ಈಗಿನ ಎಲ್ಲಾ ಜನರು ಬಹುತೇಕ ಲೋನ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಎಲ್ಲವನ್ನೂ ಪಡೆದುಕೊಳ್ಳಲು ಇಎಂಐ ಎಂಬ ಮಾರ್ಗ, ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಪ್ರತಿಯೊಬ್ಬರೂ ಲೋನ್, ಇಎಂಐಗಳ ಮೇಲೆ ಅವಲಂಬಿರಾಗಿದ್ದಾರೆ. ಆದರೆ ಇಎಂಐ ಆಯ್ಕೆ ಇದ್ದರೂ ಇದನ್ನು ಎಲ್ಲರೂ ಬಳಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಇದಕ್ಕೆ ಎಲ್ಲಾ ರೀತಿಯ ಲೋನ್‌ಗಳಿಗೆ, ಅಥವಾ ಇಎಂಐ ಮೇಲೆ ಯಾವುದೇ ವಸ್ತು ಖರೀದಿಸಬೇಕು ಎಂದರೆ ಅದಕ್ಕೆ ಕ್ರೆಡಿಟ್ ಸ್ಕೋರ್ ಬಹುಮುಖ್ಯ.

ಕ್ರೆಡಿಟ್ ಸ್ಕೋರ್ ಎಂದರೆ ಸಿಬಿಲ್ ಸ್ಕೋರ್ ಎಂತಲೂ ಕರೆಯುತ್ತಾರೆ. ಈ ಸ್ಕೋರ್ ಇಂತಿಷ್ಟು ಇದ್ದರೆ ಮಾತ್ರ ಲೋನ್ ಪಡೆಯಬಹದು. ಇಎಂಐ ಆಧಾರದಲ್ಲಿ ವಸ್ತುಗಳನ್ನು ಖರೀದಿಸಬಹುದು. ಅಂದರೆ ಈ ಕ್ರೆಡಿಟ್ ಸ್ಕೋರ್ 700ಕ್ಕಿಂತ ಹೆಚ್ಚು ಇದ್ದರೆ ಮಾತ್ರ ನಮಗೆ ಬೇಕಾದ್ದನ್ನು ಸಾಲದ ರೂಪದಲ್ಲಿ ಪಡೆಯಬಹುದು. ಈ ಸ್ಕೋರ್ ಹೆಚ್ಚಿರಬೇಕೆಂದರೆ, ಸಾಲ ಪಡೆದವರು ತಮ್ಮ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟಿರಬೇಕು. ಆದರೆ ಕೆಲವರು ಯಾವುದೇ ಸಾಲ ಪಡೆಯದಿದ್ದರೂ, ಅವರ ಕ್ರೆಡಿಟ್ ಸ್ಕೋರ್ ಕಡಿಮೆ ಇರುತ್ತದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ..ಆ ಕಾರಣಗಳು ಯಾವ್ಯಾವು ಎಂದು ನೋಡುವುದಾದರೆ.
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಲು ಇವುಗಳೇ ಕಾರಣ..!
1. ಕ್ರೆಡಿಟ್ ಇತಿಹಾಸದ ಕೊರತೆ:
ಸಾಲವಿಲ್ಲದಿರುವುದೂ ಕೂಡ ಕ್ರೆಡಿಟ್ ಸ್ಕೋರ್ ಕಡಿಮೆಗೆ ಕಾರಣವಾಗುತ್ತದೆ. ಅಂದರೆ ಯಾವುದೇ ಸಾಲ ಪಡೆಯದಿದ್ದರೆ, ಕಂತುಗಳನ್ನ ಪಾವತಿಸಿ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ಆಗುವುದಿಲ್ಲ. ಇದರಿಂದ ಕ್ರೆಡಿಟ್ ಬ್ಯೂರೋ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಹಾಕಲು ಅಗತ್ಯ ಮಾಹಿತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಕೂಡ ಕ್ರೆಡಿಟ್ ಸ್ಕೋರ್ ಕಡಿಮೆಯಾಗಬಹುದು.
