ಇತ್ತೀಚೆಗಷ್ಟೇ ನಿಧನರಾದ ದೇಶ ಕಂಡ ಅಪ್ರತಿಮ ಉದ್ಯಮಿ ರತನ್ ಟಾಟಾ ಅವರು ತಮ್ಮ ಆಸ್ತಿಯ ಬಗ್ಗೆ ಬರೆದಿಟ್ಟ ಉಯಿಲು ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ಟಾಟಾ ಅವರು ತಮ್ಮ ಉಯಿಲಿನಲ್ಲಿ ಮೋಹಿನಿ ಮೋಹನ್ ದತ್ತ ಅವರ ಹೆಸರನ್ನು ಹೆಸರಿಸಿರುವುದು ಮಾತ್ರವಲ್ಲದೇ ₹ 500 ಕೋಟಿ ಸಂಪತ್ತನ್ನು ಉಯಿಲು ಮೂಲಕ ಅವರಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಇದೀಗ ತಿರುವು ಬಹಳಷ್ಟು ಅಚ್ಚರಿ ಮತ್ತು ಗೊಂದಲಕ್ಕೆ ಕಾರಣವಾಗಿರುವುದು ಸತ್ಯ
ರತನ್ ಟಾಟಾ ಅವರಂತಹ ಖಾಸಗಿಯಾಗಿ ಬದುಕಲು ಇಷ್ಟಪಡುತ್ತಿದ್ದ ವ್ಯಕ್ತಿಯೊಬ್ಬರು ಉಯಿಲು ಬರೆದಾಗ, ಅದನ್ನು ಎಚ್ಚರಿಕೆಯಿಂದ ಯೋಜಿಸಿ, ಅದರಲ್ಲಿ ಲೋಕೋಪಕಾರ, ಕುಟುಂಬ ಮತ್ತು ಇತ್ಯಾದಿ ಸೇರಿಸಿರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಯಾರೂ ಅಂದಾಜಿಸದಿದ್ದದ್ದು 500 ಕೋಟಿ ರೂಪಾಯಿಗಳ ತಿರುವು ಹೌದು ಈ ಉಯಿಲಿನಲ್ಲಿ ಮೋಹಿನಿ ಮೋಹನ್ ದತ್ತ ಎಂಬ ಒಬ್ಬ ಹೆಸರು ಬಿಡಿಸಲಾಗದ ಒಗಟಿನಂತೆ ಎದ್ದು ಕಾಣುತ್ತದೆ.

6 ದಶಕಗಳ ಸಂಬಂಧ; ಮೋಹಿನಿ ಮೋಹನ್ ದತ್ತ ಯಾರು?
ಮೋಹಿನಿ ಮೋಹನ್ ದತ್ತಾ ಜಾರ್ಖಂಡ್‌ನ ಜೆಮ್ಶೆಡ್‌ಪುರದ ಉದ್ಯಮಿಯಾಗಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಇವರಿಬ್ಬರ ನಂಟು ಸುಮಾರು 6 ದಶಕಗಳ ಹಿಂದಿನದು.. ದತ್ತ ಮತ್ತು ಟಾಟಾ ಅವರ ಸಂಬಂಧವು 60 ವರ್ಷಗಳ ಸುದೀರ್ಘ ಅವಧಿಯಾಗಿದ್ದು, ಅವರು ಮೊದಲು ಜಮ್ಶೆಡ್‌ಪುರದಲ್ಲಿ 24 ವರ್ಷದವರಾಗಿದ್ದಾಗ ಹಾಸ್ಟೆಲ್‌ನಲ್ಲಿ ಭೇಟಿಯಾಗಿದ್ದರು. ಇವರಿಬ್ಬರು ಹಾಸ್ಟೆಲ್ ರೂಂ ಮೇಟ್ ಆಗಿದ್ದು ಮೋಹನ್ ದತ್ತಾ ಅವರ ವಯಸ್ಸು ೭೬ ವರ್ಷಗಳು. ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ, ದತ್ತ ಒಮ್ಮೆ ಹೇಳಿದ್ದರು, "ಅವರು ನನಗೆ ಸಹಾಯ ಮಾಡಿದರು ಮತ್ತು ನನ್ನನ್ನು ಬೆಳೆಸಿದರು." ಡಿಸೆಂಬರ್ 2024 ರಲ್ಲಿ ಟಾಟಾ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ದತ್ತ ಅವರನ್ನು ಆಹ್ವಾನಿಸಿದಾಗ ಅವರ ದೀರ್ಘಕಾಲೀನ ಸಂಬಂಧವು ಮತ್ತಷ್ಟು ಎತ್ತಿ ತೋರಿಸಲ್ಪಟ್ಟಿತ್ತು. ಈ ಹುಟ್ಟುಹಬ್ಬದ ಪಾರ್ಟಿಗೆ ಕೇವಲ ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು.
