ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಕ್ಟೋಬರ್ ವೇಳೆಗೆ ಕಾಲ್ ಮನಿ ಮಾರ್ಕೆಟ್‌ನಲ್ಲಿ ತನ್ನ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಗಾಗಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಮುಂದಾಗಿದೆ. ಡಿಜಿಟಲ್ ರುಪೀ ಬಳಕೆಗಾಗಿ ಈಗಾಗಲೇ ಬ್ಯಾಂಕ್‌ಗಳು ಉತ್ತೇಜನ ನೀಡುತ್ತಿದೆ. ಯುಪಿಐ ವಹಿವಾಟಿನಲ್ಲಿಯೂ ಡಿಜಿಟಲ್ ರುಪೀ ವಹಿವಾಟು ಆರಂಭಿಸಲಾಗಿದೆ.
ಕಾಲ್ ಮನಿ ಮಾರ್ಕೆಟ್ ಅಲ್ಪಾವಧಿಯ ಅಂತರಬ್ಯಾಂಕ್ ಸಾಲ ಮಾರುಕಟ್ಟೆಯಾಗಿದ್ದು, ಅಲ್ಲಿ ಬ್ಯಾಂಕುಗಳು ಪರಸ್ಪರ ಹಣವನ್ನು ಸಾಲವಾಗಿ ನೀಡುತ್ತವೆ, ಪಡೆಯುತ್ತದೆ. ಸುದ್ದಿ ಸಂಸ್ಥೆ ಪಿಟಿಐಯಲ್ಲಿನ ವರದಿಯ ಪ್ರಕಾರ ಸಿಬಿಡಿಸಿ ಅನ್ನು ಈ ಮಾರುಕಟ್ಟೆಯಲ್ಲಿ ಟೋಕನ್ ಆಗಿ ಬಳಸಲಾಗುತ್ತದೆ. ಈ ಡಿಜಿಟಲ್ ರುಪೀ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಡಿಜಿಟಲ್ ರುಪೀ-ವೋಲ್‌ಸೇಲ್ (e-W) ಎಂದರೇನು?
ಡಿಜಿಟಲ್ ರುಪೀ ವೋಲ್‌ಸೇಲ್ (e-W) ಎಂದು ಕರೆಯಲ್ಪಡುವ ವೋಲ್‌ಸೆಲ್ ಸಿಬಿಡಿಸಿಗಾಗಿ ಪ್ರಾಯೋಗಿಕ ಯೋಜನೆಯನ್ನು ನವೆಂಬರ್ 1, 2022 ರಂದು ಪ್ರಾರಂಭಿಸಲಾಯಿತು. ಈ ಪ್ರಾಯೋಗಿಕ ಬಳಕೆಯ ಪ್ರಕರಣವು ಸರ್ಕಾರಿ ಭದ್ರತೆಗಳಲ್ಲಿನ ದ್ವಿತೀಯ ಮಾರುಕಟ್ಟೆ ವಹಿವಾಟುಗಳ ಇತ್ಯರ್ಥಕ್ಕೆ ಸೀಮಿತವಾಗಿದೆ. ಈ ಹೊಸ ಪ್ರಾಯೋಗಿಕ ಯೋಜನೆಯು ಸಿಬಿಡಿಸಿಯ ಬಳಕೆಯನ್ನು ಕಾಲ್ ಮನಿ ಮಾರ್ಕೆಟ್‌ಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.
