ದೇಶದ ಬಿಲಿಯನೇರ್‌ಗಳಲ್ಲಿ ಒಬ್ಬರಾದ ರತನ್ ಟಾಟಾ ಡಿಸೆಂಬರ್ 28 ರಂದು ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಲಿದ್ದಾರೆ. 85 ನೇ ವರ್ಷವನ್ನು ರತನ್ ಟಾಟಾ ನಾಳೆ (ಡಿ.28) ಪೂರ್ಣಗೊಳಿಸಲಿದ್ದಾರೆ. ಅದಕ್ಕೂ ಮುನ್ನವೇ ಟಾಟಾರಿಗೆ ಹುಟ್ಟುಹಬ್ಬದ ಗಿಫ್ಟ್ ಲಭ್ಯವಾಗಿದೆ.
ಹೌದು, ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರದಂದು ತಮ್ಮ 85 ನೇ ಹುಟ್ಟುಹಬ್ಬ ಆಚರಣೆಗೂ ಮುನ್ನವೇ ಉತ್ತಮ ಉಡುಗೊರೆಯನ್ನು ಸ್ವೀಕರಿಸಿದ್ದಾರೆ. ಈ ದಿನದ ವಹಿವಾಟಿನಲ್ಲಿ ಟಾಟಾ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಗಗನಕ್ಕೇರಿದೆ.

ಕಂಪನಿಗಳ ಷೇರುಗಳು ಬುಧವಾರ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಟಾಟಾ ಸ್ಟೀಲ್ ಪ್ರತಿ 52 ವಾರದ ಗರಿಷ್ಠ 138.80 ರೂಪಾಯಿಗೆ ಹೋಲಿಸಿದರೆ 137.15 ರೂಪಾಯಿಗೆ ಕೊನೆಗೊಂಡಿದೆ. ಟಾಟಾ ಮೋಟಾರ್ಸ್ ಪ್ರತಿ 52 ವಾರಗಳ ಗರಿಷ್ಠ ಬೆಲೆ 741.80 ರೂಪಾಯಿ ಆಗಿದ್ದು, ಶೇಕಡ 2.91 ರಷ್ಟು ಏರಿಕೆಯಾಗಿದೆ. ತಜ್ಞರ ಪ್ರಕಾರ, ಈ ವಾರ ಷೇರುಗಳು ಹೆಚ್ಚಾಗುವ ನಿರೀಕ್ಷೆಯಿದೆ.
ಸಾರ್ವಕಾಲಿಕ ಏರಿಕೆ ಕಂಡ ಟಾಟಾ ಸ್ಟೀಲ್ ಷೇರುಗಳು
ಬುಧವಾರದಂದು ಮಾರುಕಟ್ಟೆ ಆರಂಭವಾದ 70 ನಿಮಿಷಗಳಲ್ಲಿ ಟಾಟಾ ಸ್ಟೀಲ್‌ನ ಸ್ಟಾಕ್ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಬೆಳಗ್ಗೆ 10.25ಕ್ಕೆ 52 ವಾರದ ಗರಿಷ್ಠ 138.80 ರೂಪಾಯಿಗೆ ಏರಿದೆ. ಕಂಪನಿಯ ಷೇರುಗಳು 136.15 ರೂಪಾಯಿಗೆ ವಹಿವಾಟು ಆರಂಭಿಸಿದೆ. ಮಂಗಳವಾರ 135.20 ರೂಪಾಯಿಗೆ ಸ್ಥಿರವಾಗಿದೆ. ಈ ಸಮಯಕ್ಕೆ ಟಾಟಾ ಸ್ಟೀಲ್ಸ್ ಸ್ಟಾಕ್ 137.00 ರೂಪಾಯಿಗೆ ತಲುಪಿದೆ.
ಷೇರುಗಳು 52 ವಾರದ ಗರಿಷ್ಠ ಮಟ್ಟವನ್ನು ತಲುಪಿದಾಗ, ಕಂಪನಿಯ ಮಾರುಕಟ್ಟೆ ಮೌಲ್ಯ 1,70,809.67 ಕೋಟಿ ರೂಪಾಯಿ ಆಗಿದೆ. ಮಂಗಳವಾರದ ಅಂತ್ಯದಲ್ಲಿ 1,66,379.45 ಕೋಟಿ ರೂಪಾಯಿ ಆಗಿತ್ತು.
ಬುಧವಾರದ ಮಾರುಕಟ್ಟೆಯ ಮುಕ್ತಾಯದ ವೇಳೆಗೆ ಟಾಟಾ ಸ್ಟೀಲ್‌ನ ಮಾರುಕಟ್ಟೆ ಮೌಲ್ಯವು 1,68,656.76 ಕೋಟಿ ರೂಪಾಯಿಗಳಷ್ಟಿದೆ. ಇದು ದಿನದ ಮೌಲ್ಯಮಾಪನದಲ್ಲಿ ಸುಮಾರು 2,000 ಕೋಟಿ ರೂಪಾಯಿಗಳ ಏರಿಕೆಯನ್ನು ಸೂಚಿಸುತ್ತದೆ.
ಟಾಟಾ ಮೋಟಾರ್ಸ್ ಷೇರು ಜಿಗಿತ
ಟಾಟಾ ಮೋಟಾರ್ಸ್ ಷೇರುಗಳು 727.35 ರೂಪಾಯಿಯ ತನ್ನ ಆರಂಭಿಕ ಬೆಲೆಯಿಂದ 52 ವಾರಗಳ ಗರಿಷ್ಠ ಮಟ್ಟ 741.80 ರೂಪಾಯಿಗೆ ಬುಧವಾರ ತಲುಪಿದೆ. ಮಂಗಳವಾರದಂದು 719.65 ರೂಪಾಯಿಗೆ ಸ್ಥಿರವಾಗಿತ್ತು.
ಮಂಗಳವಾರದ ವಹಿವಾಟಿನ ಕೊನೆಯಲ್ಲಿ ಟಾಟಾ ಮೋಟಾರ್ಸ್ ಮಾರುಕಟ್ಟೆ ಮೌಲ್ಯವು ಸುಮಾರು 2,39,193.93 ಕೋಟಿ ರೂಪಾಯಿ ಆಗಿತ್ತು. ಆದರೆ 52 ವಾರಗಳ ಗರಿಷ್ಠ ಮಟ್ಟವನ್ನು ಈ ಷೇರು ತಲುಪಿದಾಗ ಮಾರುಕಟ್ಟೆ ಮೌಲ್ಯ ಸುಮಾರು 2,46,488.80 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಕಂಪನಿಯ ಮಾರುಕಟ್ಟೆ ಮೌಲ್ಯ ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ 2,46,090.06 ಕೋಟಿ ರೂಪಾಯಿ ಆಗಿದೆ. ಕಂಪನಿಯ ಷೇರುಗಳು 52 ವಾರಗಳ ಗರಿಷ್ಠ 738.20 ರೂಪಾಯಿಗೆ ತಲುಪಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯದ ಈ ಮಟ್ಟಕ್ಕೆ ತಲುಪಿದೆ. ಅಂದರೆ ವಹಿವಾಟು ಆರಂಭದಿಂದ ಅಂತ್ಯದೊಳಗೆ ಮಾರುಕಟ್ಟೆ ಮೌಲ್ಯದಲ್ಲಿ 6,896.13 ಕೋಟಿ ರೂಪಾಯಿ ಏರಿಕೆಯಾಗಿದೆ.


Click it and Unblock the Notifications