ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಜೊತೆ ಬ್ಯುಸಿನೆಸ್ ಜರ್ನಿ ಶುರು ಮಾಡಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವಿಡ್ ಎಲ್ಲಾ ಕಡೆ ಹವಾ ಕ್ರಿಯೇಟ್ ಮಾಡಿದ, ಡಿಯರ್ ಕಾಮ್ರೇಡ್ ಈಗ ಡಿಯರ್ ಡೈರಿ ಜೊತೆ ಬ್ಯುಸಿನೆಸ್ ವರ್ಲ್ಡ್‌ಗೆ ಹೆಜ್ಜೆ ಇಡ್ತಿದ್ದಾರೆ.

ಹೌದು, ಡಿಯರ್ ಡೈರಿ..ರಶ್ಮಿಕಾ ಮಂದಣ್ಣ ಲಾಂಚ್ ಮಾಡಿರುವ ಹೊಸ ಬ್ಯುಸಿನೆಸ್ ಬ್ರಾಂಡ್. ಬದುಕಿನ ವೈಯಕ್ತಿಕ ಅನುಭವಗಳು, ನೆನಪುಗಳು ಹಾಗೂ ಭಾವನಾತ್ಮಕ ಕ್ಷಣಗಳ ಅನುಸಂಧಾನದಲ್ಲಿಯೇ ಈ ಹೊಸ ಬ್ರ್ಯಾಂಡ್ ರೂಪುಗೊಂಡಿದೆ. 'Dear Diary' ಎನ್ನುವ ಈ ಹೆಸರನ್ನು ರಶ್ಮಿಕಾ ತಮ್ಮ ಹಿಂದಿನ ಡಿಜಿಟಲ್ ಸರಣಿಯಿಂದ ತೆಗೆದುಕೊಂಡಿದ್ದು, ಅದರ ನಿರೂಪಣಾ ಶೈಲಿಯ ಪ್ರೇರಣೆಯೊಂದಿಗೆ ಪರಿಮಳಗಳ ಜಗತ್ತಿಗೆ ಹೊಸ ಆಯಾಮವನ್ನು ತಂದಿದ್ದಾರೆ. ಪರಿಮಳಗಳು ಆಕೆಯ ನೆನಪುಗಳಲ್ಲಿ ಪ್ರತ್ಯೇಕವಾಗಿ ಬೆರಗು ನೀಡಿದ ಕಿಷೋರ ದಿನಗಳ ಕ್ಷಣಗಳನ್ನು ಪ್ರತಿಬಿಂಬಿಸುತ್ತವೆ.
ವಿಶಿಷ್ಟ ಪರಿಮಳಗಳ ಸಂಗ್ರಹ:
ಈ ಬ್ರ್ಯಾಂಡ್‌ನ ಮೊದಲ ಸಂಗ್ರಹದಲ್ಲಿ 'National Crush', 'Irreplaceable' ಮತ್ತು 'Controversial' ಎಂಬ ಮೂರು ವಿಭಿನ್ನ ಶೈಲಿಯ ಪರಿಮಳಗಳು ಲಭ್ಯವಿರುವುದು ವಿಶೇಷ. ಇವುಗಳಲ್ಲಿ ಪ್ರತಿ ಪರಿಮಳವೂ ರಶ್ಮಿಕಾ ತಮ್ಮ ಜೀವನದ ನಿರ್ದಿಷ್ಟ ಘಟ್ಟಗಳು ಅಥವಾ ಅನುಭವಗಳನ್ನು ಪ್ರತಿನಿಧಿಸುತ್ತದೆ.
ಪರಿಮಳ ತಯಾರಿಕೆಯಲ್ಲಿ ಭಾರತೀಯ ಮೂಲದ ಗುಲಾಬಿ ಕಮಲ, ಮಲ್ಲಿಗೆ, ಕಬ್ಬು, ಲಿಚಿ ಮತ್ತು ಪ್ಯಾಶನ್‌ಫ್ರೂಟ್ ಮುಂತಾದ ಸುವಾಸನೆಗಳು ಒಳಗೊಂಡಿದ್ದು, ಆಧುನಿಕ ಪರಿಕಲ್ಪನೆಗೆ ಸ್ಥಳೀಯ ಸ್ಪರ್ಶ ನೀಡುವ ಉದ್ದೇಶವನ್ನು ಹೊಂದಿದೆ.
