ಅನ್ನಭಾಗ್ಯದ ಯೋಜನೆಯಡಿ ಜಾರಿಗೆ ಬಂದ ರೇಷನ್ ಕಾರ್ಡ್ ಮಧ್ಯಮ ವರ್ಗದ ಜನರ, ಬಡ ವರ್ಗದ ಜನರಿಗೆ ಭಾರೀ ಪ್ರಯೋಜನವನ್ನು ನೀಡುತ್ತಾ ಬಂದಿದೆ. ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ (Central Govt) ಜಾರಿಗೆ ತಂದ ರೇಷನ್ ಕಾರ್ಡ್ (Ration Card), ಬಡವರಿಗೆ ಸಬ್ಸಿಡಿ ದರದಲ್ಲಿ ಅಕ್ಕಿ, ಸಕ್ಕರೆ, ಗೋಧಿ, ಇನ್ನಿತರ ಆಹಾರ ಧಾನ್ಯಗಳನ್ನು ನೀಡುತ್ತದೆ. ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರು ಈ ಸೌಲಭ್ಯವನ್ನು ಪಡೆಯಬಹುದು.

ಆದರೆ ಇದೀಗ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ. ಅದೇನೆಂದರೆ ಪಡಿತರ ಅಕ್ಕಿಯ ಬದಲಿಗೆ ನೇರವಾಗಿ ಹಣ ನೀಡಿದರೆ ಏನಾಗಬಹುದು ಎಂಬ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಈ ಚರ್ಚೆ ಮುನ್ನೆಲೆಗೆ ಬಂದಿದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿದೆ. ಪಡಿತರ ಚೀಟಿಯಲ್ಲಿ ನೀಡುವ ಅಕ್ಕಿಯ ಗುಣಮಟ್ಟದ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತದೆ.
ಸರ್ಕಾರದ ಬೊಕ್ಕಸಕ್ಕೆ ಪೆಟ್ಟು!
ಇನ್ನು ಸರ್ಕಾರ ಕೂಡಾ ಪಡಿತರ ಚೀಟಿ ಮೂಲಕ ಒಂದು ಕಿಲೋ ಅಕ್ಕಿಯನ್ನು ಖರೀದಿಸಲು, ಸಂಗ್ರಹಿಸಲು ಮತ್ತು ಜನರಿಗೆ ತಲುಪಿಸಲು ಸುಮಾರು ₹40 ಖರ್ಚು ಮಾಡುತ್ತದೆ ಎನ್ನಲಾಗಿದೆ. ಆದರೆ ಉಚಿತವಾಗಿ ನೀಡಲಾಗುವ ಅಕ್ಕಿಯ ಹಿಂದೆಯೂ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಲಾಗುತ್ತದೆ. ಆದತೆ 2025ರ ಏಪ್ರಿಲ್‌ನಿಂದ ಅಕ್ಟೋಬರ್ ನಡುವೆ ಸಾಗಾಣಿಕೆ ಮತ್ತು ಸಂಗ್ರಹಣೆಯ ದೋಷಗಳಿಂದಾಗಿ 53,000 ಟನ್ ಆಹಾರ ಧಾನ್ಯ ಹಾಳಾಗಿದೆ ಎಂದು ವರದಿಯಾಗಿದೆ. ಇದರಿಂದ ಸರ್ಕಾರದ ಆರ್ಥಿಕತೆ ಮೇಲೂ ಪೆಟ್ಟು ಬಿದ್ದಿದೆ ಎನ್ನಲಾಗಿದೆ..
ಸರ್ಕಾರದ ಹೊಸ ನಿರ್ಧಾರ, ಜನರಿಗೆ ಬೆಂಬಲ
ಈ ಬೃಹತ್ ನಷ್ಟ ಮತ್ತು ಅಕ್ರಮ ಪಡಿತರ ದುರುಪಯೋಗವನ್ನು ತಡೆಯಲು, ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರವು ಪ್ರತಿ ಕಿಲೋಗೆ ಖರ್ಚು ಮಾಡುವ ₹40 ಅನ್ನು ನೇರವಾಗಿ ಬಡವರ ಖಾತೆಗೆ ಜಮಾ ಮಾಡಿದರೆ, ಆ ಮೂಲಕ ಜನರು ತಮ್ಮಿಷ್ಟದಂತೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಖರೀದಿಸಬಹುದು ಎಂಬುದು ಅಭಿಪ್ರಾಐ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಪಡಿತರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂಬುದು ಇದರ ಉದ್ದೇಶ. ಪ್ರಸ್ತುತ, ಈ ಯೋಜನೆಯು ದೇಶದ 80 ಕೋಟಿಗೂ ಹೆಚ್ಚು ಜನರಿಗೆ ನೆರವಾಗುತ್ತಿದ್ದು, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಧಾನ್ಯವನ್ನು ಖರೀದಿಸಲು, ಸಂಗ್ರಹಿಸಲು, ಸಾಗಿಸಲು ಮತ್ತು ಅದರ ಮೇಲಿನ ಬಡ್ಡಿಯಂತಹ ಖರ್ಚುಗಳನ್ನು ಸೇರಿಸಿದರೆ, ಒಂದು ಕಿಲೋ ಧಾನ್ಯವನ್ನು ಪಡಿತರ ಅಂಗಡಿಗೆ ತಲುಪಿಸಲು ₹28 ರಿಂದ ₹40 ರವರೆಗೆ ವೆಚ್ಚವಾಗುತ್ತದೆ. 2024-25ರಲ್ಲಿ ಎಫ್‌ಸಿಐ (FCI) ಅಂದಾಜಿನ ಪ್ರಕಾರ, ಪ್ರತಿ ಕಿಲೋ ಅಕ್ಕಿಗೆ ₹39.75 ಮತ್ತು ಗೋಧಿಗೆ ₹27.74 ಖರ್ಚಾಗುತ್ತಿದೆ ಎನ್ನಲಾಗಿದೆ. ಅಂದತೆ ಒಟ್ಟಾರೆಯಾಗಿ, ಆಹಾರ ಸಬ್ಸಿಡಿಗಾಗಿ ಸರ್ಕಾರದ ವೆಚ್ಚ ₹2.05 ಲಕ್ಷ ಕೋಟಿ ತಲುಪಿದೆ.
ಸರ್ಕಾರ ಪಡಿತರ ಸೌಲಭ್ಯಕ್ಕಾಗಿ ಇಷ್ಟು ಕೋಡಿ ಖರ್ಚು ಮಾಡಿದರೂ, ಅಗತ್ಯವಿರುವವರಿಗೆ ಸಂಪೂರ್ಣ ಪ್ರಯೋಜನ ತಲುಪುತ್ತಿಲ್ಲ ಎಂಬುದು ವಿಪರ್ಯಾಸ. ಅಲ್ಲದೇ ಈ ಬಗ್ಗೆ ಟೀಕೆಗಳು ಕೇಳಿಬರುತ್ತಿದೆ. ವಿವಿಧ ವರದಿಗಳ ಪ್ರಕಾರ, ಸುಮಾರು 28% ಅಗ್ಗದ ಧಾನ್ಯಗಳು ಅರ್ಹರಲ್ಲದವರಿಗೆ ತಲುಪುತ್ತಿವೆ ಎನ್ನಲಾಗಿದೆ. ಅಂದರೆ, ಸರಿ ಸುಮಾರು 20 ಮಿಲಿಯನ್ ಟನ್ ಧಾನ್ಯ ಪ್ರತಿ ವರ್ಷ ದುರುಪಯೋಗವಾಗುತ್ತದೆ ಅಥವಾ ಹಾಳಾಗುತ್ತದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ಅಂದಾಜು ₹69,108 ಕೋಟಿ ನಷ್ಟವಾಗುತ್ತಿದೆ ಎನ್ನಲಾಗಿದೆ. ಆದ್ದರಿಂದ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಲಿದೆ ಎನ್ನಲಾಗಿದೆ.
ಆದ್ದರಿಂದ ಪಡಿತರ ತಲುಪಿಸುವ ಸಂಪೂರ್ಣ ಪ್ರಕ್ರಿಯೆಯಲ್ಲಿನ ಕೊರತೆಗಳನ್ನು ನಿವಾರಿಸಲು, ನೇರವಾಗಿ ಹಣ ನೀಡುವ ವ್ಯವಸ್ಥೆಯನ್ನು ತಜ್ಞರು ಉತ್ತಮ ಪರ್ಯಾಯವೆಂದು ಪರಿಗಣಿಸುತ್ತಾರೆ. ಸರ್ಕಾರವು ಧಾನ್ಯ ವಿತರಣೆಗೆ ತಗಲುವ ವೆಚ್ಚವನ್ನು ನೇರವಾಗಿ ಆಧಾರ್‌ಗೆ ಜೋಡಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರೆ, ಜನರಿಗೂ ಪ್ರಯೋಜನವಾಗಲಿದೆ ಎಂಬುದು ಅಭಿಪ್ರಾಯ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಿ ಅಕ್ರಮ, ವಂಚನೆಗಳು ನಿಲ್ಲುತ್ತದೆ. ಜನರೂ ಕೂಡಾ ತಮಗೆ ಬೇಕಾದ ಗುಣಮಟ್ಟದ ಆಹಾರ, ಧಾನ್ಯಗಳನ್ನು ಖರೀದಿಸಬಹುದು.
ಕರ್ನಾಟಕದ 'ಅನ್ನ ಭಾಗ್ಯ' ಯೋಜನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಯೋಜನೆಯಾಗಿದೆ. ಇದರಡು ಪ್ರತೀ ಸದಸ್ಯರು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆದ್ರೆ ಇದೀಗ ಆ ಅಕ್ಕಿಯ ಬದಲಿಗೆ ಹಣ ಅಥವಾ ಪೌಷ್ಠಿಕ ಆಹಾರ ಕಿಟ್ ನೀಡಲಾಗುತ್ತಿದೆ. ಅದೇ ರೀತಿ ದೇಶದೆಲ್ಲೆಡೆ ಜಾರಿಗೆ ಬಂದರೆ, ಒಂದೇ ನಿಯಮ ಜಾರಿಗೆ ಬರಲಿದೆ.
ಇನ್ನು ದೇಶದೆಲ್ಲೆಡೆ ಇದೇ ರೀತಿ ನಗದು ಸೇವೆಯನ್ನು ಆರಂಭಿಸಬೇಕೆಂದರೆ ಸವಾಲಿನ ಮಾತು. ಅದಕ್ಕಾಗಿ ಸರ್ಕಾರವು ಇದನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಬಹುದು. ಉದಾಹರಣೆಗೆ, ಒಂದು ಕಿಲೋಗೆ ₹40 ರಂತೆ, 25 ಕಿಲೋ ಅಕ್ಕಿ ಪಡೆಯುವ ಐವರ ಕುಟುಂಬಕ್ಕೆ ಪ್ರತಿ ತಿಂಗಳು ಸುಮಾರು ₹1,000 ಹಣ ಜಮಾ ಆಗಲಿದೆ. ಸದ್ಯ ಜಾರಿಗೆ ಬರಬಹುದು ಎಂದು ಊಹಾಪೋಹಗಳಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಕ್ರಮ ಏನೆಂದು ನೋಡಬೇಕಿದೆ.


Click it and Unblock the Notifications