Gold Rate Prediction: 2025ರಲ್ಲಿ ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆ! 2026ರಲ್ಲಿ ಚಿನ್ನದ ದರ ಏನಾಗುತ್ತೆ?

2025ರಲ್ಲಂತೂ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ (Gold Price Hike). ಅತ್ತ ದಿನ ಹೋದಂತೆ ಚಿನ್ನದ ಬೆಲೆ ಏರಿಕೆಯೇ ಆಗುತ್ತಿದೆ ಹೊರತು, ಇಳಿಕೆಯಂತೂ ಆಗುತ್ತಿಲ್ಲ. 2025ನೇ ವರ್ಷ ಚಿನ್ನಕ್ಕೆ ದಶಕಗಳಲ್ಲೇ ಅತ್ಯುತ್ತಮ ವರ್ಷವಾಗಿ ಹೊರಹೊಮ್ಮಿದ್ದು, ಬೆಳ್ಳಿ 1971ರ ನಂತರದ ಗರಿಷ್ಠ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ. ಇದೀಗ ವರ್ಷಾಂತ್ಯವಾಗುತ್ತಿದ್ದು, 2026ರಲ್ಲಿ ಚಿನ್ನದ ಬೆಲೆ (Gold Rate 2026) ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? ಎಂಬ ಕುತೂಹಲದಲ್ಲಿದ್ದಾರೆ.

2026ರಲ್ಲಿ ಚಿನ್ನದ ದರ ಇಳಿಕೆಯಾಗುತ್ತಾ? ಇಲ್ಲಿದೆ ಸತ್ಯ

ಜಾಗತಿಕವಾಗಿ ಭೌಗೋಳಿಕ-ರಾಜಕೀಯ ಮತ್ತು ಆರ್ಥಿಕ ಉದ್ವಿಗ್ನತೆ, ಜಾಗತಿಕ ಕೇಂದ್ರ ಬ್ಯಾಂಕ್‌ಗಳಿಂದ ಹೆಚ್ಚಿದ ಚಿನ್ನದ ಖರೀದಿ, ಇಟಿಎಫ್ (ETF) ಮೂಲಕ ಹೂಡಿಕೆಯ ಗತಿ, ಡಾಲರ್ ಮೌಲ್ಯದಲ್ಲಿ ಕುಸಿತ ಮತ್ತು ಜಾಗತಿಕವಾಗಿ ಬಡ್ಡಿದರ ಕಡಿತದಂತಹ ಅನೇಕ ಕಾರಣಗಳಿಂದಾಗಿ 2025ರಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತ್ತು ವರದಿಯಾಗಿದೆ.

2025ರಲ್ಲಿ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ!
ಈ ವರ್ಷ ಚಿನ್ನವು ಶೇ 60ಕ್ಕಿಂತ ಹೆಚ್ಚು ಆದಾಯವನ್ನು ನೀಡಿದ್ದು, 50ಕ್ಕೂ ಹೆಚ್ಚು ಬಾರಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಬೆಳ್ಳಿ ಚಿನ್ನವನ್ನು ಮೀರಿಸಿ, 1971ರ ನಂತರ ದಾಖಲೆ ಬೆಲೆ ಏರಿಕೆ ಕಂಡಿದೆ. ಇದೀಗ ಈ ಲೋಹಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದರೂ, 2026ರ ಭವಿಷ್ಯವು ಭೌಗೋಳಿಕ-ರಾಜಕೀಯ ಅಪಾಯಗಳು, ಇಟಿಎಫ್ ಮತ್ತು ಕೇಂದ್ರ ಬ್ಯಾಂಕ್‌ಗಳ ಖರೀದಿ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, 2025ರ ಜನವರಿ 1ರಂದು ಪ್ರತಿ ಔನ್ಸ್ ಚಿನ್ನದ ಬೆಲೆ ಸುಮಾರು $2,600 ಇತ್ತು. ಇದು ವರ್ಷದುದ್ದಕ್ಕೂ ಏರಿಕೆ ಕಂಡು, ಡಿಸೆಂಬರ್ 13, 2025ರ ವೇಳೆಗೆ ಸುಮಾರು $4,300ಕ್ಕೆ ತಲುಪಿದೆ. ಅಂದರೆ ಕ್ಯಾಲೆಂಡರ್ ವರ್ಷ 2025ರ ಪ್ರಕಾರ ಶೇಕಡಾ 65ರಷ್ಟು ಏರಿಕೆಯನ್ನು ಸೂಚಿಸುತ್ತದೆ.

