ರಿಯಲ್ ಎಸ್ಟೇಟ್ ಕಂಪನಿ, ಮಾಲ್‌ಗೆ ಹೆಚ್ಚುವರಿ ತೆರಿಗೆ ವಿಧಿಸಬೇಕೆಂದ ಸಿಬಿಐಸಿ, ಕಾರಣವೇನು?

ರಿಯಲ್ ಎಸ್ಟೇಟ್ ಕಂಪನಿಗಳು, ಮಾಲ್‌ಗಳು, ಏರ್‌ಪೋರ್ಟ್ ಆಪರೇಟರ್‌ಗಳು ಇತ್ಯಾದಿಗಳು ತಮ್ಮ ಬಾಡಿಗೆದಾರರಿಗೆ ವಿದ್ಯುತ್ ಅನ್ನು ಬಾಡಿಗೆ ಅಥವಾ ನಿರ್ವಹಣಾ ಶುಲ್ಕದೊಂದಿಗೆ ಸೇರಿಸಿದ್ದರೆ, ಜಿಎಸ್‌ಟಿ ವಿಧಿಸಬೇಕು ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಹೇಳಿದೆ.

ಆದರೆ ರಿಯಲ್ ಎಸ್ಟೇಟ್ ಕಂಪನಿ, ಮಾಲ್ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರವು ರಾಜ್ಯ ವಿದ್ಯುತ್ ಮಂಡಳಿ ಅಥವಾ ಡಿಸ್ಕಾಂಗಳ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ ಈ ತೆರಿಗೆಯು ವಿಧಿಸಲಾಗುವುದಿಲ್ಲ. ವಿದ್ಯುತ್ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರುವ ಕಾರಣ ಈ ಸ್ಪಷ್ಟೀಕರಣವು ಅತೀ ಮಹತ್ವದ್ದಾಗಿದೆ.

 ರಿಯಲ್ ಎಸ್ಟೇಟ್ ಕಂಪನಿಗೆ ತೆರಿಗೆ ವಿಧಿಸಿ ಎಂದ ಸಿಬಿಐಸಿ, ಕಾರಣ?

ರಿಯಲ್ ಎಸ್ಟೇಟ್ ಕಂಪನಿಗಳು, ಮಾಲ್‌ಗಳು, ವಿಮಾನ ನಿಲ್ದಾಣ ನಿರ್ವಾಹಕರು ಇತ್ಯಾದಿಗಳು ತಮ್ಮ ಗುತ್ತಿಗೆದಾರರು ಅಥವಾ ಬಾಡಿಗೆದಾರರಿಗೆ ವಿದ್ಯುತ್ ಪೂರೈಕೆಯ ಮೇಲೆ ಜಿಎಸ್‌ಟಿ ವಿಧಿಸುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ ಎಂದು ಸಿಬಿಐಸಿ ಸುತ್ತೋಲೆಯಲ್ಲಿ ತಿಳಿಸಿದೆ. ಅಕ್ಟೋಬರ್ 7 ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ.

ಸ್ಪಷ್ಟಪಡಿಸಿದ ಕೌನ್ಸಿಲ್

ಕೌನ್ಸಿಲ್‌ನ ಶಿಫಾರಸಿನ ಆಧಾರದ ಮೇಲೆ ಮಂಡಳಿಯು ಈ ಸ್ಪಷ್ಟತೆ ನೀಡಿದೆ. "ಸ್ಥಿರ ಆಸ್ತಿಯನ್ನು ಬಾಡಿಗೆಗೆ ಅಥವಾ ಆವರಣದ ನಿರ್ವಹಣೆಯ ಮೊತ್ತದೊಂದಿಗೆ ವಿದ್ಯುತ್ ಸರಬರಾಜು ಸೇರ್ಪಡೆ ಮಾಡಿದಾಗ, ಅದು ಸಂಯೋಜಿತ ಪೂರೈಕೆಯ ಒಂದು ಭಾಗವಾಗಿರುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ," ಎಂದು ಸ್ಪಷ್ಟಪಡಿಸಿದೆ.

ಏನಿದು ಸಂಯೋಜಿತ ಪೂರೈಕೆ?

ಜಿಎಸ್‌ಟಿ ಅಡಿಯಲ್ಲಿ ಸಂಯೋಜಿತ ಪೂರೈಕೆ ಎಂದರೆ ತೆರಿಗೆಗೆ ಒಳಪಡುವ ವ್ಯಕ್ತಿ ಪಡೆಯುವ ಎರಡು ಅಥವಾ ಹೆಚ್ಚು ತೆರಿಗೆ ವಿಧಿಸಬಹುದಾದ ಸರಕುಗಳು ಅಥವಾ ಸೇವೆಗಳು/ ಎರಡನ್ನೂ ಆಗಿದೆ. ಒಟ್ಟಾರೆಯಾಗಿ ಒಂದಕ್ಕಿಂತ ಅಧಿಕ ತೆರಿಗೆಗೆ ಅರ್ಹವಾದ ಸೇವೆ, ಸರಕು ಪಡೆಯುವುದು ಆಗಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಒಂದನ್ನು ಇನ್ನೊಂದಿಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ.

"ವಿದ್ಯುತ್ ಅನ್ನು ಪ್ರತ್ಯೇಕವಾಗಿ ಬಿಲ್ ಮಾಡಿದರೂ ಸಹ, ಇದು ಸಂಯೋಜಿತ ಪೂರೈಕೆ ಆಗಿರುತ್ತದೆ. ಆದ್ದರಿಂದ ಮೂಲ ಪೂರೈಕೆಯ ದರ ಅಂದರೆ, ಸ್ಥಿರ ಆಸ್ತಿಯ ಬಾಡಿಗೆ ಮತ್ತು ಆವರಣದ ನಿರ್ವಹಣೆಯ ಮೇಲಿನ ಜಿಎಸ್‌ಟಿ ದರವು ಅನ್ವಯವಾಗುತ್ತದೆ," ಎಂದು ಮಂಡಳಿ ಹೇಳಿದೆ.

ಇದರರ್ಥ ವಿದ್ಯುತ್ ಸೇರಿದಂತೆ ಸಂಪೂರ್ಣ ಪೂರೈಕೆಯು ಶೇಕಡ 18 ರಷ್ಟು ಜಿಎಸ್‌ಟಿಗೆ ಒಳಪಡುತ್ತದೆ. ಆದರೆ ರಿಯಲ್ ಎಸ್ಟೇಟ್ ಮಾಲೀಕರು, ನಿವಾಸಿ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯೂಎಗಳು), ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮುಂತಾದವರು ಏಜೆಂಟ್ ಆಗಿ ವಿದ್ಯುತ್ ಪೂರೈಸಿದರೆ, ಅದು ಅವರ ಪೂರೈಕೆಯ ಮೌಲ್ಯದ ಭಾಗವಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಉತ್ತರ ಸಿಗದ ಹಲವು ಪ್ರಶ್ನೆಗಳು

ಇನ್ನೂ ಉತ್ತರ ಸಿಗದ ಹಲವು ಪ್ರಶ್ನೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. "ಸಂಯೋಜಿತ ಪೂರೈಕೆ ಎಂದರೆ ಎರಡು ಅಥವಾ ಹೆಚ್ಚು ತೆರಿಗೆ ವಿಧಿಸಬಹುದಾದ ಸರಬರಾಜುಗಳನ್ನು ಒಳಗೊಂಡಿರುವ ಪೂರೈಕೆ ಆಗಿದೆ. ಹೀಗಾಗಿ, ವಿದ್ಯುತ್ ಸರಬರಾಜಿಗೆ ವಿನಾಯಿತಿ ನೀಡಿದಾಗ, ಅದು ಹೇಗೆ ಭೂಮಾಲೀಕರಿಂದ ಸಂಯೋಜಿತ ಪೂರೈಕೆಯ ಭಾಗವಾಗುತ್ತದೆ?," ಎಂದು ಅಥೇನಾ ಲಾ ಅಸೋಸಿಯೇಟ್ಸ್‌ನ ಪಾಲುದಾರ ಪವನ್ ಅರೋರಾ ಪ್ರಶ್ನಿಸಿದ್ದಾರೆ.

"ಸುತ್ತೋಲೆಯಲ್ಲಿ ವಿದ್ಯುಚ್ಛಕ್ತಿಯ 'ಪೂರೈಕೆ' ಪದಗಳನ್ನು ಬಳಸಲಾಗಿದೆ. ಆದರೆ ಮತ್ತೆ ವಿದ್ಯುತ್ ತೆರಿಗೆಗೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ," ಎಂದು ಕೂಡಾ ಪವನ್ ಅರೋರಾ ಹೇಳಿದರು. ಇದಲ್ಲದೆ, ಭೂಮಾಲೀಕರು / ರಿಯಲ್ ಎಸ್ಟೇಟ್ ಡೆವಲಪರ್‌ಗಳು ಇತ್ಯಾದಿಗಳು ವಿದ್ಯುತ್ ಸರಬರಾಜು ಮಾಡುತ್ತಾರೆಯೇ ಅಥವಾ ವಿದ್ಯುತ್ ವಿತರಿಸುತ್ತಾರೆಯೇ ಎಂಬ ವಿವಾದದ ಬಗ್ಗೆ ಸಿಬಿಐಸಿ ಸ್ಪಷ್ಟಪಡಿಸಿಲ್ಲ ಎಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+