ಆರ್‌ಬಿಐ ಟೆಸ್ಟಿಂಗ್ ಯೋಜನೆ
ಸಿಬಿಡಿಸಿಯ ಕಾರ್ಯಸಾಧ್ಯತೆ ಮತ್ತು ದಕ್ಷತೆಯನ್ನು ಪರೀಕ್ಷಿಸಲು ಆರ್‌ಬಿಐ ಈ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿದೆ. "ಈ ತಿಂಗಳು ಅಥವಾ ಮುಂದಿನ ತಿಂಗಳು ಆರ್‌ಬಿಐ ಕಾಲ್ ಮನಿ ಮಾರ್ಕೆಟ್‌ನಲ್ಲಿ ಡಿಜಿಟಲ್ ರುಪೀಯನ್ನು ಆರಂಭ ಮಾಡಲಿದೆ," ಎಂದು ವರದಿಯಾಗಿದೆ. ಕೇಂದ್ರ ಹಣಕಾಸು ವರ್ಷ 2022-23 ದ ಬಜೆಟ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಡಿಜಿಟಲ್ ರುಪೀ ಆರಂಭದ ಘೋಷಣೆಯನ್ನು ಮಾಡಿದ್ದಾರೆ.
9 ಬ್ಯಾಂಕ್‌ಗಳನ್ನು ಆಯ್ಕೆ ಮಾಡಿದ ಆರ್‌ಬಿಐ, ಇಲ್ಲಿದೆ ಪಟ್ಟಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವೋಲ್‌ಸೆಲ್ ಸಿಬಿಡಿಸಿಯ ಪ್ರಾಯೋಗಿಕ ಯೋಜನೆಗಾಗಿ ಒಟ್ಟು 9 ಬ್ಯಾಂಕ್‌ಗಳನ್ನು ಆಯ್ಕೆ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಈ ಒಂಬತ್ತು ಬ್ಯಾಂಕುಗಳು ಆಗಿದೆ.
ಅದಲ್ಲದೆ, ಸೆಂಟ್ರಲ್ ಬ್ಯಾಂಕ್ ಈಗಾಗಲೇ ಡಿಸೆಂಬರ್ 1, 2022 ರಂದು ಸಿಬಿಡಿಸಿ (e-R) ಯ ರಿಟೇಲ್ ಆವೃತ್ತಿಯ ಪ್ರಾಯೋಗಿಕ ಆರಂಭವನ್ನು ಮಾಡಿದೆ. e-R ಕಾನೂನು ಟೆಂಡರ್ ಅನ್ನು ಪ್ರತಿನಿಧಿಸುವ ಡಿಜಿಟಲ್ ಟೋಕನ್ ರೂಪದಲ್ಲಿದೆ. ಕರೆನ್ಸಿ ಮತ್ತು ನಾಣ್ಯಗಳನ್ನು ಹೇಗೆ ಬಳಕೆ ಮಾಡಲಾಗುತ್ತದೆಯೋ ಹಾಗೆಯೇ ಇದನ್ನು ಬಳಸಲಾಗುತ್ತದೆ, ಅಷ್ಟೇ ಮೌಲ್ಯವನ್ನು ಇದು ಹೊಂದಿರುತ್ತದೆ.
ಜಿ20 ಶೃಂಗಸಭೆಯ ಸಮಯದಲ್ಲಿ ಆರ್‌ಬಿಐ ಹಣಕಾಸು ವಲಯದಲ್ಲಿ ವಿವಿಧ ಡಿಜಿಟಲ್ ಉಪಕ್ರಮಗಳನ್ನು ಪ್ರದರ್ಶಿಸುತ್ತಿದೆ. ಇವುಗಳಲ್ಲಿ ಘರ್ಷಣೆ ರಹಿತ ಕ್ರೆಡಿಟ್‌ಗಾಗಿ ಪಬ್ಲಿಕ್ ಟೆಕ್ ಪ್ಲಾಟ್‌ಫಾರ್ಮ್ (ಪಿಟಿಪಿ), ಸಿಬಿಡಿಸಿ, ಯುಪಿಐ ಒನ್ ವರ್ಲ್ಡ್, ರುಪೇ ಆನ್-ದಿ-ಗೋ ಮತ್ತು ಭಾರತ್ ಬಿಲ್ ಪಾವತಿ ವ್ಯವಸ್ಥೆ ಸೇರಿವೆ.


Click it and Unblock the Notifications