2. ಕ್ರೆಡಿಟ್ ಕಾರ್ಡ್ ಇದ್ದರೂ ಬಳಸದೇ ಇರುವುದು:
ಒಮ್ಮೊಮ್ಮೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಆದರೆ ಅದನ್ನು ಅವರು ಬಳಸುವುದಿಲ್ಲ. ಇದರಿಂದ ಕ್ರೆಡಿಟ್ ನಿರ್ವಹಣೆಯನ್ನು ಅರ್ಥೈಸಲು ಕ್ರೆಡಿಟ್ ಬ್ಯೂರೋಗಳಿಗೂ ಸಾಧ್ಯವಾಗುವುದಿಲ್ಲ. ಇದನ್ನು ಕ್ರೆಡಿಟ್ ಇತಿಹಾಸವಿಲ್ಲದಂತೆಯೇ ಪರಿಗಣಿಸಲಾಗುತ್ತದೆ. ಇದು ಕ್ರೆಡಿಟ್ ಸ್ಕೋರ್ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.
3. ಕ್ರೆಡಿಟ್ ವಿಚಾರಣೆ:
ಗ್ರಾಹಕರು ತಮಗೆ ಬೇಕೆಂದಾಗ ಕ್ರೆಡಿಟ್ ಕಾರ್ಡ್ ಅಥವಾ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ನಿರಾಕರಿಸಲ್ಪಟ್ಟರೆ, ಅದು ಕೂಡ ಕ್ರೆಡಿಟ್ ಸ್ಕೋರ್ ಕಡಿಮೆಗೆ ಕಾರಣವಾಗುತ್ತದೆ. ಅದು ಗ್ರಾಹಕರ ವಿಚಾರಣೆ ಕ್ರೆಡಿಟ್ ವರದಿಯಲ್ಲಿ ಕಾಣಿಸುತ್ತದೆ. ಇದರಿಂದ ತಾತ್ಕಾಲಿಕವಾಗಿ ನಿಮ್ಮ ಸ್ಕೋರ್ ಕಡಿಮೆಯಾಗಬಹುದು.
4. ಕ್ರೆಡಿಟ್ ವರದಿಯಲ್ಲಿರುವ ತಪ್ಪುಗಳು:
ಕೆಲವೊಮ್ಮೆ ಕ್ರೆಡಿಟ್ ಬ್ಯೂರೋಗಳು ಮಾಡುವ ತಪ್ಪು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಗೆ ಕಾರಣವಾಗುತ್ತದೆ. ಅಂದರೆ ತಪ್ಪಾಗಿ ಮತ್ತೊಬ್ಬರ ಸಾಲ ಅಥವಾ ತಡಪಾವತಿ ಮಾಹಿತಿಯನ್ನು ನಿಮ್ಮ ವರದಿಗೆ ಸೇರಿಸಬಹುದು. ಇದರಿಂದ ನಿಮ್ಮ ಕ್ರೆಡಿಟ್ ಇತಿಹಾಸದಲ್ಲಿ ಕಪ್ಪುಚುಕ್ಕೆ ಮೂಡಬಹುದು. ಹೀಗಾಗಿ ತಪ್ಪಾಗಿ ಮತ್ತೊಬ್ಬರ ಸಾಲ ಅಥವಾ ತಡಪಾವತಿ ಮಾಹಿತಿಯನ್ನು ನಿಮ್ಮ ವರದಿಗೆ ಸೇರಿಸಬಹುದು.
5. ಕ್ರೆಡಿಟ್ ಮಿಶ್ರಣದ ಕೊರತೆ:
ಕೆಲವೊಮ್ಮೆ ಕ್ರೆಡಿಟ್ ಸ್ಕೋರ್‍ಗೆ ವಿವಿಧ ಪ್ರಕಾರದ ಸಾಲ ಮತ್ತು ಕ್ರೆಡಿಟ್ ಉಳಿತಾಯ ಇರಬೇಕಾಗುತ್ತದೆ. ಅಂದರೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಒಂದನ್ನೇ ಹೊಂದಿದ್ದರೆ ಸಾಲದು. ಇತರೆ ಸಾಲಗಳನ್ನು ಕೂಡ ಹೊಂದಿರಬೇಕು. ಇಲ್ಲದಿದ್ದರೆ ಇದು ಕೂಡ ಕ್ರೆಡಿಟ್ ಸ್ಕೋರ್ ಕಡಿಮೆ ಮಾಡಬಹುದು.