ಭಾರತದಲ್ಲಿ, ಅದರಲ್ಲೂ ಮುಂಬೈನಲ್ಲಿ 2025ರ ಜನವರಿ 1ರಂದು 10 ಗ್ರಾಂ ಚಿನ್ನದ ಬೆಲೆ ಸುಮಾರು ₹78,000 ಇತ್ತು. ಇದು ಈಗ ಸುಮಾರು ₹1,34,000ಕ್ಕೆ ಏರಿಕೆಯಾಗಿದ್ದು ಅಚ್ಛರಿಯ ಸಂಗತಿ. ಇದು 2025ನೇ ವರ್ಷದಲ್ಲಿ ಅಂದಾಜು ಶೇ 72ರಷ್ಟು ಏರಿಕೆಯನ್ನು ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯೂ ಶೇ 121ರಷ್ಟು ಏರಿಕೆಯಾಗಿದ್ದು, ವರ್ಷದ ಆರಂಭದಲ್ಲಿ ಸುಮಾರು $28 ಇದ್ದಿದ್ದು, ಡಿಸೆಂಬರ್ 13, 2025ರ ವೇಳೆಗೆ ಪ್ರತಿ ಔನ್ಸ್‌ಗೆ ಸುಮಾರು $62ಕ್ಕೆ ತಲುಪಿದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಗಿಂತ ವೇಗವಾಗಿ ಹೆಚ್ಚಳವಾಗಿವೆ. US ಡಾಲರ್ ಎದುರು ರೂಪಾಯಿ ದುರ್ಬಕಗೊಂಡಿದ್ದು (ಡಾಲರ್‌ಗೆ ₹90.5ರ ದಾಖಲೆ ಮಟ್ಟಕ್ಕೆ ಕುಸಿತ) ಇದರ ಹಿಂದಿನ ಕಾರಣ. ಇದು ಹೆಚ್ಚಾಗಿ ಆಮದು ಮಾಡಿಕೊಳ್ಳುವ ಚಿನ್ನವನ್ನು ಭಾರತೀಯ ಗ್ರಾಹಕರಿಗೆ ದುಬಾರಿಯಾಗಿಸಿದೆ.

ಬೆಲೆ ಏರಿಕೆಗೆ ಕಾರಣವೇನು?
ಚಿನ್ನದ ಬೆಲೆ ಏರಿಕೆಗೆ ಜಾಗತಿಕ ಭೌಗೋಳಿಕ-ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳು, ವಿಶ್ವದ ಕೇಂದ್ರ ಬ್ಯಾಂಕ್‌ಗಳಿಂದ ಚಿನ್ನದ ಮೇಲಿನ ಬೇಡಿಕೆ, ಇಟಿಎಫ್‌ಗಳಿಂದ ಮಾರುಕಟ್ಟೆ ಪ್ರಚೋದನೆ, ದುರ್ಬಲ ಡಾಲರ್ ಮತ್ತು ಜಾಗತಿಕ ಬಡ್ಡಿದರ ಕಡಿತಗಳು ಪ್ರಮುಖ ಕಾರಣಗಳಾಗಿವೆ.

2026ರಲ್ಲಿ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?
2026ಕ್ಕೆ ಚಿನ್ನದ ಬೆಲೆಯು ಭೌಗೋಳಿಕ-ರಾಜಕೀಯ ಅಪಾಯಗಳು, ಕೇಂದ್ರ ಬ್ಯಾಂಕ್‌ಗಳ ಬೇಡಿಕೆ ಮೇಲೆ ಬೆಲೆ ಏರಿಕೆ ಅವಲಂಬಿಸಿರುತ್ತದೆ ಎನ್ನಲಾಗಿದೆ. "ಈ ವರ್ಷ ಭಾರತದಲ್ಲಿ 200 ಟನ್‌ಗಳಿಗಿಂತ ಹೆಚ್ಚು ಹಳೆಯ ಚಿನ್ನಾಭರಣಗಳನ್ನು ಅಡಮಾನವಾಗಿ ಇಡಲಾಗಿದೆ. ಚಿನ್ನವನ್ನು ಸಾಲದ ಅಡಮಾನವಾಗಿ ಬಳಸುತ್ತಿರುವ ಕಾರಣ ಮರುಬಳಕೆ ಅಸಾಧಾರಣವಾಗಿ ಕಡಿಮೆಯಾಗುತ್ತದೆ. ಕಡಿಮೆ ಮರುಬಳಕೆಯಿಂದಾಗಿ ಬೆಲೆಗಳು ಕೂಡಾ ಹೆಚ್ಚಾಗುತ್ತದೆ." ಎಂದು ದೆಹಲಿ ಮೂಲದ ಬುಲಿಯನ್ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+