 ರ ಮೂರನೇ ವಾರ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿದ್ದು, ಮುಖ್ಯ ವಿಷಯಗಳ ಮೇಲೆ ಮಾತ್ರ ಈ ಸಂದರ್ಭದಲ್ಲಿ ಗಮನಹರಿಸಲಾಗುತ್ತದೆ ಎನ್ನಲಾಗಿದೆ.
ಮಾರ್ಚ್ 9-13 ಅಂತಿಮ ಶಾಲಾ ವಾರದ ನಂತರ, ಮಾರ್ಚ್ 16-27 ರವರೆಗೆ 12 ದಿನಗಳ ಸ್ಪ್ರಿಂಗ್ ಬ್ರೇಕ್ ಇರಲಿದ್ದು, ಇದು ರಂಜಾನ್ ಅಂತ್ಯದೊಂದಿಗೆ ಮುಗಿಯಲಿದೆ. ಮಾರ್ಚ್ 30 ರಿಂದ ಏಪ್ರಿಲ್ 1 ರವರೆಗೆ ಈದ್ ಅಲ್-ಫಿತರ್ ಸಾರ್ವಜನಿಕ ರಜಾದಿನಗಳು ಇರಲಿದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications