ನವೆಂಬರ್ ತಿಂಗಳಲ್ಲೇ ಪ್ರೀತಿಯ ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. 2025ರಲ್ಲಿ ಆರ್‌ಸಿಬಿ ಜಯಿಸಿದ ಕ್ಷಣದಿಂದ, ತಂಡದ ಮಹತ್ವ ಹೆಚ್ಚಾಗಿದೆ. ಗೆಲುವಿಗಿಂತಲೂ ಮುಂಚೆಯಿಂದಲೂ ಕನ್ನಡಿಗರಿಗೆ ಆರ್‌ಸಿಬಿ ಎಂದರೆ ಒಂದು ಎಮೋಷನ್. ಈ ಎಮೋಷನ್ ಈಗ ಮತ್ತಷ್ಟು ದುಪ್ಪಟ್ಟಾಗುವ ಸಮಯ ಬಂದಿದೆ. ಹೊಸ ಗೌರವ ಮತ್ತು ಹೊಸ ಪ್ರಭಾವ ಸಿಕ್ಕಿದೆ. ಅಂದರೆ ಇತ್ತೀಚಿಗೆ ಆರ್‌ಸಿಬಿ ತಂಡ ಮಾರಾಟ ಆಗುತ್ತದೆ ಎಂಬ ಕೂಗು ಕೇಳಿಬರುತ್ತಿತ್ತು. ಅಂದಹಾಗೆ ಆರ್‌ಸಿಬಿ ತಂಡವನ್ನು ಖರೀದಿ ಮಾಡುತ್ತಿರುವುದು ಬೇರೆ ಯಾರೋ ಅಲ್ಲವಂತೆ. ಇತ್ತೀಚೆಗೆ ಕಾಂತಾರ ಚಾಪ್ಟರ್ 1 ಮೂಲಕ ದೇಶ ವಿದೇಶದೆಲ್ಲೆಡೆ ಸಂಚಲನ ಮೂಡಿಸಿದ, ಕನ್ನಡ ಚಿತ್ರರಂಗದಲ್ಲಿ ಅತಿದೊಡ್ಡ ಬದಲಾವಣೆ ಭರವಸೆ ಮೂಡಿಸಿದ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ತಂಡವನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಹೊಂಬಾಳೆ ಫಿಲ್ಮ್ಸ್ ಹೆಸರು ಏಕೆ ಹೆಚ್ಚು ಕೇಳಿಬರುತ್ತಿದೆ?
RCB ಯನ್ನು ಯಾರು ಖರೀದಿಸಬಹುದು ಎಂಬ ಊಹಾಪೋಹಗಳು ಮೊದಲಿನಿಂದಲೂ ಹರಿದಾಡುತ್ತಿದ್ದರೂ, ಕಳೆದ ಕೆಲವು ದಿನಗಳಿಂದ ಹೊಂಬಾಳೆ ಫಿಲ್ಮ್ಸ್ ಹೆಸರು ಸ್ಪಷ್ಟವಾಗಿ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಿನೆಮಾಗಳನ್ನು ನೀಡಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ ಸಂಸ್ಥೆ, RCB ಯನ್ನು ಖರೀದಿಸಬಹುದು ಎಂಬ ಚರ್ಚೆ ಎಲ್ಲೆಡೆ ಹರಿದಿದೆ. ಕನ್ನಡಿಗರ ಪ್ರೀತಿಯ ತಂಡಕ್ಕೆ ಕನ್ನಡದ ನಿರ್ಮಾಣ ಸಂಸ್ಥೆ ಮಾಲೀಕತ್ವ ನೀಡಬಹುದು ಎಂಬ ಮಾತು ಜನರಿಗೆ ವಿಶೇಷವಾಗಿ ಸಂತಸ ತಂದಿದೆ.
ಕನ್ನಡ ಸಿನಿ ಲೋಕ ಮತ್ತು ಕ್ರಿಕೆಟ್ ಲೋಕ ಸೇರಲೆನ್ನುವ ನಿರೀಕ್ಷೆ:
ಹೊಂಬಾಳೆ ಫಿಲ್ಮ್ಸ್ ಕನ್ನಡ ಸಿನಿ ಲೋಕವನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದೆ. RCB ಕನ್ನಡಿಗರ ಉತ್ಸಾಹಕ್ಕೆ ಕಾರಣವಾಗಿರುವ ತಂಡ. ಈ ಎರಡೂ ಸೇರಿದ್ದರೆ, ಅದು ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ಸನ್ನಿವೇಶವಾಗುತ್ತದೆ.
