Ratan Tata: ಅಭಿವೃದ್ಧಿ & ಸಮಾಜಸೇವೆ ಅಜರಾಮರ; ಟಾಟಾ ಸನ್ಸ್ ಮುಖ್ಯಸ್ಥ ಭಾವುಕ ವಿದಾಯ

ಭಾರತ ಕಂಡ ದಿಗ್ಗಜ ಕೈಗಾರಿಕೋದ್ಯಮಿ ರತನ್ ಟಾಟಾ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲ ಚಿಕಿತ್ಸೆ ಪಡೆಯುತ್ತಿದ್ದ ಅವರು, ನಿಧನರಾಗಿರುವ ವಿಚಾರವನ್ನು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಖಚಿತಪಡಿಸಿ, ಭಾವುಕ ವಿದಾಯ ಹೇಳಿದರು. ಅವರ ಕೊಡುಗೆಗೆಳು ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಿದೆ, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗುತ್ತೇವೆ ಎಂದು ಹೇಳಿದ್ದಾರೆ.

ನಾನು ರತನ್ ನೇವಲ್ ಟಾಟಾ ಅವರಿಗೆ ಭಾವಪೂರ್ಣ ವಿದಾಯ ಹೇಳುತ್ತೇವೆ. ಅವರು ನೀಡಿರುವ ಕೊಡುಗೆಗಳು ಟಾಟಾ ಸಮೂಹಕ್ಕೆ ಮಾತ್ರವಲ್ಲದೆ ನಮ್ಮ ರಾಷ್ಟ್ರದ ನಿರ್ಮಾಣದಲ್ಲೂ ಸಹಕಾರಿಯಾಗಿವೆ.

 ರತನ್ ಟಾಟಾ ಅಭಿವೃದ್ಧಿ & ಸಮಾಜಸೇವೆ ಅಜರಾಮರ

ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಮುಖ್ಯಸ್ಥರಿಂತ ಹೆಚ್ಚಾಗಿದ್ದರು, ಅವರು ನನಗೆ ಮಾರ್ಗದರ್ಶಕ, ಸ್ನೇಹಿತರಾಗಿದ್ದರು. ಅವರ ಉತ್ಸಾಹ, ಯೋಚನೆಗಳು, ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯತೆಗೆ ಅವರಲ್ಲಿದ್ದ ಅಚಲವಾದ ಬದ್ಧತೆಯಿಂದಲೇ ಟಾಟಾ ಗ್ರೂಪ್, ಅವರ ನಾಯಕತ್ವದಲ್ಲಿ ಜಾಗತಿಕವಾಗಿ ಹೆಜ್ಜೆಗುರುತನ್ನು ವಿಸ್ತರಿಸಿತು.

ರತನ್ ಟಾಟಾ ಅವರ ಜನಸೇವೆ, ಸಮಾಜದ ಅಭಿವೃದ್ಧಿ ಕೆಲಸಗಳು ಲಕ್ಷಾಂತರ ಜನರಿಗೆ ಸಹಕಾರಿಯಾಗಿದೆ. ಶಿಕ್ಷಣದಿಂದ ಆರೋಗ್ಯದವರೆಗೆ ಅನೇಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ಕೆಲಸಗಳು ಮುಂದಿನ ಪೀಳಿಗೆಗೂ ಪ್ರಯೋಜನ ನೀಡಲಿದೆ. ಅವರ ಎಲ್ಲಾ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದೇ ಅವರಿಗೆ ಕೊಡುವ ಗೌರವ.

ಇಡೀ ಟಾಟಾ ಕುಟುಂಬದ ಪರವಾಗಿ, ನಾನು ಅವರ ಪ್ರೀತಿಪಾತ್ರರಿಗೆ, ಅಭಿಮಾನಿಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರು ಪ್ರತಿಪಾದಿಸಿದ ತತ್ವಗಳನ್ನು ಎತ್ತಿಹಿಡಿಯಲು ನಾವು ಶ್ರಮಿಸುತ್ತಿದ್ದು, ಅವರ ಜೀವನ ನಮಗೆ ಸ್ಪೂರ್ತಿ ನೀಡುತ್ತದೆ. ಎಂದು ಚಂದ್ರಶೇಖರನ್ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.

ಆನಂದ್ ಮಹಿಂದ್ರಾ, ಗೌತಮ್ ಅದಾನಿ ಸಂತಾಪ

ರತನ್ ಟಾಟಾ ಅವರ ನಿಧನಕ್ಕೆ ರಾಜಕೀಯ ನಾಯಕರು, ಕೈಗಾರಿಕೋದ್ಯಮಿಗಳು, ಕ್ರೀಡಾಪಟುಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

"ರತನ್ ಟಾಟಾ ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತದ ಆರ್ಥಿಕತೆ ಐತಿಹಾಸಿಕ ಪ್ರಗತಿ ಸಾಧಿಸುವಲ್ಲಿ, ರತನ್ ಟಾಟಾ ಅವರ ಜೀವನ ಮತ್ತು ಕೆಲಸಗಳು ಪ್ರಮುಖಪಾತ್ರ ವಹಿಸಿದೆ. ಈ ಹಂತಕ್ಕೆ ತಲುಪುವಲ್ಲಿ ಅವರ ಮಾರ್ಗದರ್ಶನ ಅಮೂಲ್ಯವಾದದ್ದು" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಅವರೊಬ್ಬ ಯಶಸ್ವಿ ಉದ್ಯಮಿ, ಆರ್ಥಿಕ ಸಂಪತ್ತು ಮತ್ತು ಯಶಸ್ಸನ್ನು ಸಮುದಾಯಗಳ ಸೇವೆಗೆ ಬಳಿಸಿದಾಗ ಹೆಚ್ಚು ಉಪಯುಕ್ತವಾಗಿದೆ ಎಂದು ತೋರಿಸಿಕೊಟ್ಟರು, ಅವರು ನಮ್ಮನ್ನು ಅಗಲಿದ ನಂತರ ಅವರು ಹಾಕಿಕೊಟ್ಟ ಮಾರ್ಗವನ್ನು ನಾವು ಅನುಸರಿಸಬೇಕು. ನಿಮಗೆ ಭಾವಪೂರ್ಣ ವಿದಾಯ, ಲೆಜೆಂಡ್‌ಗಳು ಎಂದಿಗೂ ಸಾಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಗೌತಮ್ ಅದಾನಿ ಕೂಡ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಭಾರತವು ಒಬ್ಬ ದೈತ್ಯನನ್ನು ಕಳೆದುಕೊಂಡಿದೆ, ರತನ್ ಟಾಟಾ ಆಧುನಿಕ ಭಾರತದ ಹಾದಿಯನ್ನು ಮರು ವ್ಯಾಖ್ಯಾನಿಸಿದ ಒಬ್ಬ ದಾರ್ಶನಿಕ. ಅವರು ಬರಿ ವ್ಯಾಪಾರಕ್ಕೆ ಸೀಮಿತವಾಗಿರಲಿಲ್ಲ, ದೇಶದ ಒಳಿತಿಗಾಗಿ ಕೆಲಸ ಮಾಡಿದರು, ಅವರಂತಹ ದಂತಕಥೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+