ಜಾಗತಿಕ ತಂತ್ರಜ್ಞಾನದ ಸಹಾಯ:
ಸೌಂದರ್ಯ ಹಾಗೂ ಪರಿಮಳ ಉತ್ಪಾದನೆಯಲ್ಲಿ ಪರಿಣತಿ ಹೊಂದಿರುವ ಜಾಗತಿಕ ಕಂಪನಿ PCA (The PCA Group) ಈ ಯೋಜನೆಯಲ್ಲಿ ತಂತ್ರಜ್ಞಾನ ಸಹಭಾಗಿಯಾಗಿ ಕಾರ್ಯನಿರ್ವಹಿಸಿದೆ. ಈ ಕಂಪನಿ ಉತ್ಪನ್ನ ಅಭಿವೃದ್ಧಿ, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಅಂತಾರಾಷ್ಟ್ರೀಯ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ರಶ್ಮಿಕಾ ಮಂದಣ್ಣ ಈ ಸುಗಂಧ ದ್ರವ್ಯ ಬ್ರ್ಯಾಂಡ್‌ನ್ನು ಕೇವಲ ತಮ್ಮ ಹೆಸರು ಬಳಸಿ ಪ್ರಚಾರ ಮಾಡಲೆಂದು ಬಯಸಲಿಲ್ಲ. ಅವರು ತನ್ನದೇ ಆದ ದೃಷ್ಠಿಕೋಣದಿಂದ ಈ ಬ್ರ್ಯಾಂಡ್‌ನ ವಿನ್ಯಾಸ, ಪರಿಮಳದ ಸಂಯೋಜನೆ, ಅದರ ಹಿಂದೆ ಇರುವ ಕಥೆಗಳು ಮತ್ತು ಇಡೀ ಪರಿಕಲ್ಪನೆಯು ರೂಪುಗೊಳ್ಳುವ ಪ್ರಕ್ರಿಯೆಗೂ ನೇರವಾಗಿ ಭಾಗಿಯಾದಳು. ಈ ಕಾರಣದಿಂದ 'Dear Diary' ಎಂಬ ಬ್ರ್ಯಾಂಡ್‌ಗೆ ಸ್ಪಷ್ಟವಾದ, ವೈಯಕ್ತಿಕತೆಯಿಂದ ಕೂಡಿದ, ದಿಕ್ಕು ಒದಗಿದೆ.
Dear Diary ಪರಿಮಳ ಶ್ರೇಣಿಗಳು ಕೇವಲ ದೇಹದ ಸುಗಂಧವನ್ನಷ್ಟೇ ನೀಡುವುದಿಲ್ಲ, ಬದಲಾಗಿ ಗ್ರಾಹಕರಿಗೆ ತಮ್ಮ ವೈಯಕ್ತಿಕ ಅನುಭವಗಳನ್ನು ಪರಿಮಳಗಳ ಮೂಲಕ ವ್ಯಕ್ತಪಡಿಸುವ ಅವಕಾಶವನ್ನು ನೀಡುತ್ತವೆ. ಇದು ಭಾರತದ ಸುಗಂಧ ಮಾರುಕಟ್ಟೆಯಲ್ಲಿ ವ್ಯಕ್ತಿತ್ವಚಾಲಿತ ಬ್ರ್ಯಾಂಡ್‌ಗಳ ಅಗತ್ಯವಿರುವ ಹೊತ್ತಿನಲ್ಲಿ ಗಮನ ಸೆಳೆಯುವ ತಂತ್ರವಾಗಿದೆ.
ರಶ್ಮಿಕಾ ಮಂದಣ್ಣ ಈ ಹೊಸ ಬ್ಯುಸಿನೆಸ್ ಪ್ರಕ್ರಿಯೆಯಲ್ಲಿ ತಾವು ನೇರವಾಗಿ ತೊಡಗಿಸಿಕೊಂಡು, ಪರಿಮಳದ ಆಯ್ಕೆ, ಕಥಾಹಂದರ, ಪ್ಯಾಕೇಜಿಂಗ್ ಎಲ್ಲದರ ಮೇಲೂ ತಮ್ಮ ಶೈಲಿಯನ್ನು ಒತ್ತಿ ಹಾಕಿರುವುದರಿಂದ, Dear Diary ಪರಿಮಳ ಬ್ರ್ಯಾಂಡ್‌ಗೆ ಸ್ಪಷ್ಟವಾದ ವ್ಯಕ್ತಿತ್ವ ಮತ್ತು ದೃಢವಾದ ಕಲಾತ್ಮಕ ದಿಕ್ಕು ದೊರಕಿದೆ.


Click it and Unblock the Notifications