ಅಭಿಮಾನಿಗಳ ಪ್ರಕಾರ, RCB ಮೇಲೆ ಈಗಾಗಲೇ ದೊಡ್ಡ ಪ್ರೀತಿ ಇದೆ. ಅದಕ್ಕೆ ಕನ್ನಡದ ಸಂಸ್ಥೆಯೊಂದು ಮಾಲೀಕರಾದರೆ, ತಂಡದ ಜೊತೆಗೆ ಅಭಿಮಾನಿಗಳ ಭಾವನೆಗೂ ಹೊಸ ಬಣ್ಣ ಸೇರ್ಪಡೆಯಾಗುತ್ತದೆ.
ಮಾರಾಟದ ಸುದ್ದಿಯ ನಂತರ ಅಭಿಮಾನಿಗಳ ಪ್ರತಿಕ್ರಿಯೆ:
RCB ಮಾರಾಟವಾಗಬಹುದು ಎಂಬ ಸುದ್ದಿ ಮೊದಲಿಗೆ ಬಂದಾಗ ಕೆಲ ಅಭಿಮಾನಿಗಳು ಆತಂಕಗೊಂಡರು. ತಂಡದ ಭವಿಷ್ಯ ಹೇಗಾಗಬಹುದು, ಹೊಸವರು ಹೇಗೆ ನಿರ್ವಹಿಸುತ್ತಾರೆ ಎಂಬ ಪ್ರಶ್ನೆಗಳೂ ಕೇಳಿಬಂದವು. ಆದರೆ ಹೊಂಬಾಳೆ ಫಿಲ್ಮ್ಸ್ ಹೆಸರು ಬಂದ ಕ್ಷಣದಿಂದಲೇ ಅಭಿಮಾನಿಗಳ ಮನಸ್ಥಿತಿ ಸಂಪೂರ್ಣ ಬದಲಾಗಿತು.
"RCB ನಮ್ಮದೇ ಆಗಲಿ", "ಹೊಂಬಾಳೆ ಬಂದರೆ ತಂಡಕ್ಕೆ ಹೊಸ ಶಕ್ತಿ" ಎಂಬ ಅಭಿಮಾನಿಗಳ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸುದ್ದಿಗಳು:
RCB-ಹೊಂಬಾಳೆ ಮಾತುಕತೆಗಳ ಬಗ್ಗೆ ಪ್ರತಿದಿನ ನೂರಾರು ಪೋಸ್ಟ್‌ಗಳು ಹರಿದಾಡುತ್ತಿವೆ. ಹಲವರು ವಿಡಿಯೋಗಳು, ಅಭಿಪ್ರಾಯಗಳು, ಕಾಮೆಂಟ್‌ಗಳ ಮೂಲಕ ಈ ಸುದ್ದಿಯನ್ನು ಚರ್ಚಿಸುತ್ತಿದ್ದಾರೆ.
Crictracker ಕೂಡಾ ಈ ವಿಷಯಕ್ಕೆ ಸಂಬಂಧಿಸಿದ ವರದಿ ಪ್ರಕಟಿಸಿದ್ದು, ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಅದ್ರೆ, RCB ಕೂಡಾ, ಹೊಂಬಾಳೆ ಫಿಲ್ಮ್ಸ್ ಕೂಡಾ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಅಭಿಪ್ರಾಯ:
ಕನ್ನಡದ ಹೆಸರು ಮಾಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಹೊಂಬಾಳೆ ಫಿಲ್ಮ್ಸ್ RCB ಯನ್ನು ಖರೀದಿಸಿದರೆ ಅದು ಕನ್ನಡಿಗರ ಹೆಮ್ಮೆಯ ಕ್ಷಣ.
ಕನ್ನಡ ಚಿತ್ರರಂಗವನ್ನು ದೇಶದಾದ್ಯಂತ ಮತ್ತು ಜಗತ್ತಿನ ಮಟ್ಟದಲ್ಲಿ ಗುರುತಿಸಿಸುವಲ್ಲಿ ಹೊಂಬಾಳೆ ಫಿಲ್ಮ್ಸ್ ದೊಡ್ಡ ಪಾತ್ರ ವಹಿಸಿದೆ. RCB ಯ ಮಾಲೀಕರಾದರೆ, ಅದು ಕನ್ನಡದ ಪ್ರಭಾವಕ್ಕೆ ಮತ್ತೊಂದು ಮೆಟ್ಟಿಲು ಸೇರಿಸುವಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
RCB ಯ ಮೌಲ್ಯ ಏಕೆ ಇಷ್ಟು ದೊಡ್ಡದು?
RCB ಐಪಿಎಲ್‌ನಲ್ಲಿ ಯಾವಾಗಲೂ ಹೆಚ್ಚು ಚರ್ಚೆಯಾಗುವ, ದೊಡ್ಡ ಅಭಿಮಾನಿ ಬಳಗ ಹೊಂದಿರುವ ತಂಡ. ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಮುಂತಾದ ದಿಗ್ಗಜ ಆಟಗಾರರು ಈ ತಂಡದೊಂದಿಗೆ ದೀರ್ಘಕಾಲ ಇದ್ದದ್ದರಿಂದ, RCB ಯ ಬ್ರ್ಯಾಂಡ್ ಮೌಲ್ಯ ಅನೇಕ ತಂಡಗಳಿಗಿಂತ ಹೆಚ್ಚಾಗಿದೆ. ವರದಿಗಳ ಪ್ರಕಾರ, ಡಿಯಾಜಿಯೋ ಸಂಸ್ಥೆ RCB ಯನ್ನು ಸುಮಾರು 2 ಬಿಲಿಯನ್ ಡಾಲರ್‌ಗಳಿಗೆ, ಅಂದರೆ ಸುಮಾರು 17,700 ಕೋಟಿ ರೂಪಾಯಿಗೆ ಮಾರಾಟ ಮಾಡಲು ಬಯಸಿದೆ. ಇದು ಕ್ರಿಕೆಟ್ ತಂಡಗಳಿಗೆ ಸಾಮಾನ್ಯವಾಗಿ ಕಾಣದಷ್ಟು ದೊಡ್ಡ ಮೊತ್ತ.
ಮಾರಾಟ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಬಹುದು?
ಮಾಹಿತಿಯ ಪ್ರಕಾರ, RCB ಮಾರಾಟ ಪ್ರಕ್ರಿಯೆ 2026ರ ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ದಾಖಲೆಗಳು, ಹಣಕಾಸು ಸಂಬಂಧಿತ ಪ್ರಕ್ರಿಯೆಗಳು, ಹೊಸ ನಿರ್ವಾಹಕ ಮಂಡಳಿಯ ಆಯ್ಕೆ - ಇವೆಲ್ಲವೂ ಈ ಅವಧಿಯೊಳಗೆ ನಡೆಯಬಹುದು. ಯಾವ ಸಂಸ್ಥೆ ಅಂತಿಮವಾಗಿ RCB ಯನ್ನು ಖರೀದಿಸುತ್ತದೆ ಎಂಬುದು ಅಧಿಕೃತ ಘೋಷಣೆ ಬಂದ ಬಳಿಕವೇ ಸ್ಪಷ್ಟವಾಗಲಿದೆ.
ಈಗ ಎಲ್ಲರ ಗಮನ ಹೊಂಬಾಳೆ ಫಿಲ್ಮ್ಸ್ ಮತ್ತು RCB ಮೇಲೆ ನೆಟ್ಟಿದೆ. ಕನ್ನಡಿಗರು "ಒಮ್ಮೆ ಘೋಷಣೆ ಬರಲಿ, ನಂತರ RCB ನಿಜವಾಗಿ ನಮ್ಮದೇ ತಂಡ ಆಗುತ್ತದೆ" ಎಂದು ದೊಡ್ಡ ನಿರೀಕ್ಷೆಯಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಖರೀದಿ ವಿಷಯ ಸತ್ಯವಾದರೆ, 2026ರ ಐಪಿಎಲ್‌ನಿಂದ RCB ಹೊಸ ತಿರುವು ಕಾಣಬಹುದು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications