ಹಲವಾರು ಪ್ರಮುಖ ಯೋಜನೆಗಳಿಗೆ, ಸೌಲಭ್ಯಗಳನ್ನು ಪಡೆಯಬೇಕೆಂದರೆ ಆಧಾರ್ ಕಾರ್ಡ್ (Aadhaar Card) ಹೇಗೆ ಮುಖ್ಯವೋ, ಅದೇ ರೀತಿ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ (Ration Card) ಕೂಡಾ ಒಂದು. ಆದರೆ ಇತ್ತೀಚೆಗೆ ಕರ್ನಾಟಕ ಸರ್ಕಾರ ಈ ಬಗ್ಗೆ ಮಹತ್ವದ ಕ್ರಮ ಕೈಗೊಳ್ಳುತ್ತಿದೆ. ಈ ಮಧ್ಯೆ, ಮೋದಿ ಸರ್ಕಾರ (Modi Government) ಪಡಿತರ ಚೀಟಿ ಹೊಂದಿರುವವರಿಗೆ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಮೋದಿ ಸರ್ಕಾರದ ಈ ನಿರ್ಧಾರದಿಂದ ಅನೇಕರಿಗೆ ನೆಮ್ಮದಿ ಸಿಗಲಿದೆ.

ಇನ್ಮೇಲೆ ಎಲ್ಲಾ ಆನ್‌ಲೈನ್‌ನಲ್ಲಿ ಲಭ್ಯ!
ಪಡಿತರ ಚೀಟಿಗಳು ಸಾಮಾನ್ಯವಾಗಿ ಭಾರತದ ಪ್ರತಿಯೊಂದು ಕುಟುಂಬಕ್ಕೂ ಬಹಳ ಮುಖ್ಯ ದಾಖಲೆ. ದೇಶದಲ್ಲಿ ಆಹಾರ ಭದ್ರತಾ ವ್ಯವಸ್ಥೆ ಬಲಪಡಿಸಲು ಸರ್ಕಾರ ಕೈಗೊಂಡ ಯೋಜನೆಗಳಲ್ಲಿ ಇದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಇದೀಗ ಲೋಕಸಭೆಯಲ್ಲಿ ಕೇಂದ್ರ ಸಹಾಯಕ ಸಚಿವೆ ನಿಮುಬೆನ್ ಬಂಭಾನಿಯಾ ಇದರ ಕುರಿತು ಮಾಹಿತಿ ನೀಡಿದ್ದಾರೆ. ದೇಶಾದ್ಯಂತ ಇರುವ ಎಲ್ಲ ಪಡಿತರ ಚೀಟಿಗಳನ್ನು ಶೇಕಡಾ ನೂರರಷ್ಟು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಈ ವೇಳೆ ಸಚಿವೆ ಸ್ಪಷ್ಟನೆ ನೀಡಿದರೆ. ಸರ್ಕಾರ ನೀಡುವ ವಿತರಣಾ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸುವುದೇ ಇದರ ಮುಖ್ಯ ಗುರಿಯಾಗಿದೆ.
ಅಕ್ರಮಕ್ಕೆ ತಡೆ, ಅರ್ಹರಿಗೆ ಅನುಕೂಲ!