1961ರಲ್ಲಿ ರತನ್ ಟಾಟಾ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಜಾರ್ಖಂಡ್‌ನ ಜಮ್ಷೆಡ್‌ಪುರದಲ್ಲಿರುವ ಟಾಟಾ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಈ ವೇಳೆ ಅವರಿಗೆ ಉಳಿದುಕೊಳ್ಳಲು ನೀಡಿದ್ದ ಟಾಟಾ ಸಮೂಹದ ಸಿಬ್ಬಂದಿ ಹಾಸ್ಟೆಲ್‌ನಲ್ಲಿ ರತನ್‌ಗೆ ದತ್ತಾ ಪರಿಚಯವಾಗಿದ್ದರು. ಅಲ್ಲಿಂದ ಆರಂಭವಾದ ಸ್ನೇಹ ಬೆಳೆಯುತ್ತಲೇ ಬಂದಿತ್ತು. ಮೋಹಿನಿ ಮೋಹನ್ ದತ್ತಾ ಸ್ಟಾಲಿಯನ್ ತಮ್ಮದ್ ಆದ ಪುಟ್ಟ ಉದ್ಯಮ ಸ್ಟಾಲಿಯನ್ ಎಂಬ ಟ್ರಾವೆಲ್ ಏಜೆನ್ಸಿಯನ್ನು ಹೊಂದಿದ್ದರು. ಆದರೆ 2013 ರಲ್ಲಿ, ಇದು ತಾಜ್ ಗ್ರೂಪ್ ಆಫ್ ಹೋಟೆಲ್ಸ್, ತಾಜ್ ಸರ್ವೀಸಸ್‌ನ ಅಂಗಸಂಸ್ಥೆಯೊಂದಿಗೆ ವಿಲೀನ ಮಾಡಲಾಯಿತು. ಮೋಹಿನಿ ಮೋಹನ್ ದತ್ತಾ ಮತ್ತು ಅವರ ಕುಟುಂಬವು ಸ್ಟಾಲಿಯನ್‌ನಲ್ಲಿ 80 ಪ್ರತಿಶತ ಪಾಲನ್ನು ಹೊಂದಿತ್ತು; ಉಳಿದ ಪಾಲು ಟಾಟಾ ಗ್ರೂಪ್ ಒಡೆತನದಲ್ಲಿತ್ತು. ಇನ್ನು ದತ್ತಾರ ಪುತ್ರಿ 2015ರವರೆಗೆ ಟಾಟಾ ಒಡೆತನದ ತಾಜ್ ಹೋಟೆಲ್ ಹಾಗೂ 2024ರ ವರೆಗೆ ಟಾಟಾ ಟ್ರಸ್ಟ್‌ನಲ್ಲಿ ಕೆಲಸ ಮಾಡಿದ್ದರು.
ಅಕ್ಟೋಬರ್‌ನಲ್ಲಿ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ದತ್ತಾ ಅವರ ಉಪಸ್ಥಿತರಿದ್ದು. ಇದು ಟಾಟಾ ಅವರ ಜೊತೆ ಬಾಂಧವ್ಯವನ್ನು ಮತ್ತೆ ಸಾರಿ ಹೇಳಿತು. ಟಾಟಾ ಅವರ ಜೊತೆ ಇದ್ದ ಆಳವಾಗಿ ಬೇರೂರಿರುವ ಸಂಬಂಧಗಳು ಪ್ರಮುಖ ಹಂತವನ್ನು ಪಡೆದುಕೊಂಡಿವೆ ಎಂದರೆ ತಪ್ಪಾಗಲಾರದು. ಟಾಟಾ ಅವರ ಇಚ್ಛೆಯಂತೆ ಬರೆದ ಉಯಿಲು ತೀವ್ರ ಚರ್ಚೆಯ ವಿಷಯವಾಗಿದೆ. ದತ್ತಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಟಾಟಾ ಪಾಲುದಾರರಲ್ಲಿ ಆತಂಕಗಳು
ಈ ಬಹಿರಂಗಪಡಿಸುವಿಕೆಯು ಟಾಟಾ ಕುಟುಂಬದಲ್ಲಿ ಹುಬ್ಬೇರಿಸುವಂತೆ ಮಾಡಿದೆ, ವಿಶೇಷವಾಗಿ ನೋಯೆಲ್ ಟಾಟಾ ಮತ್ತು ಅವರ ಮಕ್ಕಳು ಸೇರಿದಂತೆ ಪ್ರಮುಖ ಸದಸ್ಯರನ್ನು ಉಯಿಲಿನಿಂದ ಹೊರಗಿಡಲಾಗಿದೆ. ಅವರನ್ನು ಏಕೆ ಹೊರಗಿಡಲಾಯಿತು ಎಂಬುದು ರಹಸ್ಯವಾಗಿದ್ದರೂ, ದತ್ತ ಅವರಿಗೆ ಸಿಕ್ಕಿರುವ ದೊಡ್ಡ ಪಿತ್ರಾರ್ಜಿತವು ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ, ಚರ್ಚೆಗಳ ಸುಳಿಯಾಗಿದೆ. ರತನ್ ಟಾಟಾ ಅವರ ಉಯಿಲಿನ ಬಗ್ಗೆ ಮಾತುಕತೆಗಳು ನಡೆಯುತ್ತಿರುವಾಗ, ಭಾರತದ ಪ್ರಭಾವೀ ಉದ್ಯಮಿಗಳಲ್ಲಿ ಒಬ್ಬರ ಜೊತೆ ಅನ್ಯೋನ್ಯ ಬಾಂಧವ್ಯ ಹೊಂದಿದ್ದ ಮೋಹಿನಿ ಮೋಹನ್ ದತ್ತ ಅವರತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಟಾಟಾ ಅವರ ವಿಲ್ ಮತ್ತು ದತ್ತಾ ಅವರ ಅರ್ಹತೆ
ಟಾಟಾ ಉಯಿಲು ಪ್ರಕಾರ ಅವರ ಉಳಿದ ಆಸ್ತಿಯ ಮೂರನೇ ಒಂದು ಭಾಗವನ್ನು ಜಮ್‌ಶೆಡ್‌ಪುರದ ಉದ್ಯಮಿ ಮತ್ತು ಟಾಟಾ ಗ್ರೂಪ್‌ನ ಮಾಜಿ ಉದ್ಯೋಗಿ ದತ್ತಾ ಅವರಿಗೆ ನೀಡಬೇಕಾಗುತ್ತದೆ. ಅಂದರೆ 500 ಕೋಟಿ ಆಸ್ತಿ. ಈ ಆಸ್ತಿಗಳಲ್ಲಿ 350 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬ್ಯಾಂಕ್ ಠೇವಣಿಗಳು ಮತ್ತು ವರ್ಣಚಿತ್ರಗಳು ಮತ್ತು ಕೈಗಡಿಯಾರಗಳಂತಹ ವೈಯಕ್ತಿಕ ವಸ್ತುಗಳನ್ನು ಮಾರಾಟದಿಂದ ಬಂದ ಹಣ ಸೇರಿವೆ. ಉಳಿದ ಮೂರನೇ ಎರಡರಷ್ಟು ಆಸ್ತಿಯನ್ನು ಟಾಟಾ ಅವರ ಅರ್ಧ ಸಹೋದರಿಯರಾದ ಶಿರೀನ್ ಜೆಜೆಭಾಯ್ ಮತ್ತು ಡಿಯಾನಾ ಜೆಜೆಭಾಯ್ ಅವರಿಗೆ ನೀಡಲಾಗಿದೆ, ಅವರು ಉಯಿಲಿನ ಕಾರ್ಯನಿರ್ವಾಹಕರೂ ಆಗಿದ್ದಾರೆ.
ಇದಲ್ಲದೇ ನಿಷ್ಠಾವಂತ ಮನೆ ಸಿಬ್ಬಂದಿ ಮತ್ತು ಅವರ ಕಾರ್ಯನಿರ್ವಾಹಕ ಸಹಾಯಕ ಶಂತನು ನಾಯ್ಡು ಸೇರಿದಂತೆ ಹಲವಾರು ಫಲಾನುಭವಿಗಳಿಗೆ ಸಂಪತ್ತನ್ನು ಹಂಚಿಕೆ ಮಾಡಲಾಗಿದೆ. ಟಾಟಾ ಅವರು ತಮ್ಮ ಸಾಕು ನಾಯಿ ಟಿಟೊಗೆ ಅನಿಯಮಿತ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ನಿಬಂಧನೆಗಳನ್ನು ಸಹ ಮಾಡಲಾಗಿದೆ. ಟಾಟಾ ಸನ್ಸ್‌ನಲ್ಲಿನ ಅವರ ಪಾಲನ್ನು ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್‌ಗೆ ವರ್ಗಾಯಿಸಲಾಯಿಗೆ.
ಅವರ ಆಸ್ತಿಗಳಲ್ಲಿ ಅಲಿಬಾಗ್‌ನಲ್ಲಿ ಬೀಚ್ ಬಂಗಲೆ, ಜುಹುವಿನಲ್ಲಿ ಎರಡು ಅಂತಸ್ತಿನ ಮನೆ, 350 ಕೋಟಿ ರೂ.ಗಳಿಗಿಂತ ಹೆಚ್ಚು ಸ್ಥಿರ ಠೇವಣಿಗಳು ಮತ್ತು ಟಾಟಾ ಸನ್ಸ್‌ನಲ್ಲಿನ ಪಾಲು ಸೇರಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications