For Quick Alerts
ALLOW NOTIFICATIONS  
For Daily Alerts

"RCEPನಿಂದ ಭಾರತದ ಆರ್ಥಿಕತೆಗೆ ನಕಾರಾತ್ಮಕ ಪರಿಣಾಮ ಆಗ್ತಿತ್ತು"

By ಅನಿಲ್ ಆಚಾರ್
|

ಭಾರತವು ರೀಜನಲ್ ಕಾಂಪ್ರೆಹೆನ್ಸಿವ್ ಎಕನಾಮಿಕ್ ಪಾರ್ಟನರ್ ಷಿಪ್ (RCEP) ವ್ಯಾಪಾರ ಒಪ್ಪಂದಕ್ಕೆ ಸೇರ್ಪಡೆ ಆಗಿದ್ದಿದ್ದರೆ ಅದರ ನಕರಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತಿತ್ತು. ಆದರೆ ಯುರೋಪಿಯನ್ ಒಕ್ಕೂಟದ (ಇಯು) ಜತೆಗೆ ಭಾರತವು "ನ್ಯಾಯಸಮ್ಮತ ಮತ್ತು ಸಮತೋಲಿತ" ಮುಕ್ತ ವ್ಯವಹಾರ ನಡೆಸಲು ಆಸಕ್ತಿ ವಹಿಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

 

ಸದ್ಯದ RCEP ಸ್ವರೂಪವು ಭಾರತದ ಹಿತಾಸಕ್ತಿಗೆ ತಕ್ಕಂತೆ ಇಲ್ಲ. ಭಾರತದ ಸಾಮಾನ್ಯ ವ್ಯವಹಾರದ ಸ್ಥಿತಿಗೆ ಇದು ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಸೆಂಟರ್ ಫಾರ್ ಯುರೋಪಿಯನ್ ಪಾಲಿಸಿ ಸ್ಟಡೀಸ್ ಆಯೋಜಿಸಿದ್ದ ಭಾರತ- ಇಯು ಸಂಬಂಧದ ಕಾರ್ಯಕ್ರಮದಲ್ಲಿ ಜೈಶಂಕರ್ ಮಾತನಾಡಿದರು.

 

ಭಾರತಕ್ಕೆ ಈಗಲೂ ಮುಕ್ತವಾಗಿದೆ ವ್ಯಾಪಾರ ಒಪ್ಪಂದದ ಬಾಗಿಲು; ಏನಿದು RCEP?ಭಾರತಕ್ಕೆ ಈಗಲೂ ಮುಕ್ತವಾಗಿದೆ ವ್ಯಾಪಾರ ಒಪ್ಪಂದದ ಬಾಗಿಲು; ಏನಿದು RCEP?

ಕಳೆದ ವರ್ಷ ನಡೆದ ಪೂರ್ವ ಏಷ್ಯಾ ಸಮಾವೇಶದಲ್ಲಿ RCEP ಬಗ್ಗೆ ಭಾರತ ತನ್ನ ಆತಂಕ ವ್ಯಕ್ತಪಡಿಸಿತ್ತು. ದೀರ್ಘ ಕಾಲದ ಮಾತುಕತೆ ನಂತರವೂ ವ್ಯವಹಾರ ಒಪ್ಪಂದದಲ್ಲಿ ಭಾರತ ಎತ್ತಿದ್ದ ಆತಂಕಗಳಿಗೆ ಯಾವುದೇ ಪರಿಹಾರ ಸೂಚಿಸಿರಲಿಲ್ಲ.

ಆದರೆ ಯುರೋಪಿಯನ್ ಒಕ್ಕೂಟದ ಜತೆಗೆ ನ್ಯಾಯಸಮ್ಮತ ಹಾಗೂ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಹಕ್ಕೊತ್ತಾಯ ಮಾಡಿದೆ. ಮಾತುಕತೆ ಮತ್ತೆ ಆರಂಭಿಸುವ ಅಗತ್ಯದ ಬಗ್ಗೆ ಭಾರತೀಯ ಸರ್ಕಾರ ಹೇಳಿದೆ. ಹತ್ತು ಅಸೋಸಿಯೇಷನಾಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್ (ASEAN) ಮತ್ತು ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಜಿಲ್ಯಾಂಡ್ ಮತ್ತು ಸೌಥ್ ಕೊರಿಯಾ ಮಧ್ಯೆ RCEPಗೆ ಕಳೆದ ಭಾನುವಾರ ಸಹಿ ಆಗಿದೆ.

ವಿಶ್ವದ ಅತಿ ದೊಡ್ಡ ವ್ಯಾಪಾರ ಬಣವಾದ ಇದು ಸದ್ಯದ ಘೋಷಣೆಯನ್ನು ಭಾರತಕ್ಕೆ ವ್ಯಾಪಾರ ಒಪ್ಪಂದಕ್ಕೆ ಮುಕ್ತವಾಗಿಟ್ಟಿದೆ. ಜಾಗತಿಕ ಆರ್ಥಿಕತೆಯ ಶೇಕಡಾ ಮೂವತ್ಮೂರರಷ್ಟನ್ನು ಈ ಬಣವು ಒಳಗೊಳ್ಳುತ್ತದೆ.

ಯುರೋಪಿಯನ್ ಒಕ್ಕೂಟದ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿದ ಜೈಶಂಕರ್, ಮಾತುಕತೆ ಸಲೀಸಲ್ಲ. ಏಕೆಂದರೆ ಇದು ಅತ್ಯಂತ ಉನ್ನತ ಮಟ್ಟದ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ. ಎರಡೂ ಕಡೆಯಿಂದ ವಿವಿಧ ಪ್ರಸ್ತಾವಗಳನ್ನು ಗಮನಿಸಲಾಗಿದೆ. ಪ್ರತ್ಯೇಕ ಹೂಡಿಕೆ ಒಪ್ಪಂದ ಸೇರಿ ವಿವಿಧ ಸಾಧ್ಯತೆ ನೋಡುತ್ತಿದ್ದೇವೆ ಎಂದಿದ್ದಾರೆ.

ವಲಸೆ ಅಥವಾ ಸಂಚಾರವನ್ನು ಕಾನೂನುಬದ್ಧ ಮಾಡಿ, ಕಾರ್ಮಿಕರ ಶೋಷಣೆಯನ್ನು ತಡೆಯಲು ಭಾರತ ಬಯಸುತ್ತದೆ. ಭಾರತವು ಹತ್ತಿರ ಹತ್ತಿರ ಏಳು ವರ್ಷಗಳ ಕಾಲ RCEP ಭಾಗವಾಗಿತ್ತು. ಆಮದು ಹೆಚ್ಚಳದ ವಿರುದ್ಧ ರಕ್ಷಣೆ ಇಲ್ಲದ್ದು, ಮಾರುಕಟ್ಟೆಗಳನ್ನು ಭಾರತಕ್ಕೆ ದೊರೆಯದ ವಿಶ್ವಾಸಾರ್ಹ ಭರವಸೆ ಇನ್ನಿತರ ಕಾರಣಗಳಿಗಾಗಿ ಆ ಒಪ್ಪಂದದಲ್ಲಿ ಭಾಗವಾಗಿಲ್ಲ ಎನ್ನಲಾಗಿದೆ.

Read more about: india business economy
English summary

RCEP Could Have Negative Impact On Indian Economy, Said S Jaishankar

External affair minister S Jaishankar said, RCEP could have negative impact on India.
Story first published: Thursday, November 19, 2020, 17:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X