ಯಾವುದೇ ಅಕ್ರಮಕ್ಕೆ ಅವಕಾಶ ನೀಡದೆ, ಅರ್ಹರಿಗೆ ಮಾತ್ರ ಪ್ರಯೋಜನ ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶ. ಆದ್ದರಿಂದ ಈಗಾಗಲೇ ರೇಷನ್ ಕಾರ್ಡ್ ಅನ್ನು ಡಿಜಿಟಲೀಕರಣ ಮಾಡಲು ಮುಂದಾಗಿದೆ. ಡಿಜಿಟಲೀಕರಣದ ಭಾಗವಾಗಿ 99%ಗೂ ಹೆಚ್ಚು ಪಡಿತರ ಚೀಟಿಗಳು ಆಧಾರ್‌ನೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಬಯೋಮೆಟ್ರಿಕ್ ಗುರುತಿನಿಂದ ಇನ್ಮೇಲೆ ಸರ್ಕಾರದಿಂದ ನೀಡಲಾಗುವ ಸೌಲಭ್ಯ, ಅಕ್ಕಿ, ಧಾನ್ಯಗಳನ್ನು ಪಡೆಯಬಹುದು. ಅನರ್ಹ ಕಾರ್ಡ್‌ಗಳನ್ನು ತೆಗೆದುಹಾಕಿ, ನಿಜವಾದ ಬಡವರಿಗೆ ಆಹಾರ ಧಾನ್ಯ ತಲುಪಿಸುವ ನಿರಂತರ ಮೇಲ್ವಿಚಾರಣೆ ಕೂಡಾ ಈಗಾಗಲೇ ನಡೆಯುತ್ತಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಹಾರ ಭದ್ರತೆಗೆ ಉನ್ನತ ಆದ್ಯತೆ ನೀಡುವುದೇ ಇದರ ಉದ್ದೇಶ ಎಂದು ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:
ಕೇಂದ್ರ ಸರ್ಕಾರವು ದೇಶದ ಜನರ ಅನುಕೂಲಕ್ಕಾಗಿ, 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ' (PMGKAY) ಅಡಿಯಲ್ಲಿ ವಿಶ್ವದ ಅತಿ ದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದರ ಮೂಲಕ ರಾಷ್ಟ್ರದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 81 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಕೊರೊನಾ ಕಷ್ಟದ ಸಮಯದಲ್ಲಿ ಪ್ರಾರಂಭವಾದ ಈ ಯೋಜನೆಯು ಇಂದಿಗೂ ನಿರಂತರವಾಗಿ ಕೋಟ್ಯಾಂತರ ಜನರ ಹಸಿವನ್ನು ನೀಗಿಸಿ, ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತಿದೆ.
ತಂತ್ರಜ್ಞಾನದ ಮೂಲಕ ಸಾಮಾನ್ಯ ಜನರ ಬಳಿಗೆ ಕೇಂದ್ರ ಸರ್ಕಾರದ ಎಲ್ಲಾ ಪ್ರಯೋಜನಗಳು ಇನ್ಮೇಲೆ ಸಿಗಲಿದೆ. ಪಾರದರ್ಶಕತೆ ಹೆಚ್ಚಿಸಿ, ಪಡಿತರ ಅಂಗಡಿಗಳಲ್ಲಿನ ಭ್ರಷ್ಟಾಚಾರವನ್ನು ಕಡಿಮೆ ಮಾಡುವುದೇ ಇದರ ಮೂಲ ಉದ್ದೇಶ.
ಡಿಜಿಟಲ್ ಪಡಿತರ ಚೀಟಿಗಳಿಂದ ಸರ್ಕಾರದ ಬಳಿ ಇನ್ಮೇಲೆ ನಿಖರ ಮಾಹಿತಿ ಲಭ್ಯವಾಗಲಿದೆ. ಪ್ರದೇಶವಾರು ಬೇಡಿಕೆ ಅರಿತು, ಆಹಾರ ಧಾನ್ಯಗಳ ಪೂರೈಕೆ ಸುಲಭವಾಗಿದೆ. ಇದರಿಂದ ಧಾನ್ಯಗಳ ವ್ಯರ್ಥವಾಗುವುದನ್ನು ತಡೆಯಬಹುದು. ಕಾರ್ಡುದಾರರು ತಮ್ಮ ಫೋನ್‌ಗಳಲ್ಲಿಯೇ ಪಡಿತರ ವಿವರಗಳನ್ನು ಪರಿಶೀಲಿಸುವ ಸೌಲಭ್ಯವೂ ಲಭ್ಯವಿದೆ. ಆದ್ದರಿಂದ ಸರ್ಕಾರದ ಆಹಾರ ಧಾನ್ಯ ಪೂರೈಕೆಯನ್ನು ಸರಿಯಾಗಿ ತಲುಪುವಂತೆ ಮಾಡುವ ಗುರಿಯೊಂದಿಗೆ, ಸರ್ಕಾರ ಹೊಸ ಡಿಜಿಟಲ್ ಸೇವೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಇನ್ಮೇಲೆ ಪಡಿತರ ಚೀಟಿಯಲ್ಲೂ ಡಿಜಿಟಲೀಕರಣ ಬರಲಿದ್ದು, ಇದರಿಂದ ಜನರಿಗೂ ಬಹಳಷ್ಟು ಅನುಕೂಲವಾಗಲಿದೆ.


Click it and Unblock the Notifications