6. ಹೈ ಕ್ರೆಡಿಟ್ ಯೂಟಿಲೈಸೇಶನ್ ರೇಶಿಯೋ
ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು ಅವರ ಕಾರ್ಡ್‌ನ ಲಿಮಿಟ್‌ಗಿಂತ ಹೆಚ್ಚು ಖರ್ಚು ಮಾಡಿದರೆ..ಅಂದರೆ 30% ಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರೆ, ನಿಮ್ಮ ಸ್ಕೋರ್ ಕಡಿಮೆಯಾಗಬಹುದು. ಇದನ್ನು ಬ್ಯೂರೋಗಳು ಹೆಚ್ಚುವರಿ ಸಾಲ ಬಳಕೆಯನ್ನು ಆರ್ಥಿಕ ಒತ್ತಡದ ಸೂಚನೆಯಂತೆ ಪರಿಗಣಿಸುತ್ತವೆ.
8. ಜಂಟಿ ಖಾತೆಗಳು & ಸಾಲದ ಖಾತರಿದಾರರಾಗಿದ್ದರೂ ಕಷ್ಟ:
ಯಾರಾದರೂ ಸಾಲವನ್ನ ಪಡೆದಿದ್ದಾಗ ನೀವು ಸಹಖಾತೆದಾರರಾಗಿದ್ದರೆ ಅಥವಾ ಅವರ ಸಾಲಕ್ಕೆ ಶ್ಯೂರಿಟಿ ಹಾಕಿದ್ದರೂ ಕಷ್ಟ ಸಂಭವಿಸುವ ಸಾಧ್ಯತೆ ಇದೆ. ಹೇಗೆಂದರೆ ಇದು ಡೀಫಾಲ್ಟ್ ಆದರೆ, ನಿಮ್ಮ ಕ್ರೆಡಿಟ್ ಸ್ಕೋರ್‌ಗೂ ಹಾನಿಯಾಗಬಹುದು.
ಕ್ರೆಡಿಟ್ ಕಾರ್ಡ್ ಹೆಚ್ಚಿಸುವುದೇಗೆ..?
- ಸಣ್ಣ ಮೊತ್ತದ ಖರೀದಿಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವುದು ಹಾಗೂ ಸರಿಯಾದ ಸಮಯಕ್ಕೆ ಪಾವತಿಸುವುದು ಉತ್ತಮ ವಿಧಾನವಾಗಿದೆ.
- ನಿಮ್ಮ ಕ್ರೆಡಿಟ್ ಬಳಕೆಯನ್ನು ಶೇ.30ಕ್ಕಿಂತ ಕಡಿಮೆ ಇಟ್ಟುಕೊಂಡರೆ ಉತ್ತಮ.
- ಆಗಾಗ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಿ ಮತ್ತು ತಪ್ಪುಗಳಿದ್ದರೆ ಸರಿಪಡಿಸಿ.
- ಸಾಧ್ಯವಾದರೆ ವಿಭಿನ್ನ ಸಾಲಗಳು..ಅಂದರೆ ಕ್ರೆಡಿಟ್ ಕಾರ್ಡ್, ಪರ್ಸನಲ್ ಲೋನ್, ಹೌಸಿಂಗ್ ಲೋನ್‌ಗಳ ಜೊತೆ ಹೊಂದಾಣಿಕೆ ಕಾಯ್ದುಕೊಳ್ಳಿ.
- ಕಡಿಮೆ ಅವಧಿಯಲ್ಲಿ ಹಲವಾರು ಕ್ರೆಡಿಟ್ ಉತ್ಪನ್ನಗಳಿಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿ.


Click it and Unblock the Notifications